ಭತ್ತ ಸೆಳೆಯುತ್ತೆ, ಒಕ್ಕಲೂ ಬರುತ್ತೆ; ಬಂತು ಸಹಕಾರಿ ಯಂತ್ರ.

ಭತ್ತದ ಕೃಷಿಕರಿಗೆ ದೊಡ್ಡ ತಲೆನೋವು ಅದರ ಕೋಯ್ಲು, ಕೋಯ್ಲೋತ್ತರ ಕಾರ್ಯಗಳು. ಅಡಿಕೆ ಬೆಳೆಗಾರರಿಗೆ ಇದೇ ವೇಳೆಗೆ ಅಡಿಕೆ ಕೊಯ್ಲು ಹಾಗೂ ಭತ್ತದ ಕೊಯ್ಲು ಬರುತ್ತದೆ. ಮೊದಲೇ ಕೃಷಿ ಕಾರ್ಮಿಕರ ಬವಣೆ ಎದುರಿಸುತ್ತಿರುವ ರೈತರು ಇನ್ನಷ್ಟು ಕಂಗಾಲಾಗುತ್ತಾರೆ. ಶಿರಸಿ- ಸಿದ್ದಾಪುರ ಸೀಮೆಗಳಲ್ಲಿ ಭತ್ತದ ಕೃಷಿ ಮಾಡುವ ರೈತರು ಇಂದಿಗೂ ಇದ್ದಾರೆ. ಮನೆಯ ಊಟಕ್ಕಾದರೂ ಭತ್ತ ಬೆಳೆದುಕೊಳ್ಳಬೇಕು, ಸಾವಯವ ಕೃಷಿ ಮಾಡಬೇಕು, ರಾಸಾಯನಿಕ ಬಳಸದೇ ಕೃಷಿ ಮಾಡಬೇಕು ಎಂದು ನಂಬಿದ ನೇಗಿಲ ಯೋಗಿಗಳಿಗೂ ಕೊರತೆ ಇಲ್ಲ. ಆದರೆ, ಈ ಕೆಲಸದ ಸಮಸ್ಯೆಗಳು ಮಾತ್ರ ತಪ್ಪಿದ್ದಲ್ಲ.
ಅಂತೂ ಇಂತೂ ಭತ್ತದ ಗದ್ದೆಯಲ್ಲಿ ಕೊಯ್ಲು ಮಾಡಿದರೂ ಅದನ್ನು ಅರ್ಧ ಕಿಮಿ ದೂರದ ಕಣಕ್ಕೆ ತಂದು ರಾತ್ರಿ ವೇಳೆ ದೀಪದ ಬೆಳಕಿನಲ್ಲಿ ಭತ್ತ ಸೆಳೆದು, ಮರುದಿನ ಧೂಳು, ಕಸ ತೆಗೆದು ಭತ್ತ ಉಳಿಸಿಕೊಳ್ಳುವುದು, ಮತ್ತೆ ಅವಕಾಶ ಆದಾಗ ಹುಲ್ಲುಗಳನ್ನು ಒಕ್ಕುವ ಮೂಲಕ ಜಾನುವಾರುಗಳಿಗೆ ಬಳಸಲು ನೆರವು ಮಾಡಿಸಿಕೊಡುವುದು ನಡೆದೇ ಇದೆ. ಇದನ್ನು ಕಷ್ಟದ ಕೆಲಸ ಎಂದೇ ಶಿರಸಿ ಸೀಮೆಗಳಲ್ಲಿ ಬಣ್ಣಿಸುವುದು ಉಂಟು.
ಇಂತಹ ಕಾರಣಕ್ಕೇ ಅನೇಕ ರೈತರು ಆಹಾರ ಬೆಳೆಯುವ ಭತ್ತದ ಕ್ಷೇತ್ರದಲ್ಲಿ ಅಡಿಕೆ, ಬಾಳೆ, ಅನಾನಸ್, ಶುಂಠಿ ಕೃಷಿ ಮಾಡುವವರೂ ಇದ್ದಾರೆ. ಅನ್ನ ಕೊಡುವ ಭೂಮಿ ಹಣ ಕೊಡುವ ಬೆಳೆಗಳನ್ನು ನಂಬಿಕೊಳ್ಳುವಂತೆ ಆಗಿದೆ. ಇದರಿಂದ ಭತ್ತದ ಭೂಮಿಗಳ ಪ್ರಮಾಣ ಬತ್ತುತ್ತಿದೆ.
ಸುಲಭಕ್ಕೆ ಬಂತು ಯಂತ್ರ:
ಭತ್ತದ ಸಸಿಗಳ ನಾಟಿಗೆ ಪ್ರೋತ್ಸಾಹಿಸಬೇಕು ಎಂದು ಕೃಷಿ ಇಲಾಖೆ ನಾಟಿಗೆ ಯಂತ್ರವನ್ನೂ ಜೋಡಿಸಿಕೊಟ್ಟು ಉತ್ತೇಜಿಸಿತು. ಇಂದು ಭತ್ತದ ಉಳುಮೆಗೆ, ನಾಟಿಗೆ, ಕೊಯ್ಲಿಗೆ ಯಂತ್ರಗಳು ಬಂದಿವೆ. ಕೊಯ್ಲಿನ ನಂತರ ಸಂಸ್ಕರಣೆಗೂ ಯಂತ್ರ ಬಂದಿರುವುದು ಹಲವರ ಬದುಕಿಗೆ ನೆಮ್ಮದಿ ಕೊಟ್ಟಿದೆ.
ಭತ್ತದ ಕೊಯ್ಲಿನ ಬಳಿಕ ಯಂತ್ರಕ್ಕೆ ಒಮ್ಮುಖವಾಗಿ ತೆನೆ ಹುಲ್ಲುಗಳನ್ನು ನೀಡಿದರೆ, ಅದರ ಮುಂಭಾಗದಲ್ಲಿ ಒಕ್ಕಿದ ಹುಲ್ಲು, ಎಡ ಪಾರ್ಶ್ವದಲ್ಲಿ ಚೊಕ್ಕಟವಾದ ಭತ್ತ ಬೀಳುತ್ತದೆ. ಭತ್ತದ ಹುಲ್ಲಿನಲ್ಲಿ ಒಂದೇ ಒಂದು ಕಾಳು ಉಳಿಯದಂತೆ ಚೊಕ್ಕಟವಾಗಿ ಬೇರ್ಪಡಿಸಲಾಗುತ್ತದೆ. ಒಂದು ಯಂತ್ರಕ್ಕೆ ಒಂದು, ಒಂದುವರೆ ತಾಸಿಗೆ ಒಂದು ಎಕರೆ ಭತ್ತದ ಗದ್ದೆಯ ಒಕ್ಕಲು ಸಾಧ್ಯವಿದೆ. ಹತ್ತು ಜನರು ಮೂರು ದಿನ ಮಾಡಿದರೂ ಮುಗಿಯದ ಕೆಲಸವನ್ನು ಹತ್ತು ಜನರಿದ್ದರೆ ಒಂದು ದಿನಕ್ಕೆ ಮುಗಿಸುವ ತಾಕತ್ತು ಯಂತ್ರಕ್ಕಿದೆ. ಯಂತ್ರ ಹೋಗಲು ದಾರಿ ಇದ್ದರೆ ಸಾಕು, ಕಣ ಕೂಡ ಮಾಡಿಕೊಳ್ಳುವ ತಲೆಬಿಸಿ ಇಲ್ಲ.
ಸಹಕಾರಿ ಯಂತ್ರ:
ಇಂತಹ ದುಬಾರಿ ಯಂತ್ರವನ್ನು ಒಂದು, ಎರಡು ಎಕರೆ ಕೃಷಿ ಭತ್ತದ ಬೇಸಾಯ ಮಾಡುವ ರೈತರು ಖರೀದಿಸುವುದು ಸುಲಭದ ಮಾತಲ್ಲ. ಈ ಕಾರಣದಿಂದಲೇ ಸಂಘದ ಸದಸ್ಯರಿಗೆ ನೆರವಾಗಲೆಂದೇ ಶಿರಸಿ ತಾಲೂಕಿನ ಯಡಳ್ಳಿ ಸೇವಾ ಸಹಕಾರಿ ಸಂಘವು ಶಿರಸಿಯ ಯಾಂತ್ರೀಕರಣ ವಿತರಕ ಆರ್.ಎಚ್.ಭಟ್ಟ ಅವರಿಂದ ಕೃಷಿ ಇಲಾಖೆ ಸಹಾಯಧನ ಸಹಿತ ಒಂದು ಲಕ್ಷ ರೂ. ಮೊತ್ತದಲ್ಲಿ ಭತ್ತ ಒಕ್ಕುವ ಯಂತ್ರ ಖರೀದಿಸಿದೆ.

