ಮೊಬೈಲ್ಗೆ ಬರುತ್ತಿದೆ ಪಾಕ್ ಕರೆ, ಎಚ್ಚರವಿರಲಿ.


ಅನೇಕರ ಮೊಬೈಲ್ಗೆ ಅಪರಾತ್ರಿಯಲ್ಲಿ ಪಾಕಿಸ್ತಾನದ ದೂರವಾಣಿ ಸಂಖ್ಯೆಯಿಂದ ಕರೆಗಳು ಬರುತ್ತಿವೆ. ವಿವಿಧ ಅಂತಾರಾಷ್ಟ್ರೀಯ ನಂಬರ್ಗಳಿಂದ ಕರೆ ಮಾಡಿ ಜನರನ್ನು ವಂಚನೆಯ ಜಾಲಕ್ಕೆ ಸಿಲುಕಿಸುತ್ತಿದ್ದಾರೆ. +34, +35, +37 ರಿಂದ ಪ್ರಾರಂಭವಾಗುವ ಅನೇಕ ಸಂಖ್ಯೆಗಳಿಂದ ಪದೇ ಪದೇ ಕಿರಿ ಕಿರಿಯಾಗುವಷ್ಟು ಕರೆ ಬರುತ್ತಿದೆ. +37282010024 ಇಂತಹ ಸಂಖ್ಯೆಯ ಕರೆ ಅಪರಾತ್ರಿಯಲ್ಲಿ ಬರುತ್ತಿದೆ. ಇಂತಹ ಕರೆಗಳು ಬಂದರೆ ಸ್ವೀಕರಿಸಬೇಡಿ ಎಂದು ದೂರವಾಣಿ ಸಂಸ್ಥೆಗಳು ಮನವಿ ಮಾಡಿ ಸಂದೇಶ ಕಳುಹಿಸುತ್ತಿವೆಯಾದರೂ, ಕೆಲವರು ಮಿಸ್ ಕಾಲ್ ಇದೆ ಎಂದು ಮರಳಿ ಕರೆ ಮಾಡಿ ನೂರಾರು ರೂ.ಗಳ ಕರೆನ್ಸಿ ಕಳೆದುಕೊಂಡಿದ್ದಾರೆ.
ಇಂತಹ ಸಂಖ್ಯೆಯ ಕರೆ ಸ್ವೀಕರಿಸಿದರೆ ನಮ್ಮ ಸಂಖ್ಯೆಯ ಕುರಿತಾದ ಎಲ್ಲಾ ವಿವರಗಳನ್ನು ಕರೆ ಮಾಡಿದವರು ಸಂಗ್ರಹಿಸುತ್ತಾರೆ. ಆಗ ನಮ್ಮ ನಂಬರ್ ನಮ್ಮಲ್ಲಿದ್ದರೂ ಅವರದ್ದಾಗುತ್ತದೆ. ನಮಗೆ ಅರಿವಿಲ್ಲದಂತೆ ನಮ್ಮ ನಂಬರ್ನ್ನು ಅವರು ಉಪಯೋಗಿಸುತ್ತಾರೆ. ಭಯೋತ್ಪಾದನಾ ಕೃತ್ಯಗಳಿಗೆ ಬಳಸುವ ಸಾಧ್ಯತೆಯೂ ಇದೆ. ಇಂತಹ ಕೃತ್ಯಗಳಿಗೆ ದುಷ್ಕರ್ಮಿಗಳು ಒಂದು ಹ್ಯಾಕಿಂಗ್ ಸಾಪ್ಟ್ವೇರ್ ಉಪಯೋಗಿಸುತ್ತಾರೆ.
ಸಾಫ್ಟ್ವೇರ್ ಬಳಸಿ ಬಲ್ಕ್ ಕರೆಗಳನ್ನು ಮಾಡುತ್ತಾರೆ. ಉಗ್ರರು ಆ ಸಾಫ್ಟ್ವೇರ್ ಬಳಸಿ ಧ್ವನಿ ಮುದ್ರಿತ ಕರೆಗಳನ್ನು ಒಂದೇ ಸಮನೆ ಸಗಟಾಗಿ ಸಾವಿರಾರು ನಂಬರ್ಗಳಿಗೆ ಕರೆ ಮಾಡುತ್ತಾರೆ. ಎಲ್ಲವೂ ಸ್ವಯಂಚಾಲಿತವಾಗಿರುತ್ತದೆ. ಕಂಪ್ಯೂಟರ್, ಸಾಫ್ಟ್ವೇರ್ ಮೂಲಕ ನೂತನ ತಂತ್ರಜ್ಞಾನ ಬಳಸಿ ಇಂತಹ ಕತ್ಯ ಎಸಗುತ್ತಿದ್ದಾರೆ. ಬಿಎಸ್ಎನ್ಎಲ್, ಏರ್ಟೆಲ್ ಮೊದಲಾದ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಈ ಬಗ್ಗೆ ಎಸ್ಎಂಎಸ್ ಅನ್ನು ರವಾನೆ ಮಾಡುತ್ತಿವೆ. +91 ಹೊರತುಪಡಿಸಿ ಇತರ ಸಂಖ್ಯೆಯಿಂದ ಆರಂಭವಾಗುವ ಕರೆಗಳನ್ನು ಸ್ವೀಕರಿಸಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿವೆ. ಅಲ್ಲದೇ ಯಾರಾದರೂ ಅಪರಿಚಿತರು ಕರೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಲು ತಿಳಿಸಿದರೆ ದಯವಿಟ್ಟು ಮಾಡಬೇಡಿ. ಒಂದು ವೇಳೆ ಸ್ವಿಚ್ ಆಫ್ ಮಾಡಿದರೆ ನಮ್ಮ ಮೊಬೆಲ್ ಹ್ಯಾಕರ್ಗಳ ಕೈವಶವಾಗುತ್ತದೆ ಎಂದೂ ವಿವರಿಸಲಾಗಿದೆ. ಇಷ್ಟಾಗಿಯೂ ಅಮಾಯಕರು ಬಲಿಪಶುಗಳಾಗುತ್ತಿದ್ದಾರೆ.
