ಸೀಪಾತ್ರಧಾರಿ ಶಿರಳಗಿಗೆ ಪಾತಾಳ ಪ್ರಶಸ್ತಿ

ಬಡಗು ತಿಟ್ಟಿನ ಖ್ಯಾತ ಸೀಪಾತ್ರಧಾರಿ ಭಾಸ್ಕರ ಜೋಶಿ ಶಿರಳಗಿ ಅವರಿಗೆ ಎಡನೀರಿನ ಯಕ್ಷ ಪ್ರತಿಷ್ಠಾನ ನೀಡುವ ಪಾತಾಳ ವೆಂಕಟ್ರಮಣ ಭಟ್ ಪ್ರಶಸ್ತಿ ಪ್ರಕಟವಾಗಿದೆ. ಹತ್ತು ಸಾವಿರ ರೂಪಾಯಿ ಮೊತ್ತ, ಪ್ರಶಸ್ತಿ ಪತ್ರ, ಲಕ ಒಳಗೊಂಡ ಪ್ರಶಸ್ತಿಯನ್ನು ಡಿ.7ರಂದು ಕಾಸರಗೋಡು ಜಿಲ್ಲೆಯ ಎಡನೀರು ಮಠದಲ್ಲಿ ಪ್ರದಾನ ಮಾಡಲಾಗುತ್ತಿದೆ. ಇದೇ ವೇಳೆ ಉದಯವಾಣಿ ಅಂಕಣಕಾರ ನಾ.ಕಾರಂತ ಪೆರಾಜೆ ಸಂಪಾದಕತ್ವದ ಉಪಾಯನ ಗ್ರಂಥ ಲೋಕಾರ್ಪಣೆ ಆಗಲಿದೆ.
ಪಾತಾಳ ಪ್ರಶಸ್ತಿಗೆ ಪ್ರಸಕ್ತ ವರ್ಷ ದಶಕದ ಸಂಭ್ರಮವಾಗಿದ್ದು, ಈ ಮೊದಲು ಪುರುಷೋತ್ತಮ ಭಟ್, ಕಡಬ ಸಾಂತಪ್ಪ, ಪೆರುವೊಡಿ ನಾರಾಯಣ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕುಡಾನ ಗೋಪಾಲಕೃಷ್ಣ ಭಟ್, ಮಾರ್ಗೋಳಿ ಗೋವಿಂದ ಸೇರಿಗಾರ್, ಎಂ.ಕೆ.ರಮೇಶ ಆಚಾರ್ಯ, ಕೊಕ್ಕಡ ಈಶ್ವರ ಭಟ್, ವಿಠಲ ಮಾಸ್ತರ್ ಇವರಿಗೆ ಪ್ರಶಸ್ತಿ ನೀಡಲಾಗಿತ್ತು.