ಹರಿದ ಆಕಳ ಮೊಲೆಗೆ ಶಸಚಿಕಿತ್ಸೆ

ಶಿರಸಿಯ ಬೆಳ್ಳೆ ಮನೆಯಲ್ಲಿ ಕರು ಹಾಕುವ ವೇಳೆ ಕಾಲಿನಡಿ ಸಿಲುಕಿ ಹರಿದ ಹೋಗಿದ್ದ ಮಿಶ್ರತಳಿ ಹಸುವಿನ ಮೊಲೆಯನ್ನು ಶಸಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ.ಂಗಾಧರ ಹೆಗಡೆ ಅವರ ಸಾಹಿವಾಲ ಮಿಶ್ರತಳಿಯ ಹಸುವೊಂದು ಕರು ಹಾಕುವ ಪೂರ್ವದಲ್ಲೇ ಮೊಲೆಗೊಂದು ಗಾಯ ಮಾಡಿಕೊಂಡಿತ್ತು. ಪ್ರಸವ ವೇದನೆಯ ಸಂದರ್ಭದಲ್ಲಿ ನರಳಾಟದಲ್ಲಿ ಗೊರಸಿನಡಿ ಸಿಕ್ಕು ಈ ಮೊಲೆ ಹರಿದಿತ್ತು. ಹಾಲು ಹಿಂಡಲು ಸಾಧ್ಯವೇ ಇರಲಿಲ್ಲ. ಈ ವೇಳೆ ಶಿರಸಿ ಸಮರ್ಪಣ ಡಾ ಪಿ.ಎಸ್. ಹೆಗಡೆ ಹೊನ್ನೆಗದ್ದೆ ಹಾಗೂ ಪಶುವೈದ್ಯ ಆಸ್ಪತ್ರೆ ಸಹಾಯಕ ನಿರ್ದೇಶಕ ನರಸಿಂಹ ಮಾರ್ಕಾಂಡೆ ಶಸಚಿಕಿತ್ಸೆ ಮೂಲಕ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಳ ಮೊಲೆಯ ಅಂಗಾಂಶ ಪುನರ್ ರಚಿಸುವಲ್ಲಿ ಅದೇ ಮೊಲೆಯ ಪಕ್ಕದ ಚರ್ಮವನ್ನು ತೆಗೆದು ಕಸಿ ವಿಧಾನವನ್ನು ಬಳಸಿ ಮೊಲೆಗೆ ಸಹಜ ರೂಪ ಕೊಟ್ಟಿದ್ದಾರೆ. ಈಗ ಸುಲಲಿತವಾಗಿ ಹಾಲು ಹೊರಬರುತ್ತಿದೆ.