ಕಾರವಾರದಲ್ಲಿ 26ರಿಂದ 23ನೇ ಕೋಟಿ ಗಾಯತ್ರಿ ಜಪಯಜ್ಞ

ಕಾರವಾರದ ಗಾಯತ್ರಿ ಸಮೂಹ ಹಾಗೂ ಹಾವೇರಿ ಜಿಲ್ಲೆ ತಡಸ ಗ್ರಾಮದ ಗಾಯತ್ರಿ ತಪೋಭೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 23ನೇ ಕೋಟಿ ಗಾಯತ್ರಿ ಜಪಯಜ್ಞ ಕಾರ್ಯಕ್ರಮ ಡಿ.26, 27 ಹಾಗೂ 28ರಂದು ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಲಾದೇವಿ ಮೈದಾನದಲ್ಲಿ ನೆರವೇರಲಿದೆ.
.26.28ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಶಿವಮೊಗ್ಗ ಜಿಲ್ಲೆ ಕೂಡಲಿ ಶಂಕರಮಠದ ಡಾ ಅಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಅದ್ವೈತ ಆಶ್ರಮದ ಪ್ರಣವಾನಂದತೀರ್ಥರು, ಶಿರಹಟ್ಟಿಯ ಕ್ಕೀರೇಶ್ವರ ಸ್ವಾಮೀಜಿ, ಕಾರವಾರದ ರಾಮಕೃಷ್ಣ ಆಶ್ರಮದ ಭವಿಷ್ಯನಂದ ಸ್ವಾಮೀಜಿ, ತಡಸ ಗಾಯತ್ರಿ ಮಠದ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.ರಂದು ಸಂಜೆ 6:00ಗಂಟೆಗೆ ಉದಕಶಾಂತಿ, ಪ್ರವಚನ, ಸಂಗೀತ ಸೇವೆ,ರಾತ್ರಿ 9:00ಗಂಟೆಗೆ ಯಕ್ಷಗಾನ ನಡೆಯಲಿದೆ. ಡಿ.27ರಂದು ಬೆಳಗ್ಗೆ 6:00ಗಂಟೆಗೆ ಪುಣ್ಯಾಹವಾಚನ, ದೇವತಾ ಸ್ಥಾಪನ, ವಿಶೇಷ ಪೂಜೆ, ಅಲಂಕಾರ ಸೇವೆ, 9:00ಗಂಟೆಗೆ ಕಲಶ ಪೂಜೆ, ಸುಮಂಗಲೆಯರಿಂದ ಕುಂಕುಮಾರ್ಚನೆ, ದಶಸಹಸ್ರ ಮೋದಕ, ಗಣಪತಿ ಹವನ, ಗಾಯತ್ರಿ ಹೋಮ, ಸುಬ್ರಮಣ್ಯ ಹವನ, ಅನ್ನಪೂರ್ಣ ಹವನ, ಲಕ್ಷ್ಮೀ-ಕುಬೇರ ಹವನ, ದತ್ತ ಹವನ, ಮಧ್ಯಾಹ್ನ 12:30ಗಂಟೆಗೆ ಮಹಾನೈವೇದ್ಯ, ಮಹಾಮಂಗಳಾರತಿ, ಸಂಜೆ 4:00ಗಂಟೆಗೆ ಗಾಯತ್ರಿ ಮಾತೆಯ ಭಾವಚಿತ್ರದೊಂದಿಗೆ ಶೋಭಾಯಾತ್ರೆ ನಡೆಯಲಿದೆ.
ಇದರಲ್ಲಿ ಸಾಧು-ಸಂತರು ಪಾಲ್ಗೊಳ್ಳಲಿದ್ದಾರೆ. 6:30ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 8:30ಗಂಟೆಗೆ ಸಾಂಸ್ಕೃತಿ ಕಾರ್ಯಕ್ರಮಗಳು ನೆರವೇರಲಿವೆ.ರಂದು ಬೆಳಗ್ಗೆ 7:00ಗಂಟೆಗೆ ವಿಶೇಷ ಪೂಜೆ, ವಿವಿಧ ಹೋಮ-ಹವನ ನಡೆಯಲಿದೆ. 9:00ಗಂಟೆಗೆ ಕಲಶ ಪೂಜೆ, ಕುಂಕುಮಾರ್ಚನೆ, ಕುಮಾರಿಕಾ ಪೂಜೆ, 11:30ಗಂಟೆಗೆ ಪ್ರಾಣಾಹುತಿ, ಮಹಾನೈವೇದ್ಯ, ಮಹಾಮಂಗಳಾರತಿ, ಮಧ್ಯಾಹ್ನ 12:30ಗಂಟೆಗೆ ಸ್ವಾಮಿಗಳಿಂದ ಆಶೀರ್ವಚನ ನೆರವೇರಲಿದೆ.