ನಮ್ಮ ಜೀವನ


ಕಾರ್ಮುಗಿಲ ಕಾರ್ಮೋಡಗಳ,
ಶು‘್ರ ಹನಿಯ ಮಳೆನೀರು
ಈಗೆಲ್ಲಿ ಬೀಳುತ್ತಿದೆ ಹೇಳು ಗೆಳೆಯಾ
ಎಲ್ಲಿ ನೋಡಿದರತ್ತ, ಎಲ್ಲಿ ಕೇಳಿದರತ್ತ
ಸುರಿಯುವುದು ಈಗಿಲ್ಲಿ ಆಮ್ಲ ಮಳೆ ಹನಿಯು
ಕೆಂಪುರಂಗಿನ ಬಾನು ನಾಚುತ್ತ ಮುದುಡಿಹುದು
ಹೊರಹರಿವ ವಿಷಗಾಳಿಯ ದರ್ಪದೆದುರು
ಮನುಕುಲದ ಜೀವ ತತ್ತರಿಸಿ ನಲುಗಿಹುದು
ತಾನೇ ಹೊಸೆದ ಆದುನಿಕ ಜೀವನದ ಜೋಂಪಿನಲಿ
ಗಂಗೆ ಇಳಿದಳು ಅಂದು, ಹರಿದಳು ಪಾವನಳಾಗಿ
ನೊಂದಳಿಂದು ಆ ತಾಯಿ,
ತನ್ನಲ್ಲಿ ಮುಗಿಬಿದ್ದ ವಿಷವಸ್ತುಗಳ ನೋಡಿ
ತುಂಗೆಯ  ಪಾನ ಸವಿ ಎನ್ನುವುದು ಗಾದೆ ಮಾತು
ಕುಡಿದರಿಂದು ಆಗಬಹುದು ಅದು ರೋಗಕ್ಕೆ ತುತ್ತು
ಕಣ್ಣುಕುಕ್ಕುವ ವನವು ಮಾಯವಾಗುತಲಿಂದು
ಬಯಲುಸೀಮೆಯ ಹಾದಿ ಹಿಡಿಯುತ್ತ ಹೊರಟಿಹುದು
ಮತ್ತು ಮದಗಳ ಗಾಳಿ ನೀರನ್ನು ಕೊಚ್ಚೊಯ್ದು
ಚಂಡಮಾರುತವಾಗಿ ಮುನ್ನುಗ್ಗಿ ಬರುತಿಹುದು.
ಮೇಲಕ್ಕೆ ಹಾರುತ್ತಾ, ನೀರಲ್ಲಿ ಈಜುತ್ತ
ವೇಗದಿಂದಲಿ ಸಾಗುತಿಹುದು ನಮ್ಮಯ ಬಾಳು,
ನಾವು ಎನ್ನುದ ಮರೆತು, ನಾನು ಎನ್ನುತ ಮೆರೆದು
ಬದುಕನ್ನು ಸವೆಸುವ ಪರಿ ಈ ನಮ್ಮ ಜಗವು