ರಾಘವೇಶ್ವರರ ಚಾತುರ್ಮಾಸ್ಯ - ಧಾರ್ಮಿಕ ಸಂಭ್ರಮಕ್ಕೆ ಕೆಕ್ಕಾರು ಸಜ್ಜು

ಲಕ್ಷಾಂತರ ಜನರಿಗೆ ಆಧ್ಯಾತ್ಮ ಗುರುವಾಗಿರುವ ರಾಘವೇಶ್ವರ ಭಾರತೀ ಶ್ರೀಗಳ ಜಯ ಸಂವತ್ಸರದ ಚಾತುರ್ಮಾಸ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕೆಕ್ಕಾರು ಸಜ್ಜಾಗಿದೆ. ಇಲ್ಲಿನ ರಘೋತ್ತಮ ಮಠದಲ್ಲಿ ಜು.12ಕ್ಕೆ ಆರಂಭವಾಗಿ ಸೆ.9 ಕ್ಕೆ ಮಂಗಲವಾಗಲಿದೆ. 70 ವರ್ಷಗಳ ನಂತರ ಕೆಕ್ಕಾರಿಗೆ ಚಾತುರ್ಮಾಸ್ಯ ವ್ಯವಸ್ಥೆಗೊಳಿಸುವ ಅವಕಾಶ ಸಿಕ್ಕಿದೆ. ಶ್ರೀಗಳ ವಾಸ್ತವ್ಯಕ್ಕೆಂದೇ 1.5 ಕೋಟಿ ರೂ. ವೆಚ್ಚದಲ್ಲಿ ನೂತನ ವಿದ್ಯಾಮಂದಿರ ನಿರ್ಮಾಣವಾಗಿದ್ದು, ಜು.11 ರಂದು ಶ್ರೀಗಳಿಗೆ ಸಮರ್ಪಣೆಯಾಗಲಿದೆ.ಂದು ಅಪರಾಹ್ನ 4 ಗಂಟೆಯ ನಂತರ ಶ್ರೀಗಳು ಚಾತುರ್ಮಾಸ್ಯ ಆಚರಣೆಗೆ ಕೆಕ್ಕಾರಿಗೆ ಆಗಮಿಸಲಿದ್ದು, ಅಂದೇ ಕಬ್ಬಿಣ, ಕಾಂಕ್ರೀಟ್ ಬಳಸದ, ಕೆಂಪುಕಲ್ಲು ಮತ್ತು ಕಟ್ಟಿಗೆಯಿಂದ ನಿರ್ಮಾಣವಾದ 4600 ಚದರಡಿ ವಿಶಾಲವಾದ, ವೃತ್ತಾಕಾರದ ಅಡಿಪಾಯದ ಮೇಲೆ ನಿಂತ ವಿದ್ಯಾಮಂದಿರ ಗುರುಗಳಿಗೆ ಸಮರ್ಪಣೆಯಾಗಲಿದೆ. ವಿಶೇಷ ಮೆರವಣಿಗೆಯೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಗುವುದು.
ದಿನಕ್ಕೊಂದರಂತೆ ನಿತ್ಯವೂ ಭಾರತಿ ಪ್ರಕಾಶನದಿಂದ ಋಷಿಮುನಿಗಳ, ಪುಣ್ಯಪುರುಷರ ಕುರಿತು ಪುಸ್ತಕಗಳು ಬಿಡುಗಡೆಯಾಗಲಿವೆ. ಶ್ರೀಗಳಿಂದ ಭಜಗೋವಿಂದಂ ಸ್ತೋತ್ರದ ಪ್ರವಚನವಿದೆ. ಜು.19 ರಿಂದ 25 ರವರೆಗೆ ಮತ್ತು ಆ.18 ರಿಂದ 24 ರವರೆಗೆ ರಾಮಕಥಾ ಪ್ರವಚನ ನಡೆಯಲಿದೆ. ಜಯ ಚಾತುರ್ಮಾಸ್ಯ ಸಮಿತಿ ಯಾವುದಕ್ಕೂ
ಕೊರತೆಯಾದಂತೆ ಪೂರ್ವಸಿದ್ಧತೆ ಮುಗಿಸಿದೆ. ಭಗವಂತನ ಯೋಗ ನಿದ್ರಾವಧಿಯ ನಾಲ್ಕು ತಿಂಗಳು ಋಷಿಮುನಿಗಳು ಚಾತುರ್ಮಾಸ್ಯ ವ್ರತಾಚರಣೆ ನಡೆಸಿ ಲೋಕಕಲ್ಯಾಣದ ಚಿಂತನೆ ಮಾಡುತ್ತಾರೆ. ಗೃಹಸ್ಥರು ಈ ಪುಣ್ಯ ಕಾಲದಲ್ಲಿ ಗುರುವಿನ ಮಾರ್ಗದರ್ಶನದಲ್ಲಿ ಭಗವಂತನ ಕೃಪೆಗೆ ಪಾತ್ರರಾಗುವಂತಹ ಚಟುವಟಿಕೆಗಳನ್ನು ನಡೆಸಬೇಕು ಅನ್ನುತ್ತದೆ ಶಾಸ.