ಸಾವಿರಾರು ಪಕ್ಷಿಗಳ ಆಸರೆಯಾದ ಕಬ್ಬಿನ ಗದ್ದೆ.

ಸಾವಿರಾರೂ ವಲಸಿಗ ಪಕ್ಷಿಗಳು ಕಬ್ಬಿನ ಗದ್ದೆಯಲ್ಲಿ ಬಿಡಾರ ಹೂಡಿದೆ, ಪ್ರತಿದಿನ ಸೂರ್ಯೊದಯದ ಮೊದಲು ಸೂರ್ಯ ಮುಳುಗುವ ಸಮಯದಲ್ಲಿ ವಲಸಿಗ ಪಕ್ಷಿಗಳ ಹಾರಾಟ ಮತ್ತು ಪಕ್ಷಿಗಳ ಕಲರವ ನೋಡುವುದೇ ಅತಿ ಸುಂದರವಾಗಿರುತ್ತದೆ.
ಹೌದು, ಮಾಗಡಿ ಪಟ್ಟಣದ ಕಲ್ಯಾಗೇಟ್ನ ತಟವಾಳ್ ರಸ್ತೆಯಲ್ಲಿರುವ ಡೈರಿ ಶಿವಕುಮಾರ್ ತೋಟಕ್ಕೆ ಬಂದರೆ ಈ ದೃಶ್ಯವನ್ನು ಕಾಣಬಹುದು ಎರಡು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಬ್ಬಿನ ಗದ್ದೆಯಲ್ಲಿ ನಿತ್ಯ ಈ ದೃಶ್ಯ ಕಂಡುಬರುತ್ತಿದೆ. ಕಾಂಕ್ರೀಟ್ ನಾಡಿನಲ್ಲಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಆಗೆಯೇ ಕಾಡುಗಳು ಕೂಡ ಮರೆಯಾಗುತ್ತಿದ್ದು ಪಕ್ಷಿಗಳು ನಿರ್ಭಯವಾಗಿ ವಾಸಮಾಡಲು ಸೂಕ್ತ ಸ್ಥಳವಿಲ್ಲದೆ ಪರಿತಪಿಸುತ್ತಿದ್ದು, ಪಟ್ಟಣದ ಮಧ್ಯ ಭಾಗದಲ್ಲಿ ಪಕ್ಷಿಗಳಗೆ ಹೇಳಿ ಮಾಡಿಸಿದಂತಿರುವ ಈ ಜಾಗದಲ್ಲಿ ಸಾವಿರಾರೂ ಗಿಜಗನಹಕ್ಕಿ ಹಾಗೂ ಗೋರವಾಂಕ ಜಾತಿಗೆ ಸೇರಿರುವ ಪಕ್ಷಿಗಳು ಸಂಜೆ ವೇಳೆ ಬಂದು ವಿಶ್ರಾಂತಿ ಪಡೆದು ಬೆಳಗಿನ ವೇಳೆ ಆಹಾರ ಅರಸಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದೆ. ಸಂಜೆ ವೇಳೆ ಸೂರ್ಯಾಸ್ತದ ಸಮಯದಲ್ಲಿ ಒಂದೆ ಸಮನಾಗಿ ಸಾವಿರಾರೂ ಪಕ್ಷಿಗಳು ಏಕ ಕಾಲದಲ್ಲಿ ಅಗಸದಿಂದ ಬರುತ್ತಿರುವುದನ್ನು ನೋಡುವುದೇ ವಿಶೇಷ ಪಕ್ಷಿ ಪ್ರಿಯರಿಗಂತು ಇದು ಒಳ್ಳೆಯ ಸ್ಥಳವಾಗಿದೆ ಛಾಯ ಚಿತ್ರಗಾರರಿಗೆ ವಿವಿಧ ಬಂಗಿಯ ಪಕ್ಷಿಗಳ ಕಲರವಗಳನ್ನು ಸೇರೆಯಿಡಿಯಬಹುದು.
