ಬ್ರಾಹ್ಮಣದ್ವಯರಿಗೆ ಭಾರತರತ್ನಈ ಬಾರಿ ಖ್ಯಾತ ವಿಜ್ಞಾನಿ ಸಿಎನ್ಆರ್ ರಾವ್ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ಗೆ ಭಾರತ ರತ್ನ ಬಂದಿದೆ. ಇಬ್ಬರೂ ಬ್ರಾಹ್ಮಣರು. ಬ್ರಾಹ್ಮಣರಿಗೆ ಭಾರತ ರತ್ನ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು.

ಭತ್ತದ ಕೊಯ್ಲು ಜೋರು

ಮಲೆನಾಡಿನಲ್ಲಿ ಭತ್ತದ ಕೊಯ್ಲು ಬಿರುಸಿನಿಂದ ಪ್ರಾರಂಭಗೊಂಡಿದೆ. ಮಳೆಯಿಂದ ಕೊಯ್ಲು ತಡವಾಗಿ ಪ್ರಾರಂಭವಾಗಿದ್ದರೂ ರೈತರು ಹಗಲಿರುಳೂ ಭತ್ತವನ್ನು ಒಟ್ಟುಗೂಡಿಸುವುದರಲ್ಲಿ ಮಗ್ನರಾಗಿದ್ದಾರೆ. ಇದರ ಮಧ್ಯೆ ಕೃಷಿ ಕೂಲಿಗಳ ಅಭಾವವೂ ಕಾಡುತ್ತಿದೆ.ರ್ಥಿಕ ಬೆಳೆಯಾದ ಭತ್ತದ ಬಗ್ಗೆ ಗೌರವ ಹಾಗೂ ಪೂಜ್ಯ ಭಾವನೆ ರೈತರಲ್ಲಿದೆ. ಮಳೆಯಾಶ್ರಿತ ಬೇಸಾಯವಾಗಿದ್ದರಿಂದ ಬೆಳೆ ಯಾವಾಗಲೂ ಅನಿಶ್ಚಿತ. ಇತ್ತೀಚಿನ ವರ್ಷಗಳಲ್ಲಿ ಮಳೆ ಅನಿಯಂತ್ರಿತವಾಗಿ ಸುರಿಯುತ್ತಿರುವುದರಿಂದ ರೈತರ ಬದುಕು ಕಷ್ಟಕರವೇ. ಅಲ್ಲದೇ ಹೈಬ್ರಿಡ್ ತಳಿ ಪ್ರಚಲಿತದಲ್ಲಿ ಇರುವುದರಿಂದ ಅವುಗಳಿಗೆ ರೋಗ ರುಜಿನಗಳು ಹೆಚ್ಚು.
ಭತ್ತದ ಸಂಸ್ಕೃತಿ ಇಲ್ಲಿ ಪ್ರಾಚೀನ ಕಾಲದಿಂದಲೂ ಉಳಿದುಕೊಂಡು ಬಂದಿದೆ. ಅದರ ಮೇಲೆಯೇ ಹಬ್ಬ ಹರಿದಿನಗಳು, ಸಾಹಿತ್ಯಗಳು, ಕೆಲ ಆಚರಣೆಗಳು ಹೇರಳವಾಗಿವೆ. ಪಾರಂಪರಿಕ ಕೃಷಿ ಪದ್ಧತಿಗಳು ಕೂಡಾ ಇಲ್ಲಿ ಇನ್ನೂ ಉಳಿದುಕೊಂಡಿದೆ. ಸುಮಾರು 35 ಕ್ಕೂ ಹೆಚ್ಚು ಪಾರಂಪರಿಕ ತಳಿ ಭತ್ತಗಳು ರೈತರ ಹೊಲದಲ್ಲಿ ಈಗಲೂ ಉಳಿದು ಕೊಂಡಿವೆ. 30 ವರ್ಷಗಳ ಹಿಂದೆ 60ಕ್ಕೂ ಹೆಚ್ಚು ಹಳೆಯ ತಳಿ ಭತ್ತಗಳು ಇದ್ದವು. ಇಂದು ಅವು ಸುಧಾರಿತ ಭತ್ತದ ಅಬ್ಬರದಲ್ಲಿ ನಶಿಸಿವೆ.ವರ್ಷ ಮಳೆ ಕಾರಣದಿಂದ ಭತ್ತದ ಸಲು ಅಲ್ಲಲ್ಲಿ ನಷ್ಟಕ್ಕೆ ಒಳಗಾಗಿವೆ. ನದಿ ಪ್ರವಾಹದಲ್ಲಿ ಸಾವಿರಾರು ಎಕರೆ ಭತ್ತದ ಬೆಳೆ ಹಾಳಾಗಿದೆ. ಇವುಗಳ ಮಧ್ಯೆಯೂ ರೈತರು ಕೃಷಿಯನ್ನು ನಡೆಸಿದ್ದರು. ಮಳೆ ಕೊಯ್ಲು ಮಾಡಲು ಬಿಡುವು ನೀಡದೇ ಇದ್ದುದರಿಂದ ಕೆಲ ಕಡೆಗಳಲ್ಲಿ ಸಲು ಕೆಳ ಬಿದ್ದು ಮೊಳಕೆಯೊಡೆದಿದೆ. ಒಂದು ಎಕರೆಗೆ 20 ರಿಂದ 30 ಕ್ವಿಂಟಾಲ್ ಭತ್ತವನ್ನು ಬೆಳೆಯಲಾಗುತ್ತದೆ. ಮಳೆ ವೈಪರಿತ್ಯವಾದರೆ ಅದು 5 ರಿಂದ 10 ಕ್ವಿಂಟಾಲ್ ಗೆ ಇಳಿಯುತ್ತದೆ. ಖರ್ಚು ಎಕರೆಯೊಂದಕ್ಕೆ ಕನಿಷ್ಠ 10 ಸಾವಿರ ರೂ. ಸಾಮಾನ್ಯ. ಇಂದು ಮಾರುಕಟ್ಟೆಯಲ್ಲಿ ಭತ್ತ ಕ್ವಿಂಟಾಲ್ ಒಂದಕ್ಕೆ 1400 ರೂ. ದರವಿದೆ ಎಂದು ರೈತರು ಹೇಳುತ್ತಿದ್ದಾರೆ. ಮಳೆ ಈಗ ಬಿಡುವು ನೀಡಿರುವುದು ರೈತರಿಗೆ ಹರ್ಷವಾಗಿದೆ. ಹೀಗಾಗಿ ಇದ್ದ ಸಲನ್ನು ಒಟ್ಟು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಚಂದನದಲ್ಲಿ ಟಿಎಸ್ಎಸ್ ಪರಿಚಯ

