ಸಾಗರ ತಾಲೂಕಲ್ಲಿ ಕಾಡುಕೋಣನ ಕಾಟ

ಸಾಗರ ತಾಲೂಕಿನ ಕೆಲವೆಡೆ ಈಗ ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಕೆಲ ದಿನದ ಹಿಂದೆ ರಸ್ತೆ ಬದಿಯಲ್ಲಿ ಎರಡು ಕಾಡುಕೊಣಗಳು ಕಾಣಿಸಿಕೊಂಡಿದ್ದವು. ತಾಲೂಕಿನ ಕುಗ್ವೆ, ಸೆಟ್ಟಿಸರ ಮೊದಲಾದೆಡೆ ಕಾಡುಕೋಣಗಳ ಹಿಂಡು ರೈತರ ಗದ್ದೆ, ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಇತ್ತೀಚೆಗೆ ತಾಳಗುಪ್ಪ ಸಮೀಪದ ಹಿರೇಮನೆ ಗೋಣೂರು ಸಮೀಪದ ಗದ್ದೆಯಲ್ಲಿ ಕಾಡುಕೋಣವೊಂದು ಕಾಣಿಸಿಕೊಂಡಿದೆ. ಗದ್ದೆಯಲ್ಲಿ ಬೆಳೆದು ನಿಂತ ಪೈರು ಹಾಳು ಮಾಡುತ್ತಿದ್ದ ಈ ಕೋಣ ಜಪ್ಪಯ್ಯ ಎಂದರೂ ಅಲ್ಲಿಂದ ಕಾಲು ಕೀಳಲಿಲ್ಲ. ಕೋಣ ನಿತ್ಯ ಉಪಟಳ ನೀಡುತ್ತಿದ್ದು ರೈತರು ತೊಂದರೆಗೀಡಾಗಿದ್ದಾರೆ. ಒಂಟಿಯಾಗಿರುವ ಈ ಕಾಡುಕೋಣ ಊರು ಕೇರಿಯ ಒಳಗೇ ಓಡಾಡಲು ಪ್ರಾರಂಭಿಸಿದೆ. ಕಿವಿ ಮಂದ ಹಾಗೂ ದೃಷ್ಟಿ ಕಡಿಮೆಯಾದ ಕಾರಣ ಜನರ ಬೆದರಿಕೆಗೂ ಇದು ಮಣಿಯುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ಓಡಾಡಿ ಗದ್ದೆಗಳಿಗೆ ಇಳಿದು ದಾಂಧಲೆ ಮಾಡುತ್ತಿದೆ.
ಸಾಮಾನ್ಯವಾಗಿ ಕಾಡುಕೋಣಗಳು ಮನುಷ್ಯರನ್ನು ಕಂಡಕೂಡಲೆ ಮಾಯವಾಗಿ ಬಿಡುತ್ತವೆ. ಆದರೆ, ಈ ಕಾಡುಕೋಣ ಹಾಡಹಗಲೇ ರಸ್ತೆಯಲ್ಲಿ ಸಾಮಾನ್ಯ ಜಾನುವಾರಿನಂತೆ ಓಡಾಡುತ್ತಿರುವುದರಿಂದ ಶಾಲೆಗೆ ತೆರಳುವ ಮಕ್ಕಳು ಭೀತಿಯಿಂದ ಸಂಚರಿಸುವಂತಾಗಿದೆ.
ಕಾರವಾರದಲ್ಲಿ 26ರಿಂದ 23ನೇ ಕೋಟಿ ಗಾಯತ್ರಿ ಜಪಯಜ್ಞ

ಕಾರವಾರದ ಗಾಯತ್ರಿ ಸಮೂಹ ಹಾಗೂ ಹಾವೇರಿ ಜಿಲ್ಲೆ ತಡಸ ಗ್ರಾಮದ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 23ನೇ ಕೋಟಿ ಗಾಯತ್ರಿ ಜಪಯಜ್ಞ ಕಾರ್ಯಕ್ರಮ ಡಿ.26, 27 ಹಾಗೂ 28ರಂದು ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಲಾದೇವಿ ಮೈದಾನದಲ್ಲಿ ನೆರವೇರಲಿದೆ.
.26.28ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಶಿವಮೊಗ್ಗ ಜಿಲ್ಲೆ ಕೂಡಲಿ ಶಂಕರಮಠದ ಡಾ ಅಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಅದ್ವೈತ ಆಶ್ರಮದ ಪ್ರಣವಾನಂದತೀರ್ಥರು, ಶಿರಹಟ್ಟಿಯ ಕ್ಕೀರೇಶ್ವರ ಸ್ವಾಮೀಜಿ, ಕಾರವಾರದ ರಾಮಕೃಷ್ಣ ಆಶ್ರಮದ ಭವಿಷ್ಯನಂದ ಸ್ವಾಮೀಜಿ, ತಡಸ ಗಾಯತ್ರಿ ಮಠದ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.ರಂದು ಸಂಜೆ 6:00ಗಂಟೆಗೆ ಉದಕಶಾಂತಿ, ಪ್ರವಚನ, ಸಂಗೀತ ಸೇವೆ,ರಾತ್ರಿ 9:00ಗಂಟೆಗೆ ಯಕ್ಷಗಾನ ನಡೆಯಲಿದೆ. ಡಿ.27ರಂದು ಬೆಳಗ್ಗೆ 6:00ಗಂಟೆಗೆ ಪುಣ್ಯಾಹವಾಚನ, ದೇವತಾ ಸ್ಥಾಪನ, ವಿಶೇಷ ಪೂಜೆ, ಅಲಂಕಾರ ಸೇವೆ, 9:00ಗಂಟೆಗೆ ಕಲಶ ಪೂಜೆ, ಸುಮಂಗಲೆಯರಿಂದ ಕುಂಕುಮಾರ್ಚನೆ, ದಶಸಹಸ್ರ ಮೋದಕ, ಗಣಪತಿ ಹವನ, ಗಾಯತ್ರಿ ಹೋಮ, ಸುಬ್ರಮಣ್ಯ ಹವನ, ಅನ್ನಪೂರ್ಣ ಹವನ, ಲಕ್ಷ್ಮೀ-ಕುಬೇರ ಹವನ, ದತ್ತ ಹವನ, ಮಧ್ಯಾಹ್ನ 12:30ಗಂಟೆಗೆ ಮಹಾನೈವೇದ್ಯ, ಮಹಾಮಂಗಳಾರತಿ, ಸಂಜೆ 4:00ಗಂಟೆಗೆ ಗಾಯತ್ರಿ ಮಾತೆಯ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಡೆಯಲಿದೆ.
ಇದರಲ್ಲಿ ಸಾಧು-ಸಂತರು ಪಾಲ್ಗೊಳ್ಳಲಿದ್ದಾರೆ. 6:30ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 8:30ಗಂಟೆಗೆ ಸಾಂಸ್ಕೃತಿ ಕಾರ್ಯಕ್ರಮಗಳು ನೆರವೇರಲಿವೆ.ರಂದು ಬೆಳಗ್ಗೆ 7:00ಗಂಟೆಗೆ ವಿಶೇಷ ಪೂಜೆ, ವಿವಿಧ ಹೋಮ-ಹವನ ನಡೆಯಲಿದೆ. 9:00ಗಂಟೆಗೆ ಕಲಶ ಪೂಜೆ, ಕುಂಕುಮಾರ್ಚನೆ, ಕುಮಾರಿಕಾ ಪೂಜೆ, 11:30ಗಂಟೆಗೆ ಪ್ರಾಣಾಹುತಿ, ಮಹಾನೈವೇದ್ಯ, ಮಹಾಮಂಗಳಾರತಿ, ಮಧ್ಯಾಹ್ನ 12:30ಗಂಟೆಗೆ ಸ್ವಾಮಿಗಳಿಂದ ಆಶೀರ್ವಚನ ನೆರವೇರಲಿದೆ.

ಸಿದ್ದಾಪುರದಲ್ಲಿ ಟಿಎಸ್ಎಸ್ ಹಬ್ಬ

ಸಿದ್ದಾಪುರದ ಟಿಎಸ್ಸೆಸ್ ಸ್ಥಳೀಯ ಶಾಖೆಯಲ್ಲಿ ‘ಟಿಎಸ್ಎಸ್ ಹಬ್ಬ’ ಆಯೋಜಿಸಲಾಗಿದೆ. ಈಗಾಗಲೇ ಸೂಪರ್ ಮಾರ್ಕೆಟ್, ಕೃಷಿ ಉಪಕರಣ, ಹಿಂಡಿ, ಗೊಬ್ಬರ, ಕೀಟನಾಶಕ ಹೀಗೆ ರೈತರ ಹಿತಕ್ಕಾಗಿ ವಿವಿಧ ಸೇವೆ, ಮಾರಾಟ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆ ಇದೀಗ ಮತ್ತಷ್ಟು ಜನರನ್ನು ತಲುಪುವ ಉದ್ದೇಶದಿಂದ ಉತ್ಸವ ನಡೆಸಲು ಮುಂದಾಗಿದೆ.ಲ್ಲಿ ಎಷ್ಟೊಂದು ಸಾಮಗ್ರಿಗಳು ಲಭ್ಯ, ವ್ಯವಸ್ಥೆ ಯಾವ ರೀತಿಯಿದೆ ಎನ್ನುವ ಪರಿಚಯ-ಪ್ರಚಾರದ ಹಿನ್ನೆಲೆಯನ್ನೂ ಈ ಹಬ್ಬ ಹೊಂದಿದೆ. ಹಬ್ಬದಲ್ಲಿ ಕೃಷಿ, ಮನೆಬಳಕೆ ವಸ್ತುಗಳು, ದಿನಸಿ, ಉಪಕರಣ, ವಸ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಕಂಪನಿಯ ಕಡಿತ ಬಿಟ್ಟು ಸಂಸ್ಥೆ ಸಹ ದರ ಕಡಿಮೆ ಮಾಡುತ್ತದೆ. ಚಿಕ್ಕ ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ಸ್ಪರ್ಧಾ ಸಂಭ್ರಮದ ಮೂಲಕ ರಂಗವಲ್ಲಿ, ಹಾಡಿನ ಸ್ಪರ್ಧೆ, ಜಾನಪದ ಗೀತೆ, ಸೂಪರ್ ಮಿನಿಟ್, ಛದ್ಮವೇಷ, ಜಾನಪದ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಹಿಂದೆ ಶಿರಸಿಯಲ್ಲಿ, ಯಲ್ಲಾಪುರದಲ್ಲಿ ಹಬ್ಬ ಆಯೋಜಿಸಲಾಗಿತ್ತು. ಅದರ ಯಶಸ್ಸಿನ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ.

ಹರಿದ ಆಕಳ ಮೊಲೆಗೆ ಶಸಚಿಕಿತ್ಸೆ

ಶಿರಸಿಯ ಬೆಳ್ಳೆ ಮನೆಯಲ್ಲಿ ಕರು ಹಾಕುವ ವೇಳೆ ಕಾಲಿನಡಿ ಸಿಲುಕಿ ಹರಿದ ಹೋಗಿದ್ದ ಮಿಶ್ರತಳಿ ಹಸುವಿನ ಮೊಲೆಯನ್ನು ಶಸಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ.ಂಗಾಧರ ಹೆಗಡೆ ಅವರ ಸಾಹಿವಾಲ ಮಿಶ್ರತಳಿಯ ಹಸುವೊಂದು ಕರು ಹಾಕುವ ಪೂರ್ವದಲ್ಲೇ ಮೊಲೆಗೊಂದು ಗಾಯ ಮಾಡಿಕೊಂಡಿತ್ತು. ಪ್ರಸವ ವೇದನೆಯ ಸಂದರ್ಭದಲ್ಲಿ ನರಳಾಟದಲ್ಲಿ ಗೊರಸಿನಡಿ ಸಿಕ್ಕು ಈ ಮೊಲೆ ಹರಿದಿತ್ತು. ಹಾಲು ಹಿಂಡಲು ಸಾಧ್ಯವೇ ಇರಲಿಲ್ಲ. ಈ ವೇಳೆ ಶಿರಸಿ ಸಮರ್ಪಣ ಡಾ ಪಿ.ಎಸ್. ಹೆಗಡೆ ಹೊನ್ನೆಗದ್ದೆ ಹಾಗೂ ಪಶುವೈದ್ಯ ಆಸ್ಪತ್ರೆ ಸಹಾಯಕ ನಿರ್ದೇಶಕ ನರಸಿಂಹ ಮಾರ್ಕಾಂಡೆ ಶಸಚಿಕಿತ್ಸೆ ಮೂಲಕ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಳ ಮೊಲೆಯ ಅಂಗಾಂಶ ಪುನರ್ ರಚಿಸುವಲ್ಲಿ ಅದೇ ಮೊಲೆಯ ಪಕ್ಕದ ಚರ್ಮವನ್ನು ತೆಗೆದು ಕಸಿ ವಿಧಾನವನ್ನು ಬಳಸಿ ಮೊಲೆಗೆ ಸಹಜ ರೂಪ ಕೊಟ್ಟಿದ್ದಾರೆ. ಈಗ ಸುಲಲಿತವಾಗಿ ಹಾಲು ಹೊರಬರುತ್ತಿದೆ.

