ಕೋಳಿ ಮೊದಲೋ? ಮೊಟ್ಟೆ ಮೊದಲೋ?'

ಮೊಟ್ಟೆ ಧಾರಣೆ ಏರಿ ಈಗ 4.5 ರೂ.ನಲ್ಲಿದೆ. ಒಂದು ಟ್ರೇಯಲ್ಲಿ 30 ಮೊಟ್ಟೆ ಇರುತ್ತದೆ. ಒಂದು ಟ್ರೇ ಮೊಟ್ಟೆಯ ಒಟ್ಟು ಬೆಲೆ 135 ರೂ. ಒಂದು ಕೆ.ಜಿ. ಕೋಳಿ ಮಾಂಸದ ಬೆಲೆ ಇತ್ತೀಚಿಗೆ 90 ರೂ. ಇತ್ತು. ಮತ್ತೆ 120 ರೂ.ಗೆ ಏರಿ ಈಗ 110 ರೂ.ನಲ್ಲಿ ನಿಂತಿದೆ. ಈಗ ಹೇಳಿ 'ಕೋಳಿ ಮೊದಲೋ ಮೊಟ್ಟೆ ಮೊದಲೋ'?. ಮೊಟ್ಟೆ ದರ ಏರಲು ಕಾರಣ ಉತ್ತರ ಭಾರತದಲ್ಲಿ ಚಳಿ ಇರುವುದು. ಅಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚುತ್ತಿದೆ. ಸಹಜವಾಗಿ ಬೆಲೆ ಏರುತ್ತದೆ. ಕೋಳಿ ಮಾಂಸವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಕೆ.ಜಿ.ಯೊಂದಕ್ಕೆ ಕನಿಷ್ಠ 120 ರೂ. ಖರ್ಚಾಗುತ್ತದೆ. ಉತ್ಪಾದನೆ ಜಾಸ್ತಿ ಇರುವುದರಿಂದ ಸಹಜವಾಗಿ ಬೆಲೆ ಇಳಿಕೆಯಾಗುತ್ತದೆ. 40 ದಿನಗಳಲ್ಲಿ ಕೋಳಿ ಬೆಳೆಯುತ್ತದೆ. ಮಾರುಕಟ್ಟೆ ಬೆಲೆಯನ್ನು ಕಾದಿರಿಸಲು ತಡ ಮಾಡಿದರೆ ಕೋಳಿ ಇನ್ನಷ್ಟು ತಿನ್ನುತ್ತದೆ, ಇನ್ನಷ್ಟು ತೂಕ ಬೆಳೆಯುತ್ತದೆ. ಮತ್ತೂ ನಷ್ಟವಾಗುತ್ತದೆ. ಹೀಗಾಗಿ ನಷ್ಟವನ್ನು ತಡೆಗಟ್ಟಲು ಉತ್ಪಾದನೆಯನ್ನು ಕಡಿಮೆ ಮಾಡಬೇಕಾಗುತ್ತದೆ. ತ್ಪಾದನೆ ಕಡಿಮೆ ಮಾಡುವ ಮಾರ್ಗವೆಂದರೆ ಮರಿ ಇಡುವ ಮೊಟ್ಟೆಯನ್ನು ಒಂದೋ ನಾಶ ಮಾಡುವುದು ಅಥವಾ ಮಾರಾಟ ಮಾಡುವುದು. ಮೊಟ್ಟೆಯಿಂದ ಮರಿ ಬರಲು ಮೂರು ವಾರ ಬೇಕು. ಮರಿ ಮಾಂಸದ ಕೋಳಿಯಾಗಲು 35-40 ದಿನ ಬೇಕು. ಹೀಗೆ ಮೊಟ್ಟೆಯಲ್ಲಿ ಮರಿ ಹುಟ್ಟದಂತೆ ಮಾಡಿದರೆ ಆ ಅವಧಿಯಲ್ಲಿ ಉತ್ಪಾದನೆ ಸಹಜವಾಗಿ ಕಡಿಮೆಯಾಗುತ್ತದೆ. ಇದನ್ನು ಬಹಳ ದಿನ ಇಟ್ಟುಕೊಳ್ಳಲು ಆಗದ ಕಾರಣ ಮಾರುಕಟ್ಟೆ ಬೇಡಿಕೆ -ಪೂರೈಕೆ ಏರಿಳಿತವಿದ್ದಂತೆ ಇಂತಹ ತಾತ್ಕಾಲಿಕ ಕ್ರಮಗಳನ್ನು ಕೋಳಿ ಉತ್ಪಾದಕರು ಕೈಗೊಳ್ಳುತ್ತಾರೆ.ೋಳಿ ಮಾಂಸವೆಂದರೆ ರೆಕ್ಕೆ ಪುಕ್ಕ ಎಲ್ಲಾ ಕಡಿತ ಮಾಡಿ ನೇರ ಬಳಕೆಗೆ ಸಿಗುವ ಅಂಶ. ಸಜೀವ ಕೋಳಿ ತೆಗೆದುಕೊಂಡರೂ ರೆಕ್ಕೆಪುಕ್ಕ ತೆಗೆಯುವುದು ಇದೆ. ಸಜೀವ ಒಂದು ಕೋಳಿ ಬೆಲೆ 15 ದಿನದ ಹಿಂದೆ 35 ರೂ. ಇತ್ತು. ಮೂರ್ನಾಲ್ಕು ದಿನಗಳ ಹಿಂದೆ 65 ರೂ.ಗೆ ಏರಿ 55ಕ್ಕೆ ಇಳಿದು ಮತ್ತೆ 65ರಲ್ಲಿದೆ.