ಹಳ್ಳಿಗಾಡಿನ ಗರ್ಭಿಣಿಯರ ‘ಅಮ್ಮ’

ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆಗಳೇ ಇಲ್ಲ. ತಾಲೂಕಾ ಕೇಂದ್ರದಲ್ಲಿ ಓರ್ವ ವೈದ್ಯರನ್ನು ಬಿಟ್ಟರೆ, ಉಳಿದೆಡೆ ಪ್ರಸೂತಿ ತಜ್ಞ ವೈದ್ಯಾಧಿಕಾರಿಗಳೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಯ ಸಾಂಪ್ರದಾಯಿಕ ಪ್ರಸೂತಿ ಪದ್ಧತಿ ಮೂಲಕ ಗಮನ ಸೆಳೆದವರು ಸೂಲಗಿತ್ತಿ ಸುಶೀಲಮ್ಮ.ೋಯಿಡಾ ಗ್ರಾಪಂ ವ್ಯಾಪ್ತಿಯ ಮಳೆ ಎಂಬ ಗ್ರಾಮದ ಸುಶೀಲಾ ಬುಧೊ ವೇಳಿಪ್ ಮೂಲತಃ ಕುಣಬಿ ಬುಡಕಟ್ಟು ಸಮುದಾಯದ ಮಹಿಳೆ. ಸದ್ಯ ಹಳಿಯಾಳ ಎಪಿಎಂಸಿ ಸದಸ್ಯೆಯಾದ ಇವರು, ಸುತ್ತಲಿನ ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಸೂಲಗಿತ್ತಿ ಸುಶೀಲಮ್ಮ ಎಂದೇ ಚಿರಪರಿಚತರು. 65 ವರ್ಷ ವಯಸ್ಸು. ಕಲಿತಿದ್ದು ಕೇವಲ 4ನೇ ತರಗತಿ. ಪ್ರಸೂತಿ ತಜ್ಞೆ ಅಷ್ಟೇ ಅಲ್ಲದೇ ನಾಟಿ ವೈದ್ಯೆ ಕೂಡಾ ಹೌದು.
ತನ್ನ 35 ವರ್ಷದ ಈ ಕಾಯಕದಲ್ಲಿನ ಅನುಭವದಲ್ಲಿ ಈಕೆ ಕೈಹಿಡಿದ ಯಾವುದೇ ಹೆರಿಗೆ ಪ್ರಕರಣ ವಿಲವಾಗಿದ್ದಿಲ್ಲ. ವೈದ್ಯರು ಹೆದರಿ ಕೈಬಿಟ್ಟ ಪ್ರಕರಣಗಳನ್ನು ಯಶಸ್ವಿಯಾಗಿ ಪ್ರಸೂತಿ ಮಾಡಿಸಿದ ಅನೇಕ ನಿದರ್ಶನಗಳಿವೆ. ಇವರ ಪ್ರಸೂತಿ ಕೌಶಲ್ಯ ಯಾವ ತಜ್ಞ ಎಂಬಿಬಿಎಸ್ ವೈದ್ಯರಿಗೂ ಕಡಿಮೆ ಇಲ್ಲ. ಇಲ್ಲಿಯವರೆಗು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಶ್ರೇಯ ಇವರದ್ದು.
ನುರಿತ ನಾಟಿ ವೈದ್ಯೆ:
ಸುಶೀಲಮ್ಮ ನುರಿತ ನಾಟಿ ವೈದ್ಯೆ ಕೂಡಾ ಹೌದು. ಇವರು ನಡೆಸುವ ಸುರಕ್ಷಿತ ಪ್ರಸೂತಿ ಜೊತೆಗೆ ನೀಡುವ ಔಷಧಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಗರ್ಭಿಣಿಯರನ್ನು ನೋಡಿದರೆ ಸಾಕು, ಅವರ ಹೊಟ್ಟೆಯೊಳಗಿನ ಮಗುವಿನ ಸ್ಥಿತಿಗತಿ ಏನು, ಬಾಣಂತನವಾಗುವವರೆಗೆ ನೀಡಬೇಕಾದ ಆಹಾರ ಪದ್ಧತಿ, ಪಥ್ಯ ಏನು? ಎನ್ನುವ ಬಗ್ಗೆ ತಿಳಿ ಹೇಳಿ ಗಿಡಮೂಲಿಕೆ ಔಷಧಿ ನೀಡುತ್ತಾರೆ. ಸುರಕ್ಷಿತ ಹೆರಿಗೆಗೆ ಬೇಕಾದ ಸಂದರ್ಭೋಚಿತ ಎಲ್ಲಾ ನಾಟಿ ಔಷಧ ಪದ್ಧತಿಯನ್ನು ಬಲ್ಲವರಾಗಿದ್ದಾರೆ. ಎದೆ ಹಾಲು ವೃದ್ಧಿಗೂ ವನೌಷಧ ನೀಡುತ್ತಿದ್ದಾರೆ. ಗರ್ಭಿಣಿಯರಿಗೆ ಮಾತ್ರವಲ್ಲದೆ ವಿಷದ ಹಾವು, ನಾಯಿ ಕಡಿತ ಹಾಗೂ ದಮ್ಮು ಕೆಮ್ಮು, ಅಸ್ತಮಾಕ್ಕೂ ಗಿಡ ಮೂಲಿಕೆ ಔಷಧಿ ನೀಡುತ್ತಾರೆ.