ಹತ್ತರ ಜೊತೆ ಹನ್ನೊಂದಾಗದಿರಲಿ ಈ ವಿವಿ

ಕೇಂದ್ರ ಸರಕಾರ ಉನ್ನತ ಶಿಕ್ಷಣದ ವಿಸ್ತರಣೆಗಾಗಿ ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ತೀರ್ಮಾನಿಸಿದೆ. ಜಿಲ್ಲೆಗೊಂದು ಅಥವಾ 2 ಜಿಲ್ಲೆಗೊಂದು ವಿವಿಗಳು ದೇಶಾದ್ಯಂತ ತಲೆಯೆತ್ತಲಿವೆ. ಉತ್ತರ ಕನ್ನಡ ಜಿಲ್ಲೆಗೆ ವಿವಿ ಬೇಕೆ? ಎಂಬ ಬಗ್ಗೆ ಸಮಾಲೋಚಿಸಲು ವಿವಿ ಸ್ಥಾಪನೆಗಾಗಿ ಸಲಹೆ ನೀಡಲು ರಚಿಸಿರುವ ಪ್ರೊ ಸೈದಾಪುರ ಸಮಿತಿಯ ಸಭೆ ಡಿ. 23ರಂದು 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಗೃಹದಲ್ಲಿ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ದೇಶಪಾಂಡೆ, ಮಾಜಿ ಶಿಕ್ಷಣ ಸಚಿವ ಕಾಗೇರಿ, ಜಿಲ್ಲೆಯ ಎಲ್ಲ ಶಾಸಕರು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಡಾ ಎಂ.ಪಿ.ಕರ್ಕಿ, ಎಸ್.ಪಿ.ಕಾಮತ್, ದೀಪಕ ಹೆಗಡೆ, ಮುರಲೀಧರ ಪ್ರಭು, ವಿ.ಎಚ್.ಬೆಣ್ಣೆ, ವಿನಾಯಕ ರಾವ್ ಹೆಗಡೆ, ವಿ.ಜೆ.ನಾಯ್ಕ, ಪ್ರಮೋದ ಹೆಗಡೆ, ಕೈಗಾ ಮತ್ತು ನೌಕಾನೆಲೆಯ ಮುಖ್ಯಸ್ಥರು, ಸಂಶೋಧನಾ ಕೇಂದ್ರದ ಪ್ರಮುಖರು, ಪತ್ರಕರ್ತ ಗಂಗಾಧರ ಹಿರೇಗುತ್ತಿ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿ ವ್ಯಾಪ್ತಿಗೊಳಪಟ್ಟ ಉ.ಕ ಜಿಲ್ಲೆಗೆ ಒಂದು ಪ್ರತ್ಯೇಕ ಅಥವಾ ಹಾವೇರಿ ಜಿಲ್ಲೆ ಜೊತೆಗೂಡಿ ಇನ್ನೊಂದು ಕೇಂದ್ರ ಅಥವಾ ರಾಜ್ಯ ವಿವಿ ಸಿಗುವ ಸಾಧ್ಯತೆ ಇದೆ. ರಾಜ್ಯದ ವಿವಿಗಳು 50ಕ್ಕೂ ಹೆಚ್ಚು ವಿಷಯ ಕಲಿಸುತ್ತ ಸಂಶೋಧನೆಗೆ ಅವಕಾಶ ಮಾಡಿಕೊಟ್ಟಿವೆ. ಸಂಗೀತ, ಸಂಸ್ಕೃತ, ಜಾನಪದಕ್ಕೂ ಬೇರೆ ವಿವಿಗಳಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ಸಾಂಪ್ರದಾಯಿಕ ಶಿಕ್ಷಣ ನೀಡುವ ಸ್ನಾತಕೋತ್ತರ ಕೇಂದ್ರಗಳು ಇರುವಾಗ ಅಂತಹ ವಿಷಯಗಳನ್ನು ಕಲಿಸುವ ಇನ್ನೊಂದು ವಿವಿ ಅಗತ್ಯವಿಲ್ಲ. ಹೊಸ ದಿಕ್ಕಿನಲ್ಲಿ ಯೋಚಿಸುವವರು ಧ್ವನಿಗೂಡಿಸಲಿ.
ಜಿಲ್ಲೆಯಲ್ಲಿ ಆರಂಭವಾಗಬಹುದಾದ ವಿವಿ ಹತ್ತರ ಜೊತೆ ಹನ್ನೊಂದಾಗದೇ ಇರಬೇಕು ಅನ್ನುವುದಾದರೆ ಜಿಲ್ಲೆಯ ಪ್ರಜ್ಞಾವಂತರು, ಜಿಲ್ಲೆಯ ಹೊರಗಿರುವ ವಿದ್ಯಾವಂತರು ತಮ್ಮ ಸಲಹೆಗಳನ್ನು ನೀಡಬೇಕು. ಂದಿನ ಶಿಕ್ಷಣ ವ್ಯವಸ್ಥೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸರಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಿಗೆ ಸಮಾನವಾಗಿ ಆರಂಭವಾಗಿರುವುದರಿಂದ ಖಾಸಗಿ ಕಾಲೇಜುಗಳು ಸಂಕಷ್ಟದಲ್ಲಿವೆ. ಆರ್ಟ್ಸ್ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದಾಯ ಗಮನದಲ್ಲಿಟ್ಟುಕೊಂದು ವೈದ್ಯಕೀಯ, ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ದೇಶಕ್ಕೆ ದೊಡ್ಡ ಕೊಡುಗೆಯೇನು ಆಗುವುದಿಲ್ಲ. ವಿವಿ ಮತ್ತು ಕಾಲೇಜುಗಳಲ್ಲಿ ಹಲವು ವಿಷಯಗಳನ್ನು ಕಲಿಸುತ್ತಿದ್ದರೂ ಕೆಲವು ವಿಭಾಗಗಳಿಗೆ ವಿದ್ಯಾರ್ಥಿಗಳಿಲ್ಲ. ಇನ್ನೂ ಕೆಲವು ವಿಭಾಗಗಳಿಗೆ ಶಿಕ್ಷಕರಿಲ್ಲ. ಉಳಿದೆಲ್ಲ ವಿವಿಗಳಿಗಿಂತ ಭಿನ್ನವಾಗಿ, ದೇಶಕ್ಕೆ ಕೊಡುಗೆಯಾಗಬಲ್ಲ ವಿದ್ಯಾವಂತರನ್ನು ತರಬೇತಿಗೊಳಿಸುವ ಕೇಂದ್ರೀಯ ವಿವಿ ಜಿಲ್ಲೆಗೆ ಬೇಕು.
ವಿವಿ ಮುಂದೆ ಹೊಸ ಅವಕಾಶ: 
ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ವಿಷಯಪಟ್ಟಿಯನ್ನು ಹೊಸ ವಿದ್ಯಾಲಯ ಸಿದ್ಧಪಡಿಸಬೇಕು. ಇತರ ವಿವಿ ಗಳಲ್ಲಿ ವಿರಳವಾಗಿರುವ ವಿಷಯಗಳನ್ನು ಇಲ್ಲಿ ಕಲಿಸುವಂತಾಗಬೇಕು. ಅಧ್ಯಯನ, ಸಂಶೋಧನೆ ಜೊತೆಗೆ ಪ್ರಯೋಗಕ್ಕೂ ಅವಕಾಶವಿರುವ ವಿಷಯಗಳನ್ನು ಒಳಗೊಳ್ಳುವುದು ಸೂಕ್ತ. ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ದೇಶ ಹಿಂದಿದೆ. ಬಹುಪಾಲು ರಕ್ಷಣಾ ಸಾಮಗ್ರಿಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಸೂಕ್ಷ್ಮ ಉಪಕರಣಗಳ ಗುಟ್ಟನ್ನು ಬೇರೆ ದೇಶಗಳು ಬಿಟ್ಟುಕೊಡುವುದಿಲ್ಲ. ಅಲ್ಲಿ ಹಳತಾದ ತಂತ್ರಜ್ಞಾನವನ್ನಷ್ಟೇ ಇಲ್ಲಿಗೆ ಕೊಡುತ್ತಾರೆ. ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಉತ್ಪಾದನೆಗೆ ಅಗತ್ಯವುಳ್ಳ ತಂತ್ರಜ್ಞರನ್ನು ದೇಶದಲ್ಲಿ ತರಬೇತಿಗೊಳಿಸಬೇಕು. ಉಪಕರಣವನ್ನು ದೇಶದಲ್ಲಿಯೇ ತಯಾರಿಸಬೇಕು ಅನ್ನುತ್ತಾರೆ ಪ್ರಧಾನಿ ಮೋದಿ. 25 ಸಾವಿರ ಕೋಟಿ ರೂ. ವೆಚ್ಚದ ಸೀಬರ್ಡ್ ಕಾರವಾರದಲ್ಲಿದೆ. ಭಾರತ ಮುಕ್ಕಾಲು ಪಾಲು ಸಮುದ್ರದಿಂದ ಸುತ್ತುವರಿದಿದೆ. ಆದ್ದರಿಂದ ನೌಕಾಪಡೆಗೆ ಬೇಕಾದ ತಂತ್ರಜ್ಞರನ್ನು, ಉಪಕರಣಗಳ ಕುರಿತು ಸಂಶೋಧನೆಯ ವಿಷಯವನ್ನು ವಿವಿ ಯಲ್ಲಿ ಅಳವಡಿಸಿಕೊಳ್ಳಬೇಕು.ುಸ್ಥಾವರ ಕಾರವಾರದ ಬಳಿ ಕೈಗಾದಲ್ಲಿರುವುದರಿಂದ ಅಣುಶಕ್ತಿ ಬಳಕೆಯ ಸಾಧ್ಯತೆ ಮತ್ತು ರಕ್ಷಣೆ ಮತ್ತು ರಕ್ಷಣೇತರ ಕ್ಷೇತ್ರದಲ್ಲಿ ಇದರ ಬಳಕೆಯ ಕುರಿತು ವಿುಲ ಅವಕಾಶಗಳಿವೆ. ಅಣುಶಕ್ತಿಯ ಕುರಿತಾದ ಸಂಶೋಧನೆ ಮತ್ತು ಜನೋಪಯೋಗಿ ಮತ್ತು ರಕ್ಷಣಾ ವಿಷಯದ ಕುರಿತು ಅಧ್ಯಯನಕ್ಕೆ ಮತ್ತು ಸಂಶೋಧನೆಗೆ ಕೈಗಾದಲ್ಲಿ ಅವಕಾಶ ಇರುವುದರಿಂದ ಈ ವಿಷಯವನ್ನು ವಿವಿ ಒಳಗೊಳ್ಳಬೇಕು. ಬೇಸಿಗೆಯಲ್ಲೂ 5 ನದಿಗಳು ತುಂಬಿ ಹರಿಯುತ್ತವೆ. 140 ಕಿಮೀ ಕರಾವಳಿ ಇದೆ. ಕಡಲು ಮತ್ತು ನದಿ ಜೀವಶಾಸದ ಅಧ್ಯಯನ, ಸಂಶೋಧನೆ ಮತ್ತು ಪ್ರಯೋಗಕ್ಕೆ ವಿವಿ ಯಲ್ಲಿ ಅವಕಾಶ ನೀಡಬಹುದು.ಾಗತಿಕ ಹವಾಮಾನದ ಮೇಲೆ ಪಶ್ಚಿಮ ಘಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಬ್ರಿಟಿಷರು ಕಂಡುಹಿಡಿದಿದ್ದರು. ಉ.ಕ ಜಿಲ್ಲೆ ಸಹಿತ ಪಶ್ಚಿಮ ಘಟ್ಟ ಮುಂಗಾರನ್ನು ಆಕರ್ಷಿಸಿದರೆ ಭಾರತದಲ್ಲಿ ಮಾತ್ರವಲ್ಲ ಲಂಡನ್ನಲ್ಲಿ ಮಳೆಯಾಗುತ್ತದೆ. ಆದ್ದರಿಂದಲೇ ಇಂಗ್ಲೆಂಡ್ ಸರಕಾರ ಪಶ್ಚಿಮ ಘಟ್ಟದಲ್ಲಿ ಅರಣ್ಯ ಬೆಳೆಸಲು ಬಹುಕೋಟಿ ರೂ.ನ್ನು ದಾನವಾಗಿ ನೀಡಿತ್ತು. ಜಿಲ್ಲೆಯ ಪರಿಸರ ಸಂಶೋಧನೆಗೆ ವಿುಲ ಅವಕಾಶವಿದೆ. ಜೊತೆಯಲ್ಲಿ ಹತ್ತಾರು ಜಾತಿಗಳ ಜಾನಪದ ಬದುಕಿನ ಕುರಿತು ಸಂಶೋಧನೆ ಹಾಗೂ ಒಳ್ಳೆಯ ಅಂಶಗಳನ್ನು ಉಳಿಸಿಕೊಳ್ಳುವ ಕುರಿತು ಮಾರ್ಗಶೋಧನೆಗೂ ಅವಕಾಶವಿದೆ.
ಮಲೆನಾಡನ್ನು, ಜಿಲ್ಲೆಯನ್ನು ಮುಖ್ಯವಾಗಿಟ್ಟುಕೊಂಡು ಸಂಶೋಧನೆ ಆಗಬೇಕಾಗಿದೆ. ಪುಣ್ಯಕ್ಷೇತ್ರ ದರ್ಶನದ ಪರಿಣಾಮಗಳು, ಕಡಲು, ಕಾಡುಮೇಡಿನ ಸುತ್ತಾಟದ ಲಾಭಗಳ ಕುರಿತು ವೈಜ್ಞಾನಿಕ ಅಧ್ಯಯನ ಮತ್ತು ವೈಜ್ಞಾನಿಕ ಶಿಕ್ಷಣ ವಿವಿ ಯಲ್ಲಿ ಅವಕಾಶ ಇರಬೇಕು.
ಈಗಿರುವ ವಿವಿ ಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೆ ಅಧ್ಯಯನ, ಡಾಕ್ಟರೇಟ್ ಪಡೆಯುವವರೆಗೆ ಸಂಶೋಧನೆ ಎಂಬಂತಾಗಿದೆ. ಅಧ್ಯಯನದ ಜೊತೆ ಸಂಶೋಧನೆ, ಜೊತೆಯಲ್ಲಿ ಪ್ರಯೋಗಗಳು ಯಶಸ್ವಿಯಾಗಿ ನಡೆಯುವಂತಹ ರೀತಿಯಲ್ಲಿ ವಿಶ್ವವಿದ್ಯಾನಿಲಯದ ಕಾನೂನು ರೂಪಿತವಾಗಬೇಕು. 5-10 ವರ್ಷದ ಅಧ್ಯಯನ ಮುಗಿಸಿ ಬರುವಾಗ ಆತ ತನ್ನ ವಿಷಯಕ್ಕೆ ಸಂಪೂರ್ಣ ಸಿದ್ಧನಾಗಿ, ಬದ್ಧನಾಗಿ ಕೆಲಸಕ್ಕಿಳಿದು ವಿವಿ ಯಿಂದ ಹೊರಬರುವಷ್ಟರಲ್ಲಿ ದೇಶಕ್ಕೆ ಹೊಸದನ್ನು ಕೊಟ್ಟರೆ ಮಾತ್ರ ವಿವಿ ಸ್ಥಾಪನೆ ಸಾರ್ಥಕವಾಗುತ್ತದೆ.


ೆರೆಮನೆಯಲ್ಲಿ ತಾಳಮದ್ದಲೆ

ಬೆಂಗಳೂರಿನ ಸಪ್ತಕ ಸಂಸ್ಥೆಯ ವತಿಯಿಂದ ಗುಣವಂತೆ ಕೆರೆಮನೆ ಶಿವರಾಮ ಹೆಗಡೆ ರಂಗ ಮಂದಿರದಲ್ಲಿ ಡಿ.25ರಂದು ಸಂಜೆ 5ಗಂಟೆಗೆ ಕರ್ಣಪರ್ವ ಆಖ್ಯಾನದ ತಾಳಮದ್ದಲೆ ನಡೆಯಲಿದೆ. ಭಾಗವತರಾಗಿ ನೆಬ್ಬೂರು ನಾರಾಯಣ ಭಾಗವತ, ಮದ್ದಳೆ ವಾದಕರಾಗಿ ಕೃಷ್ಣ ಯಾಜಿ ಇಡಗುಂಜಿ ಭಾಗವಹಿಸುವರು. ಅರ್ಥಧಾರಿಗಳಾಗಿ ವಿ ಉಮಾಕಾಂತ್ ಭಟ್ ಕೆರೆಕೈ-ಕರ್ಣ, ನಾರಾಯಣ ಯಾಜಿ ಸಾಲೆಬೈಲು-ಶಲ್ಯ, ದಿವಾಕರ ಹೆಗಡೆ ಧಾರವಾಡ-ಕೃಷ್ಣ, ವಿ ಗಣಪತಿ ಭಟ್ ಸಂಕದಗುಂಡಿ- ಅರ್ಜುನನಾಗಿ ಪಾತ್ರ ನಿರ್ವಹಿಸುವರು. ಹಿರಿಯ ಯಕ್ಷಗಾನ ಕಲಾವಿದರಾದ ತಿಮ್ಮಣ್ಣ ಯಾಜಿ ಮಣ್ಣಿಗೆ, ರಾಜ್ಯ ಪ್ರಶಸ್ತಿ ವಿಜೇತ ಸುಬ್ರಾಯ ಭಾಗ್ವತ ಕಪ್ಪೆಕೆರೆ, ಕೃಷ್ಣ ಭಂಡಾರಿ ಗುಣವಂತೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ನುಡಿಹಬ್ಬಕ್ಕೆ ಕಾರವಾರ ಸಜ್ಜು

