ಶಿರಸಿಯ ಸರಕಾರಿ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಕಟ್ಟಲು ಕ್ಯೂ

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ಕಟ್ಟಲು ಅರ್ಧ ದಿನ ಸರತಿಯಲ್ಲಿ ಬ್ಯಾಂಕ್ ಮುಂದೆ ಕ್ಯೂ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಇದು ಪಾಲಕರ ಅಸಮಧಾನಕ್ಕೆ ಕಾರಣವಾಗಿದೆ.
ಸರಕಾರಿ ಕಾಲೇಜಿನಲ್ಲಿ ಈ ಬಾರಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಿದ್ದು, ಪ್ರಥಮ ತರಗತಿಗೇ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಹತ್ತು ಕಚೇರಿ ಸಿಬ್ಬಂದಿ ಇರಬೇಕಿದ್ದರೂ ಕೇವಲ ಇಬ್ಬರೇ ಇದ್ದು, ಉಪನ್ಯಾಸಕರ ಸಹಕಾರದೊಂದಿಗೆ ಕಚೇರಿ ಕೆಲಸ, ಪ್ರವೇಶ ಕಾರ್ಯ ನಡೆಸಲಾಗುತ್ತಿದೆ. ಈ ಮಧ್ಯೆ ಕಾಲೇಜು ಶುಲ್ಕ ಕಟ್ಟಲು, ಪ್ರವೇಶ, ಮರು ಪ್ರವೇಶ ಬಯಸಿದ ವಿದ್ಯಾರ್ಥಿಗಳು ಬ್ಯಾಂಕ್ನ ಮುಂದೆ ಕಾಯಬೇಕಾಗಿದೆ. ಕಾಲೇಜು ಅಭಿವೃದ್ಧಿ ಶುಲ್ಕ 400 ರೂ.ಗಳನ್ನು ಕೆನರಾ ಬ್ಯಾಂಕ್ನಲ್ಲೂ, ಕಾಲೇಜು ಬೋಧನಾ ಹಾಗೂ ಇತರ ಶುಲ್ಕವನ್ನು ಸಾವಿರ ಹಾಗೂ ಅದಕ್ಕೂ ಮೇಲ್ಪಟ್ಟ ಮೊತ್ತ ಇದಾಗಿದ್ದು ಎಸ್ಬಿಎಂಗೆ ಕಟ್ಟಬೇಕಾಗಿದೆ.ಾಲೇಜಿನಲ್ಲೇ ಒಂದು ಕೌಂಟರ್ ತೆರೆದು ವಿದ್ಯಾರ್ಥಿಗಳಿಗೆ ನೆರವು ಮಾಡಿಕೊಡಬಹುದಿತ್ತು ಎಂಬ ಸಲಹೆ ವಿದ್ಯಾರ್ಥಿಗಳು ಹಾಗೂ ಪಾಲಕರದ್ದು. ಇದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದಿತ್ತು.

ರಾಜ್ಯಕ್ಕೂ ಬೇಕಿದೆ ‘ಅಪ್ಟಾ’ ಮಾದರಿ ಮಾರುಕಟ್ಟೆ

ಕೃಷಿ ಉತ್ಪನ್ನಗಳು ರೈತರಿಂದ ಮಾರುಕಟ್ಟೆಗೆ ಬರುತ್ತಿವೆ ಎನ್ನುವಾಗಲೇ ಬೆಲೆ ಕುಸಿದಿರುತ್ತದೆ. ಇದಕ್ಕೆ ಪರ್ಯಾಯ ಎನ್ನುವಂತೆ ತಮಿಳುನಾಡಿದ ನಾಗಕೊಯಿಲ್ನಲ್ಲಿ ರೈತರು-ವ್ಯಾಪಾರಸ್ಥರು ಸೇರಿ ಮಾದರಿ ಮಾರುಕಟ್ಟೆ ರೂಪಿಸಿದ್ದು, ಅದೇ ಮಾದರಿ ಮಾರುಕಟ್ಟೆ ಬಗ್ಗೆ ರಾಜ್ಯದಲ್ಲೂ ಗಂಭೀರ ಚಿಂತನೆ ನಡೆಯಬೇಕಾಗಿದೆ.
