ಕುಸಿಯಿತು ಮಾಣಿ ಹೊಳೆ ಸೇತುವೆ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೇರೂರು, ಹೆಗ್ಗರಣಿ, ನಿಲ್ಕುಂದ ಮುಂತಾದ ಗ್ರಾಪಂ ವ್ಯಾಪ್ತಿಯ ಪ್ರದೇಶಕ್ಕೆ ತಾಲೂಕು ಕೇಂದ್ರದೊಡನೆ ಸಂಪರ್ಕ ಕಲ್ಪಿಸುತ್ತಿದ್ದ ಹಾರ್ಸಿಕಟ್ಟಾ ಸಮೀಪದ ಮಾಣಿಹೊಳೆ ಸೇತುವೆ ಇತ್ತೀಚೆಗೆ ಕುಸಿದಿದೆ. ಇದರಿಂದಾಗಿ ಸಂಚಾರ ಸಂಪುರ್ಣ ಸ್ಥಗಿತಗೊಂಡಿದೆ.ುಮಟಾ-ಕಲ್ಲಕೊಪ್ಪ ರಾಜ್ಯ ಹೆದ್ದಾರಿ(ನಂ.142)ಯಲ್ಲಿನ ಹಾರ್ಸಿಕಟ್ಟಾ-ಗೋಳಿಮಕ್ಕಿ ನಡುವಿನ ಮಾಣಿಹೊಳೆ-ಅಘನಾಶಿನಿ ನದಿ ಸಂಗಮಗೊಳ್ಳುವ ಸ್ಥಳದಲ್ಲಿನ ಸೇತುವೆ ಇದೆ. 300 ಅಡಿ ಉದ್ದ, 15 ಅಡಿ ಅಗಲದ ಈ ಸೇತುವೆ ಕಾಮಗಾರಿ 1956ರಲ್ಲಿ ಆರಂಭಗೊಂಡಿತ್ತು. 1962ರಲ್ಲಿ ಉದ್ಘಾಟನೆಗೊಂಡಿತ್ತು. ನಿತ್ಯ ನೂರಾರು ವಾಹನಗಳು, ಸಾವಿರಾರು ಸಾರ್ವಜನಿಕರು ಸಂಚರಿಸುವ ಈ ಮಾರ್ಗದಲ್ಲಿನ ಅತ್ಯಂತ ಮುಖ್ಯ ಸೇತುವೆ ಇದಾಗಿದೆ. ತಾಲೂಕಿನ ಶೇ.40ರಷ್ಟು ಭೂಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆ ಏಕಾಏಕಿ ಕುಸಿತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡಿದೆ.ರ್ಧ ಶತಮಾನಕ್ಕೂ ಹಳೆಯದಾದ ಈ ಸೇತುವೆಯ 3ನೇ ಫಿಲ್ಲರ್ ಬಹುಪಾಲು ನುಚ್ಚುನೂರಾಗಿದ್ದು ಮೇಲಿನ ಕಾಂಕ್ರೀಟ್ ಛಾವಣಿ ಮಧ್ಯದಲ್ಲಿ ಕುಸಿದಿದೆ. ಎರಡೂ ಭಾಗದಲ್ಲಿ ಬಿರುಕು ಮೂಡಿದ್ದು ಯಾವ ವೇಳೆಯಲ್ಲೂ ಕುಸಿದ ಭಾಗಗಳು ಕೆಳಕ್ಕೆ ಬೀಳುವ ಸಾಧ್ಯತೆಯಿದೆ. ಮಳೆಗಾಲದ ನೀರಿನ ಹೊಡೆತ, ನೀರಿನಲ್ಲಿ ತೇಲಿಬರುವ ಮರದ ದಿಮ್ಮಿಗಳು ಈ ಫಿಲ್ಲರ್ಗಳಿಗೆ ಅಪ್ಪಳಿಸುವ ಕಾರಣ ಅವು ಶಿಥಿಲಗೊಂಡಿರಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 6 ಕೋಟಿ ರೂ. ಅಂದಾಜಿಸಿದ್ದು, ಮುಗಿಯಲು ಕನಿಷ್ಠ 1 ವರ್ಷವಾದರೂ ಬೇಕು ಎನ್ನಲಾಗುತ್ತಿದೆ.
ಬಸ್ ಸಂಚಾರ ಮಾರ್ಗ ಬದಲಾವಣೆ:
ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ಗಳ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಸಿದ್ದಾಪುರದಿಂದ ಹೇರೂರು ಹಾಗೂ ಹೆಗ್ಗರಣಿ ಮಾರ್ಗವಾಗಿ ಶಿರಸಿಗೆ ಬಿಡುತ್ತಿದ್ದ ಹಾಗೂ ತಟ್ಟಿಕೈ ಮತ್ತು ಅಮ್ಮೆನಳ್ಳಿಗೆ ವಸತಿಗೆ ತೆರಳುತ್ತಿದ್ದ ಬಸ್ಸಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡದೆ, ಮುಠ್ಠಳ್ಳಿ-ಕೋಡ್ಸರ-ಹೇರೂರ ಮಾರ್ಗವಾಗಿ ಬಿಡಲಾಗುತ್ತಿದೆ. ಸಿದ್ದಾಪುರ-ಹೇರೂರು-ಶಿರಸಿ ಬಸ್ನ್ನು ಸಿದ್ದಾಪುರ ಹಾರ್ಸಿಕಟ್ಟಾ-ಮುಠ್ಠಳ್ಳಿ-ಕೋಡ್ಸರ-ಹೇರೂರು-ತಟ್ಟಿಕೈ ಮಾರ್ಗವಾಗಿ ಶಿರಸಿಗೆ, ಸಿದ್ದಾಪುರ-ಹೆಗ್ಗರಣಿ-ಶಿರಸಿ ಬಸ್ನ್ನು ಸಿದ್ದಾಪುರ-ಹಾರ್ಸಿಕಟ್ಟಾ-ಮುಠ್ಠಳ್ಳಿ-ಕೋಡ್ಸರ-ನೆಲಮಾಂವಕ್ರಾಸ್-ಗೋಳಿಮಕ್ಕಿ-ಹೆಗ್ಗರಣಿ-ನಿಲ್ಕುಂದ ಮಾರ್ಗವಾಗಿ, ಶಿರಸಿಯಿಂದ ಗೋಳಿಮಕ್ಕಿಗೆ ಬಿಡುತ್ತಿರುವ ಸಿಟಿ ಬಸ್ನ್ನು ಮಾನಿಮನೆ ಕ್ರಾಸ್ವರೆಗೆ ಬಿಡಲಾಗುತ್ತದೆ.