ಕಬ್ಬಿನ ಗದ್ದೆಯಲ್ಲಿ ವಾಸ ಮಾಡುವ ಪಕ್ಷಿಗಳ ಒಟ್ಟಿಗೆ ಬಂದರು ಕಬ್ಬಿನ ಗದ್ದೆಗೆ ಯಾವುದೇ ತೊಂದರೆಯಾಗುತ್ತಿಲ್ಲ ಇದರಿಂದ ರೈತರು ಕೂಡ ಪಕ್ಷಿಗಳು ಬಂದರೆ ಅದಕ್ಕೆ ತೊಂದರೆಯನ್ನು ನೀಡುತ್ತಿಲ್ಲ ನಿರ್ಭಿತಿಯಾಗಿ ಸಂಜೆ ವೇಳೆ ಬಂದು ಮುಂಜಾನೆ ಒತ್ತಿಗೆ ತಮ್ಮ ಗೂಡಿಗೆ ಹಿಂದಿರಿ ಹೋಗುತ್ತಿದೆ. ಅರಣ್ಯ ಇಲಾಖೆಯವರು ಪಕ್ಷಿಗಳಿಗೆ ಆಸರೆಯಾಗಲು ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ವಿಶೇಷ ವ್ಯವಸ್ಥೆ ಮಾಡುವ ಮೂಲಕ ಅಲಿಮಿನ ಹಂಚಿನಲ್ಲಿ ಇರುವ ಸಾವಿರಾರು ಜಾತಿಯ ಪಕ್ಷಗಳಿಗೆ ನೆರವಾಗುವ ಮೂಲಕ ಪಕ್ಷಿ ಸಂಕುಲವನ್ನು ಉಳಿಸಬೇಕು ಎಂಬುದೇ ಪಕ್ಷಿ ಪ್ರಿಯಾರ ಆಸೆಯಾಗಿದೆ. ಒಟ್ಟಿನಲ್ಲಿ ನಿತ್ಯವು ಸಾವಿರಾರೂ ಪಕ್ಷಿಗಳನ್ನು ಒಂದೆಡೆ ನೋಡುವುದೆ ಮನೋಹರವಾಗಿದೆ.

ಇದು ತಾಲಿಬಾನ್ ಕೃತ್ಯವೇ?:

ೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿ ಮಸೀದಿಯೊಂದಕ್ಕೆ ನುಗ್ಗಿ ಧರ್ಮ ಗ್ರಂಥ ಕುರಾನ್ ಅನ್ನು ಹರಿದು ಹಾಕಿದ ಯುವಕನೊಬ್ಬನನ್ನು ಗುಂಪೊಂದು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದೆ. ನೂಗಲಬಂಡೆ ನಿವಾಸಿ ಡಬ್ಬಾ ಚಾನ್ ಎಂಬುವರ ಪುತ್ರ ಇಮ್ರಾನ್ (25) ಹೊಡೆಸಿಕೊಂಡು ಸತ್ತ ವ್ಯಕ್ತಿ. ಸಂಜೆ ಸುಮಾರು ಆರೂವರೆಯಿಂದ 7 ಗಂಟೆ ವೇಳೆಗೆ ಇಮ್ರಾನ್ ಎಂಬ ಯುವಕ ಪಾನಮತ್ತನಾಗಿ ಮುಳಬಾಗಿಲಿನ ಮೆಕ್ಕಾ ಮಸೀದಿಯ ಒಳಗೆ ನುಗ್ಗಿದ. ಅಲ್ಲಿ ಅಸಭ್ಯವಾಗಿ ವರ್ತಿಸಿ, ಪವಿತ್ರ ಗ್ರಂಥವಾದ ಕುರಾನ್ ಅನ್ನು ಹರಿದೆಸೆದ. ಮಸೀದಿಯ ವ್ಯವಸ್ಥಾಪಕರು ಇಮ್ರಾನ್ನನ್ನು ಕೂಡಿ ಹಾಕಿದರು. ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಯುವಕರು ಇಮ್ರಾನ್ನನ್ನು ಮನಸೋ ಇಚ್ಛೆ ಥಳಿಸಿದರು. ಸ್ಥಳದಲ್ಲೇ ಕುಸಿದು ಬಿದ್ದ ಇಮ್ರಾನ್ ರಾತ್ರಿ ಸುಮಾರು 8.30ರ ವೇಳೆಗೆ ಅಸುನೀಗಿದ ಎನ್ನುವುದನ್ನು ಪೊಲೀಸರೇ ತಿಳಿಸಿದ್ದಾರೆ. ಈ ರೀತಿ ಮಾಡುವುದು ತಾಲಿಬಾನ್ ಸಂಸ್ಕೃತಿಯಲ್ಲವೇ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಿಂದೂಗಳಲ್ಲಿ ಈ ರೀತಿ ಆಗಿದ್ದರೆ ಬುದ್ಧಿಜೀವಿಗಳು, ಬುದ್ಧಿಜೀವಿ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಟಿವಿ ಚಾನಲ್ಗಳು ದಿನವಿಡಿ ಈ ಸುದ್ದಿಯನ್ನು ಪ್ರಸಾರ ಮಾಡಿ, ಚರ್ಚೆ ನಡೆಸುತ್ತಿದ್ದವು. ಮುಸ್ಲಿಮರಲ್ಲಿ ನಡೆದ ಈ ಕೃತ್ಯವೀಗ ಕಾಟಾಚಾರಕ್ಕೆಂಬಂತೆ ಒಂದಿಬ್ಬರನ್ನು ಬಂಧಿಸಿ, ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ.
ರೊಚ್ಚಿಗೆದ್ದು ಹೊಡೆದು ಸಾಯಿಸಲಾದ ಇಮ್ರಾನ್ನ ಮೃತದೇಹವಿದು.

ನೀರುಣಿಸುವ ಸುಲ್ತಾನ

ಬಿಸಿಲಿನ ಧಗೆಯಿಂದ ಜನರೆಂಬೋ ಜನರೇ ದಾಹದಿಂದ ದಣಿದು ಹೋಗುತ್ತಿದ್ದಾರೆ. ಅಂಥದರಲ್ಲಿ ಪ್ರಾಣಿ-ಪಕ್ಷಿಗಳ ಸ್ಥಿತಿ ಬಣ್ಣಿಸಲು ಸಾಧ್ಯವೇ? ಆದರೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆರೋಗ್ಯ ಇಲಾಖೆ ಚಾಲಕರೊಬ್ಬರು ಪಕ್ಷಿಗಳಿಗೆ ನೀರುಣಿಸುವ ಕೆಲಸ ನಡೆಸುತ್ತ ಸ್ಥಳೀಯರ ಗಮನ ಸೆಳೆದಿದ್ದಾರೆ.
ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬರುವ ಹಕ್ಕಿಗಳಿಗೆ ಹನಿ ನೀರುಣಿಸುವ ಕಾರು ಚಾಲಕ ಸುಲ್ತಾನ ಅವರ ಪಕ್ಷಿಗಳ ಕಾಳಜಿ ನಿಜಕ್ಕೂ ಪ್ರಶಂಸನಾರ್ಹ.
ನೀರು ಸಿಕ್ಕುವುದರಿಂದ ಜಿಲ್ಲಾಡಳಿತ ಭವನದಲ್ಲಿ ಹಕ್ಕಿಗಳ ಕಲರವ ದಿನವಿಡೀ ಕಾಣಸಿಕ್ಕುವಂತಾಗಿದೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ಪಕ್ಷಿಗಳ ಚಿಲಿಪಿಲಿ ಸದ್ದು ಮನಕ್ಕೆ ಮುದ ನೀಡುತ್ತಲಿದೆ. ಇದಕ್ಕೆ ಕಾರಣವೇ ಸುಲ್ತಾನ.