ಳೆದ ವರ್ಷದಿಂದ ರೈತರ ಭತ್ತದ ಗದ್ದೆಗೇ ಈ ಯಂತ್ರವನ್ನು ಕಳಿಸಿಕೊಡಲಾಗುತ್ತಿದೆ. ಟ್ರಾಕ್ಟರ್ ಬಳಸಿಕೊಂಡು ಯಂತ್ರವನ್ನು ತಾಸಿನ ಲೆಕ್ಕಾಚಾರದಲ್ಲಿ ಕಳಿಸಲಾಗುತ್ತದೆ. ಯಂತ್ರಕ್ಕೆ ನಾಲ್ಕು ನೂರು ರೂ.ತಾಸಿಗೆ ಬಾಡಿಗೆ ನಿಗದಿ ಮಾಡಲಾಗಿದೆ. ಸಾಗಾಟಕ್ಕೆ ಟ್ರಾಕ್ಟರ್ ಬಾಡಿಗೆ ಬೇರೆ ಆಗಿದ್ದು, ನಾಲ್ಕೈದು ಬೆಳೆಗಾರರು ಸೇರಿ ಯಂತ್ರ ತರಿಸಿಕೊಂಡಲ್ಲಿ ಸಾಗಾಟದ ಬಾಡಿಗೆ ಉಳಿತಾಯ ಆಗಲಿದೆ.
ವಿವರಗಳಿಗೆ 08384-272133, 272285ಗೆ ಸಂಪರ್ಕ ಮಾಡಬಹುದು.

ಸರಸರನೆ ಮರ ಏರುವ ಮಹಿಳೆಯರು

ಮಹಿಳೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಈಗ ಮರ ಏರಲೂ ಸಲೀಸಾಗಿ ಕಲಿತಿದ್ದಾಳೆ. ಆರಾಮವಾಗಿ ಮರ ಏರಿ ಸೀಯಾಳ, ತೆಂಗಿನ ಕಾಯಿ ಕೆಳಗಿಳಿಸಿ ಕೊಡುತ್ತಾಳೆ. ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿ ನೆರವಿನಲ್ಲಿ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಆವಾರದಲ್ಲಿ ಇತ್ತೀಚೆಗೆ ನಡೆದ ತೆಂಗಿನ ಮರ ಹತ್ತುವ ಹಾಗೂ ಸಸ್ಯ ಸಂರಕ್ಷಣೆ ತರಬೇತಿಯಲ್ಲಿ ಆರು ಮಹಿಳೆಯರಿಗೆ ಮರ ಏರುವ ಕಲೆ ಸಿದ್ಧಿಸಿದೆ. ತರಬೇತಿಯಲ್ಲಿ 14 ಜನರು ಆಸಕ್ತಿಯಿಂದ ಪಾಲ್ಗೊಂಡಿದ್ದರು.
ಮೊದಲ ದಿನವೇ ಅರ್ಧ ಮರ ಏರಿದ ಮಹಿಳೆಯರು ಎರಡನೇ ದಿನ ತೆಂಗಿನ ಮರವನ್ನು ಸರಾಗವಾಗಿ ಏರಿ ತೆಂಗಿನಕಾಯಿ ಕೊಯ್ದು ಬೆರಗು ಮೂಡಿಸಿದರು. ಇತ್ತೀಚಿನ ದಿನಗಳಲ್ಲಿ ಕೂಲಿಗಳ ಕೊರತೆಯಿಂದ ಸಕಾಲದಲ್ಲಿ ತೆಂಗಿನಕಾಯಿ ಕೊಯ್ಯಲು ಸಾಧ್ಯವಾಗದೆ ರೈತರು ಬೆಳೆ ಬೆಳೆಯಲು ಹಿಂಜರಿಯುವುದನ್ನು ಗಮನಿಸಿದ ಮಂಡಳಿ, ರೈತರಿಗೆ ತೆಂಗಿನ ಮರ ಹತ್ತುವ ಕಾರ್ಯಕ್ರಮ ನಡೆಸಿತು.
ಮಂಡ್ಯದ ಮಹಾದೇವ ಸ್ವಾಮಿ ತರಬೇತಿ ನೀಡಲು ಆಗಮಿಸಿದ್ದು, ಎಲ್ಲರಿಗೂ ಸಮರ್ಪಕವಾಗಿ ತೆಂಗಿನಮರ ಹತ್ತುವ ಚಾಕಚಕ್ಯತೆ ಕಲಿಸಿದರು. ತರಬೇತಿಯ ಕೊನೆಯ ದಿನ ತೆಂಗಿನ ಮರ ಹತ್ತುವ ಸ್ಪರ್ಧೆಯೂ ನಡೆಯಿತು. ಮರ ಏರುವ ಕಲೆಯ ಜೊತೆಗೆ ತೆಂಗಿನ ಉತ್ಪಾದನೆ, ತಾಂತ್ರಿಕತೆ, ರೋಗ ನಿಯಂತ್ರಣ ಕುರಿತೂ ತರಬೇತಿ ನೀಡಲಾಯಿತು. ಮಹಿಳೆಯರು ಸ್ವಯಂ ಆಸಕ್ತಿಯಿಂದ ಬಂದು ತರಬೇತಿಯಲ್ಲಿ ಭಾಗವಹಿಸಿದ್ದರು. ಪುರುಷರಿಗೆ ಕಡಿಮೆ ಇಲ್ಲದಂತೆ ಸರಾಗವಾಗಿ ಮರ ಏರಿ ಕಾಯಿ ಕೊಯ್ದರು. ಕುಸುಮಾ ಬಾಲಚಂದ್ರ ಹೆಗಡೆ, ನೇತ್ರಾವತಿ ಹೆಗಡೆ, ಮಂಗಲಾ ನಾಯ್ಕ, ಮಾಲತಿ ಹೆಗಡೆ, ಸೀಮಾ ಜೋಗಳೇಕರ, ಜಯಶ್ರೀ ಹೆಗಡೆ ಮರ ಹತ್ತಿ ಸಾಧನೆ ಮೆರೆದರು.
ಹಳೆ ಮಾದರಿಯಲ್ಲಿ ಮರ ಏರಿದರೆ ಒಂದು ತಾಸಿನಲ್ಲಿ 10 ಮರ ಏರಬಹುದು. ಯಂತ್ರದ ಮೂಲಕ ಇದೇ ಹೊತ್ತಿನಲ್ಲಿ 20 ಮರ ಏರಬಹುದು ಎನ್ನುವುದು ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ ಹೇಮಂತ ಹೆಗಡೆ ಅನಿಸಿಕೆ. ತರಬೇತಿ ಪಡೆದವರಿಗೆ 2500 ರೂ. ಮೌಲ್ಯದ ಯಂತ್ರವನ್ನು ಉಚಿತವಾಗಿ ನೀಡಲಾಯಿತು. ಜೊತೆಗೆ ಒಂದು ವರ್ಷದ ವಿಮೆ ಸಹ ನೀಡಲಾಯಿತು.

ನಡೀಗದ್ದೆಯ ನಾರಾಯಣಗೆ ಇನೋವೇಟಿವ್ ಾರ್ಮರ್ ಪ್ರಶಸ್ತಿ

ಾಳುಮೆಣಸಿನ ವ್ಯವಸಾಯದಲ್ಲಿ ವಿಶೇಷ ಸಾಧನೆ ಮಾಡಿದ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಅಂತ್ರವಳ್ಳಿಯ ನಡೀಗದ್ದೆಯ ನಾರಾಯಣ ಡಿ.ಹೆಗಡೆ ಅವರಿಗೆ ದಿಲ್ಲಿಯ ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ 2014-15ನೇ ಸಾಲಿನ ಇನೋವೇಟಿವ್ ಾರ್ಮರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೊಂದು ರಾಷ್ಟ್ರೀಯ ಪ್ರಶಸ್ತಿಯಾಗಿದೆ. ದಿಲ್ಲಿಯಲ್ಲಿ ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟೂಟ್ ಆಯೋಜಿಸಿದ್ದ ಕೃಷಿ ವಿಜ್ಞಾನ ಮೇಳದಲ್ಲಿ ಕೇಂದ್ರ ಕುಡಿಯುವ ನೀರು ಮಂತ್ರಾಲಯದ ಮುಖ್ಯ ಸಲಹೆಗಾರ ಪದ್ಮಕಾಂತ ಝಾ ಪ್ರಶಸ್ತಿ ಪ್ರದಾನ ಮಾಡಿದರು.