ನಾಗರಕೊಯಿಲ್ನಲ್ಲಿ ಕೃಷಿ ಉತ್ಪನ್ನಗಳ ಉತ್ಪಾದಕರು ಮತ್ತು ವ್ಯಾಪಾರಸ್ಥರ ಅಸೋಸಿಯೇಶನ್ (ಅಪ್ಟಾ) ತನ್ನದೇ ಮಾರುಕಟ್ಟೆ ಸೃಷ್ಟಿಸಿಕೊಂಡಿದೆ. ರೈತರಿಗೂ ನ್ಯಾಯಯುತ ಬೆಲೆ ಸಿಗಬೇಕು, ಗ್ರಾಹಕರಿಗೂ ದುಬಾರಿ ಎನ್ನಿಸದಂತೆ ವಸ್ತುಗಳು ದೊರೆಯಬೇಕು, ವ್ಯಾಪಾರಿಗಳೂ ಬದುಕಬೇಕು ಎಂಬ ನೆಲೆಗಟ್ಟಿನಲ್ಲಿ ಮಾರುಕಟ್ಟೆ ಕಳೆದ ಆರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆರಂಭವಾದ ಆರು ವರ್ಷಗಳಲ್ಲಿಯೇ ಅಪ್ಟಾ ರೈತರು, ವ್ಯಾಪಾರಸ್ಥರು ಮುಖ್ಯವಾಗಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದು, ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ನಿತ್ಯವೂ ಇಲ್ಲಿ ಆಹಾರಧಾನ್ಯ, ತರಕಾರಿ, ಹಣ್ಣು-ಹೂಗಳು ಮಾರಾಟವಾಗುತ್ತಿದ್ದು, ಅಪ್ಟಾ ಅಸೋಸಿಯೇಶನ್ನಿಂದ ಗ್ರಾಹಕರಿಗಾಗಿ ಮಾರುಕಟ್ಟೆಗೆ ಬರಲು ವಿವಿಧ ಕಡೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಅಪ್ಟಾ ಹಠಾತ್ತನೇ ರೂಪುಗೊಂಡಿದ್ದಲ್ಲ ಅಥವಾ ಕೆಲ ದೊಡ್ಡ ವ್ಯಾಪಾರಿಗಳ ಒಕ್ಕೂಟವಾಗಲಿ, ಯಾವುದೇ ಬಹುರಾಷ್ಟ್ರೀಯ ಕಂಪನಿಯಾಗಲಿ ಸೃಷ್ಟಿಸಿದ್ದಲ್ಲ. ಬದಲಾಗಿ ಆಡಳಿತದ ನಿರ್ಲಕ್ಷಕ್ಕೆ ಪ್ರತಿರೋಧವಾಗಿ, ಉತ್ತಮ ವ್ಯವಸ್ಥೆ ನಿರ್ಮಿಸುವ ಹೋರಾಟ ರೂಪದಲ್ಲಿ ಅಪ್ಟಾ ಅಸ್ತಿತ್ವಕ್ಕೆ ಬಂದಿದೆ.