ಸುಲ್ತಾನ ಪ್ರತಿದಿನವೂ ಜಿಲ್ಲಾಡಳಿತ ಭವನದ ಸುತ್ತಲಿರುವ ಗಿಡಗಳ ಬುಡದಲ್ಲಿ ಇರಿಸಲಾದ ಮಣ್ಣಿನ ಮಗಿಗಳಿಗೆ ನೀರು ಹಾಕುತ್ತಾರೆ.
2012ರಲ್ಲಿ ಜಿಪಂ ಸಿಇಒ ಆಗಿದ್ದ ರಾಜಾರಾಂ ಅವರು ಪಕ್ಷಿಗಳಿಗಾಗಿ ನೀರುಣಿಸುವ ಕಾರ್ಯಕ್ಕೆ ನಾಂದಿ ಹಾಡಿದವರು. ಈಗ ಬೇಸಿಗೆ ಬಿಸಿಲಿನ ಧಗೆಯಷ್ಟೇ ಇದೆ. ಆಗ ಭೀಕರ ಬರ ಹಾಗೂ ಬಿಸಿಲ ಬೇಗೆಯಿಂದ ಜಾನುವಾರುಗಳಷ್ಟೇ ಜನರೂ ತತ್ತರಿಸಿದ್ದರು. ಜಿಲ್ಲೆಯ ಎಲ್ಲೆಡೆ ನೀರಿನ ಸರಬರಾಜಿನತ್ತ ಗಮನ ಹರಿಸುತ್ತಿದ್ದ ರಾಜಾರಾಂ ಅವರು, ಒಂದು ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೀರಿಗಾಗಿ ತಡಕಾಡುತ್ತಿದ್ದ ಪಕ್ಷಿಗಳ ಕಿತ್ತಾಟ ಕಂಡು ಅವರಣದಲ್ಲಿ ಬೆಳೆದ ಗಿಡಮರಗಳಿಗೆ ಮಣ್ಣಿನ ಮಡಕೆಗಳನ್ನು ಕಟ್ಟಿ ಅದರಲ್ಲಿ ನೀರು ಹಾಕಿ ಪಕ್ಷಗಳಿಗೆ ನೀರು ಒದಗಿಸುತ್ತಿದ್ದರು.
ಈ ಜವಾಬ್ದಾರಿಯನ್ನು ಆರೋಗ್ಯ ಇಲಾಖೆ ಚಾಲಕ ಸುಲ್ತಾನ ಮಹಮ್ಮದ್ ಅವರು ಅಂದಿನಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ಗಿಡಮರಗಳಲ್ಲಿ ತೂಗು ಬಿಟ್ಟ ಮಡಕೆಗಳಿಗೆ ನೀರು ಹಾಕುವ ಕಾಯಕ ಮುಂದುವರಿಸಿಕೊಂಡು ಬಂದಿದ್ದಾರೆ. ಈ ವರ್ಷ ಸುಲ್ತಾನ ಸುಮಾರು 100 ಹೊಸ ಮಣ್ಣಿನ ಮಗಿಗಳನ್ನು ತಂದು ಅದಕ್ಕೆ ಬಣ್ಣದ ಚಿತ್ತಾರ ಬಿಡಿಸಿ ಗಿಡಮರಗಳಿಗೆ ತೂಗು ಬಿಟ್ಟಿದ್ದಾರೆ. ಅವುಗಳಿಗೆಲ್ಲ ದಿನವೂ ನೀರನ್ನು ತುಂಬಿಸಿ ಪಕ್ಷಿಗಳ ದಾಹವನ್ನು ತೀರಿಸುತ್ತಿದ್ದಾರೆ. ಈಗಿರುವ ಮಗಿಗಳು ಸಾಲವು ಎನ್ನಿಸಿದೆ. ಇನ್ನೂ 50 ಮಗಿಗಳು ಮುಂದಿನ ವಾರ ಬರುತ್ತವೆ ಎನ್ನುತ್ತಾರೆ ಸುಲ್ತಾನ.