ಶಿರಸಿಯಲ್ಲಿ ರಾಮಕೃಷ್ಣ ಹೆಗಡೆ ಪುತ್ಥಳಿ ಅನಾವರಣ

ಕರ್ನಾಟಕ ಕಂಡ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನಿಲುವು ಭಂಗಿಯ ಆಕರ್ಷಕ ಕಂಚಿನ ಪುತ್ಥಳಿಯನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿಯ ಯಲ್ಲಾಪುರ ನಾಕಾದಲ್ಲಿ ಅನಾವರಣಗೊಳಿಸಲಾಗಿದೆ. ನಾಡಿನ ಪ್ರಸಿದ್ಧ ಶಿಲ್ಪಿ ವೆಂಕಟಾಚಲಪತಿ ಅವರು ಕೆತ್ತಿದ ಮೂರ್ತಿಯನ್ನು ಸಚಿವ ಆರ್.ವಿ.ದೇಶಪಾಂಡೆ, ಎಚ್ಕೆ ಪಾಟೀಲ ಹಾಗೂ ಇತರರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದೇಶಪಾಂಡೆ, ಹೆಗಡೆ ಅವರ ಅಧ್ಯಯನ ಪೀಠ ಆರಂಭಕ್ಕೆ ಒತ್ತಾಯ ಇದೆ. ಮುತ್ಸದ್ಧಿ ರಾಜಕಾರಣಿ, ದೂರದೃಷ್ಟಿ ಉಳ್ಳ ಹೆಗಡೆ ಅವರ ಹೆಸರಿನ ಅಧ್ಯಯನ ಪೀಠವನ್ನು ಸರಕಾರ ಆರಂಭಿಸಲು ಚಿಂತನೆ ಮಾಡಿದೆ. ಪ್ರತಿ ವರ್ಷ ಹೆಗಡೆ ಅವರ ಜನ್ಮದಿನದಂದು ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪುರಸ್ಕಾರ ನೀಡಲು ಹೆಗಡೆ ಅಭಿಮಾನಿ ಬಳಗ ಯೋಜಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಪಾಟೀಲ್ ಪುಟ್ಟಪ್ಪ ಮಾತನಾಡಿ, ರಾಜ್ಯದಲ್ಲಿ ಹೆಗಡೆಗೆ ಮಾತ್ರ ಪ್ರಧಾನಿಯಾಗುವ ಯೋಗ್ಯತೆ ಇತ್ತು. ಅವರು ಪ್ರಧಾನಿಯಾಗದಿದ್ದುದು ಕರ್ನಾಟಕದ ದುರಾದೃಷ್ಟ ಎಂದು ವಿಷಾದಿಸಿದರು. ಅಲ್ಲದೆ, ಸರಕಾರ ಆರಂಭಿಸಲು ಉದ್ದೇಶಿಸಿದ ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರು ಇಡಬೇಕು. ವಿಧಾನಸೌಧದಲ್ಲಿ ಹೆಗಡೆ ಅವರ ಪ್ರತಿಮೆ ಸ್ಥಾಪಿಸಿ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಪುತ್ಥಳಿ ನಿರ್ಮಾಣ ಮಾಡಿದ ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರನ್ನು ಗೌರವಿಸಲಾಯಿತು.

ಕೊಂಡೆವೂರಿನಲ್ಲಿ ಅಪರೂಪದ ಮಹಾಯಾಗ

ಪ್ರಕೃತಿಯ ಸಂರಕ್ಷಣೆ, ಪೋಷಣೆ, ಪರಿಸರ ನೈರ್ಮಲ್ಯೀಕರಣ, ಮಾನಸಿಕ ನೆಮ್ಮದಿಯ ಸಾಧನೆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮತ್ತು ಲೋಕಕಲ್ಯಾಣ ಎಂಬ ಸಂಕಲ್ಪದೊಂದಿಗೆ ಕಾಸರಗೋಡಿನ ಉಪ್ಪಳ ಸಮೀಪದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮ ಅಭೂತಪೂರ್ವ ‘ಚತುರ್ವೇದ ಸಂಹಿತಾ ಯಾಗ ಮತ್ತು ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ’ ನಡೆಯುತ್ತಿದೆ.ಪೂರ್ವ ಗಿಡ ಮೂಲಿಕೆ ಉಪಯೋಗಿಸಿ ರೋಗಹರ ‘ಗಾಯತ್ರಿಘೃತ’ವನ್ನು ಪ್ರಸಾದವಾಗಿ ಪಡೆಯಲಿರುವ ಈ ಯಾಗ, ಗಿಡಮೂಲಿಕೆಗಳ ಮಹತ್ವ ಸಾರುತ್ತದೆ. ಸಮಕಾಲೀನ ವೈದ್ಯಕೀಯ ರಂಗದ ಪುನಶ್ಚೇತನಕ್ಕೂ ನಾಂದಿ ಹಾಡಲಿದೆ. ಅಗಸ್ತ್ಯ ಮಹಿರ್ಷಿಗಳಿಂದ ಪ್ರಣೀತ ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ ಸುಮಾರು 500 ವರ್ಷಗಳಿಂದೀಚೆಗೆ ನಡೆದಿಲ್ಲ ಎಂಬುದು ಬಲ್ಲವರ ಅಭಿಪ್ರಾಯ.
ಭಾರತದ ಭವ್ಯ ಪರಂಪರೆಯಲ್ಲಿ ಯಾಗ-ಹೋಮಾದಿಗಳಿಗೆ ತನ್ನದೇ ಆದ ಮಹತ್ವವಿದೆ. ಇಂತಹ ಯಾಗಗಳು ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿದೆ. ಯೋಗಿಗಳು ಹಾಗೂ ಮಹಾತ್ಮರು ಯಾಗಗಳಿಗೆ ಬಹಳಷ್ಟು ಮಹತ್ವ ನೀಡಿದ್ದರು. ಅನಾದಿಕಾಲದಿಂದಲೇ ನಡೆದು ಬರುತ್ತಿರುವ ಯಾಗಗಳು ಆಗಾಗ ನಡೆಯುತ್ತಿವೆ. ಕಾಸರಗೋಡಿನ ಉಪ್ಪಳ ಸಮೀಪದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮ ಈ ಅಪರೂಪದ ಯಾಗ ನಡೆಸಲು ಮುಂದಾಗಿದೆ.

