ಡಿ. 30ರಂದು ಗಂಗಾಧರ ಕೊಳಗಿಯವರ ಪುಸ್ತಕ ಬಿಡುಗಡೆ

ಪತ್ರಕರ್ತ ಗಂಗಾಧರ ಕೊಳಗಿ ರಚಿಸಿದ ಕಾಡಂಚಿನ ಕತೆಗಳು ಪುಸ್ತಕ ಡಿಸೆಂಬರ್ 30ರಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಬಿಡುಗಡೆಯಾಗಲಿದೆ. ಇಲ್ಲಿನ ಎಪಿಎಂಸಿ ಯಾರ್ಡಿನಲ್ಲಿನ ತಾಲೂಕು ಮಾರ್ಕೆಟಿಂಗ್ ಸೊಸೈಟಿ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಪ್ರಸಿದ್ಧ ಸಾಹಿತಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ ನಾ.ಡಿಸೋಜಾ ಪುಸ್ತಕ ಬಿಡುಗಡೆಗೊಳಿಸುವರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಕಾಗೋಡು ರಂಗಮಂಚ ಸಂಸ್ಥೆ ಅಧ್ಯಕ್ಷ ಕಾಗೋಡು ಅಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಿದ್ದಾಪುರದ ಶೃಂಗೇರಿ ಶಂಕರಮಠದ ಧರ್ಮಾಕಾರಿ ವಿಜಯ ಹೆಗಡೆ ದೊಡ್ಮನೆ, ಹಿರಿಯ ಬರಹಗಾರ, ಪತ್ರಕರ್ತ ಕಲಗಾರು ಲಕ್ಷ್ಮೀನಾರಾಯಣ ಹೆಗಡೆ, ಕನ್ನಡಸೇನೆಯ ರಾಜ್ಯ ಸಂಚಾಲಕ ಎಚ್.ಪಿ. ಶ್ರೀಧರಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.