ಚಂದನದಲ್ಲಿ ಟಿಎಸ್ಎಸ್ ಪರಿಚಯತ್ತರ ಕನ್ನಡ ಜಿಲ್ಲೆ ಶಿರಸಿಯ ಅಡಿಕೆ ಬೆಳೆಗಾರರ ಸಂಸ್ಥೆ ತೋಟಗಾರ್ಸ್ ಕೋಆಪರೇಟಿವ್ ಸೇಲ್ ಸೊಸೈಟಿಯ ಕುರಿತಾದ ಪರಿಚಯ ಕಾರ್ಯಕ್ರಮ ನ.21ರಂದು ಸಂಜೆ 6ಕ್ಕೆ ದೂರದರ್ಶನ ಚಂದನವಾಹಿನಿಯ ಕೃಷಿದರ್ಶನ ದಲ್ಲಿ ಪ್ರಸಾರವಾಗಲಿದೆ. ಸಂಘದ ಅಧ್ಯಕ್ಷ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಜೊತೆ ಸಂದರ್ಶನ ಹಾಗೂ ಸಂಘದ ಕಾರ್ಯಚಟುವಟಿಕೆಗಳ ವಿವರ ಕಾರ್ಯಕ್ರಮದಲ್ಲಿ ಮೂಡಿಬರಲಿದೆ.