ಮಾರ್ಜಾಲಕ್ಕಿಲ್ಲಿ ನೈವೇದ್ಯ


ಒಳ್ಳೆಯ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನವೆಂದು ನಂಬುವ ಜನರೆ ಹೆಚ್ಚು, ಆದರೆ ಶಹಾಪುರ ತಾಲೂಕಿನ ಹಯ್ಯಳ (ಬಿ) ಗ್ರಾಮದಲ್ಲಿ ಹಯ್ಯಳಲಿಂಗೇಶ್ವರ ದೇಗುಲಕ್ಕೆ ಬರುವ ಭಕ್ತರು ಬೆಕ್ಕಿಗೆ ಹಾಲು ಹಾಗೂ ತುಪ್ಪವನ್ನು ನೈವೇದ್ಯವಾಗಿ ಸಲ್ಲಿಸುತ್ತಾರೆ. ಈ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಯ್ಯಳಲಿಂಗೇಶ್ವರ ಜಾತ್ರೆ ಸಂಕ್ರಾಂತಿ ಹಾಗೂ ನೂಲಹುಣ್ಣಿಮೆ ವೇಳೆ ನಡೆಯುತ್ತದೆ. ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ದೇಗುಲಕ್ಕೆ ಭಕ್ತರು ಬರುತ್ತಾರೆ. ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಹಿತ್ತಾಳೆ ಗಂಟೆ, ಬೆಳ್ಳಿ ಕುದುರೆ, ಬೆಳ್ಳಿ ತೊಟ್ಟಿಲುಗಳ ಹರಕೆ ಹೊತ್ತುಕೊಳ್ಳುತ್ತಾರೆ. ಹರಕೆಯಾಗಿ ತಂದ ಈ ಪದಾರ್ಥಗಳನ್ನು ದೇವಾಲಯದಲ್ಲಿ ಕಟ್ಟುವ ಮೂಲಕ ದೇವರಿಗೆ ಹರಕೆ ತೀರಿಸುತ್ತಾರೆ.
ಹಯ್ಯಳಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಬೆಕ್ಕುಗಳಿವೆ. ಇಲ್ಲಿಗೆ ಬರುವ ಭಕ್ತರು ದೇವರಿಗೆ ತಂದ ನೈವೇದ್ಯ, ಹಾಲು, ತುಪ್ಪವನ್ನು ತಪ್ಪದೆ ಈ ಬೆಕ್ಕುಗಳಿಗೆ ಹಾಕುತ್ತಾರೆ. ಭಕ್ತರು ತರುವ ಹಾಲನ್ನು ಬೆಕ್ಕುಗಳಿಗೆ ಹಾಕಲು ಕಲ್ಲಿನ ತಟ್ಟೆ(ಲೋಟ) ಕೆತ್ತಲಾಗಿದೆ. ಬೆಕ್ಕುಗಳು ದೇವಾಲಯದ ಆವರಣದಲ್ಲೇ ಓಡಾಡಿಕೊಂಡಿರುತ್ತವೆ.
"ನಮ್ಮ ತಾತ, ಮುತ್ತಾತನ ಕಾಲದಿಂದಲೂ ಬೆಕ್ಕುಗಳು ದೇವಾಲಯದ ಆವರಣದಲ್ಲಿವೆ ಎಂದು ನಮ್ಮ ತಂದೆ ಹೇಳುತ್ತಾರೆ. ಈ ಬೆಕ್ಕುಗಳನ್ನು ನಾವು ಅಪಶಕುನವೆಂದು ತಿಳಿದಿಲ್ಲ. ಮದುವೆ ಸಮಯದಲ್ಲಿ ಕಟ್ಟೆ ಮೇಲೆ, ಕಂಬಳಿಯಲ್ಲಿ ಬಂದು ಕುಳಿತುಕೊಳ್ಳುತ್ತವೆ. ನಾವು ಓಡಿಸುವುದಿಲ್ಲ. ದೇವರ ದರ್ಶನಕ್ಕೆ ಬರುವ ಜನರು ದೇವರಿಗೆ ನೈವೇದ್ಯ ತೋರಿಸಿದ ನಂತರ ಇಲ್ಲಿರುವ ಬೆಕ್ಕುಗಳಿಗೆ ತಾವು ತಂದ ಹಾಲು, ತುಪ್ಪ ಹಾಕುತ್ತಾರೆ'' ಎನ್ನುತ್ತಾರೆ ದೇವಾಲಯದ ಪೂಜಾರಿ.