ಅಗಸ್ತ್ಯನಾಡಿಯಲ್ಲಿದೆ ಯಾಗದ ಪ್ರಸ್ತಾಪ:
ಪ್ರಾಚೀನ ಭಾರತದ ಶ್ರೇಷ್ಠ ಮುನಿಗಳಲ್ಲೊಬ್ಬರು ಅಗಸ್ತ್ಯರು. ಆಧ್ಯಾತ್ಮಿಕ, ಆಯುರ್ವೇದ ಮತ್ತು ಭಾಷಾ ಶಾಸದಲ್ಲಿ ನಿಪುಣರಾಗಿದ್ದ ಅವರು ವಾತಾವರಣದ ಸ್ವಚ್ಛತೆ ಮತ್ತು ಜನಜೀವನದಲ್ಲಿ ಶಾಂತಿ ಸ್ಥಾಪಿಸಲು ‘ಅಗಸ್ತ್ಯನಾಡಿ’ ಗ್ರಂಥದಲ್ಲಿ ‘ಚತುರ್ವೇದ ಸಂಹಿತಾ ಯಾಗ ಮತ್ತು ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ’ ನಮೂದಿಸಿದ್ದರು. ಅಂತಹ ಯಾಗವೊಂದು ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ.21ರಿಂದ 29ರ ವರೆಗೆ ನಡೆಯುತ್ತಿದೆ. ಉತ್ತರದಲ್ಲಿ ನೀರು ಉಕ್ಕಿ ಹರಿದಾಗ, ಸಮುದ್ರದ ಮಟ್ಟ ಹೆಚ್ಚಿದಾಗ, ಪಂಚಭೂತಗಳ ಮೂಲಕವೇ ಅನೇಕ ರೋಗರುಜಿನಗಳು ಹರಡುತ್ತಿರುವ ಕಾಲದಲ್ಲಿ ಇಂತಹ ಯಾಗ ನಡೆಸಬೇಕು ಎಂದು ಸೂಕ್ತ ಸ್ಥಳ ಮತ್ತು ಸಮಯವನ್ನು ಅಗಸ್ತ್ಯರು ಗ್ರಂಥದಲ್ಲಿ ಸೂಚಿಸಿದ್ದಾರೆ.ಸ್ತ್ಯರು ಗ್ರಂಥದಲ್ಲಿ ನಮೂದಿಸಿದಂತೆ ಕೇಂದ್ರದಲ್ಲಿ ಗಾಯತ್ರಿ ಪೀಠವಿರುವ, ನೈಋತ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಗುರುಸನ್ನಿಧಿಯಿರುವ ಸ್ಥಳವೇ ಯಾಗಕ್ಕೆ ಸೂಕ್ತ ಸ್ಥಳ. ಯಾಗಕ್ಕೆ ಅಗತ್ಯವಾದ 24 ಗಿಡಮೂಲಿಕೆಗಳ ಪೈಕಿ ಕನಿಷ್ಠ 21ನ್ನು ಸ್ಥಳದಲ್ಲಿಯೇ ಬೆಳೆದಿರಬೇಕು. ಇಂತಹ ಸ್ಥಳ ಹುಡುಕಿಕೊಂಡು ಬೆಂಗಳೂರು ಸೇರಿದಂತೆ ದೇಶದ ವಿವಿಧ ಊರುಗಳನ್ನು ಸುತ್ತಿ ಸುಸ್ತಾಗಿದ್ದ ಕೇರಳದ ಆಯರ್ವೇದ ಪಂಡಿತ ತಂಗಪ್ಪನ್ ಅವರು 2013ರಲ್ಲಿ ಕೊಂಡೆವೂರು ಆಶ್ರಮದಲ್ಲಿ ಆಯೋಜಿಸಲಾಗಿದ್ದ ಸಹಸ್ರ ಚಂಡಿಕಾಯಾಗಕ್ಕೆ ಆಗಮಿಸಿದ್ದರು. ಅಗಸ್ತನಾಡಿಯಲ್ಲಿ ಹೇಳಿರುವಂತೆ ಹಲವಾರು ಲಕ್ಷಣಗಳು ಇಲ್ಲಿರುವುದು ಅವರ ಗಮನಕ್ಕೆ ಬಂದಿತ್ತು. ಬಳಿಕ ಶಾಸ್ತ್ರೋಕ್ತವಾಗಿ ವೀಳ್ಯದೆಲೆ, ಸೋಮಲತೆಗಳಂತಹ ಕೆಲ ಗಿಡಮೂಲಿಕೆಗಳನ್ನು ನೆಡಿಸಿ ನಿತ್ಯಾನಂದ ಯೋಗಾಶ್ರಮದ ಪರಿಸರವನ್ನು ಗ್ರಂಥದಲ್ಲಿ ಉಲ್ಲೇಖಿತ ಗುಣಲಕ್ಷಣಗಳಿಗೆ ಪೂರಕವಾಗುವಂತೆ ಮಾಡಲಾಯಿತು.
ಯಾಗಕ್ಕೆ ಅವಶ್ಯಕ ಕೆಲವು ಶುಭ ಶಕುನಗಳೂ ಕಂಡು ಬರಬೇಕು. ಗ್ರಂಥದಲ್ಲಿ ಉಲ್ಲೇಖಿಸಿರುವಂತಹ ಹಸುವೊಂದು ಆಶ್ರಮಕ್ಕೆ ತಾನೇ ತಾನಾಗಿ ಆಗಮಿಸಿ ಯಾಗ ನಡೆಯುವ ಸ್ಥಳದಲ್ಲಿ ನಿಂತಿತ್ತು. ಹಸುವಿನ ಆಗಮನ ಯಾಗ ನಡೆಸಲು ಸೂಕ್ತ ಸಮಯವೆಂದು ತೀರ್ಮಾನಿಸಲಾಯಿತು ಎಂದು ಶ್ರೀ ಯೋಗನಂದ ಸರಸ್ವತೀ ಸ್ವಾಮೀಜಿ ಹೇಳುತ್ತಾರೆ.
ಯಾಗಕ್ಕೆ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನೇತೃತ್ವ, ಶಿಬರೂರು ವೇದವ್ಯಾಸ ತಂತ್ರಿಗಳ ನಿರ್ದೇಶನ, ಕಟೀಲಿನ ಪ್ರಧಾನ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ-ಅನಂತಪದ್ಮನಾಭ ಅಸ್ರಣ್ಣ ವೈದಿಕ ಆಚಾರ್ಯತ್ವ, ತಂಗಪ್ಪನ್ ವೈದ್ಯ ಆಚಾರ್ಯತ್ವ ಇರುತ್ತದೆ.

ಸಾಮರಸ್ಯ ಸಂಗಮ:
ಅಪರೂಪದ ಈ ಯಾಗಕ್ಕೆ ಎಲ್ಲ ವರ್ಗಗಳ ಜನರು ತಮ್ಮದೇ ವಿಶೇಷ ಸೇವೆಯಲ್ಲಿ ತೊಡಗಿದ್ದಾರೆ. ವಿಶ್ವಕರ್ಮರು ವಿಗ್ರಹ ಮಾಡಿದ್ದಾರೆ. ಕುಂಬಾರರು ಮಡಿಕೆ ಮಾಡಿದ್ದಾರೆ. ಕೊರಗ ಸಮಾಜದವರು ಬಿದಿರಿನ ಬುಟ್ಟಿ ಹೆಣೆದಿದ್ದಾರೆ. ಗಾಣಿಗರು ಆಶ್ರಮದಲ್ಲಿಯೇ ಎಣ್ಣೆ ತೆಗೆದು ಕೊಡುತ್ತಿದ್ದಾರೆ. ನೇಕಾರರು ದೇವರಿಗೆ ವಸ ಹಾಗೂ ದೀಪಕ್ಕೆ ಬತ್ತಿ ನೀಡುತ್ತಿದ್ದಾರೆ. ತಂತ್ರಿ, ಸ್ವಾಮೀಜಿಗಳನ್ನು ಕರೆತರುವಷ್ಟೇ ಗೌರವಯುತವಾಗಿ, ವೇದ ಘೋಷಗಳೊಂದಿಗೆ ಇವರನ್ನೂ ಆಶ್ರಮಕ್ಕೆ ಕರೆತಂದು ಅವರವರ ಕಾರ್ಯದಲ್ಲಿ ತೊಡಗಿಸಲಾಗಿದೆ. ಭೂಮಿಪುತ್ರರು ಎಂಬ ಹೆಸರುಳ್ಳ ಹರಿಜನರು ಸಾವಯವ ಪದ್ಧತಿಯಲ್ಲಿ ಕೃಷಿಮಾಡಿ ಯಾಗಕ್ಕೆ ಆಹಾರ ತಯಾರಿಸುತ್ತಿದ್ದಾರೆ. ಕೃಷಿ ಆಯುರ್ವೇದ, ಪ್ರಕೃತಿ ಬಗ್ಗೆ ಆಸಕ್ತಿ ಜತೆಗೆ ಸಾಮಾಜಿಕ ಸಾಮರಸ್ಯಕ್ಕೆ ನಾಂದಿಯಾದರೆ ಆದೇ ಯಾಗದ ಸಾರ್ಥಕತೆ ಎಂದು ತಿಳಿಸುತ್ತಾರೆ ಯೋಗಾನಂದ ಸರಸ್ವತೀ ಸ್ವಾಮೀಜಿ.

