ಅಡಿಕೆ ಕೊಳೆ ರೋಗ ತೊಲಗಿಸಲು ಬಂದಿದೆ ರಾಮಬಾಣ


ಮಳೆಗಾಲದಲ್ಲಿ ಹೆಚ್ಚಾಗಿ ಅಡಿಕೆಗೆ ತಗಲುವ ಕೊಳೆರೋಗ ನಿಯಂತ್ರಿಸಲು ಸಿಂಪಡಿಸಬಹುದಾದ ದ್ರಾವಣವೊಂದನ್ನು ಬೆಂಗಳೂರಿನ ಬಯೋ-ಪೆಸ್ಟ್ ಮ್ಯಾನೇಜ್ ಮೆಂಟ್ ಸಂಸ್ಥೆ ತಯಾರಿಸಿದೆ. ಈ ದ್ರಾವಣವನ್ನು ಸಿಂಪಡಿಸಿದಲ್ಲಿ ಇದರ ಪರಿಣಾಮ ಮೂರು ತಿಂಗಳುಗಳ ಕಾಲ ಉಳಿಯುತ್ತದೆ ಎನ್ನುತ್ತಾರೆ ಕೃಷಿ ಪಂಡಿತ ಪ್ರಶಸ್ತಿ ವಿಜೇತ, ಸಾವಯವ ಕೃಷಿಕ ಬಿ.ಸಿ.ಅರವಿಂದ್.
ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭವಾಯಿತೆಂದರೆ ಅಡಿಕೆ ಬೆಳೆಗಾರರಲ್ಲಿ ಒಂದು ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗುತ್ತದೆ. ಒಂದೆಡೆ ಔಷಧಿ ಸಿಂಪರಣೆ ಮಾಡಲು ಅಡ್ಡಿ ಪಡಿಸುವ ಮಳೆ, ಮತ್ತೊಂದೆಡೆ ಕೆಲಸದವರ ಅಭಾವ. ಗಗನಕ್ಕೆ ಏರಿರುವ ಮೈಲುತುತ್ತದ ಬೆಲೆ, ಇದರಲ್ಲಿನ ಕಳಪೆ ಗುಣಮಟ್ಟ...ಇಷ್ಟೆಲ್ಲಾ ಸಮಸ್ಯೆಗಳು ಮಳೆಗಾಲದ ಜೊತೆಯಲ್ಲಿಯೇ ಬರುತ್ತವೆ. ಅಡಿಕೆ ಬೆಳೆಗಾರರು ಮುಖ್ಯವಾಗಿ ಕೊಳೆ ರೋಗ ಎಂದರೆ ಏನು?. ಇದು ಬರುವುದು ಹೇಗೆ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಂತರವೇ ಯಾವ ಔಷಧಿ ಸಿಂಪರಣೆ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು.
ಕೊಳೆರೋಗ ಎಂದರೆ ಹೊಸ ಜೀವಿಯಲ್ಲ. ಬಹಳ ಹಿಂದಿನಿಂದಲೂ ಭೂಮಂಡಲದಲ್ಲಿ ವಾಸಿಸುತ್ತಲೇ ಇದ್ದಂತಹ ಜೀವಿ. ಇದಕ್ಕೆ ಅಡಿಕೆ ಎಂಬ ಮರ, ಅದರ ಫಸಲು ಒಂದು ಆಹಾರ, ಅಲ್ಲಿರುವ ಹವಾಮಾನ ಅವುಗಳ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾಗಿದೆ. ಆದುದರಿಂದ ಅಲ್ಲಿ ಅದು ಬೆಳೆದು ಅಡಿಕೆಗೆ ರೋಗವನ್ನು ತರುತ್ತದೆ. ಇದೊಂದು ಪರಾವಲಂಬಿ ಜೀವಿಯಿಂದ ಉಂಟಾಗುವ ಹಾನಿ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಡಿಕೆ ಬೆಳೆಗಾರರು ಬೋರ್ಡೋ ದ್ರಾವಣವನ್ನು ವೈಜ್ಞಾನಿಕವಾಗಿ ತಯಾರಿಸುತ್ತಿಲ್ಲ ಎಂಬುದು ಕೃಷಿ ತಜ್ಞರ ಅಳಲು. ಔಷಧಿ ಸಿಂಪಡಿಸುವ ವಿಧಾನ ಸಹ ಸರಿಯಿರುವುದಿಲ್ಲ. ಔಷಧಿ ಸಿಂಪಡಿಸುವಾಗ ಅಧಿಕ ಒತ್ತಡದಲ್ಲಿ ಸಿಂಪರಣ ದ್ರಾವಣವು ಹಿಮದ ರೂಪದಲ್ಲಿ ಗೊಂಚಲಿನ ಮೇಲೆ ಬಿದ್ದಲ್ಲಿ ಮಾತ್ರ ಪರಿಣಾಮ ಉತ್ತಮವಾಗಿರುತ್ತದೆ ಎನ್ನುತ್ತಾರವರು.
 ಬಯೋ-ಪೆಸ್ಟ್ ಮ್ಯಾನೇಜ್ಮೆಂಟ್, ಬೆಂಗಳೂರು ಇವರ ಉತ್ಪಾದನೆಯಾದ ಈ ದ್ರಾವಣವನ್ನು ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಯ ರೈತರು ಉಪಯೋಗಿಸಿ ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು. ಸಂಸ್ಥೆಯ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರಾಗಿದ್ದು, ಅಡಿಕೆ ಕೊಳೆರೋಗದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿದ್ದಾರೆ.
ಇದನ್ನು ಸಿಂಪಡಿಸುವಾಗ ಕೊಳೆರೋಗದ ಶೀಲೀಂದ್ರವಾದ ‘ಪೈಟಾಪ್ ತೋರಾ‘ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ. ಇದರ ಪರಿಣಾಮವಾಗಿ ಕೊಳೆರೋಗವು ನಿಯಂತ್ರಣದಲ್ಲಿರುತ್ತದೆ. ಇದು ಸುಲಭವಾಗಿ ಉಪಯೋಗಿಸಬಹುದಾದ ಒಂದು ಉತ್ಪನ್ನ ಹಾಗೂ ನೀರಿನಲ್ಲಿ ಬೇಗ ಕರಗುವ ದ್ರವ ರೂಪದ ಮಿಶ್ರಣ. ಇದು ಯಾವುದೇ ಅಡ್ದ ಪರಿಣಾಮಗಳಿಲ್ಲದ ಔಷಧ. ಈ ದ್ರಾವಣ ಬೆಂಗಳೂರು ಕೃಷಿ ವಿವಿ ಹಾಗೂ ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಇವರಿಂದ ಪರೀಕ್ಷಿಸಲ್ಪಟ್ಟು, ಅನುಮೋದಿಸಿ, ಶಿಫಾರಸ್ಸು ಮಾಡಿರುವ ಒಂದು ಉತ್ಪನ್ನ. ಹೆಚ್ಚಿನ ಮಾಹಿತಿಗಾಗಿ ಮೊ.9448065479, 9448282116 ಸಂಪರ್ಕಿಸಬಹುದು.