ಹೊಲದಲ್ಲಿ ಕೆಲಸ ಮಾಡಲು ಕಾರ್ಮಿಕರು ಬೇಕಿಲ್ಲ, ಪವರ್ ವೀಡರ್ ಸಾಕಲ್ಲ

ಹೊಲದಲ್ಲಿ ದುಡಿಯುವವರ ಸಂಖ್ಯೆ ಇಂದು ಕಡಿಮೆಯಾಗಿದೆ. ಹೀಗಾಗಿ ರೈತರು ಕೂಲಿಕಾರ್ಮಿಕರನ್ನು ನಂಬಿ ಕೃಷಿ ಮಾಡುವುದು ಕಷ್ಟಕರವಾಗಿದೆ. ಅದಕ್ಕಾಗಿ ಎತ್ತು- ಕೂಲಿ ಕಾರ್ಮಿಕರಿಲ್ಲದೇ ಹೊಲದಲ್ಲಿ ಕೆಲಸ ಮಾಡಬಲ್ಲ ಯಂತ್ರಗಳು ರೈತರ ಆಕರ್ಷಣೆಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆರೆಕೋಡಿಯ ಮಾರುತಿ ಕೃಷಿ ಉದ್ಯೋಗ ಎಂಬ ಕಂಪನಿಯವರು ಒಂದೇ ಯಂತ್ರಕ್ಕೆ ಐದು ವಿವಿಧ ತೆರನಾದ ಉಪ ಯಂತ್ರ ಬಳಸಿ ಕೃಷಿ- ತೋಟಗಾರಿಕೆ ಕೆಲಸಕ್ಕೆ ಬಳಕೆ ಮಾಡುವ ಮಲ್ಟಿಪರ್ಪ್ಲಸ್ ಇಂಟರ್ ಕಲ್ಟಿವೇಟರ್ ಯಂತ್ರಗಳನ್ನು ತಯಾರಿಸಿದ್ದಾರೆ. ಭೂಮಿ ಹದಗೊಳಿಸುವುದು, ಬೆಳೆಗೆ ರಾಸಾಯನಿಕ ಸಿಂಪಡಿಸುವುದು, ಮಣ್ಣು ಹಸಿ ಮಾಡುವಿಕೆ, ಬೆಳೆಗೆ ಮಣ್ಣನ್ನು ಹಾಕುವುದು ಸೇರಿದಂತೆ ಸಮಗ್ರ ಕೃಷಿಯ ಬಳಕೆಗೆ ಸಿದ್ದ ಈ ಯಂತ್ರ.