ಒಂದು ಮಣ್ಣಿನ ಮಗಿಗೆ 20 ರೂ., ವೆಚ್ಚವಾಗುತ್ತದೆ. 150 ರೂ.ಗೆ ಕಾಲು ಕಿಲೋ ತಂತಿ ತಂದು ಎಲ್ಲ ಮಣ್ಣಿನ ಮಗಿಗಳನ್ನು ಗಿಡ-ಮರಗಳಿಗೆ ತೂಗು ಹಾಕಿದ್ದೇನೆ. ಸತತ ಮೂರು ವರ್ಷಗಳಿಂದ ಇದು ನನ್ನದೇ ಕೆಲಸ ಎಂದು ತಿಳಿದು ಮಾಡುತ್ತಿದ್ದೇನೆ ಎನ್ನುತ್ತಾರೆ.

ಬಿಸಳನೂರಲ್ಲಿ ಯುಗಾದಿಗೆ ಮಾಡುತ್ತಾರೆ ರಾಗಿ ಶ್ಯಾವಿಗೆ ಸವಿ

ಹೊಸ ವಸಂತದ ಚಿಲುಮೆಯನ್ನು ಹೊತ್ತು ತರುವ ಯುಗಾದಿ ಸಂಭ್ರಮಕ್ಕೆ ಶ್ಯಾವಿಗೆ ಸವಿ ಅಗತ್ಯ. ಅದರಲ್ಲೂ ಯುಗಾದಿಯ ಸಡಗರಕ್ಕೆಂದೇ ಸಿದ್ಧಗೊಳ್ಳುವ ಶ್ಯಾವಿಗೆ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದ್ದು, ಇದೊಂದು ಸಾಂಪ್ರದಾಯಿಕ ಭೋಜನ ಪದ್ದತಿಯಾಗಿದೆ. ಇಂದಿನ ಆಧುನಿಕತೆಯ ಮಧ್ಯದಲ್ಲೂ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬಿಳಸನೂರಿನಲ್ಲಿ ಯುಗಾದಿ ಹಬ್ಬದಂದು ಗ್ರಾಮಸ್ಥರೆಲ್ಲಾ ಒಟ್ಟಾಗಿ ರಾಗಿ ಶ್ಯಾವಿಗೆ ಮಾಡಿಕೊಂಡು ಊಟ ಮಾಡುವುದು ಮಾಸದ ಗ್ರಾಮೀಣ ಸೊಗಡಿಗೆ ಸಾಕ್ಷಿಯಾಗಿದೆ.