ಉತ್ತರ ಕನ್ನಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾರವಾರ ಸಜ್ಜಾಗಿದೆ. ಡಿ.20ರ ಬೆಳಗ್ಗೆ ಜಿಲ್ಲಾ ರಂಗಮಂದಿರದ ದಿ ಯಶವಂತ ಚಿತ್ತಾಲ ಹೆಸರಿನ ವೇದಿಕೆಯಲ್ಲಿ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಕವಯಿತ್ರಿ ಭಾಗೀರಥಿ ಹೆಗಡೆ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು, ಅವರಿಗೆ ಸಾಹಿತಿ ಜಯಂತ ಕಾಯ್ಕಿಣಿ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಸಮ್ಮೇಳನವನ್ನು ದಿನೇಶ ಅಮಿನಮಟ್ಟು ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಸೇರಿದಂತೆ ಅನೇಕ ಗಣ್ಯರು ಸಾಹಿತ್ಯ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ.
ಶುಕ್ರವಾರ ಇಡೀ ದಿನ ಜಿಲ್ಲಾ ರಂಗಮಂದಿರದಲ್ಲಿ ಸಮ್ಮೇಳನಕ್ಕೆ ಅಲಂಕಾರ ಮತ್ತು ವೇದಿಕೆ ಸಜ್ಜುಗೊಳಿಸುವಿಕೆ ಕಾರ್ಯ ಭರದಿಂದ ನಡೆಯಿತು. ಕರಾವಳಿ ಮತ್ತು ಘಟ್ಟದ ಮೇಲಿನ ಭಾಗದ ಸಾಹಿತಿಗಳಲ್ಲಿ ಕಳೆದ ಸಮ್ಮೇಳನದ ವೇಳೆ ಕಂಡು ಬಂದಿದ್ದ ಭಿನ್ನಮತ ಮತ್ತು ಪರ್ಯಾಯ ಸಾಹಿತ್ಯ ಸಮ್ಮೇಳನದ ಕೂಗು ಈ ಸಲ ಕೇಳಿ ಬಂದಿಲ್ಲ. ಘಟ್ಟದ ಮೇಲಿನ ಅದರಲ್ಲೂ ಮಹಿಳಾ ಸಾಹಿತಿ ಭಾಗೀರಥಿ ಹೆಗಡೆ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡುವ ಮೂಲಕ ಜಿಲ್ಲಾ ಸಾಹಿತ್ಯ ಪರಿಷತ್ ಬೆಸುಗೆ ಬಲಪಡಿಸುವ ಕಾರ್ಯ ನಡೆಸಿದೆ.ಕ್ಷರ ಲೋಕ ಸಮಾಜವನ್ನು ಮತ್ತು ಸಮುದಾಯವನ್ನು ಹತ್ತಿರ ತರುವ ಮತ್ತು ಬೆಸೆಯುವ ಕ್ರಿಯೆ ಮಾಡಬೇಕು. ಮನಸ್ಸುಗಳನ್ನು ಬೆಸೆಯುವುದು ಅಕ್ಷರದ ಕೆಲಸ. ನುಡಿ ಹಬ್ಬದ ಉದ್ದೇಶ ಸಹ ಅದೇ. ನಾಡು ನುಡಿಯ ಹೆಸರಲ್ಲಿ ಬೇರೆ ಬೇರೆಯಾಗದೇ ಒಂದಾಗುವ ಪ್ರಕ್ರಿಯೆಯನ್ನೇ ಸಾಹಿತ್ಯ ಮಾಡಬೇಕಾಗಿರುವ ಕಾರಣಕ್ಕೆ ಸಾಹಿತ್ಯ ಸಮ್ಮೇಳನಕ್ಕೆ ಈ ಸಲ ಹೆಚ್ಚು ಒತ್ತು ಬಂದಿದೆ.
ರೋಹಿದಾಸ ನಾಯಕ ಅಧ್ಯಕ್ಷರಾದ ಮೇಲೆ 6 ಜಿಲ್ಲಾ ಸಮ್ಮೇಳನಗಳು ನಡೆದಿದ್ದು, ಇದು 7ನೇ ಸಮ್ಮೇಳನವಾಗಿದೆ. ಕಸಾಪ ಉತ್ತರ ಕನ್ನಡ ಘಟಕ ನಡೆಸುತ್ತಿರುವ 19ನೇ ಸಮ್ಮೇಳನ ಇದಾಗಿದೆ. ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಅನುದಾನ ನೀಡದಿದ್ದ ಸಮಯದಲ್ಲಿ ಸಹ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬಂದ ಪರಂಪರೆ ಜಿಲ್ಲೆಯ ಸಾಹಿತ್ಯ ಪರಿಷತ್ಗಿದೆ.
ರೋಹಿದಾಸ ನಾಯಕರ ಅವಧಿಯಲ್ಲಿ ನಡೆದ ಸಮ್ಮೇಳನಗಳ ಪೈಕಿ ಜೋಯಿಡಾ ಸಮ್ಮೇಳನದಲ್ಲಿ ಆರ್.ವಿ.ಭಂಡಾರಿ, ಭಟ್ಕಳದಲ್ಲಿ ವಿಷ್ಣು ನಾಯ್ಕ, ಸಿದ್ದಾಪುರದಲ್ಲಿ ನಾ.ಸು.ಭರತನಳ್ಳಿ, ಮುಂಡಗೋಡಲ್ಲಿ ವಿಡಂಬಾರಿ, ಅಂಕೋಲಾ ಸಮ್ಮೇಳನದಲ್ಲಿ ಜಯಂತ ಕಾಯ್ಕಿಣಿ ಸರ್ವಾಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಭಾಗೀರಥಿ ಹೆಗಡೆ ಅಧ್ಯಕ್ಷತೆ ವಹಿಸುತ್ತಿದ್ದು, ದಿಕ್ಸೂಚಿ ಭಾಷಣ ಕೇಳಲು ಸಾಹಿತ್ಯಾಸಕ್ತರು ಕಾತರರಾಗಿದ್ದಾರೆ. ಜಿಲ್ಲಾ ರಂಗಮಂದಿರದ ಹೊರ ಭಾಗದಲ್ಲಿ ಪುಸ್ತಕ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ದಿನ ಏನೇನು:
ಸಮ್ಮೇಳನ ಉದ್ಘಾಟನೆ ನಂತರ ಜಿಲ್ಲಾ ಭಾಷಾ ಸಾಮರಸ್ಯ ಮತ್ತು ಸಂಸ್ಕೃತಿ ಕುರಿತು ವಿಚಾರಗೋಷ್ಠಿ ನಡೆಯಲಿದೆ. ನಂತರ ಕವಿ ಬಸವರಾಜ ಹೂಗಾರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಟ್ಟಿದೆ. ಸಂಜೆ 4:45ಕ್ಕೆ ಉತ್ತರ ಕನ್ನಡ 21ನೇ ಶತಮಾನದ ಸಾಹಿತ್ಯ ಕುರಿತು ಡಾ ಸೈಯ್ಯದ್ ಜಮೀರುಲ್ಲಾ ಷರ್ೀ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ಇದೆ. ಸಂಜೆ 6: 15 ಕ್ಕೆ ಕವಿ ಸನದಿ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಕುಂಚ ಕಾರ್ಯಕ್ರಮವಿದೆ. 7:45 ಕ್ಕೆ ನಗೆಹಬ್ಬ ನಡೆಯಲಿದೆ.

ಾಯಾಚಿತ್ರ ಸ್ಪರ್ಧೆಗೆ ಆಹ್ವಾನ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ೆಟೋ ಹಾಗೂ ವಿಡಿಯೋಗ್ರಾರ್ಗಳ ಅಸೋಸಿಯೇಶನ್ ಪದ್ಮಶ್ರೀ ಕಲರ್ ಲ್ಯಾಬ್ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಮಕ್ಕಳ ಛಾಯಾಚಿತ್ರ ಹಾಗೂ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಕುರಿತ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ. ಸಾರ್ವಜನಿಕರು 5 ವರ್ಷದೊಳಗಿನ ಮಕ್ಕಳ ಛಾಯಾಚಿತ್ರವನ್ನು ಸ್ಪರ್ಧೆಗೆ ಕಳಿಸಬಹುದು. ಛಾಯಾಚಿತ್ರಗಾರರು ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಛಾಯಾಚಿತ್ರವನ್ನು ಕಳಿಸಲು ಅವಕಾಶ ಇರುತ್ತದೆ. 8-12 ಅಳತೆಯ 3 ಕಲರ್ ೋಟೋಗಳೊಂದಿಗೆ ಡಿ. 17ರೊಳಗೆ ಸಾಗರದ ಯಾವುದೇ ಸ್ಟುಡಿಯೋದಲ್ಲಿ ಅರ್ಜಿ ಸಲ್ಲಿಸಬಹುದು. ಸ್ಪರ್ಧೆಯಲ್ಲಿ ಆಯ್ಕೆಯಾದ ಛಾಯಾಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆರ್.ಸತೀಶ್ (ಮೊ. 9844017340) ಅಥವಾ ಕೆ.ಎಸ್. ಪ್ರಕಾಶ್ ಬಾಬು (ಮೊ.9743561133) ಅವರನ್ನು ಸಂಪರ್ಕಿಸಬಹುದು.
ೋಟೋಗ್ರಫಿ ತರಬೇತಿ ಶಿಬಿರ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ೆಟೋ ಹಾಗೂ ವಿಡಿಯೋಗ್ರಾರ್ಗಳ ಅಸೋಸಿಯೇಶನ್ ವತಿಯಿಂದ ಪದ್ಮಶ್ರೀ ಕಲರ್ ಲ್ಯಾಬ್ ಇವರ ಸಹಯೋಗದೊಂದಿಗೆ ಜ.20 ಮತ್ತು 21ರಂದು ನಗರದ ಶಿವಗೋಪಾಲಕೃಷ್ಣ ದೇವಸ್ಥಾನದಲ್ಲಿ ೆಟೋಗ್ರಫಿ ಕುರಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. 2013ರ ಛಾಯಾಚಿತ್ರ ರತ್ನ ಪುರಸ್ಕೃತ ಮೈಸೂರಿನ ಬಾಬು ಜಿ.ಎಸ್.ರಾವ್ ಕ್ಯಾಮೆರಾ ಸೆಟ್ಟಿಂಗ್ಸ್, ತಾಂತ್ರಿಕ ವಿವರಣೆ, ಕ್ಯಾಂಡಿಡ್ ೆಟೋಗ್ರಫಿ ಹಾಗೂ ಪ್ರಸಕ್ತ ವಿದ್ಯಮಾನಗಳು, ಕಂಪ್ಯೂಟರ್ ನಿರ್ವಹಣೆ, ೆಟೋಶಾಪ್, ಲೈಟ್ರೂಮ್ ವಿಷಯ ಕುರಿತು ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಆರ್. ಸತೀಶ್ (ಮೊ. 9844017340) ಅಥವಾ ಬಾಬು (ಮೊ. 9743561133) ಅವರನ್ನು ಸಂಪರ್ಕಿಸಬಹುದು.

ಕೋತಿ ಕೈಯಲ್ಲಿದೆ ನಾಯಿ ಮರಿ

ಬಳ್ಳಾರಿ ಜಿಲ್ಲೆ ಕಂಪ್ಲಿ ಸಮೀಪದ ರಾಮಸಾಗರ ಗ್ರಾಮದಲ್ಲಿ ಕರಿ ಕೋತಿಯೊಂದು ನಾಯಿಮರಿಯನ್ನು ತನ್ನ ಒಡಲಲ್ಲಿ ಕಚ್ಚಿಕೊಂಡು ಓಡಾಡುತ್ತಿದೆ. ಗ್ರಾಮದ 2ನೇ ವಾರ್ಡ್ನ ಹರಿಜನ ಈರಣ್ಣನ ಮನೆಯ ಬಳಿಯಲ್ಲಿ ಕಳೆದ 25 ದಿನಗಳ ಹಿಂದೆ ನಾಯಿಯೊಂದು ಮರಿಗಳನ್ನು ಹಾಕಿದ್ದು, ತಾಯಿ ನಾಯಿ ಇಲ್ಲದ ವೇಳೆಯಲ್ಲಿ ಈ ಕರಿ ಕೋತಿ ನಾಯಿಮರಿಯನ್ನು ಎತ್ತಿಕೊಂಡು ಹೋಗಿದೆ. ಅಂದಿನಿಂದಲೂ ಇಂದಿನವರೆಗೂ ನಾಯಿ ಮರಿಯನ್ನು ಕೆಳಗಿಳಿಸದೇ ಮನೆಯಿಂದ ಮನೆಗೆ, ಮರದಿಂದ ಮರಕ್ಕೆ ಓಡಾಡುತ್ತಿದೆ. ಆದರೆ, ನಾಯಿ ಮರಿಗೆ ಆಹಾರ ನೀಡುತ್ತಿದೆಯೋ ಇಲ್ಲವೋ ಎನ್ನುವುದು ಗೊತ್ತಾಗಿಲ್ಲ. ಮರಿಯನ್ನು ಬಿಡಿಸಿಕೊಳ್ಳಲು ಗ್ರಾಮಸ್ಥರು ಯತ್ನಿಸಿದರೂ ಕೋತಿ ಮಾತ್ರ ಅವರ ಕೈಗೆ ಸಿಕುತ್ತಿಲ್ಲ. ಕೋತಿ ಮನುಷ್ಯರನ್ನು ಕಂಡರೆ ಸಾಕು ನಾಯಿ ಮರಿಯನ್ನು ತನ್ನ ಒಡಲಲ್ಲಿ ಎತ್ತಿಕೊಂಡು ಓಡುತ್ತದೆ. ನಾಯಿ ಮರಿ ಕುಂಯ್ ಗುಡುತ್ತಿದೆ.

ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ರಚಿಸಿಕೊಳ್ಳಿ

ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ, ವಿದ್ಯಾರ್ಥಿಗಳನ್ನು, ಯುವಜನರನ್ನು ಸಾಹಿತ್ಯಾಭಿರುಚಿಯತ್ತ ಆಕರ್ಷಿಸಲು, ಅವರಲ್ಲಿ ಸಾಂಸ್ಕೃತಿಕ ಕ್ರಿಯಾಶೀಲತೆ ಬೆಳೆಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗವನ್ನು ರಚಿಸಲು ತೀರ್ಮಾನಿಸಿದೆ. ಇದಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕನಿಷ್ಠ 5ರಿಂದ 15ಮಂದಿ ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾರ್ಯಕಾರಿ ಸಮಿತಿ ರಚಿಸಿಕೊಂಡು, ಆಯಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರ ಅನುಮೋದನೆಯೊಂದಿಗೆ ಅರ್ಜಿ ಸಲ್ಲಿಸಬಹುದು.ಾಲೇಜಿನಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಕ್ರಿಯಾಶೀಲವಾಗಿಡುವ ನಿಟ್ಟಿನಲ್ಲಿ ತಿಂಗಳಿಗೆ ಒಂದರಂತೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಬಳಗ ಹಮ್ಮಿಕೊಳ್ಳುತ್ತದೆ. ಇದಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕಾರ್ಯಕ್ರಮವೊಂದಕ್ಕೆ ಗರಿಷ್ಠ ಮಿತಿಯೊಳಪಟ್ಟು 5000ರೂ. ಗಳ ವಾಸ್ತವಿಕ ವೆಚ್ಚವನ್ನು ಭರಿಸಲಾಗುವುದು. ಅರ್ಜಿ ಸಲ್ಲಿಸಲು ಡಿ.31ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ವಿವರಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪಡೆಯಬಹುದು.

ಆರು ಕಾಲಿನ ಕರು ಜನನ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಐಚನಹಳ್ಳಿ ಗ್ರಾಮದಲ್ಲಿ ಹಸುವೊಂದು ಆರು ಕಾಲಿರುವ ಕರುವಿಗೆ ಜನ್ಮ ನೀಡಿದೆ. ಐಚನಹಳ್ಳಿ ಗ್ರಾಮದ ಲಕ್ಷ್ಮೇಗೌಡ ಎಂಬುವರ ಮನೆಯಲ್ಲಿ ಹಳ್ಳಿಕಾರ್ ತಳಿಯ ಹಸುವೊಂದು ಆರು ಕಾಲಿರುವ ಕರುವಿಗೆ ಜನ್ಮ ನೀಡಿದೆ. ಇದು ಗಂಡು ಕರು. ಇದರ ಮೇಲಿರುವ ಎರಡೂ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಲು ಮುಂದಾದಾಗ, ಈ ಕಾಲುಗಳನ್ನು ತೆಗೆಸುವುದರಿಂದ ಕರುವಿನ ಪ್ರಾಣಕ್ಕೆ ಅಪಾಯವಾಗುತ್ತದೆ ಎಂದು ಪಶುವೈದ್ಯಾಧಿಕಾರಿಗಳು ಎಚ್ಚರಿಸಿದರಂತೆ. ಈ ಕರು ನೋಡಲು ಸುಂದರವಾಗಿದೆ.

ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರು ಬೇಕಿಲ್ಲ, ಪವರ್ ವೀಡರ್ ಸಾಕಲ್ಲ

ಹೊಲದಲ್ಲಿ ದುಡಿಯುವವರ ಸಂಖ್ಯೆ ಇಂದು ಕಡಿಮೆಯಾಗಿದೆ. ಹೀಗಾಗಿ ರೈತರು ಕೂಲಿಕಾರ್ಮಿಕರನ್ನು ನಂಬಿ ಕೃಷಿ ಮಾಡುವುದು ಕಷ್ಟಕರವಾಗಿದೆ. ಅದಕ್ಕಾಗಿ ಎತ್ತು- ಕೂಲಿ ಕಾರ್ಮಿಕರಿಲ್ಲದೇ ಹೊಲದಲ್ಲಿ ಕೆಲಸ ಮಾಡಬಲ್ಲ ಯಂತ್ರಗಳು ರೈತರ ಆಕರ್ಷಣೆಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆರೆಕೋಡಿಯ ಮಾರುತಿ ಕೃಷಿ ಉದ್ಯೋಗ ಎಂಬ ಕಂಪನಿಯವರು ಒಂದೇ ಯಂತ್ರಕ್ಕೆ ಐದು ವಿವಿಧ ತೆರನಾದ ಉಪ ಯಂತ್ರ ಬಳಸಿ ಕೃಷಿ- ತೋಟಗಾರಿಕೆ ಕೆಲಸಕ್ಕೆ ಬಳಕೆ ಮಾಡುವ ಮಲ್ಟಿಪರ್ಪ್ಲಸ್ ಇಂಟರ್ ಕಲ್ಟಿವೇಟರ್ ಯಂತ್ರಗಳನ್ನು ತಯಾರಿಸಿದ್ದಾರೆ. ಭೂಮಿ ಹದಗೊಳಿಸುವುದು, ಬೆಳೆಗೆ ರಾಸಾಯನಿಕ ಸಿಂಪಡಿಸುವುದು, ಮಣ್ಣು ಹಸಿ ಮಾಡುವಿಕೆ, ಬೆಳೆಗೆ ಮಣ್ಣನ್ನು ಹಾಕುವುದು ಸೇರಿದಂತೆ ಸಮಗ್ರ ಕೃಷಿಯ ಬಳಕೆಗೆ ಸಿದ್ದ ಈ ಯಂತ್ರ.

ಹವ್ಯಕ ಸಾಧಕರ ಮಾಹಿತಿ ನೀಡಿ

ಹವ್ಯಕ ಮಹಾಸಭಾ ಬೆಂಗಳೂರು ಇವರು 2015 ೆ.1ರಂದು ಯಲ್ಲಾಪುರದ ಹವ್ಯಕ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ವಿದ್ವತ್ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಧಕ ಹವ್ಯಕರ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ರಾಜ್ಯಮಟ್ಟದ ಸಾಧನೆ, ಪ್ರಶಸ್ತಿ ಮತ್ತು ಪಿಎಚ್ಡಿ ಪದವಿ ಹಾಗೂ ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳಿದ್ದರೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಯಾವುದೇ ಪದವಿಗಳಲ್ಲಿ ರ್ಯಾಂಕ್ ಅಥವಾ ಶೇ.97 ಕ್ಕಿಂತ ಹೆಚ್ಚು ಅಂಕ ಗಳಿಸಿದ ಹವ್ಯಕ ಬಂಧುಗಳ ಸಮರ್ಪಕ ಮಾಹಿತಿಯನ್ನು ಡಿ.25 ರೊಳಗೆ ಅಧ್ಯಕ್ಷರು, ತಾಲೂಕಾ ಹವ್ಯಕ ಸಂಘ ಯಲ್ಲಾಪುರ ಮೊಬೈಲ್ ಸಂಖ್ಯೆ: 9480961217 ಇವರಿಗೆ ನೀಡಬಹುದು.

ಶಸಚಿಕಿತ್ಸೆ ಮಾಡಿ ಕರುವನ್ನು ಹೊರ ತೆಗೆದರು


ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಪಶು ವೈದ್ಯಾಧಿಕಾರಿಗಳ ತಂಡ ಪೌಷ್ಟಿಕಾಂಶ ಕೊರತೆಯಿಂದ ನಿತ್ರಾಣಗೊಂಡು ಕರು ಹಾಕುವುದಕ್ಕೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಜರ್ಸಿ ಆಕಳೊಂದಕ್ಕೆ ಸಿಸೇರಿಯನ್ ಶಸಚಿಕಿತ್ಸೆ ನಡೆಸಿ ಕರುವನ್ನು ಜೀವಂತವಾಗಿ ಹೊರತೆಗೆದಿದೆ. ಸಿಸೇರಿಯನ್ ಶಸಚಿಕಿತ್ಸೆ ನಡೆಸಿ ಕರುವನ್ನು ಹೊರತೆಗೆದಿರುವುದು ತಾಲೂಕಿನಲ್ಲಿ ಇದೇ ಮೊದಲ ಬಾರಿ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕಂಚಿಮನೆ ಶಾಂತಾರಾಮ ಮಡಿವಾಳ ಅವರ ಆರು ವರ್ಷದ ಜರ್ಸಿ ಆಕಳು ಪೌಷ್ಟಿಕಾಂಶದ ತೊಂದರೆಯಿಂದ ನಿತ್ರಾಣಗೊಂಡಿದ್ದರೂ ಆಕಳ ಹೊಟ್ಟೆಯಲ್ಲಿ ಕರು ಉತ್ತಮವಾಗಿ ಬೆಳೆದಿತ್ತು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದಕುಮಾರ ಪೈ, ಡಾ.ಶ್ರೇಯಸ್, ಡಾ.ಲೋಹಿತ್ ಹಾಗೂ ಡಾ.ನಾಗರಾಜ ಸವಣೂರು ಅವರು ಸುಮಾರು ಎರಡೂವರೆ ತಾಸು ಆಕಳಿಗೆ ಶಸಚಿಕಿತ್ಸೆ ನಡೆಸಿ ಗಂಡು ಕರುವನ್ನು ತೆಗೆದಿದ್ದಾರೆ. ಆಕಳು ಹಾಗೂ ಕರು ಆರೋಗ್ಯದಿಂದಿವೆ.

ಉತ್ತರ ಕನ್ನಡ ಜಿಲ್ಲೆಯ ಹಿಂದೂ ದೇವಾಲಯಗಳ ಮಾಹಿತಿ ನೀಡಿ

ಉತ್ತರ ಕನ್ನಡ ಜಿಲ್ಲೆಯ ಎಲ್ಲ ಹಿಂದೂ ದೇಗುಲಗಳ ವಿವರವನ್ನೊಳಗೊಂಡ ಗ್ರಂಥ ರಚನೆ ಮಾಡುವ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಣೆಗೆ ಕಳೆದೆರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದ್ದರೂ ಪೂರ್ಣವಾಗಿಲ್ಲ. ಡಿಸೆಂಬರ್ ಕೊನೆಯೊಳಗೆ ಮಾಹಿತಿ ಹಾಗೂ ೊಟೋ ಸಹಿತ ವಿವರಣೆ ಕೊಡಬೇಕಾಗಿದೆ. ಅಗತ್ಯ ಇರುವ ಶಿಲಾಮಯ ದೇವಾಲಯಗಳಿಗೆ ಭೇಟಿ ಕೊಟ್ಟು ಇನ್ನಷ್ಟು ವಿವರಣೆಗಳನ್ನೂ ಪಡೆದುಕೊಳ್ಳುತ್ತಿದ್ದಾರೆ ಅಧಿಕಾರಿಗಳು.
ಮಾಹಿತಿ ಸಲ್ಲಿಸುವಾಗ ದೇವಾಲಯಗಳ ವಿಳಾಸ, ತಾಲೂಕಾ ಕೇಂದ್ರದಿಂದ ಇರುವ ದೂರ, ಪೂಜಾ ವಿಧಾನ, ಜಾತ್ರೆ, ಮಹೋತ್ಸವ, ದೇವಾಲಯದ ಇತಿಹಾಸ, ಆಡಳಿತದ ವಿವರಣೆ, ಕ್ಷೇತ್ರದ ಮಹಿಮೆ, ಸಾಮೂಹಿಕ ಕಾರ್ಯಗಳ, ವಾರ್ಷಿಕ ವಿಧಿ ವಿಧಾನಗಳ ವಿವರಣೆ, ಅರ್ಚಕರು, ಉಪಾಧಿವಂತರ ವಿವರಣೆಗಳು, ದೇವಾಲಯದ ಶೈಲಿ, ದೇವಾಲಯದ ಮಾದರಿ, ದೇವಾಲಯದ ಇತಿಹಾಸ ಪ್ರಕಟವಾಗಿದೆಯೇ? ಕೆರೆಗಳ ವಿವರಣೆಗಳೂ ಇದ್ದರೆ ಕಳಿಸಬೇಕು. ಜಿಲ್ಲೆಯಲ್ಲಿ 380ಕ್ಕೂ ಹೆಚ್ಚು ದೇಗುಲಗಳಿದ್ದು, ಈಗಾಗಲೇ 90 ದೇವಾಲಯಗಳ ಮಾಹಿತಿ ಬಂದಿದೆ. ಉಳಿದವರ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳಿ ಕಾರ್ಯಾಧ್ಯಕ್ಷ ವಿ.ಯು.ಪಟಗಾರ.
ಮಾಹಿತಿ ಸಂಗ್ರಹಣೆ ವಿವರಗಳಿಗೆ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ, ಆಡಳಿತಾಧಿಕಾರಿಗಳು ಶ್ರೀನಿಕೇತನ ಶಾಲೆ, ಶಿರಸಿ 9482212166ಗೆ ಸಂಪರ್ಕಿಸಬಹುದು.

ಸಿದ್ದಾಪುರದಲ್ಲಿ ಆರಂಭವಾಗಿದೆ ಇಂಡೇನ್ ಗ್ಯಾಸ್ ಏಜೆನ್ಸಿ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜನತೆಯ ಹಲವು ವರ್ಷಗಳ ಬೇಡಿಕೆಯಾದ ಅಡುಗೆ ಅನಿಲ ವಿತರಣಾ ಕೇಂದ್ರ ಪಟ್ಟಣದ ಸಾಯಿ ನಗರದಲ್ಲಿ ಆರಂಭವಾಗಿದೆ. ಡಿ.2ರಂದು ಬೆಳಗ್ಗೆ 10:30ಕ್ಕೆ ವಾಲ್ಮೀಕಿ ಇಂಡೇನ್ ಗ್ಯಾಸ್ ಏಜೆನ್ಸಿ ಆರಂಭಗೊಂಡಿದೆ.

ರೈತರ ನಿದ್ದೆಗೆಡಿಸುತ್ತಿರುವ ಎಲೆ ಸುರುಳಿ ರೋಗ

ಎಲೆ ಸುರುಳಿ ರೋಗ ಇದೀಗ ಬಾಳೆ ಬೆಳೆ ರೈತರ ನಿದ್ದೆಗೆಡಿಸಿದೆ. ಎಲೆ ಸುರುಳಿಗಳನ್ನು ದಿನ ಬೆಳೆಗಾಗುತ್ತಿದಂತೆ ತಿಂದು ಮುಗಿಸುವ ಎರಿಯೇ ನೋಟ್ ಥ್ರಾಕ್ರ್ ಎಂಬ ಬಕಾಸುರ ಕೀಟದ ಹಾವಳಿಯಿಂದ ಹಾಸನ ಜಿಲ್ಲೆ ರಾಮನಾಥಪುರ ಹೋಬಳಿಯ ಶಿರದನಹಳ್ಳಿ, ರಾಮನಕೊಪ್ಪಲು ರುದ್ರಪಟ್ಟಣ ಗಂಗೂರು ಮುಂತಾದ ಕಡೆಗಳಲ್ಲಿ ಈ ರೋಗ ವ್ಯಾಪ್ತಿಸಿದೆ.
ರಾಮನಾಥಪುರ ಹೋಬಳಿಯ ಹಲವೆಡೆ ಬಾಳೆ ಎಲೆ ಸಿಗುವುದೇ ದುಸ್ತರವಾಗುತ್ತಿದೆ. ಇಳುವರಿಗೂ ಹೊಡೆತ ನೀಡುತ್ತಿದೆ. ಕೆಲವೆಡೆ ಗಿಡಗಳು ಸಾಯುತ್ತಿವೆ. ಸುಮಾರು ಒಂದೂವರೆ ಇಂಚು ಉದ್ದವಿರುವ ರೇಷ್ಮೆಹುಳು ಹೋಲುವ ಹಸಿರು ಬಣ್ಣದ ಈ ಕೀಟ ಬೂದಿ ಮೆತ್ತಿಕೊಂಡಂತಿರುತ್ತದೆ. ರಾತ್ರಿಯಿಡಿ ಬಾಲೆ ಎಲೆಗಳನ್ನು ತಿನ್ನುವ ಈ ಕೀಟ ಹಗಲು ಎಲೆಯನ್ನೇ ಸುರುಳಿ ಮಾಡಿಕೊಂಡು ಬಚ್ಚಿಟ್ಟುಕೊಳ್ಳುತ್ತದೆ. ಇವುಗಳ ವಂಶಾಭಿವೃದ್ದಿ ವಿಪರೀತ ವೇಗವಾಗಿ ಅಗುತ್ತಿರುವುದು, ಸಾಮಾನ್ಯ ಕೀಟನಾಶಕಗಳಿಗೆ ಬಗ್ಗದಿರುವುದು ಕೃಷಿಕರಲ್ಲಿ ಆತಂಕ ಹುಟ್ಟಿಸಿದೆ.
ಹವಾಮಾನ ವೈಪರೀತ್ಯ ಹಾಗೂ ಹುಳುಗಳ ಸಂತಾನೋತ್ಪತ್ತಿ ಸಮಯ ಇದಾಗಿರುವುದರಿಂದ ಹೆಚ್ಚಿನ ಎಲೆ ತಿನ್ನುತ್ತವೆ. ಅವುಗಳನ್ನು ಹತೋಟಿ ಮಾಡಲು ಹಾಗೂ ಎಲೆ ಸುರಳಿ ಕೀಟ ಬಾಧೆ ತಪ್ಪಿಸಲು ಕೀಟ ನಿಯಂತ್ರಣಕ್ಕೆ ಲೀಟರ್ ನೀರಿಗೆ 2 ಮಿ.ಲೀ. ಕ್ಲೋರೋಫೈರಿಫಾಸ್ ಅಥವಾ 0.3 ಮಿ.ಲೀ ಕಾನ್ಘೀಡಾರ್ ಸಿಂಪಡಿಸಬಹುದು ಈ ಕೀಟ ಹಗಲು ಹೊತ್ತಿನಲ್ಲಿ ಎಲೆಯಲ್ಲೇ ಸುರುಳಿ ಸುತ್ತಿಕೊಂಡು ರಕ್ಷಣೆ ಪಡೆಯುವುದರಿಂದ ಕತ್ತಲು ಆವರಿಸಿದ ಬಳಿಕ, ಮುಂಜಾನೆ ಔಷಧ ಸಿಂಪಡಿಸುವಲ್ಲಿ ಪರಿಣಾಮ ಬೀರುತ್ತದೆ. ಅದಕ್ಕೂ ಮಿಗಿಲಾಗಿ ಸುರುಳಿಯಿಂದ ಕೀಟ ಬೇರ್ಪಡಿಸಿ ನಾಶಪಡಿಸುವುದು ಅತ್ಯುತ್ತಮ ಕ್ರಮ ಎಂಬುದು ಕೃಷಿ ಅಧಿಕಾರಿಗಳ ಸಲಹೆ.

ಕಾಳಿಂಗ ಸರ್ಪ ಹಿಡಿದ ಮನ್ಮಥಕುಮಾರ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪುರಪ್ಪೆಮನೆ-ಗಡಿಕಟ್ಟೆ ಭಾಗದ ಅರಣ್ಯದಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಮನ್ಮಥಕುಮಾರ್ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇಲ್ಲಿನ ಕಲ್ಕೊಪ್ಪ ಕಾಡಿನಲ್ಲಿ ಓಡಾಡುತ್ತಿದ್ದ ಕಾಳಿಂಗಸರ್ಪವನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿ ಹೊಸನಗರ ವಿಭಾಗದ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಅರಣ್ಯ ಇಲಾಖೆ ಕಾಳಿಂಗ ಸರ್ಪದ ಸೆರೆಗೆ ಸೂಕ್ತ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದವರು ಮನ್ಮಥಕುಮಾರ್ ಅವರಿಗೆ ವಿಷಯ ತಿಳಿಸಿದಾಗ ಸುಮಾರು ಅರ್ಧ ಗಂಟೆಗಳ ಕಾಲ ಸಾಹಸ ಮಾಡಿ ಕಾಡಿನಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ.

