ಪುಟಾಣಿ ಕೃಷ್ಣನ ಕಂಡೀರಾ

ಭಗವದ್ಗೀತಾ ಅಭಿಯಾನ ವತಿಯಿಂದ ಗೀತ ಜಯಂತಿ ಅಂಗವಾಗಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಪ್ರಶಾಂತಿ ಸಭಾಭವನದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಶಾಂತಿ ಸಂಸ್ಥೆ ಅಧ್ಯಕ್ಷ ಆರ್.ಜಿ.ಪೈ ಅವರು ಶ್ರೀಕೃಷ್ಣ ಹಾಗೂ ಭಗವದ್ಗೀತೆ ಗ್ರಂಥಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ವೇದಘೋಷ, ದೇವತಾ ಸ್ತುತಿ ಹಾಗೂ ಗೀತೆಯ ಧ್ಯಾನ ಶ್ಲೋಕಗಳನ್ನು ಸಾಮೂಹಿಕವಾಗಿ ಪ್ರಸ್ತುತಪಡಿಸಿದರು. ಶ್ರೀಕೃಷ್ಣ ವೇಷ ಸ್ಪರ್ಧೆ ನಿರ್ಣಾಯಕರಾಗಿ ಆರ್.ಕೆ.ಹೊನ್ನೇಗುಂಡಿ, ಸುಮಿತ್ರಾ ಶೇಟ್, ಸುವರ್ಣಾ ಹೆಗಡೆ ಪಾಲ್ಗೊಂಡಿದ್ದರು. ಭಗವದ್ಗೀತಾ ಅಭಿಯಾನ ಸಮಿತಿಯ ಎಂ.ಜಿ. ಭಟ್ ನಿರ್ವಹಿಸಿದರು. ಸುಮಿತ್ರಾ ಶೇಟ್ ವಂದಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.