ಹೊನ್ನಾವರದ ಗಣೇಶ ಮಂದಿರದಲ್ಲಿ ಲಕ್ಷಾಹುತಿ ದೂರ್ವಾಹವನ


ನಂದನ ಸಂವತ್ಸರ ಅಧಿಕ ಭಾದ್ರಪದ ಮಾಸದ ಪ್ರಯುಕ್ತ ಹೊನ್ನಾವರದ ರಾಯಲಕೇರಿ ಶ್ರೀ ಗಣೇಶ ಮಂದಿರದಲ್ಲಿ ಸೆ.1ರಿಂದ 11ರ ವರೆಗೆ 'ಲಕ್ಷಾಹುತಿ ದೂರ್ವಾಹವನ' ಕಾರ್ಯಕ್ರಮ ನಡೆಯಲಿದೆ.
ಸೆ.1ರಿಂದ 11ರವರೆಗೆ ಶ್ರೀ ಅಷ್ಟೌಮಹಾಮಂತ್ರ, ಶ್ರೀ ಕೃಷ್ಣ, ಶ್ರೀ ವೆಂಕಟೇಶ ಮಂತ್ರ ಹವನ, ಶ್ರೀ ಆದಿತ್ಯ ಹೃದಯ ಹವನ, ರುದ್ರ ಹವನ, ಶ್ರೀ ಷಡ್ಬೀಜ ಮಂತ್ರ, ಬ್ರಹ್ಮಣಸ್ಪತಿಸೂಕ್ತ, ಗಣಹೋಮ, ಶ್ರೀ ಪುರುಷೋತ್ತಮ ಯೋ ಹವನ, ಶ್ರೀ ದ್ವಾದಶ ಸ್ತೋತ್ರ ಹವನ, ಶ್ರೀ ಹಿರಣ್ಯ ಸೂಕ್ತ ಹವನ, ಶ್ರೀ ಹರಿವಾಯುಸ್ತುತಿ ಹವನ, ಶ್ರೀ ಮನ್ಯುಸೂಕ್ತ ಹವನ, ಶ್ರೀ ಭಾಗ್ಯೈಕ್ಯ ಸೂಕ್ತ ಹವನ, ಶ್ರೀ ಮಹಾಯಜ್ಞದ ಪೂರ್ಣಾಹುತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಅಧಿಕ ಪುಣ್ಯಲ ನೀಡುವ ಈ ಕಾರ್ಯಕ್ರಮಗಳನ್ನು ಲೋಕಕಲ್ಯಾಣಾರ್ಥ ಕೈಗೊಳ್ಳಲಾಗಿದೆ. 'ಎಲೈ ದೂರ್ವೆಯೇ ರೋಗನಿವಾರಣೆಯಲ್ಲಿ ಅಮೃತದಂತಿರುವ, ನೂರಾರು ಬೇರು, ಚಿಗುರುಗಳನ್ನುಳ್ಳ ನೂರಾರು ಪಾಪಗಳನ್ನು ನಾಶ ಮಾಡುವ, ನೂರು ವರ್ಷ ಆಯುಷ್ಯ ಬೆಳೆಸುವ ನಿನಗೆ ಪ್ರಣಾಮ' ಎಂಬುದು ಶಾಸದಲ್ಲಿ ದೂರ್ವೆಯ ಬಗ್ಗೆ ಹೇಳಲಾಗಿರುವ ಉಕ್ತಿ.