ಹಸುವಿನ ಹೊಟ್ಟೆಯಿಂದ ಹೊರತೆಗೆದ್ರು ಬಂಗಾರದ ಚೈನು

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೆಬ್ಬೂರಿನಲ್ಲಿ ಗೋಗ್ರಾಸದೊಂದಿಗೆ ಹಸುವಿನ ಹೊಟ್ಟೆ ಸೇರಿದ್ದ ಬಂಗಾರದ ಸರವನ್ನು ಶಸ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.ಳೆದ ಹದಿನೈದು ದಿನಗಳ ಹಿಂದೆ ದೀಪಾವಳಿ ಗೋಪೂಜೆ ದಿನದಂದು ನೆಬ್ಬೂರಜಡ್ಡಿಯ ಹರಿಹರ ಭಟ್ಟರ ಮನೆಯ ಹಸು ಪೂಜೆಗೆ ಇಟ್ಟ ಬಂಗಾರದ ಸರವೊಂದನ್ನು ಆಕಸ್ಮಿಕವಾಗಿ ನುಂಗಿ ಬಿಟ್ಟಿತ್ತು. ಗಾಬರಿಗೊಂಡ ಭಟ್ಟರು ಮರುದಿನ ಪಶುತಜ್ಞ ಡಾ. ಪಿ.ಎಸ್.ಹೆಗಡೆಯವರನ್ನು ಭೇಟಿ ಮಾಡಿದ್ದರು. ಸರ ಹಸುವಿನ ಮೊದಲನೇ ಹೊಟ್ಟೆಯಿಂದ 2ನೇ ಹೊಟ್ಟೆ (ರೆಟಿಕ್ಯುಲಮ್)ಗೆ ಜಾರಿರುವುದರ ಖಚಿತ ಮಾಹಿತಿ ನೀಡಿ, 15 ದಿನ ಸಗಣಿ ಪರೀಕ್ಷಿಸುತ್ತಿರಲು ಹೆಗಡೆ ಸಲಹೆ ನೀಡಿದ್ದರು.ಇಷ್ಟು ದಿನವಾದರೂ ಬಂಗಾರದ ಸರ ಹೊರ ಬರದ ಹಿನ್ನೆಲೆಯಲ್ಲಿ ಡಾ.ಪಿ.ಎಸ್.ಹೆಗಡೆ ಅವರು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನರಸಿಂಹ ಮಾರ್ಕಾಂಡೆ ಜೊತೆ ಸೇರಿ ಶಸಚಿಕಿತ್ಸೆ ನಡೆಸಿ ಸುಮಾರು 2.5 ತೊಲೆಯ ಬಂಗಾರದ ಸರ ತೆಗೆದರು. ಸರದ ಜೊತೆ ಇದ್ದ ಹೊಚ್ಚ ಹೊಸ ಕಬ್ಬಿಣದ ಮೊಳೆ ಕೂಡ ಹೊರ ತೆಗೆದರು.