ಉತ್ತರ ಕನ್ನಡ ಜಿಲ್ಲೆಯ ಹಿಂದೂ ದೇವಾಲಯಗಳ ಮಾಹಿತಿ ನೀಡಿ

ಉತ್ತರ ಕನ್ನಡ ಜಿಲ್ಲೆಯ ಎಲ್ಲ ಹಿಂದೂ ದೇಗುಲಗಳ ವಿವರವನ್ನೊಳಗೊಂಡ ಗ್ರಂಥ ರಚನೆ ಮಾಡುವ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಣೆ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಣೆಗೆ ಕಳೆದೆರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದ್ದರೂ ಪೂರ್ಣವಾಗಿಲ್ಲ. ಡಿಸೆಂಬರ್ ಕೊನೆಯೊಳಗೆ ಮಾಹಿತಿ ಹಾಗೂ ೊಟೋ ಸಹಿತ ವಿವರಣೆ ಕೊಡಬೇಕಾಗಿದೆ. ಅಗತ್ಯ ಇರುವ ಶಿಲಾಮಯ ದೇವಾಲಯಗಳಿಗೆ ಭೇಟಿ ಕೊಟ್ಟು ಇನ್ನಷ್ಟು ವಿವರಣೆಗಳನ್ನೂ ಪಡೆದುಕೊಳ್ಳುತ್ತಿದ್ದಾರೆ ಅಧಿಕಾರಿಗಳು.
ಮಾಹಿತಿ ಸಲ್ಲಿಸುವಾಗ ದೇವಾಲಯಗಳ ವಿಳಾಸ, ತಾಲೂಕಾ ಕೇಂದ್ರದಿಂದ ಇರುವ ದೂರ, ಪೂಜಾ ವಿಧಾನ, ಜಾತ್ರೆ, ಮಹೋತ್ಸವ, ದೇವಾಲಯದ ಇತಿಹಾಸ, ಆಡಳಿತದ ವಿವರಣೆ, ಕ್ಷೇತ್ರದ ಮಹಿಮೆ, ಸಾಮೂಹಿಕ ಕಾರ್ಯಗಳ, ವಾರ್ಷಿಕ ವಿಧಿ ವಿಧಾನಗಳ ವಿವರಣೆ, ಅರ್ಚಕರು, ಉಪಾಧಿವಂತರ ವಿವರಣೆಗಳು, ದೇವಾಲಯದ ಶೈಲಿ, ದೇವಾಲಯದ ಮಾದರಿ, ದೇವಾಲಯದ ಇತಿಹಾಸ ಪ್ರಕಟವಾಗಿದೆಯೇ? ಕೆರೆಗಳ ವಿವರಣೆಗಳೂ ಇದ್ದರೆ ಕಳಿಸಬೇಕು. ಜಿಲ್ಲೆಯಲ್ಲಿ 380ಕ್ಕೂ ಹೆಚ್ಚು ದೇಗುಲಗಳಿದ್ದು, ಈಗಾಗಲೇ 90 ದೇವಾಲಯಗಳ ಮಾಹಿತಿ ಬಂದಿದೆ. ಉಳಿದವರ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳಿ ಕಾರ್ಯಾಧ್ಯಕ್ಷ ವಿ.ಯು.ಪಟಗಾರ.
ಮಾಹಿತಿ ಸಂಗ್ರಹಣೆ ವಿವರಗಳಿಗೆ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ, ಆಡಳಿತಾಧಿಕಾರಿಗಳು ಶ್ರೀನಿಕೇತನ ಶಾಲೆ, ಶಿರಸಿ 9482212166ಗೆ ಸಂಪರ್ಕಿಸಬಹುದು.