ಕಾಳಿಂಗ ಸರ್ಪ ಹಿಡಿದ ಮನ್ಮಥಕುಮಾರ್

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪುರಪ್ಪೆಮನೆ-ಗಡಿಕಟ್ಟೆ ಭಾಗದ ಅರಣ್ಯದಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಮನ್ಮಥಕುಮಾರ್ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇಲ್ಲಿನ ಕಲ್ಕೊಪ್ಪ ಕಾಡಿನಲ್ಲಿ ಓಡಾಡುತ್ತಿದ್ದ ಕಾಳಿಂಗಸರ್ಪವನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿ ಹೊಸನಗರ ವಿಭಾಗದ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಅರಣ್ಯ ಇಲಾಖೆ ಕಾಳಿಂಗ ಸರ್ಪದ ಸೆರೆಗೆ ಸೂಕ್ತ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದವರು ಮನ್ಮಥಕುಮಾರ್ ಅವರಿಗೆ ವಿಷಯ ತಿಳಿಸಿದಾಗ ಸುಮಾರು ಅರ್ಧ ಗಂಟೆಗಳ ಕಾಲ ಸಾಹಸ ಮಾಡಿ ಕಾಡಿನಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಹಿಡಿದಿದ್ದಾರೆ.