ಬೆಂಗಳೂರು ಐಐಎಂ ವಿದ್ಯಾರ್ಥಿಗಳು ವಿಶ್ವದಲ್ಲೇ ನಂ.1


ವಿಶ್ವದ ಶ್ರೇಷ್ಠ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿ.ವಿ.ಗೆ ಸ್ಥಾನವಿಲ್ಲ ಎಂಬ ನಿರಾಸೆಯ ಸುದ್ದಿಯ ಬೆನ್ನಲ್ಲೇ ಭಾರತೀಯರು ಅದರಲ್ಲೂ ಬೆಂಗಳೂರು ಹೆಮ್ಮೆ ಪಡುವಂತಹ ಸುದ್ದಿ ಬಂದಿದೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್ಮೆಂಟ್(ಐಐಎಂ)ನ ವಿದ್ಯಾರ್ಥಿಗಳು ವಿಶ್ವದಲ್ಲೇ ನಂ.1 ಎಂದು ಸಮೀಕ್ಷೆಯೊಂದು ಹೇಳಿದೆ. ಈ ಮೂಲಕ ಹಾರ್ವರ್ಡ್, ಸ್ಟಾನ್ಫೋರ್ಡ್, ಎಂಐಟಿಯಂತಹ ವಿಶ್ವಶ್ರೇಷ್ಠ ವಿದ್ಯಾಲಯಗಳ ವಿದ್ಯಾರ್ಥಿಗಳನ್ನೂ ಐಐಎಂ (ಬಿ) ವಿದ್ಯಾರ್ಥಿಗಳು ಹಿಂದಿಕ್ಕಿದ್ದಾರೆ.
'ಕ್ಯುಎಸ್ ಗ್ಲೋಬಲ್ 200 ಬ್ಯುಸಿನೆಸ್ ಸ್ಕೂಲ್' ವರದಿಯ ಅನ್ವಯ, ವಿಶ್ವದ ಶ್ರೇಷ್ಠ ಬ್ಯುಸಿನೆಸ್ ಸ್ಕೂಲ್ಗಳಲ್ಲಿ ಪ್ರವೇಶ ಪಡೆಯಲು ನಡೆಸಲಾಗುವ ಜಿಮ್ಯಾಟ್ ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರು ಐಐಎಂನ ವಿದ್ಯಾರ್ಥಿಗಳು ಸರಾಸರಿ 780 ಅಂಕ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಜಿಮ್ಯಾಟ್ ಪ್ರವೇಶ ಪರೀಕ್ಷೆಯಲ್ಲಿ ಸ್ಟಾನ್ಫೋರ್ಡ್ ವಿದ್ಯಾರ್ಥಿಗಳ ಸರಾಸರಿ ಅಂಕ 730ರಷ್ಟಿದ್ದರೆ, ಐಐಎಂ ಅಹಮದಾಬಾದ್ನ ವಿದ್ಯಾರ್ಥಿಗಳ ಸರಾಸರಿ ಅಂಕ 767 ಇದೆ. ಅಂದರೆ ಈ ಪಟ್ಟಿಯಲ್ಲಿ ಮೊದಲ ಎರಡೂ ಸ್ಥಾನ ಭಾರತದ ಐಐಎಂಗಳದ್ದು.
ಭಾರತದ ಎರಡೂ ಐಐಎಂಗಳಲ್ಲಿ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳು ಕೇವಲ 2 ವರ್ಷದ ಉದ್ಯಮದ ಅನುಭವ ಹೊಂದಿದ್ದಾರೆ. ಎಂಬಿಎ ಪೂರ್ಣಗೊಂಡ ಬಳಿಕ ಸಣ್ಣಮಟ್ಟದ ಕೆಲಸಕ್ಕೆ ಸೇರುವ ಬದಲು ಅವರೆಲ್ಲಾ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದೇ, ಐಐಎಂ (ಬಿ)ನಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಕಾಣಲು ಅನುವು ಮಾಡಿಕೊಟ್ಟಿದೆ. ಜೊತೆಗೆ ಬೆಂಗಳೂರು ಐಐಎಂ, ಮೆಲ್ಬರ್ನ್ ಬ್ಯುಸಿನೆಸ್ ಸ್ಕೂಲ್ ಅನ್ನೂ ಹಿಂದಿಕ್ಕಿ ಮುನ್ನಡೆದಿದೆ ಎಂದು ಸಮೀಕ್ಷೆ ಹೇಳಿದೆ.

