ದೇವಸ್ಥಾನಗಳಲ್ಲಿದ್ದಾರೆ ಸರಗಳ್ಳರು, ಎಚ್ಚರಿಕೆ

ಕೊಲ್ಲೂರು, ಮುರ್ಡೇಶ್ವರ, ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯ ಮುಂತಾದ ಜನನಿಬಿಡ ದೇವಸ್ಥಾನಗಳನ್ನು ಆಯ್ದು ವಿವಿಧ ಪಂಗಡಗಳಲ್ಲಿ ಕುಟುಂಬಸ್ಥರ ಹಾಗೇ ದೇವಾಲಯಕ್ಕೆ ತೆರಳಿ ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತು ಭಕ್ತರ ಗಮನ ಬೇರೆಡೆ ಸೆಳೆದು ಅವಕಾಶ ನೋಡಿ ಕುತ್ತಿಗೆಯಲ್ಲಿನ ಚಿನ್ನದ ಆಭರಣ ಹಾಗೂ ಬ್ಯಾಗ್ಗಳಲ್ಲಿರುವ ನಗದನ್ನು ಅನಾಯಾಸವಾಗಿ ಅಪಹರಿಸಿ ಪರಾರಿಯಾಗುವ ತಂಡ ಇದೀಗ ಕೊಲ್ಲೂರಿನಲ್ಲಿ ಪತ್ತೆಯಾಗಿದೆ.ತ್ತೀಚೆಗೆ ಕೇರಳದ ಪೊಲೀಸ್ ಅಧಿಕಾರಿಯೋರ್ವರು ಮುರ್ಡೇಶ್ವರಕ್ಕೆ ತೆರಳಿದಾಗ ಅಲ್ಲಿ ದಂಧೆ ನಡೆಸುತ್ತಿರುವ ಇಂತಹ ಗುಂಪಿನ ಬಗ್ಗೆ ಅನುಮಾನಗೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿದ ಅದೇ ಅಧಿಕಾರಿ ಅಲ್ಲಿ ಕೂಡ ಅ ತಂಡವು ಮಹಿಳೆಯರ ಕೊರಳಿನ ಸರ ಎಗರಿಸುತ್ತಿರುವುದನ್ನು ಗಮನಿಸಿ ಅವರನ್ನು ಸ್ಥಳೀಯರ ನೆರವಿನಿಂದ ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಜ್ಯದ ವಿವಿಧೆಡೆ ಈ ದಂಧೆ ನಡೆಸುತ್ತಿರುವ ಗುಂಪು ವಿಶೇಷ ವಾಹನಗಳಲ್ಲಿ ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಆಗಮಿಸುತ್ತದೆ. ನಾನಾ ತಂಡಗಳಲ್ಲಿ ಸಾಗುವ ಕಳ್ಳರ ಗುಂಪು ಸರ ಅಪಹರಣವಲ್ಲದೇ ದೇವಾಲಯಕ್ಕೆ ಕನ್ನ ಹಾಕುವ ಗುಮಾನಿಯೂ ಇದೆ. ಲ್ಲ ದೇವಸ್ಥಾನಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕೆಂಬ ಸುತ್ತೋಲೆಯನ್ನು ಪೊಲೀಸ್ ಇಲಾಖೆ ನೀಡಿದ್ದರೂ ಹಲವು ದೇವಸ್ಥಾನಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿಲ್ಲ. ಅಳವಡಿಸಲಾದ ಅನೇಕ ದೇವಸ್ಥಾನಗಳ ಸಿ.ಸಿ.ಕ್ಯಾಮರಾಗಳು ನಿರುಪಯುಕ್ತವಾಗಿವೆ. ಹಾಗಾಗಿ, ಭಕ್ತರೇ ಎಚ್ಚರದಿಂದ ಇರಬೇಕಿದೆ.