ಕೋತಿಗಳ ಹಿಡಿದು ಕಾಡಿಗೆ ಬಿಟ್ಟರು

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಕುಳಗಿ ಪ್ರಕೃತಿ ಶಿಬಿರದಲ್ಲಿ ಕಳೆದೆರಡು ದಿನಗಳಿಂದ ಕೋತಿಗಳನ್ನು ಸೆರೆ ಹಿಡಿದು 30 ಕಿಮೀ ದೂರದಲ್ಲಿರುವ ಕಾಡಿಗೆ ಬಿಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈಗಾಗಲೆ 13 ಕೋತಿಗಳನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಟ್ಟು ಬರಲಾಗಿದೆ. ಕೋತಿ ಹಿಡಿಯಲೆಂದೆ ಕಬ್ಬಿಣದ ಪಂಜರವನ್ನು ಖರೀದಿಸಲಾಗಿದ್ದು, ಪ್ರಕೃತಿ ಶಿಬಿರದಲ್ಲಿರುವ ಊಟದ ಮನೆ ಇಟ್ಟು ಸೆರೆ ಹಿಡಿಯಲಾಗುತ್ತಿದೆ. ಕೋತಿಗಳ ಉಪಟಳ ಹೆಚ್ಚಾಗಿದ್ದ ಕಾರಣಕ್ಕೆ ಪ್ರಕೃತಿ ಶಿಬಿರದ ಅಧಿಕಾರಿಗಳು ಸೆರೆ ಹಿಡಿಯುತ್ತಿದ್ದಾರೆ.

ನಿಮ್ಮನೆ ತೆಂಗಿನ ಮರಕ್ಕೆ ವಿಮೆ ಮಾಡಿಸಿ

ರಾಜ್ಯ ಸರಕಾರದ ತೋಟಗಾರಿಕೆ ಇಲಾಖೆ, ಕೇಂದ್ರ ಸರಕಾರದ ಭಾರತೀಯ ಕೃಷಿ ವಿಮಾ ಸಂಸ್ಥೆ ಮತ್ತು ತೆಂಗು ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ತೆಂಗು ವಿಮಾ ಯೋಜನೆ ಜಾರಿಗೊಂಡಿದೆ. ನೈಸರ್ಗಿಕ ಹಾಗೂ ಇತರ ವಿಕೋಪಗಳಿಂದ ಮರಗಳಿಗೆ ಉಂಟಾಗುವ ಹಾನಿಗೆ ವಿಮಾ ಸೌಲಭ್ಯ, ಮರಗಳ ಅಕಾಲಿಕ ಸಾಯುವಿಕೆಯಿಂದ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವುದು, ಸಂಭವನೀಯ ನಷ್ಟ ತಪ್ಪಿಸಿ ಮರುನಾಟಿ ಹಾಗೂ ಪುನಶ್ಚೇತನಕ್ಕೆ ಉತ್ತೇಜಿಸುವುದು ಇದರ ಮುಖ್ಯ ಉದ್ದೇಶ.
ತೋಟದ ಎಲ್ಲ ಆರೋಗ್ಯವಂತ ಮರಗಳಿಗೆ ವಿಮೆ ಮಾಡಿಸಬೇಕು. ಜಮೀನಿನಲ್ಲಿ 5ಕ್ಕಿಂತ ಹೆಚ್ಚು ಮರಗಳಿರಬೇಕು. ಮರ ವರ್ಷಕ್ಕೆ ಕನಿಷ್ಠ 30 ಕಾಯಿ ನೀಡುತ್ತಿರಬೇಕು. ಗಿಡ್ಡ ತಳಿಗೆ 4 ವರ್ಷದ ನಂತರ ಹಾಗೂ ಎತ್ತರದ ತಳಿಗೆ 7 ವರ್ಷದ ನಂತರ ವಿಮೆ ಮಾಡಿಸಬೇಕು. ತಿವೃಷ್ಟಿ, ಬಿರುಗಾಳಿ, ಆಲಿಕಲ್ಲು ಕೂಡಿದ ಬಿರುಗಾಳಿ, ಚಂಡಮಾರುತ, ಪ್ರವಾಹ ಮತ್ತು ಜಲಾವೃತ, ವ್ಯಾಪಕ ಹಾನಿಯುಂಟು ಮಾಡುವ ಕೀಟ/ರೋಗ ಬಾಧೆ, ಆಕಸ್ಮಿಕ ಬೆಂಕಿ, ಕಾಡ್ಗಿಚ್ಚು, ಸಿಡಿಲು, ಭೂಕಂಪ, ಭೂಕುಸಿತ, ಸುನಾಮಿ, ತೀವ್ರ ಅನಾವೃಷ್ಟಿಯಿಂದ ಉಂಟಾದ ಸಂಪೂರ್ಣ ಹಾನಿಗಳು ಸಂಭವನೀಯ ನಷ್ಟಗಳು. ಮೇಲ್ಕಂಡ ಹಾನಿಯಿಂದ ಮರ ಸತ್ತಾಗ ಅಥವಾ ಅನುತ್ಪಾದಕವಾದಾಗ ಮಾತ್ರ ವಿಮೆ ಪರಿಹಾರ ದೊರೆಯುತ್ತದೆ. ಮರ ಕಡಿಯದಿದ್ದರೆ ವಿಮೆಯ ಶೇ.50ರಷ್ಟು ಭಾಗವನ್ನು ಮಾತ್ರ ನೀಡಲಾಗುವುದು. ಒಟ್ಟು ವಿಮಾ ಕಂತು ಮತ್ತು ರೈತರು ಪಾವತಿಸಬೇಕಾದ ವಿಮಾ ಕಂತಿನ ಹಣದ ವ್ಯತ್ಯಾಸದ ಶೇ.25ರಷ್ಟು ತೋಟಗಾರಿಕೆ ಇಲಾಖೆ ಹಾಗೂ ಶೇ.50ರಷ್ಟನ್ನು ತೆಂಗು ಅಭಿವೃದ್ಧಿ ಮಂಡಳಿ ಭರಿಸುತ್ತದೆ.
ವಿಮೆ ಅವಧಿ:
ಇದೊಂದು ವಾರ್ಷಿಕ ಪಾಲಿಸಿ. ಪ್ರತಿವರ್ಷ ನವೀಕರಿಸಬೇಕು. ಗರಿಷ್ಠ 3 ವರ್ಷಗಳಿಗೆ ಒಂದೇ ಬಾರಿ ಕಂತು ಪಾವತಿಸಿ ವಿಮೆ ಮಾಡಿಸಬಹುದು. ಕಂತು ಕಟ್ಟಿದ ತಿಂಗಳನ್ನು ಹೊರತುಪಡಿಸಿ, ನಂತರದ ತಿಂಗಳ ಮೊದಲ ದಿನದಿಂದ ವಿಮೆ ಅವಧಿ ಜಾರಿಗೆ ಬರುತ್ತದೆ. ವಿಮೆ ಅವಧಿ ಪ್ರಾರಂಭದ 30 ದಿನಗಳವರೆಗೆ ಆದ ನಷ್ಟಕ್ಕೆ ವಿಮೆ ದೊರೆಯುವುದಿಲ್ಲ. ಈ ಷರತ್ತು ನವೀಕರಣ ಮಾಡಿಸಿದ ವಿಮೆಗೆ ಅನ್ವಯವಲ್ಲ. ತೋಟಗಾರಿಕೆ ಇಲಾಖೆಯ ತಾಲೂಕು/ ಹೋಬಳಿ ಕಚೇರಿಯಿಂದ ಅರ್ಜಿ ಪಡೆಯಬಹುದು.

ಪುಟಾಣಿ ಕೃಷ್ಣನ ಕಂಡೀರಾ

ಭಗವದ್ಗೀತಾ ಅಭಿಯಾನ ವತಿಯಿಂದ ಗೀತ ಜಯಂತಿ ಅಂಗವಾಗಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಪ್ರಶಾಂತಿ ಸಭಾಭವನದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಶಾಂತಿ ಸಂಸ್ಥೆ ಅಧ್ಯಕ್ಷ ಆರ್.ಜಿ.ಪೈ ಅವರು ಶ್ರೀಕೃಷ್ಣ ಹಾಗೂ ಭಗವದ್ಗೀತೆ ಗ್ರಂಥಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ವೇದಘೋಷ, ದೇವತಾ ಸ್ತುತಿ ಹಾಗೂ ಗೀತೆಯ ಧ್ಯಾನ ಶ್ಲೋಕಗಳನ್ನು ಸಾಮೂಹಿಕವಾಗಿ ಪ್ರಸ್ತುತಪಡಿಸಿದರು. ಶ್ರೀಕೃಷ್ಣ ವೇಷ ಸ್ಪರ್ಧೆ ನಿರ್ಣಾಯಕರಾಗಿ ಆರ್.ಕೆ.ಹೊನ್ನೇಗುಂಡಿ, ಸುಮಿತ್ರಾ ಶೇಟ್, ಸುವರ್ಣಾ ಹೆಗಡೆ ಪಾಲ್ಗೊಂಡಿದ್ದರು. ಭಗವದ್ಗೀತಾ ಅಭಿಯಾನ ಸಮಿತಿಯ ಎಂ.ಜಿ. ಭಟ್ ನಿರ್ವಹಿಸಿದರು. ಸುಮಿತ್ರಾ ಶೇಟ್ ವಂದಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.

ಸೀಪಾತ್ರಧಾರಿ ಶಿರಳಗಿಗೆ ಪಾತಾಳ ಪ್ರಶಸ್ತಿ

ಬಡಗು ತಿಟ್ಟಿನ ಖ್ಯಾತ ಸೀಪಾತ್ರಧಾರಿ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಎಡನೀರಿನ ಯಕ್ಷ ಪ್ರತಿಷ್ಠಾನ ನೀಡುವ ಪಾತಾಳ ವೆಂಕಟ್ರಮಣ ಭಟ್ ಪ್ರಶಸ್ತಿ ಪ್ರಕಟವಾಗಿದೆ. ಹತ್ತು ಸಾವಿರ ರೂಪಾಯಿ ಮೊತ್ತ, ಪ್ರಶಸ್ತಿ ಪತ್ರ, ಲಕ ಒಳಗೊಂಡ ಪ್ರಶಸ್ತಿಯನ್ನು ಡಿ.7ರಂದು ಕಾಸರಗೋಡು ಜಿಲ್ಲೆಯ ಎಡನೀರು ಮಠದಲ್ಲಿ ಪ್ರದಾನ ಮಾಡಲಾಗುತ್ತಿದೆ. ಇದೇ ವೇಳೆ ಉದಯವಾಣಿ ಅಂಕಣಕಾರ ನಾ.ಕಾರಂತ ಪೆರಾಜೆ ಸಂಪಾದಕತ್ವದ ಉಪಾಯನ ಗ್ರಂಥ ಲೋಕಾರ್ಪಣೆ ಆಗಲಿದೆ.
ಪಾತಾಳ ಪ್ರಶಸ್ತಿಗೆ ಪ್ರಸಕ್ತ ವರ್ಷ ದಶಕದ ಸಂಭ್ರಮವಾಗಿದ್ದು, ಈ ಮೊದಲು ಪುರುಷೋತ್ತಮ ಭಟ್, ಕಡಬ ಸಾಂತಪ್ಪ, ಪೆರುವೊಡಿ ನಾರಾಯಣ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕುಡಾನ ಗೋಪಾಲಕೃಷ್ಣ ಭಟ್, ಮಾರ್ಗೋಳಿ ಗೋವಿಂದ ಸೇರಿಗಾರ್, ಎಂ.ಕೆ.ರಮೇಶ ಆಚಾರ್ಯ, ಕೊಕ್ಕಡ ಈಶ್ವರ ಭಟ್, ವಿಠಲ ಮಾಸ್ತರ್ ಇವರಿಗೆ ಪ್ರಶಸ್ತಿ ನೀಡಲಾಗಿತ್ತು.

ಕೋಟಿಗೊಂದ್ ಲವ್ ಸ್ಟೋರಿ ಬಿಡುಗಡೆಗೆ ಸಿದ್ಧ


ಉತ್ತರ ಕನ್ನಡ ಜಿಲ್ಲೆಯ ಭೀಮನಗುಡ್ಡ, ಸಾತೊಡ್ಡಿ ಜಲಪಾತ, ಸಹಸ್ರಲಿಂಗ, ಯಾಣ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರೀಕರಣಗೊಂಡ ಕೋಟಿಗೊಂದ್ ಲವ್ ಸ್ಟೋರಿ ಚಿತ್ರ ಕ್ರಿಸ್ಮಸ್ ಹಬ್ಬದ ಬಳಿಕ ಬಿಡುಗಡೆಗೆ ತಯಾರಿ ನಡೆಸಿದ್ದು, ರಾಜ್ಯದ 150 ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಪ್ರೀತಿ, ಜೀವನ, ವಿಧಿಯ ಆಟ ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದು. ಎಚ್.ಎಲ್.ಎನ್. ರಾಜ ನಿರ್ಮಾಣದ, ಜಗ್ಗು ಶಿರಸಿ ನಿರ್ದೇಶನ ಮಾಡಿದ್ದಾರೆ. ಜೋಶ್ ಖ್ಯಾತಿಯ ರಾಕೇಶ ಅಡಿಗ ನಾಯಕನಾಗಿ, ಕುಡ್ಲಾ ಬೆಡಗಿ ಶುಭಾ ಪೂಂಜಾ ನಾಯಕಿಯಾಗಿ ಪಾತ್ರ ಮಾಡಿದ್ದಾರೆ. ಏಳು ಹಾಡುಗಳಿರುವ ಸಿನೇಮಾದಲ್ಲಿ ಒಂದು ಐಟಂ ಸಾಂಗ್ ಇದೆ. ಕೀರ್ತಿ ಜೈನ ಸಂಗೀತ ನಿರ್ದೇಶಕ, ಶಂಕರ ಛಾಯಾಗ್ರಾಹಕರಾಗಿದ್ದಾರೆ. ಬಿರಾದಾರ, ಸಿಂಧು ರಾವ್, ವಿಕಾಸ ಜೋಪ್ರ ಇತರರು ಪಾತ್ರ ಮಾಡಿದ್ದಾರೆ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರತ್ನಾಕರ ಉಪಳೇಕೊಪ್ಪ ಮಾಹಿತಿ ನೀಡಿದ್ದಾರೆ.
ಶಿರಸಿ ತೋಟಗಾರ ಕಲ್ಯಾಣ ಮಂಟಪದಲ್ಲಿ ಡಿ.5ರ ಸಂಜೆ 5ಕ್ಕೆ ಬಿಡುಗಡೆ ಮೊದಲು ಶುಭಾಶಯ ಕಾರ್ಯಕ್ರಮ ನಡೆಯಿತು. ಕದಂಬ ಕಲಾವೇದಿಕೆ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 4ಕ್ಕೆ ಮಾರಿಕಾಂಬಾ ದೇವಾಲಯದಿಂದ ನಾಯಕ ನಟ ರಾಕೇಶ ಹಾಗೂ ಶುಭಾ ಪೂಂಜಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಲಾ ಸೇವಾ ಪುರಸ್ಕಾರ, ಚಲನಚಿತ್ರದ ಟ್ರೈಲರ್ ಬಿಡುಗಡೆ, ಚಿತ್ರದ ಹಾಡುಗಳ ಗಾಯನ, ಡಾನ್ಸ್ ಪ್ರದರ್ಶನ ನಡೆಯಿತು

ಯಲ್ಲಾಪುರದಲ್ಲಿ ‘ಸೂಪರ್’ ಮಾರುಕಟ್ಟೆ

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಟಿಎಸ್ಸೆಸ್ ಶಾಖೆ ಆವಾರದಲ್ಲಿ ಕಿರಾಣಿ ಮತ್ತು ಕೃಷಿ ಸೂಪರ್ ಮಾರುಕಟ್ಟೆ ಉದ್ಘಾಟನೆಯಾಗಿದೆ. ಗೊಬ್ಬರ ಮತ್ತು ಕೃಷಿ ವಿಭಾಗವನ್ನು ಎಪಿಎಂಸಿ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುಂಡಿ ಉದ್ಘಾಟಿಸಿದರು. ಸಹಕಾರಿ ಸಂಘಗಳ ಉಪನಿಬಂಧಕ ತಿಪ್ಪೆಸ್ವಾಮಿ, ಸಹಾಯಕ ನಿಬಂಧಕ ಸಿದ್ದಾರ್ಥ,ಪ.ಪಂ ಅಧ್ಯಕ್ಷ ಮಂಜುನಾಥ ರಾಯ್ಕರ ಇದ್ದರು. ನಿರ್ದೇಶಕ ವಿ.ವಿ.ಜೋಷಿ ಬಾಳೆಹದ್ದ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ಎನ್.ಕೆ.ಭಟ್ಟ ನಿರೂಪಿಸಿದರು. ಬಿ.ಜಿ.ಹೆಗಡೆ ಗೇರಾಳ ವಂದಿಸಿದರು.

