ಕೊಂಡೆವೂರಿನಲ್ಲಿ ಅಪರೂಪದ ಮಹಾಯಾಗ

ಪ್ರಕೃತಿಯ ಸಂರಕ್ಷಣೆ, ಪೋಷಣೆ, ಪರಿಸರ ನೈರ್ಮಲ್ಯೀಕರಣ, ಮಾನಸಿಕ ನೆಮ್ಮದಿಯ ಸಾಧನೆ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮತ್ತು ಲೋಕಕಲ್ಯಾಣ ಎಂಬ ಸಂಕಲ್ಪದೊಂದಿಗೆ ಕಾಸರಗೋಡಿನ ಉಪ್ಪಳ ಸಮೀಪದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮ ಅಭೂತಪೂರ್ವ ‘ಚತುರ್ವೇದ ಸಂಹಿತಾ ಯಾಗ ಮತ್ತು ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ’ ನಡೆಯುತ್ತಿದೆ.ಪೂರ್ವ ಗಿಡ ಮೂಲಿಕೆ ಉಪಯೋಗಿಸಿ ರೋಗಹರ ‘ಗಾಯತ್ರಿಘೃತ’ವನ್ನು ಪ್ರಸಾದವಾಗಿ ಪಡೆಯಲಿರುವ ಈ ಯಾಗ, ಗಿಡಮೂಲಿಕೆಗಳ ಮಹತ್ವ ಸಾರುತ್ತದೆ. ಸಮಕಾಲೀನ ವೈದ್ಯಕೀಯ ರಂಗದ ಪುನಶ್ಚೇತನಕ್ಕೂ ನಾಂದಿ ಹಾಡಲಿದೆ. ಅಗಸ್ತ್ಯ ಮಹಿರ್ಷಿಗಳಿಂದ ಪ್ರಣೀತ ಬೃಹತ್ ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ ಸುಮಾರು 500 ವರ್ಷಗಳಿಂದೀಚೆಗೆ ನಡೆದಿಲ್ಲ ಎಂಬುದು ಬಲ್ಲವರ ಅಭಿಪ್ರಾಯ.
ಭಾರತದ ಭವ್ಯ ಪರಂಪರೆಯಲ್ಲಿ ಯಾಗ-ಹೋಮಾದಿಗಳಿಗೆ ತನ್ನದೇ ಆದ ಮಹತ್ವವಿದೆ. ಇಂತಹ ಯಾಗಗಳು ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿದೆ. ಯೋಗಿಗಳು ಹಾಗೂ ಮಹಾತ್ಮರು ಯಾಗಗಳಿಗೆ ಬಹಳಷ್ಟು ಮಹತ್ವ ನೀಡಿದ್ದರು. ಅನಾದಿಕಾಲದಿಂದಲೇ ನಡೆದು ಬರುತ್ತಿರುವ ಯಾಗಗಳು ಆಗಾಗ ನಡೆಯುತ್ತಿವೆ. ಕಾಸರಗೋಡಿನ ಉಪ್ಪಳ ಸಮೀಪದ ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮ ಈ ಅಪರೂಪದ ಯಾಗ ನಡೆಸಲು ಮುಂದಾಗಿದೆ.

