ಜೀವಂತ ಕುರಿ ಕಡಿತಾರೆ, ಗಿಡಕ್ಕೆ ಜೋತು ಬಿಡ್ತಾರೆ

ಕುರಿಗಳಿಗೆ ರೋಗ ಬರದಂತೆ ಚಿಕಿತ್ಸೆಗೆ ಮುಂದಾಗುವ ಬದಲಿಗೆ ಜೀವಂತ ಕುರಿಯನ್ನು ಕಡಿದು ಗಿಡಕ್ಕೆ ನೇತು ಹಾಕುವ ಮೌಢ್ಯ ಇನ್ನೂ ಜೀವಂತವಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜೂಲಕಟ್ಟಿ ಗ್ರಾಮದ ಬಳಿ ಹನುಮಸಾಗರ ರಸ್ತೆಯಲ್ಲಿ ಗಿಡವೊಂದಕ್ಕೆ ಕುರಿಯನ್ನು ನೇತು ಹಾಕಿರುವ ಈ ದೃಶ್ಯ ನೋಡಿ. ಕುರಿಗಳನ್ನು ಮೈಲಿ ಬ್ಯಾನಿಯಿಂದ ಸರಣಿಯಾಗಿ ಸಾಯುವುದನ್ನು ತಪ್ಪಿಸುವ ಉದ್ದೇಶ ಇದಾಗಿದೆ. ಕುರಿಗಾರರು ಇದಕ್ಕೆ ಸಿಡಿ ಬ್ಯಾನಿ ಎಂದು ಕರೆಯುತ್ತಿದ್ದು, ಮೈಲಿ ಬ್ಯಾನಿಯಿಂದ ಸಾಮೂಹಿಕವಾಗಿ ಕುರಿಗಳನ್ನು ಸಾಯುವುದನ್ನು ತಪ್ಪಿಸಲು ರೋಗ ಪೀಡಿತ ಕುರಿ ಬಲಿ ಹಾಕಿ ಗಿಡಕ್ಕೆ ನೇತು ಹಾಕಲಾಗುತ್ತಿದೆ. ಇದರಿಂದ ರೋಗ ಊರನ್ನು ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಕುರಿಗಾರರದ್ದಾಗಿದೆ.ುರಿಗಾರರ ಈ ಮೌಢ್ಯ ಬ್ಯಾನಿ ಒಂದಕ್ಕೆ ಬರೀ ಮತ್ತೊಂದಕ್ಕೆ ಎನ್ನುವಂತಾಗಿದೆ. ರೋಗ ಪೀಡಿತ ಕುರಿಗೆ ಚಿಕಿತ್ಸೆ ನೀಡಿ ಗುಣಪಡಿಸುವ ಸಾಧ್ಯತೆಗಳಿವೆ. ಹೀಗಿದ್ದಾಗ್ಯೂ ಉಳಿದ ಕುರಿಗಳಿಗೆ ರೋಗ ಬರದಂತೆ ಜೀವಂತ ಕುರಿಯನ್ನು ಮೌಢ್ಯದ ಹೆಸರಿನಲ್ಲಿ ಬಲಿ ನೀಡುತ್ತಾರೆ.