ಯಾಗದ ವೈಶಿಷ್ಟ್ಯಗಳು:
- ಯಾಗೋತ್ಪನ್ನ ಘೃತ ಪ್ರಸಾದ ಆಯುರ್ವೇದ ಪರಂಪರಾ ಚಿಕಿತ್ಸಾ ಪದ್ಧತಿಯಲ್ಲಿರುವ ಲಾಡ ವಿದ್ಯೆಗೆ ಸಂಬಂಧಿಸಿ ಅಗಸ್ತ್ಯ ಋಷಿಗಳಿಂದ ಆವಿಷ್ಕರಿಸಲ್ಪಟ್ಟಿದೆ.
- 500 ವರ್ಷಗಳ ಹಿಂದೆ ಪೂಜ್ಯ ಶ್ರೀ ಪ್ರಭಾಕರ ಸಿದ್ಧಯೋಗಿ ಅವರ ನೇತೃತ್ವದಲ್ಲಿ ತಮಿಳುನಾಡಿನ ಮರುತ್ವಾಮಲೆಯಲ್ಲಿ ಇದೇ ಮಹಾಯಾಗ ನಡೆದ ಮಾಹಿತಿಯಿದೆ.
- ಹಾಲಿರುವ ಮತ್ತು ಹಾಲಿಲ್ಲದ ಆರು ವೃಕ್ಷಗಳ ಕಂಬಗಳಿಂದ ನಿರ್ಮಿಸಿದ ಅಷ್ಟಭುಜಾಕೃತಿಯಲ್ಲಿರುವ ಯಾಗ ಶಾಲೆಯ ಛಾವಣಿಯನ್ನು ದರ್ಭೆಯಿಂದ ಹೊದಿಸಲಾಗುತ್ತದೆ.
- ಯಾಗಶಾಲಾ ಮಧ್ಯದಲ್ಲಿ ಶ್ರೀ ಧನ್ವಂತರಿ ದೇವತೆಯ ಮೃಣ್ಮಯ ಮೂರ್ತಿ ಸ್ಥಾಪಿಸಿ ಅದರ ಮುಂದೆ ಒಲೆ ನಿರ್ಮಿಸಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಘೃತ ನಿಕ್ಷೇಪಿಸಿ ಪಾಲಾಶ, ಕಾಸರಕ ಹಾಗೂ ಕಂಚಿನ ಸಟ್ಟುಗಗಳ ಸಹಾಯದಿಂದ ಪಾಕ ಮಾಡಲಾಗುವುದು. ಧನ್ವಂತರಿಯ ಅಕ್ಕಪಕ್ಕದಲ್ಲಿ ಬ್ರಹ್ಮ-ಸರಸ್ವತಿ ಕುಂಡಗಳನ್ನು ಸ್ಥಾಪಿಸಲಾಗುವುದು. ಎಂಟೂ ದಿಕ್ಕುಗಳಲ್ಲಿ ಗಾಯತ್ರಿ ಯಾಗಕ್ಕಾಗಿ ಹೊಮಕುಂಡ ನಿರ್ಮಿಸಲಾಗುತ್ತದೆ.
- ಯಾಗಶಾಲೆಯ ನಾಲ್ಕೂ ದಿಕ್ಕುಗಳಲ್ಲಿ ಬೇರೆ ಬೇರೆ ಯಾಗಶಾಲೆ ನಿರ್ಮಿಸಿ ಚತುರ್ವೇದ ಸಂಹಿತಾ ಯಾಗವೂ ನಡೆಯಲಿದೆ.
- ದೇಶದ ವಿವಿಧ ರಾಜ್ಯಗಳ ವಿಶಿಷ್ಟ ವಾತಾವರಣದಲ್ಲಿ ಬೆಳೆದ 24 ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ನಿಶ್ಚಿತ ಪ್ರಮಾಣದಲ್ಲಿ ಅವುಗಳ ರಸವನ್ನು ಘೃತ ತಯಾರಿಕೆಗೆ ಬಳಸಲಾಗುವುದು.
- ಉದಯ ಕಾಲದಿಂದ ಅಸ್ತಮಾನದ ವರೆಗೆ ಏಳೂ ದಿನ ಪರ್ಯಂತ ವೈದಿಕರಿಂದ ನಡೆಯಲಿರುವ ಈ ಯಾಗಶಾಲೆಯಲ್ಲಿ ನುರಿತ ವೈದ್ಯರಿಂದ ಏಕಕಾಲದಲ್ಲೇ ಘೃತ ನಿರ್ಮಾಣ ಕಾರ್ಯವೂ ನೆರವೇರಲಿದೆ.
- ಯಾಗದ ವೇಳೆಯಲ್ಲಿ ಪೂಜಿಸಲ್ಪಡುವ ಗೋವು ಬಿಳಿ ವರ್ಣದಿಂದ ಕೂಡಿದ್ದು, ಸಮಾನ ಎತ್ತರದ ಕೊಂಬು, ಹಣೆಯಲ್ಲಿ ಶಂಖಮುದ್ರೆ, ಮಾಲದ ತುದಿ ಕರಿವರ್ಣ, ತುಂಬು ಕೆಚ್ಚಲು ಮತ್ತು ಒಂದೇ ಕರುವಿನ ತಾಯಿಯಾಗಿರುವುದು ಇನ್ನೊಂದು ವೈಶಿಷ್ಟ್ಯ.
- ಕಬ್ಬಿಣ ಸ್ಪರ್ಶಿಸದೆ ತೋಡಿದ ಒಂಭತ್ತು ಕುಂಡಗಳಲ್ಲಿ ಪ್ರತಿನಿತ್ಯ ಊರ ಗೋವಿನ ಗೋಮಯ, ಗೋಮೂತ್ರ ಮತ್ತು ತುಳಸಿ ಹಾಕಿ ಪೂಜಿಸಿದ ಸರಸ್ವತಿ ಪತ್ರ(ವೀಳ್ಯದೆಲೆ)ದ ರಸವನ್ನು ವಿಶೇಷವಾಗಿ ಈ ಘೃತಕ್ಕಾಗಿ ಉಪಯೋಗಿಸಲಾಗುವುದು.
- ಈ ಯಾಗ ಲಶ್ರುತಿಯಂತೆ ಪಂಚಭೂತಗಳ ಸಮತೋಲನದ ವ್ಯತ್ಯಯದಿಂದ ಉಂಟಾಗಿರುವ ಸೂರ್ಯತಾಪ, ಜಲ, ವಾಯು, ಪೃಥ್ವಿ, ಆಕಾಶಾದಿಗಳಿಗೆ ಉಂಟಾಗಿರುವ ಮಾಲಿನ್ಯ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳಿಂದ ರಕ್ಷಿಸಲ್ಪಡುವುದು.
- ಮಕ್ಕಳ ಸ್ಮರಣಶಕ್ತಿ ವೃದ್ಧಿಗಾಗಿ, ಮಾನಸಿಕ ಕಾಯಿಲೆ, ಅಪಸ್ಮಾರ ಮತ್ತು ಇನ್ನೂ ಅನೇಕ ಆಯುರ್ವೇದ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮ ಬೀರಬಲ್ಲ ಈ ಘೃತದ ಸೇವನೆಯಿಂದ ದೇವಾಸುರ ಕೋಪ ಮತ್ತು ಇನ್ನಿತರ ಬಾಧೆಗಳು ಪರಿಹಾರವಾಗುತ್ತವೆ.

ಾಯತ್ರಿ ಘೃತ ತಯಾರಿಕೆಯಲ್ಲಿ ಉಪಯೋಗಿಸುವ ಆಯುರ್ವೇದ ಗಿಡಮೂಲಿಕೆಗಳು:
ವೀಳ್ಯದೆಲೆ (ಸರಸ್ವತಿ ಪತ್ರ), ಕೇಪುಳ, ಅಮೃತಬಳ್ಳಿ, ಹಾರಮುನಿ, ಆಲ, ನೈದಿಲೆ, ಹಿಪ್ಪಲಿ, ದೇವ ಬಾಳೆ (ಕದಳಿ), ಜಾಜಿ, ಗರಿಕೆ ಹುಲ್ಲು, ಶಂಖ ಪುಷ್ಪ, ಒಂದೆಲಗ, ಬ್ರಾಹ್ಮಿ, ವಿಷ್ಯು ಕ್ರಾಂತಿ, ಅಬ್ದ ಹುಲ್ಲು, ನೆಲ ನೆಲ್ಲಿ, ಸೋಮಲತೆ, ರುದ್ರಾಕ್ಷ, ಜ್ಯೇಷ್ಠ ಮಧು, ಜೀರಿಗೆ, ಬಜೆ, ನೀರು ಮಟ್ಟಿ, ಬಿಳಿಎಲೆ, ಕೃಷ್ಣ ತುಳಸಿ.

