ಗಾಂಜಾ ಸೇವನೆಯಲ್ಲಿ ಮೈಮರೆಯುತ್ತಿದ್ದಾರೆ ಯುವಕರು

ರಾಜ್ಯದ ಕೆಲವೆಡೆ ಈಗ ಗಾಂಜಾ ಸೇವನೆಯ ಸಂಶಯದ ಗಾಳಿ ಬೀಸುತ್ತಿದೆ. ಇದನ್ನು ಮಾರುವವರು ದೊಡ್ಡ ಜಾಲವನ್ನೇ ಹೊಂದಿದ್ದಾರೆ. ಅನೇಕ ಯುವಕರು ಈ ಕೆಟ್ಟ ಹವ್ಯಾಸವನ್ನು ಬೆಳೆಸಿಕೊಂಡು ವಿದ್ಯಾಭ್ಯಾಸವನ್ನು ಮುಂದುವರಿಸದೇ ಅಕ್ರಮ ಚಟುವಟಿಕೆಗಳ ಸರದಾರರಾಗುತ್ತಿದ್ದಾರೆ. ಕೆಲವೆಡೆ ಇದು ಯುವಕರ ಜೀವವನ್ನೂ ತೆಗೆದ ಉದಾಹರಣೆ ಇದೆ. ರಂಭದಲ್ಲಿ ನಾಲಿಗೆಯಡಿಯಲ್ಲಿ ಅಥವಾ ಹಲ್ಲು ಮತ್ತು ತುಟಿಗಳೆಡೆಯಲ್ಲಿ ಹೊಗೆಸೊಪ್ಪನ್ನು ಸೇವಿಸುವ ಹವ್ಯಾಸವನ್ನು ಹುಟ್ಟುಹಾಕಿಸಿ, ಬಳಿಕ ಗಾಂಜಾವನ್ನು ಹಂತ ಹಂತವಾಗಿ ಸೇರಿಸಲಾಗುತ್ತದೆಯಂತೆ!. ಕ್ರಮೇಣ ಆತನಿಗೆ ಅದಿಲ್ಲದೇ ಕ್ಷಣ ಕ್ಷಣವನ್ನು ಕಳೆಯಲಾಗುವುದಿಲ್ಲವೆಂಬ ಹಂತ ತಲುಪುತ್ತದೆ. ಆಗ ಆತ ಎಷ್ಟೇ ಹಣ ನೀಡಿಯಾದರೂ ಇದನ್ನು ಖರೀದಿಸುವ ಹಂತ ತಲುಪುತ್ತಾನೆ. ಹಣಕ್ಕಾಗಿ ಆತ ಕದಿಯಲೇ ಬೇಕಾಗುವ ಹಂತ ತಲುಪುತ್ತದೆ. ಒಂದು ಹವ್ಯಾಸಕ್ಕೆ ಮತ್ತೊಂದು ಫ್ರೀಯಾಗಿ ಮುಂದುವರಿಯುತ್ತದೆ. ಚೈನ್ ಸ್ಕೀಮ್ನ ಹಾಗೇ ಈ ಕೆಟ್ಟ ಚಾಳಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮೂಲ ಸ್ಥಾನದಲ್ಲಿರುವ ಅಕ್ರಮಗಳ ಸರದಾರ ಹಣ ದೋಚಲಾರಂಭಿಸುತ್ತಾನೆ. ಈ ಬಗ್ಗೆ ಅನೇಕ ಕಡೆಗಳಲ್ಲಿ ಸಂಶಯಗಳು ಹುಟ್ಟಿಕೊಂಡಿವೆಯಾದರೂ ಅದನ್ನು ನಿವಾರಿಸುವ ಕ್ರಿಯಾಶೀಲ ಕೂಗುಗಳೆದ್ದಿಲ್ಲ.