ವಧು ಕೊರತೆ ನೀಗಿಸಲು ಹೊಸ ಹೆಜ್ಜೆ


ವಧುವಿನ ಕೊರತೆ ಎದುರಿಸುತ್ತಿರುವ ಬ್ರಾಹ್ಮಣ ಸಮಾಜದ ಯುವಕರಿಗೆ ವಿವಾಹ ಸಂಬಂಧ ಕಲ್ಪಿಸಲು ಸುಳ್ಯದ ಕಶ್ಯಪ್ ಯುವ ಬ್ರಾಹ್ಮಣ ವೇದಿಕೆ ಹೊಸ ಹೆಜ್ಜೆ ಇರಿಸಿದೆ. ದೂರದ ಕಾಶ್ಮೀರಿ ಬ್ರಾಹ್ಮಣ ಸಮಾಜದ ಯುವತಿಯರ ಜೊತೆ ವಿವಾಹ ಸಂಬಂಧ ಬೆಳೆಸುವ ಬಗ್ಗೆ ಚಿಂತನೆ ಹಾಗೂ ವಿಚಾರಗೋಷ್ಠಿಯನ್ನು ಏರ್ಪಡಿಸಿದೆ. ಆಗಸ್ಟ್ 18ರಂದು ಅಪರಾಹ್ನ 2 ಗಂಟೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪ ಇರುವ ಸ್ವಾತಿ ಸಿಟಿ ಲಾಡ್ಜ್ನ ಪುಷ್ಯ ಹಾಲ್ನಲ್ಲಿ ವಿಚಾರಗೋಷ್ಠಿ ನಡೆಯಲಿದೆ.
ಅಂದು ಕರ್ನಾಟಕ ಹಾಗೂ ನೆರೆಯ ಕೇರಳ ರಾಜ್ಯದ ದ್ರಾವಿಡ ಬ್ರಾಹ್ಮಣ ಸಮಾಜದ ಎಲ್ಲಾ ಪಂಗಡದವರು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೆ ವಿವಾಹಾಸಕ್ತ ಸ್ತ್ರೀ, ಪುರುಷರ ನೋಂದಣಿ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ. ಮರು ವಿವಾಹಗಳಿಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ವೇದಿಕೆ ಅಧ್ಯಕ್ಷ ಆರ್.ಕೆ. ಭಟ್ (9980567416) ಅವರನ್ನು ಸಂಪರ್ಕಿಸಬಹುದು.