ನ್ಟೆ ಸಿಸ್ಟಮ್ ವ್ಯವಹಾರ, ಸುರಕ್ಷಿತ ಪರಿಹಾರ


ಬ್ಯಾಂಕ್ನ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಈಗ ಅತ್ಯಂತ ಸುಲಭ. ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕೆಲವೇ ನಿಮಿಷಗಳಲ್ಲಿ ಹಣ ವರ್ಗಾಯಿಸಬಹುದಾಗಿದೆ. ಇದಕ್ಕೆ ಕಾರಣ ಚಾಲ್ತಿಯಲ್ಲಿರುವ ನೆಫ್ಟ್ ಸಿಸ್ಟಮ್. ವಿದ್ಯುನ್ಮಾನ ಹಣ ವರ್ಗಾವಣೆಯ ಮೂಲಕ ಹಣವನ್ನು ವರ್ಗಾಯಿಸುವ ನ್ಯಾಷನಲ್ ಇಲೆಕ್ಟ್ರಾನಿಕ್ ಂಡ್ ಟ್ರಾನ್ಸ್ರ್ (ಎನ್ಇಎ್ಟಿ) ತಂತ್ರಜ್ಞಾನದ ಮೂಲಕ ಸುರಕ್ಷಿತವಾಗಿ ನಿಮ್ಮ ಅಕೌಂಟ್ಗೆ ಹಣ ವರ್ಗಾವಣೆಯಾಗುತ್ತದೆ. ಯಾರ ಬ್ಯಾಂಕ್ನ ಖಾತೆಗೆ ಹಣ ಜಮೆ ಮಾಡಲು ತಿಳಿಸಬೇಕಾಗುತ್ತದೋ ಆ ಖಾತೆಗೆ ಕೆಲವೇ ಸಮಯದಲ್ಲಿ ಹಣ ಜಮೆಯಾಗುತ್ತದೆ. ಇಲ್ಲಿ ಡಿಮಾಂಡ್ ಡ್ರ್ಟಾ, ಚೆಕ್ ವಹಿವಾಟು ಮುಂತಾದವುಗಳ ತೊಂದರೆ ಇಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಪದ್ಧತಿಗೆ ಬೇಕಾದ ಎಲ್ಲಾ ಅಗತ್ಯ ಕ್ರಮ ಜರುಗಿಸುತ್ತಿದೆ. ದೇಶದ ಪ್ರತಿ ಪ್ರಜೆಯೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಲೇಬೇಕೆಂಬ ಆಶಯ ಅದರದು. ನೆಫ್ಟ್ ಸಿಸ್ಟಮ್ಗೆ ಬ್ಯಾಂಕ್ಗಳ ಐಎ್ಎಸ್ ಮತ್ತು ಎಂಐಸಿಆರ್ ಸಂಖ್ಯೆಗಳು ಬಹಳ ಮುಖ್ಯ. ಈ ಸಂಖ್ಯೆಗಳು ಬ್ಯಾಂಕ್ನ ಶಾಖೆಯನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ಕೆಲವೇ ಬ್ಯಾಂಕ್ಗಳು ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಗ್ರಾಮೀಣ ಬ್ಯಾಂಕ್ಗಳು ಕೂಡಾ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿವೆ. ಕಾಲಕ್ರಮೇಣ ಎಲ್ಲಾ ಸಹಕಾರಿ, ಗ್ರಾಮೀಣ ಬ್ಯಾಂಕ್ಗಳು ಈ ವ್ಯವಸ್ಥೆಯತ್ತ ಹೆಜ್ಜೆ ಹಾಕಬಹುದು.
