ಉಚಿತವಾಗಿ ಮನೆಪಾಠ ಮಾಡ್ತಾರೆ ಇವರು

ಶಿಕ್ಷಣ ವ್ಯಾಪಾರೀಕರಣವಾಗಿದೆ. ದುಡ್ಡು ಇದ್ದರೆ ಮಾತ್ರ ಶಿಕ್ಷಣ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ಸಂಭಾವನೆಯನ್ನು ನಿರೀಕ್ಷಿಸದೇ ತಮ್ಮೂರಿನ ಸಾಕ್ಷರತೆ ಸುಧಾರಣೆಗೊಳ್ಳಲಿ ಎಂಬ ಉದ್ಧೇಶದಿಂದ ಆರು ಜನ ಪದವೀಧರ ಯುವಕರು ಉಚಿತ ಮನೆಪಾಠ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಗುಡ್ಲಗುಂಟಾ ಗ್ರಾಮದ ಭೀಮರಾಯ, ದೇವಪ್ಪ, ಬನ್ನಪ್ಪ ಎಸ್., ಬನ್ನಪ್ಪ. ಬಿ., ನಾಗಪ್ಪ ಮತ್ತು ಅಂಜಪ್ಪ ಎಂಬ ಪದವೀಧರ ಯುವಕರು ಯಾದಗಿರಿಯ ನ್ಯೂ ಕನ್ನಡ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಬಳಿಕ ತಮ್ಮ ಗ್ರಾಮದ ಒಂದರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ಸುಮಾರು 70 - 125 ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮೂರ್ನಾಲ್ಕು ಗಂಟೆಗಳ ಕಾಲ ಉಚಿತವಾಗಿ ಬೋಧನೆ ಮಾಡುತ್ತಿದ್ದಾರೆ.ಂದೆರಡು ಗಂಟೆ ಸ್ನೇಹಿತರ ಜೊತೆಗೆ ಹರಟೆ ಹೊಡೆಯುವುದಕ್ಕಿಂತ ಮಕ್ಕಳಿಗೆ ಭೋಧನೆ ಮಾಡುವುದರಿಂದ ತಮ್ಮ ಜ್ಞಾನವೂ ವಿಕಾಸವಾಗುತ್ತದೆ ಎಂಬ ಸದುದ್ಧೇಶದೊಂದಿಗೆ ಪದವೀಧರ ಯುವಕರು ಗ್ರಾಮದ ಶೈಕ್ಷಣಿಕ ಏಳಿಗೆಗಾಗಿ ಉಚಿತ ಮನೆಪಾಠ ಆರಂಭಿಸಿದ್ದಾರೆ. ಮಾಜಿ ರಾಷ್ಟ್ರಪತಿ ಡಾಅಬ್ದುಲ್ ಕಲಾಂ ಅವರ ನುಡಿ ನಿಮ್ಮ ನೆರೆಹೊರೆಯವರಿಗೆ ಅಕ್ಷರ ಕಲಿಸಿ ದೇಶವನ್ನು ಸಂಪೂರ್ಣ ಸಾಕ್ಷರತೆಗೊಳಿಸಲು ಯುವಕರು ಒಲವು ತೋರಿ ಎಂಬ ಮಾತುಗಳೇ ಇವರಿಗೆ ಸ್ಫೂರ್ತಿ.
ತಮ್ಮ ಗ್ರಾಮದ ವಿದ್ಯಾರ್ಥಿಗಳು ಒಮ್ಮೆಯೂ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿಲ್ಲ. ಶಿಕ್ಷಣಕ್ಕೆ ಗ್ರಾಮಸ್ಥರು ಒತ್ತು ನೀಡುವಲ್ಲಿ ನಿರಾಸಕ್ತಿ ತೋರುತ್ತಿದ್ದರು. ಆದಕ್ಕಾಗಿ ತಮ್ಮ ಗ್ರಾಮದರು ಉನ್ನತ ಶ್ರೇಣಿ ಪಡೆಯುವಂತೆ ಪ್ರೇರಿಪಿಸಬೇಕು ಎಂಬ ಯೋಚನೆಯೇ ಉಚಿತ ಮನೆಪಾಠದ ಭೋಧನೆಗೆ ಅಡಿಪಾಯ ಹಾಕಲಾಗಿದೆ ಎನ್ನುತ್ತಾರೆ ಮನೆಪಾಠದ ಯುವಕರು. ಅವರ ಭೋಧನೆಯಿಂದ ಈಗ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಮಕ್ಕಳು ಉತ್ತಮ ಶ್ರೇಣಿ ಪಡೆಯುವಲ್ಲಿ ಸಲರಾಗುತ್ತಿದ್ದಾರೆ. ಮನೆಪಾಠ ಮಾಡುತ್ತಿರುವ ಯುವಕರ ಈ ಶ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.