ತಂಬಾಕು ನಿಷೇಧದ ಗುಮ್ಮ 409 ವರ್ಷಗಳಷ್ಟು ಹಳೆಯದು

ತಂಬಾಕು ನಿಷೇಧ ಕುರಿತು ವದಂತಿ ಮತ್ತು ಸುದ್ದಿ ಜೋರಾಗಿ ಹಬ್ಬಿದೆ. ಭಾರತದ ಕೆಲವೊಂದು ರಾಜ್ಯಗಳಲ್ಲಿ ತಂಬಾಕು ಆಂಶಿಕ ನಿಷೇಧ ಹೊಂದಿದೆ. ಬಿಹಾರ ರಾಜ್ಯ ಈ ಕುರಿತು ಹೊಸ ಕಾನೂನು ತಂದರೂ ಈ ಕಾನೂನು ಈಗ ಬಳಕೆಯಲ್ಲಿರುವ ಪರಿಮಳಯುಕ್ತ ತಂಬಾಕಿಗೆ ಮಾತ್ರ ಅನ್ವಯವಾಗುತ್ತದೆ. ಬಿಹಾರದಲ್ಲಿ ಒಣ ರೂಪದ ಅಥವಾ ಮೂಲ ರೂಪದ ತಂಬಾಕಿಗೆ ನಿಷೇಧ ಹೇರಲಾಗಿಲ್ಲ. ಬಿಹಾರದ ಮಾದರಿಯಲ್ಲಿ ತಂಬಾಕು ನಿಷೇಧ ಆಂಶಿಕವಾಗಿ ತರಲು 9 ರಾಜ್ಯಗಳು ಚಿಂತನೆ ನಡೆಸಿವೆ. ಇಲ್ಲಿ ನಿಷೇಧ ಕಾನೂನು ಬಂದರೂ ಅದು ಮೌಲ್ಯವರ್ಧಿತ ಪರಿಮಳಯುಕ್ತ ತಂಬಾಕಿಗೆ ಮಾತ್ರ ಅನ್ವಯವಾಗುತ್ತದೆ.
ಮೂಲ ರೂಪದ ತಂಬಾಕು ಔಷಧಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಪಾನ್ ತಿನ್ನುವ ಜನರ ಸಮೀಕ್ಷೆ ನಡೆಸಿದಾಗ ಬಹುಪಾಲು ಜನರು ಮೂಲ ರೂಪದ ತಂಬಾಕನ್ನು ಬಳಕೆ ಮಾಡುತ್ತಾರೆಯೇ ಹೊರತು ಮೌಲ್ಯವರ್ಧಿತ ತಂಬಾಕಿನ ಬಳಕೆ ಮಾಡುವುದಿಲ್ಲ ಎಂಬ ಅಂಶ ಕೂಡ ಆರೋಗ್ಯ ಇಲಾಖೆಗೆ ವರದಿ ರೂಪದಲ್ಲಿ ಸಲ್ಲಿಸಲಾಗಿದೆ. ಹೊಗೆ ರಹಿತ ತಂಬಾಕು ಅಥವಾ ಮೌಲ್ಯವರ್ಧಿತ ತಂಬಾಕಿಗೆ ಭಾರತದಲ್ಲಿ ಮಹತ್ವ ಬಂದದ್ದು, 1970ರ ಬಳಿಕ. ಅನಂತರ ಅದೊಂದು ಉದ್ದಿಮೆಯಾಗಿ ಹೊರಹೊಮ್ಮಿತು. ತಂಬಾಕಿನ ಮೇಲೆ ನಿಷೇಧ ಹೇರಲು ಆ ಸಂದರ್ಭದಲ್ಲಿಯೇ ಪ್ರಯತ್ನಗಳಾಗಿವೆ.
ಭಾರತದಲ್ಲಿ ತಂಬಾಕು ಕೃಷಿಗೆ 8,000 ವರ್ಷಗಳ ಇತಿಹಾಸವಿದೆ. ಆದರೆ ವೀಳ್ಯದೆಲೆ ಮತ್ತು ಅಡಿಕೆಯೊಂದಿಗೆ ತಂಬಾಕಿನ ಸೇವನೆ ಆರಂಭವಾದುದು 1708ರಲ್ಲಿ. ಅದಕ್ಕೂ ಮೊದಲು ಅಡಿಕೆಯನ್ನು ತಂಬಾಕು ರಹಿತವಾಗಿ ಕೇವಲ ಸುಣ್ಣ ಮತ್ತು ವೀಳ್ಯದೆಲೆಯೊಂದಿಗೆ ಸೇವಿಸಲಾಗುತ್ತಿತ್ತು. ತಂಬಾಕು ರಹಿತ ಪಾನ್ ಸೇವನೆ ಆಗಲೂ ಅಸ್ತಿತ್ವದಲ್ಲಿ ಇತ್ತು.
ಕಾನೂನುಗಳು:

ತಂಬಾಕು ನಿಷೇಧಕ್ಕೆ ಸಂಬಂಧಿಸಿ ಈತನಕ ಭಾರತದಲ್ಲಿ ವಿವಿಧ ರಾಜ್ಯಗಳು 1989ರ ಬಳಿಕ 15 ಕಾನೂನುಗಳನ್ನು ಬೇರೆ ಬೇರೆ ರೂಪದಲ್ಲಿ ಜಾರಿಗೆ ತಂದಿವೆ. ಈ ಕಾನೂನುಗಳಿಗೆ ಸಂಬಂಧಿಸಿ 15 ಪ್ರಕರಣಗಳು 2001ರಿಂದ ಸುಪ್ರೀಂಕೋರ್ಟ್ ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್ಗಳಲ್ಲಿದ್ದು, ಇವುಗಳು ಇಲ್ಲಿಯ ತನಕ ಇತ್ಯರ್ಥವಾಗಿಲ್ಲ. ವಾದ ಮತ್ತು ಪ್ರತಿವಾದಗಳು ಮುಂದುವರಿಯುತ್ತಲೇ ಇವೆ. ಯಾವ ನ್ಯಾಯಾಲಯ ಕೂಡ ಈ ಕಾನೂನುಗಳಿಗೆ ತಾರ್ಕಿಕ ಅಂತ್ಯ ಅಥವಾ ಕಾನೂನಿನ ಬದ್ಧತೆ ನೀಡಿಲ್ಲ. ಸ್ವಾತಂತ್ರಪೂರ್ವ ಭಾರತದಲ್ಲಿ ಜಹಾಂಗೀರ್, ಶಿವಾಜಿ ಮಹಾರಾಜ, ಭೂವಿಂದರ್ ಸಿಂಗ್ ಮಾನ್ ಮೊದಲಾದ ರಾಜರು ತಂಬಾಕು ನಿಷೇಧಕ್ಕೆ ಮುಂದಾಗಿದ್ದರು. ಆದರೆ ಜನರ ವಿರೋಧ ಮತ್ತು ಅವರ ಮಂತ್ರಿಮಂಡಲದ ಆಕ್ಷೇಪ ಬಂದ ಕಾರಣ ಈ ಪ್ರಸ್ತಾವ ಕೈ ಬಿಡಲಾಯಿತು ಎಂಬ ಅಂಶ ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ಹಲವು ಪ್ರಯತ್ನ:
1950ರಲ್ಲಿ ಭಾರತದ ಸಂವಿಧಾನದ 47ನೇ ವಿಧಿಯನ್ವಯ ಜನರು ಬಳಸುವ ಯಾವುದೇ ಉತ್ಪನ್ನ ಆರೋಗ್ಯಕ್ಕೆ ಹಾನಿಯಾಗುವುದಿದ್ದರೆ ಔಷಧಕ್ಕಾಗಿ ಅಂತಹ ಉತ್ಪನ್ನಗಳನ್ನು ಬಳಸುವುದನ್ನು ಹೊರತು ಪಡಿಸಿ ಇತರ ಬಳಕೆ ನಿಷೇಧಿಸಬಹುದು ಎಂದು ತಿಳಿಸಲಾಗಿದೆ. 1950ರ ಬಳಿಕ 1989ರಿಂದ ಒಂದಲ್ಲೊಂದು ರೀತಿಯಲ್ಲಿ ತಂಬಾಕು ನಿಷೇಧದ ಕಾನೂನುಗಳು ಜಾರಿ ಮಾಡಲು ಪ್ರಯತ್ನಗಳಾಗಿವೆ.ೆಲವೊಂದು ರಾಜ್ಯಗಳು ಆಂಶಿಕ ರೀತಿಯಲ್ಲಿ ಅವುಗಳ ಅನುಷ್ಠಾನ ಮತ್ತು ತಂಬಾಕು ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸಿವೆ. ಆದರೆ ಸ್ವಾತಂತ್ರ ಪೂರ್ವದಿಂದ ಇಲ್ಲಿಯ ತನಕದ ಇತಿಹಾಸ ಅವಲೋಕಿಸಿದರೆ ಅದು ಸುಲಭವಲ್ಲ ಎಂಬುದು ಗಮನಕ್ಕೆ ಬರುತ್ತದೆ. ತಂಬಾಕು ನಿಷೇಧ ಮತ್ತು ಅಡಿಕೆ ಬಳಕೆಗೆ ಯಾವುದೇ ನೇರ ಸಂಬಂಧವಿಲ್ಲ. ತಂಬಾಕು ರಹಿತ ಅಡಿಕೆ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಲೇ ಇರುವುದರಿಂದ ಅಡಿಕೆ ಬೆಳೆಗಾರರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.

ಮಾಣಿಹೊಳೆಗೆ ಇನ್ನೊಂದು ಸೇತುವೆ


ಕುಸಿದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮಾಣಿಹೊಳೆ ಸೇತುವೆ ಬದಲಿಗೆ ಇನ್ನೊಂದು ಸೇತುವೆ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಇಲಾಖೆಯ ಕಾರ್ಯದರ್ಶಿಗೆ, ಧಾರವಾಡದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಿಗೆ ಸೂಚಿಸಿದ್ದಾರೆ. ಸುಮಾರು 86 ಲಕ್ಷ ರೂ. ಮೊತ್ತದಲ್ಲಿ ಕಾಮಗಾರಿ ಪ್ರಸ್ತಾವನೆ ಸರಕಾರದ ಮುಂದಿದ್ದು, ಇದನ್ನು ಶೀಘ್ರ ಕಾರ್ಯಗತಗೊಳಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳುಗಳ ಹಿಂದೆ ಕುಸಿದ ಸೇತುವೆಯಿಂದ ಶಿರಸಿ-ಸಿದ್ದಾಪುರ ತಾಲೂಕು ಬೆಸೆಯುವ ಕೊಂಡಿಯೊಂದು ಕಳಚಿದಂತಾಗಿದೆ. ಹಳ್ಳ ದಾಟಲೂ 40 ಕಿಮೀ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ನಿರ್ಮಾಣ ಆಗಿದೆ.

ಹಳ್ಳಿಗಾಡಿನ ಗರ್ಭಿಣಿಯರ ‘ಅಮ್ಮ’

ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆಗಳೇ ಇಲ್ಲ. ತಾಲೂಕಾ ಕೇಂದ್ರದಲ್ಲಿ ಓರ್ವ ವೈದ್ಯರನ್ನು ಬಿಟ್ಟರೆ, ಉಳಿದೆಡೆ ಪ್ರಸೂತಿ ತಜ್ಞ ವೈದ್ಯಾಧಿಕಾರಿಗಳೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಯ ಸಾಂಪ್ರದಾಯಿಕ ಪ್ರಸೂತಿ ಪದ್ಧತಿ ಮೂಲಕ ಗಮನ ಸೆಳೆದವರು ಸೂಲಗಿತ್ತಿ ಸುಶೀಲಮ್ಮ.ೋಯಿಡಾ ಗ್ರಾಪಂ ವ್ಯಾಪ್ತಿಯ ಮಳೆ ಎಂಬ ಗ್ರಾಮದ ಸುಶೀಲಾ ಬುಧೊ ವೇಳಿಪ್ ಮೂಲತಃ ಕುಣಬಿ ಬುಡಕಟ್ಟು ಸಮುದಾಯದ ಮಹಿಳೆ. ಸದ್ಯ ಹಳಿಯಾಳ ಎಪಿಎಂಸಿ ಸದಸ್ಯೆಯಾದ ಇವರು, ಸುತ್ತಲಿನ ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಸೂಲಗಿತ್ತಿ ಸುಶೀಲಮ್ಮ ಎಂದೇ ಚಿರಪರಿಚತರು. 65 ವರ್ಷ ವಯಸ್ಸು. ಕಲಿತಿದ್ದು ಕೇವಲ 4ನೇ ತರಗತಿ. ಪ್ರಸೂತಿ ತಜ್ಞೆ ಅಷ್ಟೇ ಅಲ್ಲದೇ ನಾಟಿ ವೈದ್ಯೆ ಕೂಡಾ ಹೌದು.
ತನ್ನ 35 ವರ್ಷದ ಈ ಕಾಯಕದಲ್ಲಿನ ಅನುಭವದಲ್ಲಿ ಈಕೆ ಕೈಹಿಡಿದ ಯಾವುದೇ ಹೆರಿಗೆ ಪ್ರಕರಣ ವಿಲವಾಗಿದ್ದಿಲ್ಲ. ವೈದ್ಯರು ಹೆದರಿ ಕೈಬಿಟ್ಟ ಪ್ರಕರಣಗಳನ್ನು ಯಶಸ್ವಿಯಾಗಿ ಪ್ರಸೂತಿ ಮಾಡಿಸಿದ ಅನೇಕ ನಿದರ್ಶನಗಳಿವೆ. ಇವರ ಪ್ರಸೂತಿ ಕೌಶಲ್ಯ ಯಾವ ತಜ್ಞ ಎಂಬಿಬಿಎಸ್ ವೈದ್ಯರಿಗೂ ಕಡಿಮೆ ಇಲ್ಲ. ಇಲ್ಲಿಯವರೆಗು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಶ್ರೇಯ ಇವರದ್ದು.
ನುರಿತ ನಾಟಿ ವೈದ್ಯೆ:
ಸುಶೀಲಮ್ಮ ನುರಿತ ನಾಟಿ ವೈದ್ಯೆ ಕೂಡಾ ಹೌದು. ಇವರು ನಡೆಸುವ ಸುರಕ್ಷಿತ ಪ್ರಸೂತಿ ಜೊತೆಗೆ ನೀಡುವ ಔಷಧಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಗರ್ಭಿಣಿಯರನ್ನು ನೋಡಿದರೆ ಸಾಕು, ಅವರ ಹೊಟ್ಟೆಯೊಳಗಿನ ಮಗುವಿನ ಸ್ಥಿತಿಗತಿ ಏನು, ಬಾಣಂತನವಾಗುವವರೆಗೆ ನೀಡಬೇಕಾದ ಆಹಾರ ಪದ್ಧತಿ, ಪಥ್ಯ ಏನು? ಎನ್ನುವ ಬಗ್ಗೆ ತಿಳಿ ಹೇಳಿ ಗಿಡಮೂಲಿಕೆ ಔಷಧಿ ನೀಡುತ್ತಾರೆ. ಸುರಕ್ಷಿತ ಹೆರಿಗೆಗೆ ಬೇಕಾದ ಸಂದರ್ಭೋಚಿತ ಎಲ್ಲಾ ನಾಟಿ ಔಷಧ ಪದ್ಧತಿಯನ್ನು ಬಲ್ಲವರಾಗಿದ್ದಾರೆ. ಎದೆ ಹಾಲು ವೃದ್ಧಿಗೂ ವನೌಷಧ ನೀಡುತ್ತಿದ್ದಾರೆ. ಗರ್ಭಿಣಿಯರಿಗೆ ಮಾತ್ರವಲ್ಲದೆ ವಿಷದ ಹಾವು, ನಾಯಿ ಕಡಿತ ಹಾಗೂ ದಮ್ಮು ಕೆಮ್ಮು, ಅಸ್ತಮಾಕ್ಕೂ ಗಿಡ ಮೂಲಿಕೆ ಔಷಧಿ ನೀಡುತ್ತಾರೆ.
ತಾಲೂಕಿನಲ್ಲಿ ಅನೇಕ ಗ್ರಾಮೀಣ ಭಾಗದ ಹಳ್ಳಿಗಳಿಗೆ ರಸ್ತೆಗಳಿಲ್ಲದ, ವಾಹನ ಸೌಕರ್ಯವಿಲ್ಲದ ಸಂದರ್ಭದಲ್ಲಿ ಅದರಲ್ಲಿಯೂ ಮಳೆಗಾಲದ ದಿನಗಳಲ್ಲಿ ಇವರು ಕಾಲ್ನಡಿಗೆಯಲ್ಲಿಯೇ ತೆರಳಿ ಸುಸೂತ್ರ ಹೆರಿಗೆ ಮಾಡಿಸಿ ಬರುತ್ತಾರೆ. ಜೋಯಿಡಾ, ಅಣಶಿ, ಉಳವಿ, ಗುಂದದ ಗ್ರಾಮೀಣ ಭಾಗ ಸೇರಿದಂತೆ ಬಾಜಾರ ಕೊಣಂಗ, ಡಿಗ್ಗಿ ಭಾಗದ ಸುಮಾರು 20-30 ಕಿಮೀ ದೂರದ ಕುಗ್ರಾಮಗಳಿಗೆ ರಾತ್ರಿ ಹಗಲೆನ್ನದೆ ಹೋಗಿ ಹೆರಿಗೆ ಮಾಡುವ ಈ ಸುಶೀಲಮ್ಮ ಈ ಭಾಗದ ಅನೇಕ ತಾಯಂದಿರಿಗೆ ಬದುಕು ನೀಡಿದ ಮಹಾತಾಯಿಯಾಗಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ, ಇವರು ವೃತ್ತಿಪರರಲ್ಲ. ಮೌಲ್ಯವನ್ನು ಕಟ್ಟಿ ವೃತ್ತಿಯನ್ನು, ಕೌಶಲ್ಯವನ್ನು ಪ್ರದರ್ಶಿಸುವವರಲ್ಲ. ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ಕೈಂಕರ್ಯವಷ್ಟೆ. ಇವರಲ್ಲಿ ಮನೆಮಾಡಿದ ಸೇವಾ ಮನೋಭಾವ ಕೃತ್ರಿಮತೆಯ ಸಮಾಜಕ್ಕೆ ಮಾದರಿ.ನುಭವವೇ ಆಧಾರವಾಯ್ತು:ನ್ನ ತಾಯಿ ಮನೆಯ ಊರಾದ ಬಾರಾಡೆ ಗ್ರಾಮದಲ್ಲಿ ಹೆರಿಗೆಯಲ್ಲಿ ಪರದಾಡುತ್ತಾ, ಸಾವು ಬದುಕಿನಲ್ಲಿ ಹೋರಾಡುತ್ತಿದ್ದ ಒಬ್ಬ ಬಾಣಂತಿಯ ಭಯಾನಕ ಸನ್ನಿವೇಶ ಕಂಡು ಮನಕರಗಿ ನನಗೆ ಅರಿವಿಲ್ಲದಂತೆ ಅವಳ ಪ್ರಸೂತಿ ಕ್ರಿಯೆಯನ್ನು ಸುಸೂತ್ರವಾಗಿ ಮಾಡಿದೆ. ಅಂದು ನನಗೆ ಏನೂ ತಿಳಿದಿರಲಿಲ್ಲ, ಆದರೂ ಸಾಯುವ ಹಂತ ತಲುಪಿದ್ದ ಆ ಬಾಣಂತಿಯ ಜೀವ ಉಳಿಸಿದ ಕೀರ್ತಿಗೆ ನನಗರಿವಿಲ್ಲದಂತೆ ಭಾಜನಳಾದೆ. ನನಗೆ ಅನುಭವವೇ ಜ್ಞಾನ ತಂದಿದೆ‘ ಎನ್ನುತ್ತಾಳೆ ಸುಶೀಲಮ್ಮ.ಚ್ಟ‘ ನಮ್ಮ ಗ್ರಾಮೀಣ ಭಾಗದ ಜನ ನನ್ನನ್ನು ದೇವರಂತೆ ಕಾಣುತ್ತಾರೆ.ಅವರ ಋಣಕ್ಕೆ ನಾನು ಯಾವತ್ತೂ ಬದ್ಧ. ನನ್ನ ಕೈಯಿಂದ ಆಗುವ ಈ ಸೇವೆಗೆ ಯಾವತ್ತೂ ನಾನು ಸಿದ್ಧ, ಜನಿಸಿದ ಮಕ್ಕಳು ಆರೋಗ್ಯ ಪೂರ್ಣವಾಗಿ ಬೆಳೆಯಬೇಕೆಂಬ ಆಸೆ ನನ್ನದು’ ಎನ್ನುತ್ತಾರೆ ಅವರು.

ಹಸುವಿನ ಹೊಟ್ಟೇಲಿತ್ತು 2 ಕೆ.ಜಿ.ಯಷ್ಟು ಕೊಬ್ಬಿನ ಗಂಟು

ಹಸುವಿನ ಗರ್ಭಕೋಶ ಹಾಗೂ ಮೂತ್ರಕೋಶದ ನಡುವಿದ್ದ ಸುಮಾರು 2 ಕೆ.ಜಿ. ಕೊಬ್ಬಿನ ಗಂಟುಗಳನ್ನು ಸುಮಾರು ಒಂದೂವರೆ ತಾಸು ಅವಿರತ ಶಸಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ಪಶುವೈದ್ಯ ಡಾ ಪಿ.ಎಸ್.ಹೆಗಡೆ ಹಾಗೂ ಡಾ ನರಸಿಂಹ ಮಾರ್ಕಾಂಡೆ ಯಶಸ್ವಿಯಾಗಿದ್ದಾರೆ.ತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬೆಳೆನಳ್ಳಿಯ ಗೋಪಾಲ ಭಟ್ಟರ ಕೃಷ್ಣಾವ್ಯಾಲಿ ತಳಿಯ 5 ವರ್ಷದ ಹಸು ಕೃತಕ ಗರ್ಭಧಾರಣೆ ಮಾಡಿಸಿ 13 ತಿಂಗಳಾಗಿತ್ತು. ಅನೇಕ ಪಶು ಚಿಕಿತ್ಸಕರಿಂದ ಪರೀಕ್ಷೆಗೊಳಪಟ್ಟಾಗಲೂ ಒಂದೇ ಉತ್ತರ 6 ತಿಂಗಳ ಗರ್ಭಿಣಿ. 10 ತಿಂಗಳು ಕಳೆದರೂ ಕರು ಹಾಕುವ ಯಾವ ಲಕ್ಷಣವಿಲ್ಲದಿದ್ದಾಗ ಗಾಬರಿಯಾಗಿದ್ದರು. ಕೊನೆಗೆ ಪಶುವನ್ನು ಪರಿಶೀಲಿಸಿ ಅರವಳಿಕೆ ನೀಡಿ ಗರ್ಭಕೋಶದ ಬಾಯಿಯ ಮೂಲಕ ಗಡ್ಡೆಯನ್ನು ತಲುಪುವ ಪ್ರಯತ್ನದಲ್ಲಿ ಗರ್ಭಕೋಶ ಖಾಲಿ, ಖಾಲಿಯಾದ ಅನುಭವ ಬಂತು. ಅಲ್ಲಿಯೇ ಒಂದು ಸಣ್ಣ ರಂದ್ರ ಮಾಡಿ ಕೈ ತೂರಿಸಿದಾಗ ಆಶ್ಚರ್ಯ. ಸುಮಾರು 30 ವಿವಿಧ ಗಾತ್ರದ ಕೊಬ್ಬಿನ ಗಂಟುಗಳಾಗಿದ್ದವು. ಅವನ್ನು ಹೊರ ತೆಗೆಯಲಾಗಿದ್ದು, ಹಸು ಆರೋಗ್ಯವಾಗಿದೆ.

ಭಾನ್ಕುಳಿ ಮಠದಲ್ಲಿ ದೀಪೋತ್ಸವ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀರಾಮದೇವ ಮಠದಲ್ಲಿ ಮಾತೃ ವಿಭಾಗ ಹಾಗೂ ಕಾಮದುಘಾ ಯೋಜನೆ ಸಹಯೋಗದಲ್ಲಿ ಸೌಂದರ್ಯ ಲಹರಿ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, ಸ್ವಚ್ಛತಾ ಅಭಿಯಾನ, ದೀಪೋತ್ಸವ ಇನ್ನಿತರ ಕಾರ್ಯಕ್ರಮಗಳು ಇತ್ತೀಚೆಗೆ ನಡೆದವು.
ಪ್ರಮುಖರಾದ ಕಲ್ಪನಾ ತಲವಾಟ, ಎಸ್.ಜಿ. ಹೆಗಡೆ ಬತ್ತಗೆರೆ, ಎಂ.ಎಂ. ಹೆಗಡೆ ಮಶೀಗಾರ, ಲಕ್ಷ್ಮಣ ಶಾನಭಾಗ, ಎಂ.ವಿ. ಹೆಗಡೆ, ಎನ್.ವಿ. ಹೆಗಡೆ ಮುತ್ತಿಗೆ, ಕೆಕ್ಕಾರ ನಾಗರಾಜ ಭಟ್, ಸುಬ್ರಾಯ ಹೆಗಡೆ ಕೊಳಗಿ, ಶ್ಯಾಮಲಾ ಹೆಗಡೆ, ಚಂದ್ರಮತಿ ಹೆಗಡೆ, ಸವಿತಾ ಹಿರೇಮನೆ ಇನ್ನಿತರರು ಪಾಲ್ಗೊಂಡಿದ್ದರು. ವೇ.ಮಹೇಶ ಭಟ್ ಅಗ್ಗೆರೆ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಅಡಕೆ ಸುಲಿಯುವ ಯಂತ್ರದ ಕಡೆ ಹೆಚ್ಚಿದ ರೈತರ ಒಲವು

ಶೃಂಗೇರಿ ತಾಲೂಕಿನಾದ್ಯಂತ ಅಡಕೆ ಕೊಯಿಲು ಆರಂಭಗೊಳ್ಳುತ್ತಿದ್ದು, ಯಾಂತ್ರಿಕರಣಕ್ಕೆ ಒಗ್ಗಿಕೊಳ್ಳುತ್ತಿರುವ ರೈತರು ಅಡಕೆ ಸುಲಿಯುವ ಯಂತ್ರಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ.ಾರ್ಮಿಕರ ಅಭಾವದಿಂದ ದೊಡ್ಡ ಹಿಡುವಳಿದಾರರು ಅಡಕೆ ಸುಲಿಯುವ ಯಂತ್ರವನ್ನು ಖರೀದಿ ಮಾಡುತ್ತಿದ್ದರೂ ಸಣ್ಣ ರೈತರು ಇನ್ನೂ ಯಂತ್ರವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಡಕೆ ಸುಲಿಯುವ ಯಂತ್ರಕ್ಕೆ 60 ಸಾವಿರದಿಂದ 2.20 ಲಕ್ಷದವರೆಗೆ ಇದ್ದು, ಸರಕಾರವು ಪ್ರೋತ್ಸಾಹಧನವನ್ನು ಅಗತ್ಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡದಿರುವುದರಿಂದ ಎಲ್ಲಾ ರೈತರು ಖರೀದಿಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ಬಹುತೇಕ ಅಡಕೆ ತೋಟಗಳಿಗೆ ಹಳದಿ ಎಲೆ ರೋಗ ಬಂದಿದ್ದು, ರೋಗ ಪೀಡಿತ ಅಡಕೆ ಸಂಸ್ಕರಣೆಯೂ ಕಷ್ಟವಾಗಿದೆ. ಯಂತ್ರದಲ್ಲಿ ಸುಲಿಯಲು ಸುಲಭ ಸಾಧ್ಯವಾಗುವುದರಿಂದ ರೈತರು ಹೆಚ್ಚಿನ ಆಸಕ್ತಿ ಯಂತ್ರದತ್ತ ತೋರಿದ್ದಾರೆ.
ಸಾಂಪ್ರದಾಯಿಕ ಅಡಕೆ ಸುಲಿತದಿಂದ ಅಡಕೆಯ ಗುಣಮಟ್ಟ ಉತ್ತಮವಾಗಿರುವುದಲ್ಲದೆ ಅಡಕೆ ಸುಲಿತವೂ ಕ್ರಮಬದ್ದವಾಗಿರುತ್ತದೆ. ಆದರೆ ಅಡಕೆ ಗೊನೆ ಮರದಿಂದ ಇಳಿಸಿದ ಎರಡು ಮೂರು ದಿನಗಳಲ್ಲಿ ಅಡಕೆ ಸುಲಿಯಬೇಕು. ಆದರೆ ಅಡಕೆ ಸುಲಿಯುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದ ಮತ್ತು ಎಲ್ಲೆಡೆ ಒಂದೇ ಬಾರಿ ಕೊಯಿಲು ಆರಂಭಗೊಳ್ಳುವುದರಿಂದ ಅಡಕೆ ಸುಲಿಯುವುದು ಕಷ್ಟವಾಗುತ್ತಿದೆ. ಅಡಕೆ ಸುಲಿಯುವ ಯಂತ್ರದಿಂದ ಬಹುತೇಕ ಸುಲಿಯಬಹುದಾದರೂ ಉಳಿದ ಅಲ್ಪ ಭಾಗ ಕಾರ್ಮಿಕರಿಂದ ಸಂಸ್ಕರಣೆ ಮಾಡಿಸಬೇಕು.
ಸುಧಾರಿಸಿರುವ ಯಂತ್ರಗಳು:
ಕಳೆದ ಇಪ್ಪತ್ತು ವರ್ಷಗಳಿಂದ ಅಡಕೆ ಸುಲಿಯುವ ಯಂತ್ರಗಳ ಸಂಶೋಧನೆ ನಡೆಯುತ್ತಿದೆ. ಇತ್ತೀಚಿನ ಆರೇಳು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಈಗ ಕುಂಟುವಳ್ಳಿ, ತುಮಕೂರು ಮತ್ತು ಉಡುಪಿಯ ಯಂತ್ರಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. ಈ ವರ್ಷ ಬರುತ್ತಿರುವ ಕುಂಟುವಳ್ಳಿ ಯಂತ್ರಗಳು ಸಾಕಷ್ಟು ಸುಧಾರಣೆಯಾಗಿದೆ ಎಂದು ಕುಂಟುವಳ್ಳಿ ಅಡಕೆ ಸುಲಿಯುವ ಯಂತ್ರದ ಮಾರಾಟ ಪ್ರತಿನಿಧಿ ಎಚ್.ಸಿ.ಗಣೇಶ್ ಹೇಳುತ್ತಾರೆ.
ತಾಲೂಕಿನಲ್ಲಿ ಅಡಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆ. ಇದರ ಸಂಸ್ಕರಣೆ ಪ್ರಮುಖ ಘಟ್ಟ. ಮಲೆನಾಡಿನಲ್ಲಿ ಮಳೆ ಹೆಚ್ಚಿರುವುದರಿಂದ ರೈತರು ಸಾಂಪ್ರದಾಯಿಕ ಹಸಿ ಬೆಟ್ಟೆ, ಇಡಿ ಅಡಕೆಗಳನ್ನೇ ಹೆಚ್ಚು ಸಿದ್ದಪಡಿಸುತ್ತಾರೆ. ಸಣ್ಣ ರೈತರಿಗೆ ಅಡಕೆ ಸುಲಿಯುವ ಯಂತ್ರವನ್ನು ಕೊಳ್ಳಲಾಗುತ್ತಿಲ್ಲ. ಸರಕಾರ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಾಯಧನವನ್ನು ಬಿಡುಗಡೆ ಮಾಡಿದಲ್ಲಿ ಸಣ್ಣ ರೈತರಿಗೆ ಸಹಾಯಕವಾಗುತ್ತದೆ.

