ಅಶ್ಲೀಲ ಎಸ್ಎಂಎಸ್ ಕಳುಹಿಸುವುದರಲ್ಲಿ ಭಾರತೀಯರೂ ಮುಂದೆ


ಅಶ್ಲೀಲ ಎಸ್ಎಂಎಸ್, ಎಂಎಂಎಸ್ ಕಳುಹಿಸುವ ವಿಪರೀತ ಚಾಳಿ ಏನಿದ್ದರೂ, ವಿದೇಶೀಯರೇ.. ಭಾರತೀಯರೇನಿದ್ದರೂ, ತೀರಾ ತೀರಾ ಪರಮ ಪವಿತ್ರರು ಎಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. ಭಾರತದಲ್ಲೂ ಅಶ್ಲೀಲ ಎಸ್ಎಂಎಸ್ಗಳನ್ನು, ಚಿತ್ರಗಳನ್ನು ಕಳುಹಿಸುವ ಚಾಳಿ ಹೆಚ್ಚಾಗುತ್ತಿದ್ದು, ಶೇ.54ರಷ್ಟು ಮಂದಿ ಇಂತಹುವುಗಳಲ್ಲಿ ನಿರತರಾಗಿರುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಟೈಮ್ ಮ್ಯಾಗಝೀನ್ ನಡೆಸಿದ "ವೈರ್ಲೆಸ್ ಇಷ್ಯೂ" ಎಂಬ ಸಮೀಕ್ಷೆಯಲ್ಲಿ ಈ ವಿಚಾರ ಬಯಲಾಗಿದೆ. ಸಮೀಕ್ಷೆಗಾಗಿ 8 ದೇಶಗಳನ್ನು - ಭಾರತ, ಅಮೆರಿಕ, ಬ್ರಿಟನ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಇಂಡೋನೇಷಿಯಾ ಮತ್ತು ಬ್ರೆಝಿಲ್ನ 5 ಸಾವಿರ ಮಂದಿಯನ್ನು ಸಂದರ್ಶಿಸಲಾಗಿದೆ.
ಇವುಗಳಲ್ಲಿ ಅಶ್ಲೀಲ ಎಸ್ಎಂಎಸ್ ಕಳುಹಿಸುವ ಪ್ರಮಾಣ ಬ್ರೆಝಿಲ್ನಲ್ಲಿ ಶೇ.64ರಷ್ಟಿದ್ದರೆ, ಶೇ.45 ಅಮೆರಿಕ ಮತ್ತು ಶೇ.54ರಷ್ಟು ದಕ್ಷಿಣ ಆಫ್ರಿಕಾದ ಮಂದಿಯಿದ್ದಾರೆ.
ಸಮೀಕ್ಷೆ ಪ್ರಕಾರ, ಆಧುನಿಕ ಯುಗದಲ್ಲಿ ಫೋನ್ನಂತಹ ಮಾಧ್ಯಮಗಳು ಬಂದ ಮೇಲೆ ಸಂಬಂಧಗಳು ಬಹುಬೇಗ ಸಾಧ್ಯವಾಗುತ್ತವೆ.ಬಹುತೇಕ ರಾಷ್ಟ್ರಗಳಲ್ಲಿ ಶೌಚಾಲಯ, ನೀರನ್ನು ಬಳಸುವುದಕ್ಕೂ ಹೆಚ್ಚು, ಜನ ಮೊಬೈಲ್ ಬಳಸುತ್ತಾರೆ ಎನ್ನಲಾಗಿದೆ. ಸಮೀಕ್ಷೆಗೊಳಪಟ್ಟವರಲ್ಲಿ ಶೇ.84ರಷ್ಟು ಮಂದಿ ಮೊಬೈಲ್ ಇಲ್ಲದಿದ್ದರೆ, ಒಂದು ದಿನ ಕಳೆಯಲೂ ಸಾಧ್ಯವಿಲ್ಲ ಎಂದಿದ್ದಾರೆ. ಇಂಥವರು ಪ್ರತಿ 30 ನಿಮಿಷಕ್ಕೊಮ್ಮೆ ಮೊಬೈಲ್ ಹಿಡಿಯುತ್ತಾರೆ. ಇವರಲ್ಲಿ ಐವರಲ್ಲೋರ್ವ, ಪ್ರತಿ ಹತ್ತು ನಿಮಿಷಕ್ಕೆ ಮೊಬೈಲ್ ನೋಡುತ್ತಾರೆ ಎಂದು ಹೇಳಲಾಗಿದೆ.