ಹಿಂದೆ ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಓಣಿಯ ಹೆಣ್ಣುಮಕ್ಕಳೆಲ್ಲಾ ಒಟ್ಟಾಗಿ, ಶ್ಯಾವಿಗೆ ಮಣೆ, ಕೋಲುಗಳನ್ನು ಸ್ವಚ್ಛಗೊಳಿಸಿಕೊಂಡು ಗೋದಿ ಹಿಟ್ಟಿನ ಕಣಕ ಮಾಡಿಕೊಂಡು, ಗೌಡರ ಮನೆಯ ವಿಶಾಲ ಕಟ್ಟೆ ಸೇರಿದಂತೆ ಗ್ರಾಮದ ನಾಲ್ಕ್ತ್ರೈದು ಕಡೆ ಶ್ಯಾವಿಗೆ ಉದ್ದುತಿದ್ದರು. ಸಾಲಾಗಿ ಹಾಕಿದ ದೊಡ್ಡ ಮಣೆಗಳ ಮೇಲೆ ಕುದುರೆ ಸವಾರರಂತೆ ಕುಳಿತು ಶ್ಯಾವಿಗೆ ಉದ್ದುವಾಗ ಹೊಮ್ಮುವ ಬಳೆಗಳ ಸೊಗಸಾದ ನಾದ, ಅಜ್ಜಿಯರ ಹಾಡು, ಕಥೆ, ಮಹಿಳೆಯರ ಪೋಲಿ ಮಾತು, ಅವರಿವರ ಕುರಿತು ಅಂತೆ-ಕಂತೆಗಳ ಸಂತೆಯೊಂದಿಗೆ ದಾರದಂತೆ ತೆಳ್ಳನೆಯ ಬಿಳಿ ಶ್ಯಾವಿಗೆ ನೇಯಲಾಗುತ್ತಿತ್ತು. ಉದ್ದನೆಯ ಕೋಲಿನ ಮೇಲೆ ನೇಯ್ದ ಶ್ಯಾವಿಗೆಯನ್ನು, ಸಮೀಪದ ಕಣದಲ್ಲಿ ಒಣಗಿಸುವುದು ಮಕ್ಕಳ ಜವಾಬ್ದಾರಿ. ಹಕ್ಕಿ-ಪಕ್ಷಿ, ದನ-ಕರು, ಗಾಳಿ-ಧೂಳಿಂದ ರಕ್ಷಿಸಲು ಕೋಲು, ದಬ್ಬಿ, ಹಿಡಿದ ಮಕ್ಕಳ ಗುಂಪಿಗೂ ಇದೊಂದು ಸಂಭ್ರಮದ ಕಾಯಕವಾಗುತ್ತಿತ್ತು. ದರೆ, ಮಷೀನ್ ಶ್ಯಾವಿಗೆ ಬಂದ ಮೇಲೆ ಕಷ್ಟದ ಉದ್ದು ಶ್ಯಾವಿಗೆ ತಯಾರಿಕೆ ಕೈ ಬಿಡಲಾಗಿದೆ. ಮೊದಲು ದಾವಣಗೆರೆಗೆ ತೆರಳಿ ಶ್ಯಾವಿಗೆ ತರಬೇಕಿತ್ತು. ಈಗಂತೂ ಎಲ್ಲಾ ಕಿರಾಣಿ ಸ್ಟೋರ್ಗಳಲ್ಲೂ ರೆಡಿಮೇಡ್ ಶ್ವಾವಿಗೆ ಸುಲಭವಾಗಿ ಲಭ್ಯವಿದ್ದು, ಶ್ಯಾವಿಗೆ ಮಣೆ-ಕೋಲು ಕಣ್ಮರೆಯಾಗಿವೆ. ಜೊತೆಗೆ, ಸಮಯದ ಕೊರತೆ, ಒತ್ತಡದ ಜೀವನ ಪದ್ಧತಿಯಿಂದ ವಾರಗಟ್ಟಲೆ ಸಮಯ ಬೇಡುತ್ತಿದ್ದ ಉದ್ದು ಶ್ಯಾವಿಗೆಗೆ ಬ್ರೇಕ್ ಬಿದ್ದರೂ, ಒಂದೇ ದಿನದಲ್ಲಿ ತಯಾರಿಸಬಹುದಾದ ಒತ್ತು ಶ್ಯಾವಿಗೆ ತಯಾರಿ ಮಾತ್ರ ಹಾಗೇ ಉಳಿದು ಬಂದಿದೆ.
