ಕೋತಿ ಕೈಯಲ್ಲಿದೆ ನಾಯಿ ಮರಿ

ಬಳ್ಳಾರಿ ಜಿಲ್ಲೆ ಕಂಪ್ಲಿ ಸಮೀಪದ ರಾಮಸಾಗರ ಗ್ರಾಮದಲ್ಲಿ ಕರಿ ಕೋತಿಯೊಂದು ನಾಯಿಮರಿಯನ್ನು ತನ್ನ ಒಡಲಲ್ಲಿ ಕಚ್ಚಿಕೊಂಡು ಓಡಾಡುತ್ತಿದೆ. ಗ್ರಾಮದ 2ನೇ ವಾರ್ಡ್ನ ಹರಿಜನ ಈರಣ್ಣನ ಮನೆಯ ಬಳಿಯಲ್ಲಿ ಕಳೆದ 25 ದಿನಗಳ ಹಿಂದೆ ನಾಯಿಯೊಂದು ಮರಿಗಳನ್ನು ಹಾಕಿದ್ದು, ತಾಯಿ ನಾಯಿ ಇಲ್ಲದ ವೇಳೆಯಲ್ಲಿ ಈ ಕರಿ ಕೋತಿ ನಾಯಿಮರಿಯನ್ನು ಎತ್ತಿಕೊಂಡು ಹೋಗಿದೆ. ಅಂದಿನಿಂದಲೂ ಇಂದಿನವರೆಗೂ ನಾಯಿ ಮರಿಯನ್ನು ಕೆಳಗಿಳಿಸದೇ ಮನೆಯಿಂದ ಮನೆಗೆ, ಮರದಿಂದ ಮರಕ್ಕೆ ಓಡಾಡುತ್ತಿದೆ. ಆದರೆ, ನಾಯಿ ಮರಿಗೆ ಆಹಾರ ನೀಡುತ್ತಿದೆಯೋ ಇಲ್ಲವೋ ಎನ್ನುವುದು ಗೊತ್ತಾಗಿಲ್ಲ. ಮರಿಯನ್ನು ಬಿಡಿಸಿಕೊಳ್ಳಲು ಗ್ರಾಮಸ್ಥರು ಯತ್ನಿಸಿದರೂ ಕೋತಿ ಮಾತ್ರ ಅವರ ಕೈಗೆ ಸಿಕುತ್ತಿಲ್ಲ. ಕೋತಿ ಮನುಷ್ಯರನ್ನು ಕಂಡರೆ ಸಾಕು ನಾಯಿ ಮರಿಯನ್ನು ತನ್ನ ಒಡಲಲ್ಲಿ ಎತ್ತಿಕೊಂಡು ಓಡುತ್ತದೆ. ನಾಯಿ ಮರಿ ಕುಂಯ್ ಗುಡುತ್ತಿದೆ.