ಮಾಣಿಹೊಳೆಗೆ ಇನ್ನೊಂದು ಸೇತುವೆ


ಕುಸಿದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮಾಣಿಹೊಳೆ ಸೇತುವೆ ಬದಲಿಗೆ ಇನ್ನೊಂದು ಸೇತುವೆ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಇಲಾಖೆಯ ಕಾರ್ಯದರ್ಶಿಗೆ, ಧಾರವಾಡದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಿಗೆ ಸೂಚಿಸಿದ್ದಾರೆ. ಸುಮಾರು 86 ಲಕ್ಷ ರೂ. ಮೊತ್ತದಲ್ಲಿ ಕಾಮಗಾರಿ ಪ್ರಸ್ತಾವನೆ ಸರಕಾರದ ಮುಂದಿದ್ದು, ಇದನ್ನು ಶೀಘ್ರ ಕಾರ್ಯಗತಗೊಳಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳುಗಳ ಹಿಂದೆ ಕುಸಿದ ಸೇತುವೆಯಿಂದ ಶಿರಸಿ-ಸಿದ್ದಾಪುರ ತಾಲೂಕು ಬೆಸೆಯುವ ಕೊಂಡಿಯೊಂದು ಕಳಚಿದಂತಾಗಿದೆ. ಹಳ್ಳ ದಾಟಲೂ 40 ಕಿಮೀ ಸುತ್ತು ಬಳಸಿ ಬರಬೇಕಾದ ಅನಿವಾರ್ಯತೆ ನಿರ್ಮಾಣ ಆಗಿದೆ.