ಯಾಗಕ್ಕೆ ಗಿಡಮೂಲಿಕೆ ಯಾವುದು? ಎಲ್ಲಿಂದ?
ವೀಳ್ಯದೆಲೆ - ಆಶ್ರಮ
ದೇವ ಬಾಳೆ - ಆಶ್ರಮಾಜಿ - ಆಶ್ರಮೃಷ್ಣತುಳಸಿ - ಆಶ್ರಮಮೃತಬಳ್ಳಿ - ಗುಜರಾತ್ೇಪುಳ - ಗೋವಾ
ಹಾರಮುನಿ - ಕೇರಳ
ಹಿಪ್ಪಲಿ - ಕೇರಳ
ಶಂಖಪುಷ್ಪ - ಕೇರಳಂದೆಲಗ - ಕೇರಳ
ಬ್ರಾಹ್ಮಿ - ಕೇರಳಬ್ದ ಹುಲ್ಲು - ಕೇರಳೀರಿಗೆ - ಕೇರಳಲ - ಆಂಧ್ರ ಪ್ರದೇಶ
ನೈದಿಲೆ - ತಮಿಳುನಾಡು, ಕೇರಳರಿಕೆ ಹುಲ್ಲು - ಮಹಾರಾಷ್ಟ್ರ
ವಿಷ್ಣುಕ್ರಾಂತಿ - ತಮಿಳುನಾಡು, ಕೇರಳ
ಸೋಮಲತೆ - ತಮಿಳುನಾಡು
ರುದ್ರಾಕ್ಷ - ನೇಪಾಳ್ಯೇಷ್ಠಮಧು - ಕೇರಳ, ಕರ್ನಾಟಕ
ಬಜೆ - ಕೇರಳ, ಕರ್ನಾಟಕ
ಬಿಳಿ ಎಲೆ - ಗೋವಾ
ನೀರುಮಟ್ಟಿ - ವಿವಿಧೆಡೆ

ನನಸಾದ ಕನಸು:
ಅನ್ನದಿಂದ ಆರೋಗ್ಯ, ಆರೋಗ್ಯದಿಂದ ಸ್ವಸ್ಥ ಸಮಾಜ, ಅಕ್ಷರದಿಂದ ಅರಿವು, ಆಶ್ರಯದಿಂದ ಸುಭದ್ರತೆ, ಆಧಾರದಿಂದ ಕ್ರಿಯಾಶೀಲತೆಗಳೆಂಬ ಶ್ರೀ ಯೋಗಾನಂದ ಸರಸ್ವತಿ ಸಾಮೀಜಿಗಳ ಕನಸುಗಳು ಸಾಕಾರಗೊಂಡಿದೆ. ಯೋಗ-ತ್ಯಾಗಗಳ ಈ ತವರಿನಲ್ಲಿ ಯಾಗಭೂಮಿಯಾಗಿಯೂ ಗಮನ ಸೆಳೆದಿದೆ. ಈ ಆಶ್ರಮ ಮೇಲೆ ಹೇಳಿದ ಪಂಚಮುಖಿ ಚಟುವಟಿಕೆಗಳಲ್ಲಿ ನಿರತವಾಗಿದೆ.ಶ್ರಮದಲ್ಲಿ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆ ಇದೆ. 400 ಮಕ್ಕಳಿರುವ ಎರಡು ಶಾಲೆಗಳಲ್ಲಿ ಗುರುಕುಲ ಮತ್ತು ಆಧುನಿಕ ಶಿಕ್ಷಣ ನೀಡಲಾಗುತ್ತಿದೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಆಯುರ್ವೇದ ಶಿಬಿರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬಡವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಹಾಗೂ ಸಾಮಗ್ರಿ ನೀಡಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿಯಾಗಲು ಗುಡಿ ಕೈಗಾರಿಕೆ, ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಇದೆಲ್ಲದರ ಜತೆಗೆ ಸಾವಯುವ ಕೃಷಿಗೆ ಉತ್ತೇಜನ ನೀಡಲು ‘ಧಾನ್ಯಲಕ್ಷ್ಮೆ’ ಯೋಜನೆ ಹಮ್ಮಿಕೊಳ್ಳಲಾಗಿದೆ. ಮದ್ಯ ವ್ಯಸನಕ್ಕೊಳಗಾಗಿದ್ದ 300ಕ್ಕೂ ಹೆಚ್ಚು ಜನರು ಶ್ರೀ ಯೋಗಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸರಿದಾರಿಗೆ ಬಂದಿದ್ದಾರೆ.

ಅಥಣಿಯಲ್ಲಿದೆ ಸಿಹಿ ಬೇವಿನ ಮರ

ಬೇವು ಎಂದರೆ ಕಹಿ. ಆದರೆ ಇಲ್ಲೊಂದು ಬೇವಿನಮರವಿದೆ. ಅದರ ವಿಶೇಷವೆಂದರೆ ಅದು ಸಿಹಿಯಾದ ಬೇವಿನಮರ.
ನೀವು ನಂಬುತ್ತಿರೋ ಬಿಡುತ್ತಿರೋ ಗೊತ್ತಿಲ್ಲ, ಅಥಣಿ-ಬಿಜಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಕ್ರಾಸ್ನ ಮಾಣಿಕ ನಗರದಲ್ಲಿ ಲಿಂಗೈಕ್ಯ ರಾಚೋಟೇಶ್ವರ ಶಿವಯೋಗಿಗಳ ದೇವಾಲಯದ ಆವರಣದಲ್ಲಿರುವ ಬೇವಿನಗಿಡದ ಎಲೆ ಮತ್ತು ಹೂಗಳು ವಿಜ್ಞಾನಕ್ಕೆ ಸವಾಲು ಹಾಕುವಂತೆ ತನ್ನ ಕಹಿಯನ್ನು ಕಳೆದುಕೊಂಡು ಸಿಹಿಯಾಗಿವೆ. ಅಷ್ಟೇ ಅಲ್ಲ, ಈ ಗಿಡ ವಿವಿಧ ರೋಗಗಳಿಗೆ ರಾಮಬಾಣವಾಗಿ ಜನೋಪಯೋಗಿಯಾಗಿದೆ.
ಶ್ರೀ ರಾಚೋಟೇಶ್ವರ ಶಿವಯೋಗಿಗಳು ಜಮಖಂಡಿ ತಾಲೂಕಿನ ಕಡಪಟ್ಟಿ ಜಗದೀಶ್ವರ ಮಠದಿಂದ ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಇಲ್ಲಿಯ ಅರಣ್ಯದಲ್ಲಿ ಕುಳಿತು ತಪಸ್ಸು ಪ್ರಾರಂಭಿಸಿದ್ದರಂತೆ. ಯುಗಾದಿ ಹಬ್ಬದಂದು ಅವರು ನೆಟ್ಟ ಬೇವಿನ ಸಸಿ ಹೆಮ್ಮರವಾಗಿ ಬೆಳೆಯಿತು. ಆದರೆ ಕಹಿಯಾಗಲಿಲ್ಲ. ಬೇವಿನ ಮರದ ಹೂವು, ಕಾಯಿ, ತಪ್ಪಲು ಕಹಿಯನ್ನು ಕಳೆದುಕೊಂಡಿತು.