ಅಗಸ್ತ್ಯನಾಡಿಯಲ್ಲಿದೆ ಯಾಗದ ಪ್ರಸ್ತಾಪ:
ಪ್ರಾಚೀನ ಭಾರತದ ಶ್ರೇಷ್ಠ ಮುನಿಗಳಲ್ಲೊಬ್ಬರು ಅಗಸ್ತ್ಯರು. ಆಧ್ಯಾತ್ಮಿಕ, ಆಯುರ್ವೇದ ಮತ್ತು ಭಾಷಾ ಶಾಸದಲ್ಲಿ ನಿಪುಣರಾಗಿದ್ದ ಅವರು ವಾತಾವರಣದ ಸ್ವಚ್ಛತೆ ಮತ್ತು ಜನಜೀವನದಲ್ಲಿ ಶಾಂತಿ ಸ್ಥಾಪಿಸಲು ‘ಅಗಸ್ತ್ಯನಾಡಿ’ ಗ್ರಂಥದಲ್ಲಿ ‘ಚತುರ್ವೇದ ಸಂಹಿತಾ ಯಾಗ ಮತ್ತು ಗಾಯತ್ರಿ ಘೃತ ಸಂಪ್ರಾಪ್ತಿ ಮಹಾಯಾಗ’ ನಮೂದಿಸಿದ್ದರು. ಅಂತಹ ಯಾಗವೊಂದು ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ.21ರಿಂದ 29ರ ವರೆಗೆ ನಡೆಯುತ್ತಿದೆ. ಉತ್ತರದಲ್ಲಿ ನೀರು ಉಕ್ಕಿ ಹರಿದಾಗ, ಸಮುದ್ರದ ಮಟ್ಟ ಹೆಚ್ಚಿದಾಗ, ಪಂಚಭೂತಗಳ ಮೂಲಕವೇ ಅನೇಕ ರೋಗರುಜಿನಗಳು ಹರಡುತ್ತಿರುವ ಕಾಲದಲ್ಲಿ ಇಂತಹ ಯಾಗ ನಡೆಸಬೇಕು ಎಂದು ಸೂಕ್ತ ಸ್ಥಳ ಮತ್ತು ಸಮಯವನ್ನು ಅಗಸ್ತ್ಯರು ಗ್ರಂಥದಲ್ಲಿ ಸೂಚಿಸಿದ್ದಾರೆ.ಸ್ತ್ಯರು ಗ್ರಂಥದಲ್ಲಿ ನಮೂದಿಸಿದಂತೆ ಕೇಂದ್ರದಲ್ಲಿ ಗಾಯತ್ರಿ ಪೀಠವಿರುವ, ನೈಋತ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಗುರುಸನ್ನಿಧಿಯಿರುವ ಸ್ಥಳವೇ ಯಾಗಕ್ಕೆ ಸೂಕ್ತ ಸ್ಥಳ. ಯಾಗಕ್ಕೆ ಅಗತ್ಯವಾದ 24 ಗಿಡಮೂಲಿಕೆಗಳ ಪೈಕಿ ಕನಿಷ್ಠ 21ನ್ನು ಸ್ಥಳದಲ್ಲಿಯೇ ಬೆಳೆದಿರಬೇಕು. ಇಂತಹ ಸ್ಥಳ ಹುಡುಕಿಕೊಂಡು ಬೆಂಗಳೂರು ಸೇರಿದಂತೆ ದೇಶದ ವಿವಿಧ ಊರುಗಳನ್ನು ಸುತ್ತಿ ಸುಸ್ತಾಗಿದ್ದ ಕೇರಳದ ಆಯರ್ವೇದ ಪಂಡಿತ ತಂಗಪ್ಪನ್ ಅವರು 2013ರಲ್ಲಿ ಕೊಂಡೆವೂರು ಆಶ್ರಮದಲ್ಲಿ ಆಯೋಜಿಸಲಾಗಿದ್ದ ಸಹಸ್ರ ಚಂಡಿಕಾಯಾಗಕ್ಕೆ ಆಗಮಿಸಿದ್ದರು. ಅಗಸ್ತನಾಡಿಯಲ್ಲಿ ಹೇಳಿರುವಂತೆ ಹಲವಾರು ಲಕ್ಷಣಗಳು ಇಲ್ಲಿರುವುದು ಅವರ ಗಮನಕ್ಕೆ ಬಂದಿತ್ತು. ಬಳಿಕ ಶಾಸ್ತ್ರೋಕ್ತವಾಗಿ ವೀಳ್ಯದೆಲೆ, ಸೋಮಲತೆಗಳಂತಹ ಕೆಲ ಗಿಡಮೂಲಿಕೆಗಳನ್ನು ನೆಡಿಸಿ ನಿತ್ಯಾನಂದ ಯೋಗಾಶ್ರಮದ ಪರಿಸರವನ್ನು ಗ್ರಂಥದಲ್ಲಿ ಉಲ್ಲೇಖಿತ ಗುಣಲಕ್ಷಣಗಳಿಗೆ ಪೂರಕವಾಗುವಂತೆ ಮಾಡಲಾಯಿತು.
