ಕೊಡೆ ಮಹಿಮೆ


' ಮಳೆಗಾಲದಲ್ಲಿ ಕೊಡೆ ಬಿಟ್ಟವ ಹೆಡ್ಡ" ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಲಿ ಕೊಡೆ ಹಿಡಿದನಂತೆ. ಇವು ಕೊಡೆಯ ಬಗ್ಗೆ ಇರುವ ನುಡಿಕಟ್ಟುಗಳು. ಛತ್ರಿ ಎನ್ನುವುದಕ್ಕೆ ಕುತಂತ್ರ ಬುದ್ದಿ ಎನ್ನುವ ಅರ್ಥವೂ  ಇದೆ. ಇದೆಲ್ಲಾ ಯಾಕಪ್ಪ ಅಂದ್ರೆ ಈಗ ಮಳೆಗಾಲ. ಛತ್ರಿ ಬೇಕೇ, ಬೇಕು. ಮಲೆನಾಡಿನಲ್ಲಂತೂ ಮಳೆಗಾಲದಲ್ಲಿ ಛತ್ರಿ ಇಲ್ಲದೆ ಜೀವನ ಅಸಾಧ್ಯ. 
ಈ ಕೊಡೆಗಳ ಇತಿಹಾಸ ಕ್ರಿ.ಪೂ. 800 ರಷ್ಟು ಹಿಂದಿನದ್ದೆಂದು ನಂಬಲಾಗಿದೆ. ಹಿಂದಿನ ಕಾಲದಲ್ಲಿ ಗೊರಬೆಯಿಂದ ಮಳೆಗೆ ರಕ್ಷಣೆ ಪಡೆಯುತ್ತಿದ್ದರು. ಈಗ ಗೊರಬೆಗಳು ಮಾಯವಾಗಿವೆ. 3000 ವರ್ಷಗಳ ಹಿಂದಿನ ಈಜಿಪ್ತಿನ ಭಿತ್ತಿ ಚಿತ್ರಗಳಲ್ಲಿ ರೋವಾ ರಾಜಕುಮಾರಿಯರಿಗೆ ದಾಸಿಯರು ಕೊಡೆ ಹಿಡಿದು ನಿಂತಿರುವುದನ್ನು ನೋಡಬಹುದು. 17 ನೇ ಶತಮಾನದ ವೇಳೆಗೆ ಕೊಡೆಗಳ ಬಳಕೆ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಕಂಡು ಬಂದಿದೆ. ಕೊಡೆ ಆರಂಭದಲ್ಲಿ ಅಧಿಕಾರದ, ಗೌರವದ ಲಾಂಛನವಾಗಿತ್ತು. ಶಿವಾಜಿ ಛತ್ರಪತಿ ಎನಿಸಿದ್ದ . ದೇವರ ಮೆರವಣಿಗೆಗೂ ಕೊಡೆ ಬೇಕು.  ಈಗಲೂ ದೇವಾಲಯಗಳಲ್ಲಿ ಪೂಜೆಯ ಸಂದರ್ಭದಲ್ಲಿ ಓಲೆ ಕೊಡೆ ಹಿಡಿಯುವುದನ್ನು ನಾವು ಕಾಣಬಹುದು. ಮದುವೆಯಲ್ಲೂ ಕೊಡೆ ಬೇಕು. ಬಣ್ಣ ಬಣ್ಣದ ಕೊಡೆಗಳು ಆಕರ್ಷಕವೂ ಹೌದು.
ಸ್ತ್ರೀಯರಿಗೆ ಕೊಡೆ ಭೂಷಣ, ಜಂಭದ ಸಂಕೇತ ಕೂಡ. ಈಗ ಮಾರುಕಟ್ಟೆಯಲ್ಲಿ ಸಿಗುವ ಮಡಚುವ ಕೊಡೆಗಳು ಜಪಾನ್ ಮತ್ತು ತೈವಾನ್ ಕೊಡುಗೆ. ತೀ್ರೆೆಲ್ಡ್ ಕೊಡೆಗಳಿಗೆ ಈಗ ಬೇಡಿಕೆ ಜಾಸ್ತಿ. 100 ರಿಂದ ಹಿಡಿದು 4,50, 500 ರೂ.ಗಳ ವಿ.ಐ.ಪಿ ಕೊಡೆಗಳೂ ಈಗ ಮಾರಕಟ್ಟೆಯಲ್ಲಿ ಲಭ್ಯ.