ಹಣ ವರ್ಗಾವಣೆ ಹೇಗೆ?:
ನಿಮ್ಮ ಖಾತೆಯಿಂದ ಬೇರೆ ಖಾತೆಗೆ ಹಣ ವರ್ಗಾಹಿಸುವ ವೇಳೆ ನೀವು ನಿಮ್ಮ ಖಾತೆಯಿರುವ ಬ್ಯಾಂಕ್ಗೆ ಹೋಗಿ ಅಲ್ಲಿ ನಿಗದಿತ ಅರ್ಜಿ ನಮೂನೆ ಪಡೆಯಿರಿ. ಅದರಲ್ಲಿ ಯಾರಿಗೆ ಹಣ ವರ್ಗಾಯಿಸಬೇಕೋ ಅವರ ಹೆಸರು, ಅಕೌಂಟ್ ನಂಬರ್, ಬ್ಯಾಂಕ್ ಶಾಖೆ ಕೋಡ್ (ಇಂಡಿಯನ್ ಫೈನಾನ್ಶಿಯಲ್ ಸಿಸ್ಟಮ್ ಕೋಡ್)ನ್ನು ಮತ್ತು ವರ್ಗಾಯಿಸಬೇಕಾದ ಹಣದ ಮೊತ್ತವನ್ನು ನಮೂದಿಸಬೇಕು. ಪ್ರತಿ ಬ್ಯಾಂಕಿನ ಪ್ರತಿ ಶಾಖೆಗೆ ಒಂದೊಂದು ಕೋಡ್ ಸಂಖ್ಯೆ ಇರುತ್ತದೆ. ಇದನ್ನು ಇದೀಗ ಪಾಸ್ ಬುಕ್ನಲ್ಲಿ ನಮೂದಿಸಿರುತ್ತಾರೆ. ಇಲ್ಲವೇ ಚೆಕ್ಬುಕ್ನಲ್ಲಿ  ಐಎ್ಸಿ ಸಂಖ್ಯೆ ಮತ್ತು ಚೆಕ್ ಸಂಖ್ಯೆಯ ಮುಂಭಾಗ ಎಂಐಸಿಆರ್ ಸಂಖ್ಯೆಯನ್ನು ನಮೂದಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಡಬ್ಲುಡಬ್ಲುಡಬ್ಲು.ಆರ್ಬಿಐ.ಆರ್ಗ್ ವೆಬ್ಸೈಟ್ನ್ನು ನೋಡಬಹುದು. ಹಣ ವರ್ಗಾವಣೆ ಮಾಡುವ ಬ್ಯಾಂಕ್ ಈ ವರ್ಗಾವಣೆಯ ವಿವರಗಳನ್ನು ಆರ್ಬಿಐಯ ಮಂಬಯಿ ಶಾಖೆಯ ಕ್ಲಿಯರಿಂಗ್ಗೆ ಕಂಪ್ಯೂಟರ್ನ ತಂತ್ರಜ್ಞಾನದ ಮೂಲಕ ವಿದ್ಯುನ್ಮಾನದಲ್ಲಿ ತಿಳಿಸುತ್ತದೆ.
ಆರ್ಬಿಐ ಕೂಡಲೇ ತನ್ನ ಸಂದೇಶವನ್ನು ಹಣ ವರ್ಗಾವಣೆ ಮಾಡಬೇಕಾದ ಶಾಖೆಗೆ ವಿದ್ಯುನ್ಮಾನದಲ್ಲಿ ತಿಳಿಸುತ್ತದೆ. ಕೂಡಲೇ ಜಮೆಯಾಗಬೇಕಾದ ಶಾಖೆಯ ಖಾತೆಗೆ ಹಣ ಆತನ ಎಲ್ಲಾ ವಿವರ ಸರಿ ಇದೆಯೇ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಜಮೆ ಮಾಡಲಾಗುವುದು. ಖಾತೆಯ ಸರಿಯಾದ ವಿವರ ಇಲ್ಲದಿದ್ದರೆ, ತಪ್ಪು ಮಾಹಿತಿ ಬಂದಿದ್ದರೆ ಅದನ್ನು ಪುನಃ ಹಿಂತಿರುಗಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಈ ನ್ಟೆ ಪದ್ಧತಿಯಲ್ಲಿ ತಗಲುವ ವೆಚ್ಚ ತುಂಬಾ ಕಡಿಮೆ. 1 ಲಕ್ಷ ರೂ. ವರ್ಗಾವಣೆ ಮಾಡುವುದಕ್ಕೆ ತಗಲುವ ವೆಚ್ಚ 5 ರೂ. ಮತ್ತು ತೆರಿಗೆ ಅಷ್ಟೇ. 2 ಲಕ್ಷ ರೂ.ಗೂ ಮಿಕ್ಕಿದ ಹಣ ವರ್ಗಾವಣೆಗೆ 25 ರೂ.ಪಾವತಿಸಿದರೆ ಸಾಕು. ಕೆಲವು ಬ್ಯಾಂಕುಗಳು ಈ ಸರ್ವಿಸ್ ಚಾರ್ಜನ್ನೂ ಪಡೆಯುವುದಿಲ್ಲ.