ಯಾಗಕ್ಕೆ ಅವಶ್ಯಕ ಕೆಲವು ಶುಭ ಶಕುನಗಳೂ ಕಂಡು ಬರಬೇಕು. ಗ್ರಂಥದಲ್ಲಿ ಉಲ್ಲೇಖಿಸಿರುವಂತಹ ಹಸುವೊಂದು ಆಶ್ರಮಕ್ಕೆ ತಾನೇ ತಾನಾಗಿ ಆಗಮಿಸಿ ಯಾಗ ನಡೆಯುವ ಸ್ಥಳದಲ್ಲಿ ನಿಂತಿತ್ತು. ಹಸುವಿನ ಆಗಮನ ಯಾಗ ನಡೆಸಲು ಸೂಕ್ತ ಸಮಯವೆಂದು ತೀರ್ಮಾನಿಸಲಾಯಿತು ಎಂದು ಶ್ರೀ ಯೋಗನಂದ ಸರಸ್ವತೀ ಸ್ವಾಮೀಜಿ ಹೇಳುತ್ತಾರೆ.
ಯಾಗಕ್ಕೆ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನ, ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ನೇತೃತ್ವ, ಶಿಬರೂರು ವೇದವ್ಯಾಸ ತಂತ್ರಿಗಳ ನಿರ್ದೇಶನ, ಕಟೀಲಿನ ಪ್ರಧಾನ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ-ಅನಂತಪದ್ಮನಾಭ ಅಸ್ರಣ್ಣ ವೈದಿಕ ಆಚಾರ್ಯತ್ವ, ತಂಗಪ್ಪನ್ ವೈದ್ಯ ಆಚಾರ್ಯತ್ವ ಇರುತ್ತದೆ.

ಸಾಮರಸ್ಯ ಸಂಗಮ:
ಅಪರೂಪದ ಈ ಯಾಗಕ್ಕೆ ಎಲ್ಲ ವರ್ಗಗಳ ಜನರು ತಮ್ಮದೇ ವಿಶೇಷ ಸೇವೆಯಲ್ಲಿ ತೊಡಗಿದ್ದಾರೆ. ವಿಶ್ವಕರ್ಮರು ವಿಗ್ರಹ ಮಾಡಿದ್ದಾರೆ. ಕುಂಬಾರರು ಮಡಿಕೆ ಮಾಡಿದ್ದಾರೆ. ಕೊರಗ ಸಮಾಜದವರು ಬಿದಿರಿನ ಬುಟ್ಟಿ ಹೆಣೆದಿದ್ದಾರೆ. ಗಾಣಿಗರು ಆಶ್ರಮದಲ್ಲಿಯೇ ಎಣ್ಣೆ ತೆಗೆದು ಕೊಡುತ್ತಿದ್ದಾರೆ. ನೇಕಾರರು ದೇವರಿಗೆ ವಸ ಹಾಗೂ ದೀಪಕ್ಕೆ ಬತ್ತಿ ನೀಡುತ್ತಿದ್ದಾರೆ. ತಂತ್ರಿ, ಸ್ವಾಮೀಜಿಗಳನ್ನು ಕರೆತರುವಷ್ಟೇ ಗೌರವಯುತವಾಗಿ, ವೇದ ಘೋಷಗಳೊಂದಿಗೆ ಇವರನ್ನೂ ಆಶ್ರಮಕ್ಕೆ ಕರೆತಂದು ಅವರವರ ಕಾರ್ಯದಲ್ಲಿ ತೊಡಗಿಸಲಾಗಿದೆ. ಭೂಮಿಪುತ್ರರು ಎಂಬ ಹೆಸರುಳ್ಳ ಹರಿಜನರು ಸಾವಯವ ಪದ್ಧತಿಯಲ್ಲಿ ಕೃಷಿಮಾಡಿ ಯಾಗಕ್ಕೆ ಆಹಾರ ತಯಾರಿಸುತ್ತಿದ್ದಾರೆ. ಕೃಷಿ ಆಯುರ್ವೇದ, ಪ್ರಕೃತಿ ಬಗ್ಗೆ ಆಸಕ್ತಿ ಜತೆಗೆ ಸಾಮಾಜಿಕ ಸಾಮರಸ್ಯಕ್ಕೆ ನಾಂದಿಯಾದರೆ ಆದೇ ಯಾಗದ ಸಾರ್ಥಕತೆ ಎಂದು ತಿಳಿಸುತ್ತಾರೆ ಯೋಗಾನಂದ ಸರಸ್ವತೀ ಸ್ವಾಮೀಜಿ.

