ಕಾರವಾರ ಬಂದರಿನಲ್ಲಿ ಹೂಳಿನ ರಾಶಿ

ವಾರಕ್ಕೆ 3-4 ಹಡಗು ಬಂದು ಹೋಗುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿನಲ್ಲಿ ಇಂದು ತಿಂಗಳಿಗೆ ಒಂದು ಹಡಗು ಸಹ ಬರುತ್ತಿಲ್ಲ. ನೈಸರ್ಗಿಕ ಬಂದರಾಗಿರುವ ಕಾರವಾರ ವರ್ಷ ಪೂರ್ತಿ ಚಟುವಟಿಕೆಯಲ್ಲಿರುತ್ತದೆ. ಆದರೆ ಈ ವರ್ಷ ಬಂದರು ಪ್ರದೇಶದಲ್ಲಿ ಹೂಳು ತುಂಬಿರುವುದರಿಂದ ಯಾವುದೇ ಹಡಗು ಬಂದರು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ದೇಶ-ವಿದೇಶದಿಂದ ಆಗಮಿಸುತ್ತಿದ್ದ ಹಡಗು ಇಲ್ಲಿನ ಬೈತಖೋಲದ ಸರ್ವಋತು ಬಂದರಿನಲ್ಲಿ ಆಮದು-ರ್ತು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದವು. ಬಂದರಿನಲ್ಲಿ ಹಡಗಿನ ಪ್ರವೇಶ ಕಡಿಮೆಯಾಗಿದ್ದರಿಂದ ಸರಕಾರದ ಆದಾಯದ ಮೇಲೂ ತೀವ್ರ ಪರಿಣಾಮ ಉಂಟಾಗಿದೆ.ಳೆದ 2011-12ರಲ್ಲಿ ಕಾರವಾರ ಬಂದರು ಪ್ರದೇಶದಲ್ಲಿ 29.28 ಕೋಟಿ ರೂ. ವೆಚ್ಚದಲ್ಲಿ ತುಂಬಿರುವ ಹೂಳು ತೆಗೆಯುವ ಕಾಮಗಾರಿ ನಡೆಸಲಾಗಿತ್ತು. ಡ್ರೆಜಿಂಗ್ ಕಾರ್ಪೋರೇಶನ್ ಆ್ ಇಂಡಿಯಾ ಎನ್ನುವ ಕಂಪೆನಿಯೂ ಬಂದರು ಪ್ರದೇಶದಲ್ಲಿ 18 ಲಕ್ಷ ಕ್ಯೂಬಿಕ್ ಮೀಟರ್ ಹೂಳು ತೆಗೆಯುವ ಕಾಮಗಾರಿ ವಹಿಸಿಕೊಂಡಿತ್ತು. ಆದರೆ ಕಳೆದ ವರ್ಷ 18 ಲಕ್ಷ ಕ್ಯೂಬಿಕ್ ಮೀ.ಹೂಳು ತೆಗೆಯುವ ಬದಲು 14 ಲಕ್ಷ ಕ್ಯೂಬಿಕ್ ಮೀ. ಹೂಳು ತೆಗೆದು, 4ಲಕ್ಷ ಕ್ಯೂಬಿಕ್ ಮೀ. ತೆಗೆಯಬೇಕಾಗಿದ್ದ ಹೂಳನ್ನು ತೆಗೆದಿರಲಿಲ್ಲ.್ರೆಜಿಂಗ್ ಕಾರ್ಪೋರೇಶನ್ ಆ್ ಇಂಡಿಯಾ ಕಂಪೆನಿ ಪ್ರಸಕ್ತ ಸಾಲಿನಲ್ಲಿ ಮತ್ತೇ ಹೂಳು ತೆಗೆಯುವ ಕಾಮಗಾರಿ ಪ್ರಾರಂಭಿಸದೆ ಇರುವುದರಿಂದ ಈ ವರ್ಷ ಬಂದರು ಪ್ರದೇಶದಲ್ಲಿ ಯಥೇಚ್ಛ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದಾಗಿ ಹಡಗು ಬಂದರಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಬಂದರಿಗೆ ಹಡಗುಗಳು ಬಾರದೆ ಇರುವುದರಿಂದ ಇಲಾಖೆಯ ಆದಾಯದಲ್ಲೂ ಕುಂಠಿತವಾಗಿದೆ.