ತಾಲೂಕಿನಲ್ಲಿ ಅನೇಕ ಗ್ರಾಮೀಣ ಭಾಗದ ಹಳ್ಳಿಗಳಿಗೆ ರಸ್ತೆಗಳಿಲ್ಲದ, ವಾಹನ ಸೌಕರ್ಯವಿಲ್ಲದ ಸಂದರ್ಭದಲ್ಲಿ ಅದರಲ್ಲಿಯೂ ಮಳೆಗಾಲದ ದಿನಗಳಲ್ಲಿ ಇವರು ಕಾಲ್ನಡಿಗೆಯಲ್ಲಿಯೇ ತೆರಳಿ ಸುಸೂತ್ರ ಹೆರಿಗೆ ಮಾಡಿಸಿ ಬರುತ್ತಾರೆ. ಜೋಯಿಡಾ, ಅಣಶಿ, ಉಳವಿ, ಗುಂದದ ಗ್ರಾಮೀಣ ಭಾಗ ಸೇರಿದಂತೆ ಬಾಜಾರ ಕೊಣಂಗ, ಡಿಗ್ಗಿ ಭಾಗದ ಸುಮಾರು 20-30 ಕಿಮೀ ದೂರದ ಕುಗ್ರಾಮಗಳಿಗೆ ರಾತ್ರಿ ಹಗಲೆನ್ನದೆ ಹೋಗಿ ಹೆರಿಗೆ ಮಾಡುವ ಈ ಸುಶೀಲಮ್ಮ ಈ ಭಾಗದ ಅನೇಕ ತಾಯಂದಿರಿಗೆ ಬದುಕು ನೀಡಿದ ಮಹಾತಾಯಿಯಾಗಿದ್ದಾರೆ. ಗಮನಿಸಬೇಕಾದ ಅಂಶವೇನೆಂದರೆ, ಇವರು ವೃತ್ತಿಪರರಲ್ಲ. ಮೌಲ್ಯವನ್ನು ಕಟ್ಟಿ ವೃತ್ತಿಯನ್ನು, ಕೌಶಲ್ಯವನ್ನು ಪ್ರದರ್ಶಿಸುವವರಲ್ಲ. ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ ಕೈಂಕರ್ಯವಷ್ಟೆ. ಇವರಲ್ಲಿ ಮನೆಮಾಡಿದ ಸೇವಾ ಮನೋಭಾವ ಕೃತ್ರಿಮತೆಯ ಸಮಾಜಕ್ಕೆ ಮಾದರಿ.ನುಭವವೇ ಆಧಾರವಾಯ್ತು:ನ್ನ ತಾಯಿ ಮನೆಯ ಊರಾದ ಬಾರಾಡೆ ಗ್ರಾಮದಲ್ಲಿ ಹೆರಿಗೆಯಲ್ಲಿ ಪರದಾಡುತ್ತಾ, ಸಾವು ಬದುಕಿನಲ್ಲಿ ಹೋರಾಡುತ್ತಿದ್ದ ಒಬ್ಬ ಬಾಣಂತಿಯ ಭಯಾನಕ ಸನ್ನಿವೇಶ ಕಂಡು ಮನಕರಗಿ ನನಗೆ ಅರಿವಿಲ್ಲದಂತೆ ಅವಳ ಪ್ರಸೂತಿ ಕ್ರಿಯೆಯನ್ನು ಸುಸೂತ್ರವಾಗಿ ಮಾಡಿದೆ. ಅಂದು ನನಗೆ ಏನೂ ತಿಳಿದಿರಲಿಲ್ಲ, ಆದರೂ ಸಾಯುವ ಹಂತ ತಲುಪಿದ್ದ ಆ ಬಾಣಂತಿಯ ಜೀವ ಉಳಿಸಿದ ಕೀರ್ತಿಗೆ ನನಗರಿವಿಲ್ಲದಂತೆ ಭಾಜನಳಾದೆ. ನನಗೆ ಅನುಭವವೇ ಜ್ಞಾನ ತಂದಿದೆ‘ ಎನ್ನುತ್ತಾಳೆ ಸುಶೀಲಮ್ಮ.ಚ್ಟ‘ ನಮ್ಮ ಗ್ರಾಮೀಣ ಭಾಗದ ಜನ ನನ್ನನ್ನು ದೇವರಂತೆ ಕಾಣುತ್ತಾರೆ.ಅವರ ಋಣಕ್ಕೆ ನಾನು ಯಾವತ್ತೂ ಬದ್ಧ. ನನ್ನ ಕೈಯಿಂದ ಆಗುವ ಈ ಸೇವೆಗೆ ಯಾವತ್ತೂ ನಾನು ಸಿದ್ಧ, ಜನಿಸಿದ ಮಕ್ಕಳು ಆರೋಗ್ಯ ಪೂರ್ಣವಾಗಿ ಬೆಳೆಯಬೇಕೆಂಬ ಆಸೆ ನನ್ನದು’ ಎನ್ನುತ್ತಾರೆ ಅವರು.