ಯಾಗದ ವೈಶಿಷ್ಟ್ಯಗಳು:
- ಯಾಗೋತ್ಪನ್ನ ಘೃತ ಪ್ರಸಾದ ಆಯುರ್ವೇದ ಪರಂಪರಾ ಚಿಕಿತ್ಸಾ ಪದ್ಧತಿಯಲ್ಲಿರುವ ಲಾಡ ವಿದ್ಯೆಗೆ ಸಂಬಂಧಿಸಿ ಅಗಸ್ತ್ಯ ಋಷಿಗಳಿಂದ ಆವಿಷ್ಕರಿಸಲ್ಪಟ್ಟಿದೆ.
- 500 ವರ್ಷಗಳ ಹಿಂದೆ ಪೂಜ್ಯ ಶ್ರೀ ಪ್ರಭಾಕರ ಸಿದ್ಧಯೋಗಿ ಅವರ ನೇತೃತ್ವದಲ್ಲಿ ತಮಿಳುನಾಡಿನ ಮರುತ್ವಾಮಲೆಯಲ್ಲಿ ಇದೇ ಮಹಾಯಾಗ ನಡೆದ ಮಾಹಿತಿಯಿದೆ.
- ಹಾಲಿರುವ ಮತ್ತು ಹಾಲಿಲ್ಲದ ಆರು ವೃಕ್ಷಗಳ ಕಂಬಗಳಿಂದ ನಿರ್ಮಿಸಿದ ಅಷ್ಟಭುಜಾಕೃತಿಯಲ್ಲಿರುವ ಯಾಗ ಶಾಲೆಯ ಛಾವಣಿಯನ್ನು ದರ್ಭೆಯಿಂದ ಹೊದಿಸಲಾಗುತ್ತದೆ.
- ಯಾಗಶಾಲಾ ಮಧ್ಯದಲ್ಲಿ ಶ್ರೀ ಧನ್ವಂತರಿ ದೇವತೆಯ ಮೃಣ್ಮಯ ಮೂರ್ತಿ ಸ್ಥಾಪಿಸಿ ಅದರ ಮುಂದೆ ಒಲೆ ನಿರ್ಮಿಸಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಘೃತ ನಿಕ್ಷೇಪಿಸಿ ಪಾಲಾಶ, ಕಾಸರಕ ಹಾಗೂ ಕಂಚಿನ ಸಟ್ಟುಗಗಳ ಸಹಾಯದಿಂದ ಪಾಕ ಮಾಡಲಾಗುವುದು. ಧನ್ವಂತರಿಯ ಅಕ್ಕಪಕ್ಕದಲ್ಲಿ ಬ್ರಹ್ಮ-ಸರಸ್ವತಿ ಕುಂಡಗಳನ್ನು ಸ್ಥಾಪಿಸಲಾಗುವುದು. ಎಂಟೂ ದಿಕ್ಕುಗಳಲ್ಲಿ ಗಾಯತ್ರಿ ಯಾಗಕ್ಕಾಗಿ ಹೊಮಕುಂಡ ನಿರ್ಮಿಸಲಾಗುತ್ತದೆ.