ಬಿದಿರು ಅಕ್ಕಿಗೂ ಬಂತು ಕಾಲ

ಪ್ರತೀ 60 ವರ್ಷಕ್ಕೊಮ್ಮೆ ಬರುವ ಬಿದಿರಿನಿಂದ ಬರಗಾಲವಾಗಬಹುದು ಎಂಬ ಮಾತನ್ನು ಈಗಲೂ ಹಿರಿಯ ವ್ಯಕ್ತಿಗಳ ಬಾಯಲ್ಲಿ ಕೇಳುತ್ತೇವೆ. ಈ ಹಿಂದೆ ಸುಮಾರು 60 ವರ್ಷಗಳ ಹಿಂದೆ ಬಿದಿರು ಅಕ್ಕಿ ಬಂದಿದ್ದು ಆಗ ಮಳೆ ಇಲ್ಲದೆ ಬರಗಾಲವಾಗಿತ್ತು. ಈ ಬಿದಿರು ಅಕ್ಕಿಯನ್ನು ಉಪಯೋಗಿಸಿದ ನೆನಪು ಮತ್ತೆ ಬರಬಹುದೇನೋ ಎಂಬ ಸ್ಥಿತಿ ಮತ್ತೊಮ್ಮೆ ಕಂಡು ಬಂದಿದೆ. ಕಳೆದ 2 ವರ್ಷಗಳಿಂದ ಮಲೆನಾಡಿನ ಭಾಗದಲ್ಲಿ ಬಹುತೇಕವಾಗಿ ಬಿದಿರು ಅಕ್ಕಿಯಾಗಿದೆ. ಇದರಿಂದ ಬಿದಿರು ತನ್ನ ಸಂತತಿ ನಶಿಸುತ್ತಿದ್ದು ಒಂದೇ ವರ್ಷದಲ್ಲಿ ಸಂಪೂರ್ಣ ಬಿದಿರು ನಾಶವಾಗಲಿದೆ.
ಕಾರಣ:
ಪ್ರತಿ ಜೀವರಾಶಿಗೂ ಇಂತಿಷ್ಟು ಆಯುಷ್ಯ ನಿಗದಿಯಾಗಿರುತ್ತದೆ. ಹಾಗೆಯೇ ಬಿದಿರಿಗೂ 50-60 ವರ್ಷಗಳ ಕಾಲ ಬದುಕುತ್ತವೆ. ಈಗ ರಾಜ್ಯದ ಬಿದಿರು ಬದುಕಿನ ಅಂತಿಮಘಟ್ಟ ಮುಟ್ಟಿದೆ. ಗಮನಿಸಬೇಕಾದ ಅಂಶವೆಂದರೆ ಬಿದಿರು ಸಂತತಿ ಸಾಮೂಹಿಕವಾಗಿ ಕಣ್ಣು ಮುಚ್ಚುವ ಸಮಯ ಬಂದಿದೆ. ಈಗ ಸಾವಿನ ಸಮಯ ಬಿದಿರು ಮತ್ತೆ ಸ್ವತಂತ್ರವಾಗಿ ಚಿಗುರಿ ಎತ್ತರವಾಗಿ ಬೆಳೆಯಲು 4-5 ವರ್ಷಗಳೇ ಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ ಬಿದಿರು ಬೆಳೆಗೆ ಅರಣ್ಯ ಇಲಾಖೆ ಯಾವುದೇ ರೀತಿಯಲ್ಲೂ ತಯಾರಾದಂತೆ ಕಾಣುತ್ತಿಲ್ಲ.
ಬಿದಿರು ರೈತರಿಗೆ ಜೀವಾಳವಾಗಿದೆ. ಹೊಲಗದ್ದೆಗಳ ಬೇಲಿಗೆ, ಕಾಗದ ತಯಾರಿಕೆಗೆ, ಹಾಗೆಯೇ ಮಳೆಗಾಲದಲ್ಲಿ ಬಿಡುವ ಕಳಲೆಗೂ ಅಪಾರ ಬೇಡಿಕೆಯಿದೆ. ಇದನ್ನು ಸಾಂಬಾರು ಹಾಗೂ ವಿವಿಧ ರೀತಿಯ ತಿನಿಸಿಗೂ ಬಳಸುತ್ತಾರೆ. ಮುಖ್ಯವಾಗಿ ಆನೆಗಳಿಗೆ ಬಿದಿರುಸೊಪ್ಪು ಆಹಾರವಾಗಿದೆ.
ಬಿದಿರು ಅಕ್ಕಿಗೆ ಈಗ ಕಾಲ ಬಂದಿದೆ:
ಮಲೆನಾಡಿನ ಬಹುತೇಕ ಭಾಗದಲ್ಲಿ ಬಿದಿರು ರಾಜನ್ ಬಂದಿದ್ದು ಬಿದಿರು ಅಕ್ಕಿ ಕಾಣುವ ಅವಕಾಶವಾಗಿದೆ. ಈ ಭಾಗದಲ್ಲಿ ಬಾರೀ ಪ್ರಮಾಣದಲ್ಲಿ ಬಿದಿರು ಅಕ್ಕಿ ಬಂದಿದ್ದರಿಂದ ಬಯಲು ಸೀಮೆಯ 2-3 ಲಂಬಾಣಿ ತಂಡದವರು ಈ ಬಿದಿರು ಅಕ್ಕಿಯನ್ನು ಸಂಗ್ರಹಿಸುವಲ್ಲಿ ಮುಂದಾಗಿದ್ದಾರೆ. ಬಿದಿರು ಮಟ್ಟಿಯ ಅಡಿಯಲ್ಲಿ ಬಿದ್ದಿರುವ ಅಕ್ಕಿಯನ್ನು ಸಂಗ್ರಹಿಸುವುದು ತುಂಬಾ ಕಷ್ಟವಾಗಿದೆ. ಸಂಗ್ರಹಿಸಿ ಸ್ವಚ್ಛ ಮಾಡಿ ಅಕ್ಕಿಯ ಮಿಲ್ಗೆ ಸಾಗಿಸಿ ನಂತರ ಉಪಯೋಗಿಸಲಾಗುತ್ತದೆ. ತುಂಬಾ ರುಚಿಕರವಾದ ಈ ಬಿದಿರು ಅಕ್ಕಿಯಿಂದ ಅನ್ನ, ಹಾಗು ತಿಂಡಿಗಳನ್ನು ಮಾಡಬಹುದು. ಆರೋಗ್ಯಕ್ಕೆ ಉತ್ತಮವಾಗಿದ್ದು ತುಂಬ ಉಷ್ಣವಿರುತ್ತದೆ ಮಳೆಗಾಲದಲ್ಲಿ ಈ ಅಕ್ಕಿಯನ್ನು ಉಪಯೋಗಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಬಳಸಿದರೆ ಉಷ್ಣದ ಪ್ರಮಾಣ ಹೆಚ್ಚಾಗಿರುತ್ತದೆ. ಒಂದು ಬಿದಿರುಮಟ್ಟಿಯಲ್ಲಿ 40-50 ಕೆಜಿ ಬಿದಿರು ಅಕ್ಕಿ ಸಿಗಬಹುದು. ಇದಕ್ಕೆ ಬಯಲು ಸೀಮೆಯಲ್ಲಿ ಹೆಚ್ಚು ಬೇಡಿಕೆ ಇದೆ. ಸೋನಾ ಮಸೂರಿಯಂತಿರುವ ಈ ಬಿದಿರು ಅಕ್ಕಿ ತುಂಬಾ ರುಚಿಯಿಂದ ಕೂಡಿರುತ್ತದೆ.

ಸಾವಿರಾರು ಪಕ್ಷಿಗಳ ಆಸರೆಯಾದ ಕಬ್ಬಿನ ಗದ್ದೆ.

ಸಾವಿರಾರೂ ವಲಸಿಗ ಪಕ್ಷಿಗಳು ಕಬ್ಬಿನ ಗದ್ದೆಯಲ್ಲಿ ಬಿಡಾರ ಹೂಡಿದೆ, ಪ್ರತಿದಿನ ಸೂರ್ಯೊದಯದ ಮೊದಲು ಸೂರ್ಯ ಮುಳುಗುವ ಸಮಯದಲ್ಲಿ ವಲಸಿಗ ಪಕ್ಷಿಗಳ ಹಾರಾಟ ಮತ್ತು ಪಕ್ಷಿಗಳ ಕಲರವ ನೋಡುವುದೇ ಅತಿ ಸುಂದರವಾಗಿರುತ್ತದೆ. ಹೌದು, ಮಾಗಡಿ ಪಟ್ಟಣದ ಕಲ್ಯಾಗೇಟ್ನ ತಟವಾಳ್ ರಸ್ತೆಯಲ್ಲಿರುವ ಡೈರಿ ಶಿವಕುಮಾರ್ ತೋಟಕ್ಕೆ ಬಂದರೆ ಈ ದೃಶ್ಯವನ್ನು ಕಾಣಬಹುದು ಎರಡು ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಬ್ಬಿನ ಗದ್ದೆಯಲ್ಲಿ ನಿತ್ಯ ಈ ದೃಶ್ಯ ಕಂಡುಬರುತ್ತಿದೆ. ಕಾಂಕ್ರೀಟ್ ನಾಡಿನಲ್ಲಿ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಆಗೆಯೇ ಕಾಡುಗಳು ಕೂಡ ಮರೆಯಾಗುತ್ತಿದ್ದು ಪಕ್ಷಿಗಳು ನಿರ್ಭಯವಾಗಿ ವಾಸಮಾಡಲು ಸೂಕ್ತ ಸ್ಥಳವಿಲ್ಲದೆ ಪರಿತಪಿಸುತ್ತಿದ್ದು, ಪಟ್ಟಣದ ಮಧ್ಯ ಭಾಗದಲ್ಲಿ ಪಕ್ಷಿಗಳಗೆ ಹೇಳಿ ಮಾಡಿಸಿದಂತಿರುವ ಈ ಜಾಗದಲ್ಲಿ ಸಾವಿರಾರೂ ಗಿಜಗನಹಕ್ಕಿ ಹಾಗೂ ಗೋರವಾಂಕ ಜಾತಿಗೆ ಸೇರಿರುವ ಪಕ್ಷಿಗಳು ಸಂಜೆ ವೇಳೆ ಬಂದು ವಿಶ್ರಾಂತಿ ಪಡೆದು ಬೆಳಗಿನ ವೇಳೆ ಆಹಾರ ಅರಸಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದೆ. ಸಂಜೆ ವೇಳೆ ಸೂರ್ಯಾಸ್ತದ ಸಮಯದಲ್ಲಿ ಒಂದೆ ಸಮನಾಗಿ ಸಾವಿರಾರೂ ಪಕ್ಷಿಗಳು ಏಕ ಕಾಲದಲ್ಲಿ ಅಗಸದಿಂದ ಬರುತ್ತಿರುವುದನ್ನು ನೋಡುವುದೇ ವಿಶೇಷ ಪಕ್ಷಿ ಪ್ರಿಯರಿಗಂತು ಇದು ಒಳ್ಳೆಯ ಸ್ಥಳವಾಗಿದೆ ಛಾಯ ಚಿತ್ರಗಾರರಿಗೆ ವಿವಿಧ ಬಂಗಿಯ ಪಕ್ಷಿಗಳ ಕಲರವಗಳನ್ನು ಸೇರೆಯಿಡಿಯಬಹುದು.
ಕಬ್ಬಿನ ಗದ್ದೆಯಲ್ಲಿ ವಾಸ ಮಾಡುವ ಪಕ್ಷಿಗಳ ಒಟ್ಟಿಗೆ ಬಂದರು ಕಬ್ಬಿನ ಗದ್ದೆಗೆ ಯಾವುದೇ ತೊಂದರೆಯಾಗುತ್ತಿಲ್ಲ ಇದರಿಂದ ರೈತರು ಕೂಡ ಪಕ್ಷಿಗಳು ಬಂದರೆ ಅದಕ್ಕೆ ತೊಂದರೆಯನ್ನು ನೀಡುತ್ತಿಲ್ಲ ನಿರ್ಭಿತಿಯಾಗಿ ಸಂಜೆ ವೇಳೆ ಬಂದು ಮುಂಜಾನೆ ಒತ್ತಿಗೆ ತಮ್ಮ ಗೂಡಿಗೆ ಹಿಂದಿರಿ ಹೋಗುತ್ತಿದೆ. ಅರಣ್ಯ ಇಲಾಖೆಯವರು ಪಕ್ಷಿಗಳಿಗೆ ಆಸರೆಯಾಗಲು ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ವಿಶೇಷ ವ್ಯವಸ್ಥೆ ಮಾಡುವ ಮೂಲಕ ಅಲಿಮಿನ ಹಂಚಿನಲ್ಲಿ ಇರುವ ಸಾವಿರಾರು ಜಾತಿಯ ಪಕ್ಷಗಳಿಗೆ ನೆರವಾಗುವ ಮೂಲಕ ಪಕ್ಷಿ ಸಂಕುಲವನ್ನು ಉಳಿಸಬೇಕು ಎಂಬುದೇ ಪಕ್ಷಿ ಪ್ರಿಯಾರ ಆಸೆಯಾಗಿದೆ. ಒಟ್ಟಿನಲ್ಲಿ ನಿತ್ಯವು ಸಾವಿರಾರೂ ಪಕ್ಷಿಗಳನ್ನು ಒಂದೆಡೆ ನೋಡುವುದೆ ಮನೋಹರವಾಗಿದೆ.ಸುಟ್ಟು ಕರಕಲಾಗ್ತಿದೆ ಸಹ್ಯಾದ್ರಿ ಪರಿಸರ