ಕೆಲ ಕರೆಗಳು ನಾವು ಗ್ರಾಹಕ ಸೇವಾ ಕೇಂದ್ರದಿಂದ ಕರೆ ಮಾಡುತ್ತಿದ್ದೇವೆ. ಹಬ್ಬದ ಪ್ರಯುಕ್ತ ನಿಮಗೆ ವಿಶೇಷ ಕೊಡುಗೆ ಇದೆ. ನಿಮ್ಮ ಮೊಬೆಲ್ನಲ್ಲಿ ಈ ಸಂಖ್ಯೆಗಳನ್ನು ಒತ್ತಿ ನಿಮಗೆ ಬೋನಸ್ ರೀಚಾರ್ಜ್ ಸಿಗುತ್ತದೆ ಎಂದು ನಿರ್ದಿಷ್ಟ ಸಂಖ್ಯೆಗಳನ್ನು ಒತ್ತಲು ತಿಳಿಸುತ್ತಾರೆ. ಅಂತಹ ಕರೆಗಳಲ್ಲಿ ತಿಳಿಸುವ ಸಂಖ್ಯೆಗಳನ್ನು ಒತ್ತಲು ಮುಂದಾಗಬೇಡಿ. ಒತ್ತಿದಿರಿ ಎಂದಾದರೆ ನಿಮ್ಮ ಮೊಬೆಲ್ನಲ್ಲಿದ್ದ ಉಳಿತಾಯದ ಕರೆನ್ಸಿ ಕಡಿತವಾಗುತ್ತದೆ.
ಕೇವಲ ಮೊಬೆಲ್ ಸಂಖ್ಯೆ ಮಾತ್ರ ದುಷ್ಕರ್ಮಿಗಳ ಕೆವಶವಾಗದೆ ನಮ್ಮ ಮೊಬೆಲ್ ಸಂಖ್ಯೆ, ಯಾರ ಹೆಸರಲ್ಲಿದೆ, ನಮ್ಮ ವಿವರ, ನಮ್ಮ ಭಾವಚಿತ್ರ, ಐ.ಡಿ ಕಾರ್ಡ್ ಅವರಿಗೆ ದೊರೆಯುತ್ತದೆ. ಅದನ್ನು ಅವರು ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಮ್ಮ ಹೆಸರಲ್ಲಿ ಭಯೋತ್ಪಾದನೆ ನಡೆಸುವ ಸಾಧ್ಯತೆಯೂ ಇದೆ. ಮಹಿಳೆಯರ ನಂಬರ್ ಸಿಕ್ಕರೆ ಅವರಿಗೆ ಪದೇ ಪದೇ ಕರೆ ಮಾಡಿ ಮಾನಸಿಕ ಹಿಂಸೆ ನೀಡಬಹುದು.
ಸಾಧಾರಣವಾಗಿ ಸಾಮಾಜಿಕ ತಾಣಗಳಲ್ಲಿ ಬಹಿರಂಗವಿರುವ ಮೊಬೆಲ್ ನಂಬರ್ಗಳನ್ನು ಉಗ್ರರು ಗುರಿಯಾಗಿಸಿಕೊಂಡಿದ್ದಾರೆ. ರೋಬೋಟ್ ತಂತ್ರಜ್ಞಾನದ ಮೂಲಕ ನಂಬರ್ಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಕರೆ ಮಾಡುತ್ತಾರೆ. ಕೆಲ ತಿಂಗಳ ಹಿಂದೆಯಷ್ಟೆ ಖದೀಮರು ಮಾಲ್ವೇರ್ ವೆರಸ್ ಅಂತರ್ಜಾಲದಲ್ಲಿ ಹರಿಯುವಂತೆ ಮಾಡಿ 64,000 ಕ್ಕೂ ಹೆಚ್ಚು ಕಂಪ್ಯೂಟರ್ ಹಾಳುಗೆಡವಿದ್ದರು. ಇಂತಹ ಅನೇಕ ಪಿತೂರಿಗಳನ್ನು ಉಗ್ರರು ನಡೆಸುತ್ತಿದ್ದಾರೆ. ಆದ್ದರಿಂದ ಫೇಸ್ಬುಕ್ನಂತಹ ಜಾಲತಾಣದಲ್ಲಿ ಸಂಖ್ಯೆ ನೀಡುವಾಗ ಎಚ್ಚರವಿರಲಿ. ಅಂತರ್ಜಾಲ, ಮೊಬೈಲ್ ಬಳಕೆ ಮೇಲೆ ನಿಯಂತ್ರಣವಿರಲಿ.