- ಯಾಗಶಾಲೆಯ ನಾಲ್ಕೂ ದಿಕ್ಕುಗಳಲ್ಲಿ ಬೇರೆ ಬೇರೆ ಯಾಗಶಾಲೆ ನಿರ್ಮಿಸಿ ಚತುರ್ವೇದ ಸಂಹಿತಾ ಯಾಗವೂ ನಡೆಯಲಿದೆ.
- ದೇಶದ ವಿವಿಧ ರಾಜ್ಯಗಳ ವಿಶಿಷ್ಟ ವಾತಾವರಣದಲ್ಲಿ ಬೆಳೆದ 24 ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ನಿಶ್ಚಿತ ಪ್ರಮಾಣದಲ್ಲಿ ಅವುಗಳ ರಸವನ್ನು ಘೃತ ತಯಾರಿಕೆಗೆ ಬಳಸಲಾಗುವುದು.
- ಉದಯ ಕಾಲದಿಂದ ಅಸ್ತಮಾನದ ವರೆಗೆ ಏಳೂ ದಿನ ಪರ್ಯಂತ ವೈದಿಕರಿಂದ ನಡೆಯಲಿರುವ ಈ ಯಾಗಶಾಲೆಯಲ್ಲಿ ನುರಿತ ವೈದ್ಯರಿಂದ ಏಕಕಾಲದಲ್ಲೇ ಘೃತ ನಿರ್ಮಾಣ ಕಾರ್ಯವೂ ನೆರವೇರಲಿದೆ.
- ಯಾಗದ ವೇಳೆಯಲ್ಲಿ ಪೂಜಿಸಲ್ಪಡುವ ಗೋವು ಬಿಳಿ ವರ್ಣದಿಂದ ಕೂಡಿದ್ದು, ಸಮಾನ ಎತ್ತರದ ಕೊಂಬು, ಹಣೆಯಲ್ಲಿ ಶಂಖಮುದ್ರೆ, ಮಾಲದ ತುದಿ ಕರಿವರ್ಣ, ತುಂಬು ಕೆಚ್ಚಲು ಮತ್ತು ಒಂದೇ ಕರುವಿನ ತಾಯಿಯಾಗಿರುವುದು ಇನ್ನೊಂದು ವೈಶಿಷ್ಟ್ಯ.
- ಕಬ್ಬಿಣ ಸ್ಪರ್ಶಿಸದೆ ತೋಡಿದ ಒಂಭತ್ತು ಕುಂಡಗಳಲ್ಲಿ ಪ್ರತಿನಿತ್ಯ ಊರ ಗೋವಿನ ಗೋಮಯ, ಗೋಮೂತ್ರ ಮತ್ತು ತುಳಸಿ ಹಾಕಿ ಪೂಜಿಸಿದ ಸರಸ್ವತಿ ಪತ್ರ(ವೀಳ್ಯದೆಲೆ)ದ ರಸವನ್ನು ವಿಶೇಷವಾಗಿ ಈ ಘೃತಕ್ಕಾಗಿ ಉಪಯೋಗಿಸಲಾಗುವುದು.
- ಈ ಯಾಗ ಲಶ್ರುತಿಯಂತೆ ಪಂಚಭೂತಗಳ ಸಮತೋಲನದ ವ್ಯತ್ಯಯದಿಂದ ಉಂಟಾಗಿರುವ ಸೂರ್ಯತಾಪ, ಜಲ, ವಾಯು, ಪೃಥ್ವಿ, ಆಕಾಶಾದಿಗಳಿಗೆ ಉಂಟಾಗಿರುವ ಮಾಲಿನ್ಯ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳಿಂದ ರಕ್ಷಿಸಲ್ಪಡುವುದು.
- ಮಕ್ಕಳ ಸ್ಮರಣಶಕ್ತಿ ವೃದ್ಧಿಗಾಗಿ, ಮಾನಸಿಕ ಕಾಯಿಲೆ, ಅಪಸ್ಮಾರ ಮತ್ತು ಇನ್ನೂ ಅನೇಕ ಆಯುರ್ವೇದ ಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮ ಬೀರಬಲ್ಲ ಈ ಘೃತದ ಸೇವನೆಯಿಂದ ದೇವಾಸುರ ಕೋಪ ಮತ್ತು ಇನ್ನಿತರ ಬಾಧೆಗಳು ಪರಿಹಾರವಾಗುತ್ತವೆ.

