ಶಿರಸಿಯ ಸರಕಾರಿ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಕಟ್ಟಲು ಕ್ಯೂ

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಪ್ರಥಮ ದರ್ಜೆ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ಕಟ್ಟಲು ಅರ್ಧ ದಿನ ಸರತಿಯಲ್ಲಿ ಬ್ಯಾಂಕ್ ಮುಂದೆ ಕ್ಯೂ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ. ಇದು ಪಾಲಕರ ಅಸಮಧಾನಕ್ಕೆ ಕಾರಣವಾಗಿದೆ.
ಸರಕಾರಿ ಕಾಲೇಜಿನಲ್ಲಿ ಈ ಬಾರಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯಬೇಕಿದ್ದು, ಪ್ರಥಮ ತರಗತಿಗೇ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಹತ್ತು ಕಚೇರಿ ಸಿಬ್ಬಂದಿ ಇರಬೇಕಿದ್ದರೂ ಕೇವಲ ಇಬ್ಬರೇ ಇದ್ದು, ಉಪನ್ಯಾಸಕರ ಸಹಕಾರದೊಂದಿಗೆ ಕಚೇರಿ ಕೆಲಸ, ಪ್ರವೇಶ ಕಾರ್ಯ ನಡೆಸಲಾಗುತ್ತಿದೆ. ಈ ಮಧ್ಯೆ ಕಾಲೇಜು ಶುಲ್ಕ ಕಟ್ಟಲು, ಪ್ರವೇಶ, ಮರು ಪ್ರವೇಶ ಬಯಸಿದ ವಿದ್ಯಾರ್ಥಿಗಳು ಬ್ಯಾಂಕ್ನ ಮುಂದೆ ಕಾಯಬೇಕಾಗಿದೆ. ಕಾಲೇಜು ಅಭಿವೃದ್ಧಿ ಶುಲ್ಕ 400 ರೂ.ಗಳನ್ನು ಕೆನರಾ ಬ್ಯಾಂಕ್ನಲ್ಲೂ, ಕಾಲೇಜು ಬೋಧನಾ ಹಾಗೂ ಇತರ ಶುಲ್ಕವನ್ನು ಸಾವಿರ ಹಾಗೂ ಅದಕ್ಕೂ ಮೇಲ್ಪಟ್ಟ ಮೊತ್ತ ಇದಾಗಿದ್ದು ಎಸ್ಬಿಎಂಗೆ ಕಟ್ಟಬೇಕಾಗಿದೆ.ಾಲೇಜಿನಲ್ಲೇ ಒಂದು ಕೌಂಟರ್ ತೆರೆದು ವಿದ್ಯಾರ್ಥಿಗಳಿಗೆ ನೆರವು ಮಾಡಿಕೊಡಬಹುದಿತ್ತು ಎಂಬ ಸಲಹೆ ವಿದ್ಯಾರ್ಥಿಗಳು ಹಾಗೂ ಪಾಲಕರದ್ದು. ಇದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬಹುದಿತ್ತು.