ಹೊಳೆ ತಟದಲ್ಲಿ ಆಂಜನೇಯ ಪ್ರತ್ಯಕ್ಷ

ಭಕ್ತಾಗ್ರೇಸರ ಎಂದೇ ಬಿರುದು ಹೊತ್ತ ಮಾರುತಿ ದೇವರು ರಾತ್ರಿ ಬೆಳಗಾಗುವುದರೊಳಗೆ ನದಿ ತಟದಲ್ಲಿ ಶಿಲಾಮೂರ್ತಿ ರೂಪದಲ್ಲಿ ಪ್ರತ್ಯಕ್ಷ... ಅಂದಮೇಲೆ ಆಸ್ತಿಕರ ಕುತೂಹಲಕ್ಕೆ, ಭಕ್ತಿ ಪರಾಕಾಷ್ಟೆಗೆ ಪರಿಮಿತಿಯೇ ಸಾಲದು.
ಈ ವಿದ್ಯಮಾನ ನಡೆದಿದ್ದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಚಂದಾವರ ಹೊಳೆಯ ದಡದಲ್ಲಿ. ಚಂದಾವರ ಸೀಮೆಗೆ ಇಲ್ಲಿನ ಹೊಳೆ ದಡದಲ್ಲಿರುವ ಮಾರುತಿ ಆರಾಧ್ಯ ದೈವ. ಇದೇ ಹೊಳೆಯ ದಡದ ಮಾರ್ಗದಂಚಿನ ಸೇತುವೆ ಪಕ್ಕದಲ್ಲಿ ಇತ್ತೀಚೆಗೆ ಬೆಳಕು ಮೂಡುವುದರೊಳಗೆ ಕೈಮುಗಿದು ಕುಳಿತ ಮಾರುತಿಯ ಶಿಲಾ ಮೂರ್ತಿ ಪ್ರತ್ಯಕ್ಷವಾಗಿದ್ದು, ಮಾರ್ಗದಲ್ಲಿ ಸಾಗುವವರ, ಸಮೀಪದ ನಿವಾಸಿಗಳನ್ನು ಸೆಳೆಯುವಲ್ಲಿ ಕಾರಣವಾಯಿತು.ಂದಾವರ ಹೊಳೆಯಲ್ಲಿ ಮಾರುತಿ ಮೂರ್ತಿ ಪ್ರತ್ಯಕ್ಷವಾಗಿದೆ ಎಂಬ ಸುದ್ದಿ ನಾಲಿಗೆಯಿಂದ, ನಾಲಿಗೆಗೆ ಹರಿದಾಡಿ, ನೋಡ ನೋಡುತ್ತಿದ್ದಂತೆ ಬೆಳಗ್ಗೆ 9ಗಂಟೆಯ ಒಳಗೇ 2ಸಾವಿರಕ್ಕೂ ಹೆಚ್ಚು ಜನ ಸೇರಿದರು. ನೋಡಲು ಆಕರ್ಷಣೀಯವಾಗಿದ್ದ ಮಾರುತಿ ಮೂರ್ತಿ ಹೊಳೆಯಲ್ಲಿ ರೇತಿ ತೆಗೆಯುವ ಸಂದರ್ಭದಲ್ಲಿ ದೊರೆತಿದೆ ಎಂಬ ಮಾತುಗಳ ಜೊತೆ ಹತ್ತು ಹಲವು ವದಂತಿಗಳು ರೆಕ್ಕೆಪುಕ್ಕ ಸೇರಿಸಿಕೊಂಡು ಕಥೆ ಕಟ್ಟಲಾರಂಭಿಸಿದವು. ಜನ ಪೂಜಾ ಕೈಂಕರ್ಯಗಳಿಗೂ ಸಿದ್ಧತೆ ನಡೆಸತೊಡಗಿದರು. ಇನ್ನೇನು ಮತ್ತೆ ಪ್ರತಿಷ್ಟೆ ಮಾಡಿ ಮಂದಿರ ನಿರ್ಮಿಸುವವರೆಗೆ ಯೋಜನೆಗಳು ರೂಪುಗೊಳ್ಳಲಾರಂಭಿಸುವ ವೇಳೆ ತಹಶೀಲ್ದಾರ ಜಿ.ಎಂ.ಬೋರಕರ್ ಸ್ಥಳಕ್ಕೆ ತೆರಳಿ ಸೇರಿದ್ದ ಸಹಸ್ರಾರು ಜನರ ಕುತೂಹಲಕ್ಕೆ ಉತ್ತರ ದೊರಕಿಸಿಕೊಟ್ಟರು.
ದೊರಕಿತು ಉತ್ತರ:
ಇತ್ತೀಚೆಗೆ ಕೆಕ್ಕಾರಿನ ಮಠದಲ್ಲಿ ನೂತನವಾಗಿ ಮಾರುತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿರುವ ಹಳೆಯ ಮೂರ್ತಿ ಬದಲಾಯಿಸಲಾಗಿದೆ. ಚಂದಾವರದಲ್ಲಿ ಸಿಕ್ಕ ಮಾರುತಿ ಮೂರ್ತಿ ಕೆಕ್ಕಾರ ಮಠದ ಆವರಣದಲ್ಲಿರುವುದಾಗಿತ್ತು. ಹೊಸ ಮೂರ್ತಿ ಪ್ರತಿಷ್ಠಾಪನೆ ನಂತರ ಈ ಮೂರ್ತಿಯನ್ನು ಚಂದಾವರ ಹೊಳೆಯಲ್ಲೇ ವಿಸರ್ಜಿಸಿದ್ದರು. ಇದೀಗ ಹೊಳೆಯಲ್ಲಿ ನೀರು ಆರಿದ ಕಾರಣ ಮೂರ್ತಿ ಕಂಡು ಬಂದಿದೆ. ಯಾರೋ ಅದನ್ನು ಮೇಲೆತ್ತಿ ಇಟ್ಟಿದ್ದರು. ಸಿಕ್ಕ ಈ ಮೂರ್ತಿಯನ್ನು ಪಂಚನಾಮೆ ಮಾಡಿ, ಮೂರ್ತಿಯನ್ನು ಶಾಸೋಕ್ತವಾಗಿ ಅಘನಾಶಿನಿ ಹೊಳೆಯಲ್ಲಿ ವಿಸರ್ಜಿಸುವಂತೆ ಮಠದ ಪ್ರಮುಖರು ಮತ್ತು ಅರ್ಚಕರಿಗೆ ತಹಶೀಲ್ದಾರರು ಸೂಚಿಸಿದರು.


ಹಸುವಿನ ಹೊಟ್ಟೆಯಿಂದ ಹೊರತೆಗೆದ್ರು ಬಂಗಾರದ ಚೈನು

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೆಬ್ಬೂರಿನಲ್ಲಿ ಗೋಗ್ರಾಸದೊಂದಿಗೆ ಹಸುವಿನ ಹೊಟ್ಟೆ ಸೇರಿದ್ದ ಬಂಗಾರದ ಸರವನ್ನು ಶಸ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.ಳೆದ ಹದಿನೈದು ದಿನಗಳ ಹಿಂದೆ ದೀಪಾವಳಿ ಗೋಪೂಜೆ ದಿನದಂದು ನೆಬ್ಬೂರಜಡ್ಡಿಯ ಹರಿಹರ ಭಟ್ಟರ ಮನೆಯ ಹಸು ಪೂಜೆಗೆ ಇಟ್ಟ ಬಂಗಾರದ ಸರವೊಂದನ್ನು ಆಕಸ್ಮಿಕವಾಗಿ ನುಂಗಿ ಬಿಟ್ಟಿತ್ತು. ಗಾಬರಿಗೊಂಡ ಭಟ್ಟರು ಮರುದಿನ ಪಶುತಜ್ಞ ಡಾ. ಪಿ.ಎಸ್.ಹೆಗಡೆಯವರನ್ನು ಭೇಟಿ ಮಾಡಿದ್ದರು. ಸರ ಹಸುವಿನ ಮೊದಲನೇ ಹೊಟ್ಟೆಯಿಂದ 2ನೇ ಹೊಟ್ಟೆ (ರೆಟಿಕ್ಯುಲಮ್)ಗೆ ಜಾರಿರುವುದರ ಖಚಿತ ಮಾಹಿತಿ ನೀಡಿ, 15 ದಿನ ಸಗಣಿ ಪರೀಕ್ಷಿಸುತ್ತಿರಲು ಹೆಗಡೆ ಸಲಹೆ ನೀಡಿದ್ದರು.ಇಷ್ಟು ದಿನವಾದರೂ ಬಂಗಾರದ ಸರ ಹೊರ ಬರದ ಹಿನ್ನೆಲೆಯಲ್ಲಿ ಡಾ.ಪಿ.ಎಸ್.ಹೆಗಡೆ ಅವರು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನರಸಿಂಹ ಮಾರ್ಕಾಂಡೆ ಜೊತೆ ಸೇರಿ ಶಸಚಿಕಿತ್ಸೆ ನಡೆಸಿ ಸುಮಾರು 2.5 ತೊಲೆಯ ಬಂಗಾರದ ಸರ ತೆಗೆದರು. ಸರದ ಜೊತೆ ಇದ್ದ ಹೊಚ್ಚ ಹೊಸ ಕಬ್ಬಿಣದ ಮೊಳೆ ಕೂಡ ಹೊರ ತೆಗೆದರು. 

ಕುಸಿಯಿತು ಮಾಣಿ ಹೊಳೆ ಸೇತುವೆ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೇರೂರು, ಹೆಗ್ಗರಣಿ, ನಿಲ್ಕುಂದ ಮುಂತಾದ ಗ್ರಾಪಂ ವ್ಯಾಪ್ತಿಯ ಪ್ರದೇಶಕ್ಕೆ ತಾಲೂಕು ಕೇಂದ್ರದೊಡನೆ ಸಂಪರ್ಕ ಕಲ್ಪಿಸುತ್ತಿದ್ದ ಹಾರ್ಸಿಕಟ್ಟಾ ಸಮೀಪದ ಮಾಣಿಹೊಳೆ ಸೇತುವೆ ಇತ್ತೀಚೆಗೆ ಕುಸಿದಿದೆ. ಇದರಿಂದಾಗಿ ಸಂಚಾರ ಸಂಪುರ್ಣ ಸ್ಥಗಿತಗೊಂಡಿದೆ.ುಮಟಾ-ಕಲ್ಲಕೊಪ್ಪ ರಾಜ್ಯ ಹೆದ್ದಾರಿ(ನಂ.142)ಯಲ್ಲಿನ ಹಾರ್ಸಿಕಟ್ಟಾ-ಗೋಳಿಮಕ್ಕಿ ನಡುವಿನ ಮಾಣಿಹೊಳೆ-ಅಘನಾಶಿನಿ ನದಿ ಸಂಗಮಗೊಳ್ಳುವ ಸ್ಥಳದಲ್ಲಿನ ಸೇತುವೆ ಇದೆ. 300 ಅಡಿ ಉದ್ದ, 15 ಅಡಿ ಅಗಲದ ಈ ಸೇತುವೆ ಕಾಮಗಾರಿ 1956ರಲ್ಲಿ ಆರಂಭಗೊಂಡಿತ್ತು. 1962ರಲ್ಲಿ ಉದ್ಘಾಟನೆಗೊಂಡಿತ್ತು. ನಿತ್ಯ ನೂರಾರು ವಾಹನಗಳು, ಸಾವಿರಾರು ಸಾರ್ವಜನಿಕರು ಸಂಚರಿಸುವ ಈ ಮಾರ್ಗದಲ್ಲಿನ ಅತ್ಯಂತ ಮುಖ್ಯ ಸೇತುವೆ ಇದಾಗಿದೆ. ತಾಲೂಕಿನ ಶೇ.40ರಷ್ಟು ಭೂಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆ ಏಕಾಏಕಿ ಕುಸಿತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡಿದೆ.ರ್ಧ ಶತಮಾನಕ್ಕೂ ಹಳೆಯದಾದ ಈ ಸೇತುವೆಯ 3ನೇ ಫಿಲ್ಲರ್ ಬಹುಪಾಲು ನುಚ್ಚುನೂರಾಗಿದ್ದು ಮೇಲಿನ ಕಾಂಕ್ರೀಟ್ ಛಾವಣಿ ಮಧ್ಯದಲ್ಲಿ ಕುಸಿದಿದೆ. ಎರಡೂ ಭಾಗದಲ್ಲಿ ಬಿರುಕು ಮೂಡಿದ್ದು ಯಾವ ವೇಳೆಯಲ್ಲೂ ಕುಸಿದ ಭಾಗಗಳು ಕೆಳಕ್ಕೆ ಬೀಳುವ ಸಾಧ್ಯತೆಯಿದೆ. ಮಳೆಗಾಲದ ನೀರಿನ ಹೊಡೆತ, ನೀರಿನಲ್ಲಿ ತೇಲಿಬರುವ ಮರದ ದಿಮ್ಮಿಗಳು ಈ ಫಿಲ್ಲರ್ಗಳಿಗೆ ಅಪ್ಪಳಿಸುವ ಕಾರಣ ಅವು ಶಿಥಿಲಗೊಂಡಿರಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 6 ಕೋಟಿ ರೂ. ಅಂದಾಜಿಸಿದ್ದು, ಮುಗಿಯಲು ಕನಿಷ್ಠ 1 ವರ್ಷವಾದರೂ ಬೇಕು ಎನ್ನಲಾಗುತ್ತಿದೆ.
ಬಸ್ ಸಂಚಾರ ಮಾರ್ಗ ಬದಲಾವಣೆ:
ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ಗಳ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಸಿದ್ದಾಪುರದಿಂದ ಹೇರೂರು ಹಾಗೂ ಹೆಗ್ಗರಣಿ ಮಾರ್ಗವಾಗಿ ಶಿರಸಿಗೆ ಬಿಡುತ್ತಿದ್ದ ಹಾಗೂ ತಟ್ಟಿಕೈ ಮತ್ತು ಅಮ್ಮೆನಳ್ಳಿಗೆ ವಸತಿಗೆ ತೆರಳುತ್ತಿದ್ದ ಬಸ್ಸಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡದೆ, ಮುಠ್ಠಳ್ಳಿ-ಕೋಡ್ಸರ-ಹೇರೂರ ಮಾರ್ಗವಾಗಿ ಬಿಡಲಾಗುತ್ತಿದೆ. ಸಿದ್ದಾಪುರ-ಹೇರೂರು-ಶಿರಸಿ ಬಸ್ನ್ನು ಸಿದ್ದಾಪುರ ಹಾರ್ಸಿಕಟ್ಟಾ-ಮುಠ್ಠಳ್ಳಿ-ಕೋಡ್ಸರ-ಹೇರೂರು-ತಟ್ಟಿಕೈ ಮಾರ್ಗವಾಗಿ ಶಿರಸಿಗೆ, ಸಿದ್ದಾಪುರ-ಹೆಗ್ಗರಣಿ-ಶಿರಸಿ ಬಸ್ನ್ನು ಸಿದ್ದಾಪುರ-ಹಾರ್ಸಿಕಟ್ಟಾ-ಮುಠ್ಠಳ್ಳಿ-ಕೋಡ್ಸರ-ನೆಲಮಾಂವಕ್ರಾಸ್-ಗೋಳಿಮಕ್ಕಿ-ಹೆಗ್ಗರಣಿ-ನಿಲ್ಕುಂದ ಮಾರ್ಗವಾಗಿ, ಶಿರಸಿಯಿಂದ ಗೋಳಿಮಕ್ಕಿಗೆ ಬಿಡುತ್ತಿರುವ ಸಿಟಿ ಬಸ್ನ್ನು ಮಾನಿಮನೆ ಕ್ರಾಸ್ವರೆಗೆ ಬಿಡಲಾಗುತ್ತದೆ.