ಕೋಟಿಗೊಂದ್ ಲವ್ ಸ್ಟೋರಿ ಬಿಡುಗಡೆಗೆ ಸಿದ್ಧ


ಉತ್ತರ ಕನ್ನಡ ಜಿಲ್ಲೆಯ ಭೀಮನಗುಡ್ಡ, ಸಾತೊಡ್ಡಿ ಜಲಪಾತ, ಸಹಸ್ರಲಿಂಗ, ಯಾಣ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರೀಕರಣಗೊಂಡ ಕೋಟಿಗೊಂದ್ ಲವ್ ಸ್ಟೋರಿ ಚಿತ್ರ ಕ್ರಿಸ್ಮಸ್ ಹಬ್ಬದ ಬಳಿಕ ಬಿಡುಗಡೆಗೆ ತಯಾರಿ ನಡೆಸಿದ್ದು, ರಾಜ್ಯದ 150 ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
ಪ್ರೀತಿ, ಜೀವನ, ವಿಧಿಯ ಆಟ ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದು. ಎಚ್.ಎಲ್.ಎನ್. ರಾಜ ನಿರ್ಮಾಣದ, ಜಗ್ಗು ಶಿರಸಿ ನಿರ್ದೇಶನ ಮಾಡಿದ್ದಾರೆ. ಜೋಶ್ ಖ್ಯಾತಿಯ ರಾಕೇಶ ಅಡಿಗ ನಾಯಕನಾಗಿ, ಕುಡ್ಲಾ ಬೆಡಗಿ ಶುಭಾ ಪೂಂಜಾ ನಾಯಕಿಯಾಗಿ ಪಾತ್ರ ಮಾಡಿದ್ದಾರೆ. ಏಳು ಹಾಡುಗಳಿರುವ ಸಿನೇಮಾದಲ್ಲಿ ಒಂದು ಐಟಂ ಸಾಂಗ್ ಇದೆ. ಕೀರ್ತಿ ಜೈನ ಸಂಗೀತ ನಿರ್ದೇಶಕ, ಶಂಕರ ಛಾಯಾಗ್ರಾಹಕರಾಗಿದ್ದಾರೆ. ಬಿರಾದಾರ, ಸಿಂಧು ರಾವ್, ವಿಕಾಸ ಜೋಪ್ರ ಇತರರು ಪಾತ್ರ ಮಾಡಿದ್ದಾರೆ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರತ್ನಾಕರ ಉಪಳೇಕೊಪ್ಪ ಮಾಹಿತಿ ನೀಡಿದ್ದಾರೆ.
ಶಿರಸಿ ತೋಟಗಾರ ಕಲ್ಯಾಣ ಮಂಟಪದಲ್ಲಿ ಡಿ.5ರ ಸಂಜೆ 5ಕ್ಕೆ ಬಿಡುಗಡೆ ಮೊದಲು ಶುಭಾಶಯ ಕಾರ್ಯಕ್ರಮ ನಡೆಯಿತು. ಕದಂಬ ಕಲಾವೇದಿಕೆ ಸಹಕಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 4ಕ್ಕೆ ಮಾರಿಕಾಂಬಾ ದೇವಾಲಯದಿಂದ ನಾಯಕ ನಟ ರಾಕೇಶ ಹಾಗೂ ಶುಭಾ ಪೂಂಜಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಲಾ ಸೇವಾ ಪುರಸ್ಕಾರ, ಚಲನಚಿತ್ರದ ಟ್ರೈಲರ್ ಬಿಡುಗಡೆ, ಚಿತ್ರದ ಹಾಡುಗಳ ಗಾಯನ, ಡಾನ್ಸ್ ಪ್ರದರ್ಶನ ನಡೆಯಿತು