ಶ್ಯಾವಿಗೆ ತಿನ್ನಲು ರುಚಿ:
ದೊಡ್ಡ ಒತ್ತು ಮಣೆಯಲ್ಲಿ ನೇಯುವ ರಾಗಿ ಹಿಟ್ಟಿನ ಈ ಶ್ಯಾವಿಗೆಯನ್ನು ಬೇವು-ಬೆಲ್ಲ (ಬೆಲ್ಲದ ಹಾಲು) ಬೆರೆಸಿಕೊಂಡು ತಿನ್ನುವುದು ಬಾಯಿಗೆ ಬಲು ರುಚಿ, ದೇಹಕ್ಕೂ ತಂಪು, ಜೀರ್ಣ ಕ್ರಿಯೆಗಂತೂ ಸಿದ್ಧ ಔಷಧ. ಹಬ್ಬಕ್ಕೆ ಮೂರ್ನಾಲ್ಕು ದಿನವಿದ್ದಾಗ ರಾಗಿ ತಂದು ಸ್ವಚ್ಛಗೊಳಿಸಿ, ಅರ್ಧ ದಿನ ನೆನೆಸಿ, ಅರ್ಧ ದಿನ ನೆರಳಲ್ಲಿ ಒಣಗಿಸಿ, ಗಿರಿಣಿಯಲ್ಲಿ ಹಿಟ್ಟು ಮಾಡಿಸಿದಾಗ ಅದಕ್ಕೆ ಗ್ರಾಮ್ಯ ಭಾಷೆಯಲ್ಲಿ ವಡ್ಡರಾಗಿ ಹಿಟ್ಟು ಎನ್ನಲಾಗುತ್ತದೆ. ಹಬ್ಬದ ದಿನದಂದು ದೊಡ್ಡ ಪಾತ್ರೆಯ ಕುದಿಯುವ ನೀರಿನ ಮೇಲೆ ಹಿಟ್ಟು ಸುರುವಿ, ಮುಚ್ಚಳ ಮುಚ್ಚಿ ಕುದಿ ನೀರು ಹಾಗೂ ಆವಿಯಲ್ಲಿ ಬೇಯಿಸಲಾಗುತ್ತದೆ. ನಂತರ ಹೊರತೆಗೆದು ದೊಡ್ಡ ಮುಟ್ಟಿಗೆ ಗಾತ್ರದ ಉಂಡೆ ಮಾಡಿ, ಅವುಗಳನ್ನು ಮತ್ತೆ ನೀರಿನಲ್ಲಿ ಹದವಾಗಿ ಬೇಯಿಸಿ, ಅವುಗಳಿಗೆ ಸಿದ್ದಪ್ಪ ಎಂದು ಕರೆಯಲಾಗುತ್ತದೆ. ಸಿದ್ದಪ್ಪಗಳನ್ನು (ಉಂಡೆ) ಮರದ ಮಧ್ಯ ಭಾಗದಲ್ಲಿದ್ದ ಅಚ್ಚಿನಲ್ಲಿ ತುಂಬಿ ಮೇಲಿರುವ ಮರದ ಹಿಡಿಕೆಯನ್ನು ಬಿಗಿಯಾಗಿ ಕೆಳಗೆ ಒತ್ತಿದಾಗ, ಬಿಸಿ ಬಿಸಿ ಶ್ಯಾವಿಗೆಯು ಎಳೆ ಎಳೆಯಾಗಿ ತಳದಲ್ಲಿ ಬೀಳುತ್ತವೆ.
ವಿಶಿಷ್ಠ ರಾಗಿಯ ಒತ್ತು ಶ್ಯಾವಿಗೆಯನ್ನು, ದೂರದೂರಿನ ಮಗಳ ಮನೆಗೆ, ಬಂಧುಗಳ ಮನೆಗೂ ಒಯ್ದು ಕೊಡಲಾಗುತ್ತದೆ. ಯಾವುದೇ ಜಾತಿ-ಅಂತಸ್ತು ಬೇಧವಿಲ್ಲದೆ ಗ್ರಾಮಸ್ಥರೆಲ್ಲಾ ಒಟ್ಟಾಗಿ ತಯಾರಿಸಿಕೊಳ್ಳುವ ಸಮೂಹಿಕ ಒತ್ತು ಶ್ಯಾವಿಗೆ ಸಾಮರಸ್ಯದ ಸಂಕೇತವಾಗಿದೆ.