ಏರುತ್ತಿರುವ ಧಗೆಯ ಪರಿಣಾಮ ಸಹ್ಯಾದ್ರಿ ಪರಿಸರದಲ್ಲಿ ಇಡೀ ಕಾಡನ್ನೇ ನುಂಗುವ ಬೆಂಕಿ ಕೂಡ ವ್ಯಾಪಕವಾಗುತ್ತಿದ್ದು, ಅರಣ್ಯ ರಕ್ಷಕರಲ್ಲಿ, ಪರಿಸರ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪ್ರಾಣಿಗಳು, ಪಕ್ಷಿಗಳು, ಯಾರೂ ನೋಡಿರದ ಎಂತೆಂಥದೋ ಜೀವ ವೈವಿಧ್ಯಗಳು ಕಾಡ್ಗಿಚ್ಚಿಗೆ ಆಹುತಿಯಾಗುತ್ತಿವೆ. ಬೆಲೆ ಕಟ್ಟಲಾಗದಷ್ಟು ನಷ್ಟಗಳಿಗೆ ಕಾರಣವಾಗುತ್ತಿದೆ.
ಕಿಡಿಗೇಡಿಗಳು ಮಾಡುವ ಕೃತ್ಯಕ್ಕೆ ಕಾಡು, ಬೆಟ್ಟ ಬೆಂಕಿಗೆ ಬಲಿಯಾಗುತ್ತಿದೆ. ರಸ್ತೆ ಅಂಚಿನ ಬೆಟ್ಟ, ಕಾಡಿಗೆ ಬೆಂಕಿ ಕಾಟ ಜೋರಾಗಿದ್ದು, ಅರಣ್ಯಾಧಿಕಾರಿಗಳಿಗೆ ಬೆಂಕಿ ನಂದಿಸುವದೇ ದೊಡ್ಡ ತಲೆನೋವಾಗಿದೆ.
ಸಹ್ಯಾದ್ರಿ ಪರಿಸರದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲೆ ಎದುರಿಸುವ ಕಾಡುಗಳು ಹೆಚ್ಚಿದ್ದು, ಇಲ್ಲಿನ ಸಾಗವಾನಿ ಮರಗಳು ಬೆಂಕಿಗಾಹುತಿಯಾಗುತ್ತಿವೆ. ಹಿಂದಿನಂತೆ ಮರಮರ ತಿಕ್ಕಿ ಬೆಂಕಿ ಹುಟ್ಟುವದಿಲ್ಲ. ಇಂದು ಅಷ್ಟು ದಟ್ಟವಾದ ಕಾಡೂ ಇಲ್ಲ. ಬೆಂಕಿ ಮಾನವ ನಿರ್ಮಿತವೇ ಎಂಬುದು ಉನ್ನತ ಅಧಿಕಾರಿಗಳ ಅಭಿಮತ. ಈಚೆಗಂತೂ ರೈತರು ಕರಡ ದೇಶಿ ಹುಲ್ಲು ಸರಿಯಾಗಿ ಬರಲೆಂದು ಹಾಕಿದ ಬೆಂಕಿಯ ಪ್ರಮಾಣ ತೀರಾ ಕಮ್ಮಿ. ಆದರೆ ಅತಿಕ್ರಮಣಕ್ಕಾಗಿ, ದಾರಿ ಹೋಕರು ಬಿಸಾಡಿದ ಸಿಗರೇಟು ಸಮಸ್ಯೆಯ ಮೂಲವಾಗುತ್ತಿವೆ ಎಂಬುದು ವನ್ಯ, ಪರಿಸರ ಪ್ರಿಯರ ಲೆಕ್ಕಾಚಾರವಾಗಿದೆ. ಕಾಡಿನ ಬೆಂಕಿಯಿಂದ ಅಂತರ್ಜಲ ಇಳಿಕೆಯಾಗುತ್ತಿದೆ. ವನ್ಯಜೀವಿ ಆವಾಸ ಸ್ಥಾನ ಛಿದ್ರವಾಗುತ್ತಿದೆ.
ಅಪರೂಪದ ಸಸ್ಯಗಳು, ಜೀವ ವೈವಿಧ್ಯಗಳು ಇವಕ್ಕೆ ಆಹುತಿಯಾಗುತ್ತವೆ. ಮಣ್ಣಿನ ಸವಕಳಿ ಹೆಚ್ಚಿ, ಕಾಡು ಬರಿದಾಗುತ್ತದೆ ಎಂಬುದು ಆತಂಕ ವಿಷಯ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಹಭಾಗಿತ್ವದಿಂದ ಬೆಂಕಿ ಬೀಳದಂತೆ, ಬಿದ್ದ ಬೆಂಕಿ ನಂದಿಸುವಲ್ಲಿ ತೊಡಗಿಕೊಳ್ಳಬೇಕು. ಕಾಯಂ ಬೆಂಕಿ ಬೀಳುವ ಪ್ರದೇಶವನ್ನು ಅಧಿಕಾರಿಗಳು ನಿರ್ಲಕ್ಷಿಸುತ್ತಾರೆ ಎಂಬ ದೂರುಗಳು ಇವೆ. ಒಂದೇ ಸಲ ಎರಡ್ಮೂರು ಪ್ರದೇಶದಲ್ಲಿ ಕಾಣಿಸಿಕೊಂಡರೆ ಕಷ್ಟವಾಗುತ್ತದೆ. ಇದಕ್ಕಾಗಿ ಬೆಂಕಿ ನಿಯಂತ್ರಣಕ್ಕೆ ಪ್ರತ್ಯೇಕ ಕಾವಲು ಪಡೆ ಅಗತ್ಯವಾಗಿದೆ. ವೀಕ್ಷಣಾ ಗೋಪುರ, ವಾಕಿಟಾಕಿಗಳನ್ನೂ ವ್ಯವಸ್ಥಿತವಾಗಿ ಕೊಡಬೇಕಾಗಿದೆ ಎಂಬ ಆಗ್ರಹ ಕೂಡ ಇದೆ.