ನಾಗರಕೊಯಿಲ್ ಪೌರಾಡಳಿತ ಸಂಸ್ಥೆಗೆ ಸೇರಿದ ಸುಮಾರು 100 ವರ್ಷ ಹಳೆಯದಾದ ಮಾರುಕಟ್ಟೆ ಇದ್ದು, ಇಡೀ ಮಾರುಕಟ್ಟೆಗೆ ಒಂದೇ ನಳದ ಸಂಪರ್ಕವಿತ್ತು. ಮಾರುಕಟ್ಟೆಯಲ್ಲಿ ನಿತ್ಯವೂ ಕೋಟಿ ರೂ.ಗಳವರೆಗೆ ವಹಿವಾಟು ನಡೆಯುತ್ತಿದ್ದರೂ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು, ರೈತರಿಗೆ ಸಮರ್ಪಕ ಬೆಲೆ ದೊರೆಯುವಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ದೊರೆಯದಾಗಿತ್ತು. ಆಗ ಸಮಾನ ಮನಸ್ಕ ರೈತರು-ವ್ಯಾಪಾರಸ್ಥರು ಸೇರಿಕೊಂಡು ಚರ್ಚಿಸಿದ ಫಲವಾಗಿಯೇ ಅಪ್ಟಾ ಜನ್ಮ ತಳೆದಿದೆ. ಅಪ್ಟಾ ರಚನೆ ಸುಲಭವೇನೂ ಆಗಿರಲಿಲ್ಲ. ರೈತರು, ವ್ಯಾಪಾರಸ್ಥರು ಎರಡೂ ಕಡೆಯವರಿಗೆ ನ್ಯಾಯಸಮ್ಮತ ಎನ್ನಿಸುವ ಸ್ಥಿತಿ ನಿರ್ಮಾಣ ಮಾಡಬೇಕಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿತ್ತು. ಅನೇಕ ಸಾಮಾಜಿಕ ಚಿಂತಕರು, ರೈತ ಮುಖಂಡರು ಸೇರಿ ಈ ಕಾರ್ಯ ಕೈಗೊಂಡಿದ್ದರು. ಆರಂಭದಲ್ಲಿ 54 ಸದಸ್ಯರು ಅಂದಾಜು 25 ಸಾವಿರ ರೂ.ಗಳ ಶೇರಿನೊಂದಿಗೆ ಅಪ್ಟಾ ಪ್ರಕ್ರಿಯೆ ಆರಂಭಿಸಿತು. ಸುಮಾರು 11.67 ಎಕರೆ ಭೂಮಿ ಖರೀದಿಸಿ ಮಾರುಕಟ್ಟೆ ರೂಪಿಸಲಾಯಿತು.ವೆ 800 ಮಳಿಗೆಗಳು:
ಈಗಿವೆ 800 ಮಳಿಗೆಗಳು:
ಪ್ರಸ್ತುತ ಅಪ್ಟಾ ಮಾರುಕಟ್ಟೆಯಲ್ಲಿ ಸುಮಾರು 800 ಮಳಿಗೆಗಳು ವಹಿವಾಟು ನಡೆಸುತ್ತಿವೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಿದ್ದು, ವ್ಯಾಪಾರಿಗಳು ಹಾಗೂ ರೈತರ ನಡುವೆ ವಹಿವಾಟು ನಡೆಯುತ್ತದೆ. ರೈತರು ಹಾಗೂ ವ್ಯಾಪಾರಿಗಳಿಬ್ಬರಿಗೂ ಅನ್ಯಾಯವಾಗದಂತೆ ಅಸೋಸಿಯೇಶನ್ ದರ ನಿಗದಿಪಡಿಸಿಸುತ್ತದೆ. ಮುಂದೆ ಅದೇ ಸ್ಥಳದಲ್ಲಿ ಗ್ರಾಹಕರ ಖರೀದಿಗೆ ಅವಕಾಶ ದೊರೆಯುತ್ತದೆ.ಪ್ಟಾದಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಒಟ್ಟು 3952 ಸದಸ್ಯರನ್ನು ಅಪ್ಟಾ ಹೊಂದಿದ್ದು, ಮಾರುಕಟ್ಟೆ ಮೇಲುಸ್ತುವಾರಿಯನ್ನು ಅಸೋಸಿಯೇಶನ್ ನಿರ್ವಹಿಸುತ್ತಿದೆ. ಅಪ್ಟಾ ಮಾರುಕಟ್ಟೆಯಲ್ಲಿ ಆಹಾರ ಧಾನ್ಯ, ತರಕಾರಿ, ಹಣ್ಣು, ಹೂಗಳು ಸೇರಿದಂತೆ ನಿತ್ಯವೂ ಸುಮಾರು 300 ಮೆಟ್ರಿಕ್ ಟನ್ನಷ್ಟು ಕೃಷಿ ಉತ್ಪನ್ನಗಳು ಮಾರಾಟವಾಗುತ್ತಿವೆ. ಈ ಮಾರುಕಟ್ಟೆ ತರಾವರಿ ಬಾಳೆ ಹಣ್ಣು ಮಾರಾಟಕ್ಕೆ ಖ್ಯಾತಿ ಪಡೆದಿದೆ.