ಶಸಚಿಕಿತ್ಸೆ ಮಾಡಿ ಕರುವನ್ನು ಹೊರ ತೆಗೆದರು


ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಪಶು ವೈದ್ಯಾಧಿಕಾರಿಗಳ ತಂಡ ಪೌಷ್ಟಿಕಾಂಶ ಕೊರತೆಯಿಂದ ನಿತ್ರಾಣಗೊಂಡು ಕರು ಹಾಕುವುದಕ್ಕೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಜರ್ಸಿ ಆಕಳೊಂದಕ್ಕೆ ಸಿಸೇರಿಯನ್ ಶಸಚಿಕಿತ್ಸೆ ನಡೆಸಿ ಕರುವನ್ನು ಜೀವಂತವಾಗಿ ಹೊರತೆಗೆದಿದೆ. ಸಿಸೇರಿಯನ್ ಶಸಚಿಕಿತ್ಸೆ ನಡೆಸಿ ಕರುವನ್ನು ಹೊರತೆಗೆದಿರುವುದು ತಾಲೂಕಿನಲ್ಲಿ ಇದೇ ಮೊದಲ ಬಾರಿ.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕಂಚಿಮನೆ ಶಾಂತಾರಾಮ ಮಡಿವಾಳ ಅವರ ಆರು ವರ್ಷದ ಜರ್ಸಿ ಆಕಳು ಪೌಷ್ಟಿಕಾಂಶದ ತೊಂದರೆಯಿಂದ ನಿತ್ರಾಣಗೊಂಡಿದ್ದರೂ ಆಕಳ ಹೊಟ್ಟೆಯಲ್ಲಿ ಕರು ಉತ್ತಮವಾಗಿ ಬೆಳೆದಿತ್ತು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಂದಕುಮಾರ ಪೈ, ಡಾ.ಶ್ರೇಯಸ್, ಡಾ.ಲೋಹಿತ್ ಹಾಗೂ ಡಾ.ನಾಗರಾಜ ಸವಣೂರು ಅವರು ಸುಮಾರು ಎರಡೂವರೆ ತಾಸು ಆಕಳಿಗೆ ಶಸಚಿಕಿತ್ಸೆ ನಡೆಸಿ ಗಂಡು ಕರುವನ್ನು ತೆಗೆದಿದ್ದಾರೆ. ಆಕಳು ಹಾಗೂ ಕರು ಆರೋಗ್ಯದಿಂದಿವೆ.