ಹಸುವಿನ ಹೊಟ್ಟೇಲಿತ್ತು 2 ಕೆ.ಜಿ.ಯಷ್ಟು ಕೊಬ್ಬಿನ ಗಂಟು

ಹಸುವಿನ ಗರ್ಭಕೋಶ ಹಾಗೂ ಮೂತ್ರಕೋಶದ ನಡುವಿದ್ದ ಸುಮಾರು 2 ಕೆ.ಜಿ. ಕೊಬ್ಬಿನ ಗಂಟುಗಳನ್ನು ಸುಮಾರು ಒಂದೂವರೆ ತಾಸು ಅವಿರತ ಶಸಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ಪಶುವೈದ್ಯ ಡಾ ಪಿ.ಎಸ್.ಹೆಗಡೆ ಹಾಗೂ ಡಾ ನರಸಿಂಹ ಮಾರ್ಕಾಂಡೆ ಯಶಸ್ವಿಯಾಗಿದ್ದಾರೆ.ತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬೆಳೆನಳ್ಳಿಯ ಗೋಪಾಲ ಭಟ್ಟರ ಕೃಷ್ಣಾವ್ಯಾಲಿ ತಳಿಯ 5 ವರ್ಷದ ಹಸು ಕೃತಕ ಗರ್ಭಧಾರಣೆ ಮಾಡಿಸಿ 13 ತಿಂಗಳಾಗಿತ್ತು. ಅನೇಕ ಪಶು ಚಿಕಿತ್ಸಕರಿಂದ ಪರೀಕ್ಷೆಗೊಳಪಟ್ಟಾಗಲೂ ಒಂದೇ ಉತ್ತರ 6 ತಿಂಗಳ ಗರ್ಭಿಣಿ. 10 ತಿಂಗಳು ಕಳೆದರೂ ಕರು ಹಾಕುವ ಯಾವ ಲಕ್ಷಣವಿಲ್ಲದಿದ್ದಾಗ ಗಾಬರಿಯಾಗಿದ್ದರು. ಕೊನೆಗೆ ಪಶುವನ್ನು ಪರಿಶೀಲಿಸಿ ಅರವಳಿಕೆ ನೀಡಿ ಗರ್ಭಕೋಶದ ಬಾಯಿಯ ಮೂಲಕ ಗಡ್ಡೆಯನ್ನು ತಲುಪುವ ಪ್ರಯತ್ನದಲ್ಲಿ ಗರ್ಭಕೋಶ ಖಾಲಿ, ಖಾಲಿಯಾದ ಅನುಭವ ಬಂತು. ಅಲ್ಲಿಯೇ ಒಂದು ಸಣ್ಣ ರಂದ್ರ ಮಾಡಿ ಕೈ ತೂರಿಸಿದಾಗ ಆಶ್ಚರ್ಯ. ಸುಮಾರು 30 ವಿವಿಧ ಗಾತ್ರದ ಕೊಬ್ಬಿನ ಗಂಟುಗಳಾಗಿದ್ದವು. ಅವನ್ನು ಹೊರ ತೆಗೆಯಲಾಗಿದ್ದು, ಹಸು ಆರೋಗ್ಯವಾಗಿದೆ.