ಸುರಕ್ಷಿತ ವ್ಯವಸ್ಥೆ:
ಯಾವುದಾದರೂ ತಾಂತ್ರಿಕ ಸಮಸ್ಯೆಗಳಿಂದ ಹಣ ವರ್ಗಾವಣೆಯಾಗದೆ ಇದ್ದ ಪಕ್ಷದಲ್ಲಿ ಕಳುಹಿಸಿದವರ ಖಾತೆಗೆ ಹಣ ಮರು ಜಮೆಯಾಗುವ ವ್ಯವಸ್ಥೆ ಇಲ್ಲಿದೆ. ಖಾತೆದಾರನ ಹೆಸರು, ಇನಿಶಿಯಲ್ ಲೆಟರ್, ತಂದೆಯ ಹೆಸರು, ಖಾತೆ ಸಂಖ್ಯೆ ವ್ಯತ್ಯಾಸ ಕಂಡು ಬಂದರೆ ಇಲ್ಲವೆ ಖಾತೆ ಆ್ಯಕ್ಟಿವ್ ಆಗಿರದೆ ಇದ್ದರೆ ಹಣ ಜಮೆಯಾಗದೆ ಹಿಂದಕ್ಕೆ ಬರುತ್ತದೆ. ಹಣ ಪಡೆಯುವವರು ಡಿ.ಡಿ, ಚೆಕ್ ಪಡೆಯುವ,ಅಂಚೆ ಮೂಲಕ ಹಣ ಕಳುಹಿಸುವ ಪ್ರಮೇಯವೇ ಇಲ್ಲ. ಡಿ.ಡಿ., ಚೆಕ್ ಹಿಡಿದು ಬ್ಯಾಂಕ್ಗೆ ಹೋಗಿ ಬರುವ ಸಮಯಾವಕಾಶ ಉಳಿಯುತ್ತೆ. ಡಿ.ಡಿ., ಚೆಕ್ ಹರಿದು ಹೋಗುವ, ಹಾಳಾಗುವ, ಮೋಸ, ವಂಚನೆ, ಕಳ್ಳತನವಾಗುವ, ಕರೆಕ್ಷನ್ ಅಗಿದೆ ಎನ್ನುವ ಭಯ ದಾವುದೂ ಇಲ್ಲಿಲ್ಲ. ಈ ಸಿಸ್ಟಮ್ನಲ್ಲಿ ಆನ್ಲೈನ್ (ನೆಟ್) ಸಿಸ್ಟಮ್ನಲ್ಲೇ ಮನೆಯಲ್ಲೂ ವ್ಯವಹಾರ ಮಾಡಬಹುದು.
ಹಾಗಾಗಿ, ಎಲ್ಐಸಿ ಕ್ಲೈಮ್ ಸೆಟ್ಲ್ಮೆಂಟ್, ಬೋನಸ್, ಸ್ಕಾಲರ್ಶಿಫ್, ಪ್ರಾವಿಡಂಟ್ ಂಡ್, ಕೃಷಿ ಪರಿಹಾರ ಧನ, ಸಬ್ಸಿಡಿ ಹಣ, ಇಲಾಖೆಗಳ ಪರಿಹಾರ ಎಲ್ಲವೂ ಈಗ ಈ ಸಿಸ್ಟಮ್ ಮೂಲಕವೇ ಹಣ ಪಾವತಿಸುತ್ತವೆ.