ಾಯತ್ರಿ ಘೃತ ತಯಾರಿಕೆಯಲ್ಲಿ ಉಪಯೋಗಿಸುವ ಆಯುರ್ವೇದ ಗಿಡಮೂಲಿಕೆಗಳು:
ವೀಳ್ಯದೆಲೆ (ಸರಸ್ವತಿ ಪತ್ರ), ಕೇಪುಳ, ಅಮೃತಬಳ್ಳಿ, ಹಾರಮುನಿ, ಆಲ, ನೈದಿಲೆ, ಹಿಪ್ಪಲಿ, ದೇವ ಬಾಳೆ (ಕದಳಿ), ಜಾಜಿ, ಗರಿಕೆ ಹುಲ್ಲು, ಶಂಖ ಪುಷ್ಪ, ಒಂದೆಲಗ, ಬ್ರಾಹ್ಮಿ, ವಿಷ್ಯು ಕ್ರಾಂತಿ, ಅಬ್ದ ಹುಲ್ಲು, ನೆಲ ನೆಲ್ಲಿ, ಸೋಮಲತೆ, ರುದ್ರಾಕ್ಷ, ಜ್ಯೇಷ್ಠ ಮಧು, ಜೀರಿಗೆ, ಬಜೆ, ನೀರು ಮಟ್ಟಿ, ಬಿಳಿಎಲೆ, ಕೃಷ್ಣ ತುಳಸಿ.

ಯಾಗಕ್ಕೆ ಗಿಡಮೂಲಿಕೆ ಯಾವುದು? ಎಲ್ಲಿಂದ?
ವೀಳ್ಯದೆಲೆ - ಆಶ್ರಮ
ದೇವ ಬಾಳೆ - ಆಶ್ರಮಾಜಿ - ಆಶ್ರಮೃಷ್ಣತುಳಸಿ - ಆಶ್ರಮಮೃತಬಳ್ಳಿ - ಗುಜರಾತ್ೇಪುಳ - ಗೋವಾ
ಹಾರಮುನಿ - ಕೇರಳ
ಹಿಪ್ಪಲಿ - ಕೇರಳ
ಶಂಖಪುಷ್ಪ - ಕೇರಳಂದೆಲಗ - ಕೇರಳ
ಬ್ರಾಹ್ಮಿ - ಕೇರಳಬ್ದ ಹುಲ್ಲು - ಕೇರಳೀರಿಗೆ - ಕೇರಳಲ - ಆಂಧ್ರ ಪ್ರದೇಶ
ನೈದಿಲೆ - ತಮಿಳುನಾಡು, ಕೇರಳರಿಕೆ ಹುಲ್ಲು - ಮಹಾರಾಷ್ಟ್ರ
ವಿಷ್ಣುಕ್ರಾಂತಿ - ತಮಿಳುನಾಡು, ಕೇರಳ
ಸೋಮಲತೆ - ತಮಿಳುನಾಡು
ರುದ್ರಾಕ್ಷ - ನೇಪಾಳ್ಯೇಷ್ಠಮಧು - ಕೇರಳ, ಕರ್ನಾಟಕ
ಬಜೆ - ಕೇರಳ, ಕರ್ನಾಟಕ
ಬಿಳಿ ಎಲೆ - ಗೋವಾ
ನೀರುಮಟ್ಟಿ - ವಿವಿಧೆಡೆ

ನನಸಾದ ಕನಸು:
ಅನ್ನದಿಂದ ಆರೋಗ್ಯ, ಆರೋಗ್ಯದಿಂದ ಸ್ವಸ್ಥ ಸಮಾಜ, ಅಕ್ಷರದಿಂದ ಅರಿವು, ಆಶ್ರಯದಿಂದ ಸುಭದ್ರತೆ, ಆಧಾರದಿಂದ ಕ್ರಿಯಾಶೀಲತೆಗಳೆಂಬ ಶ್ರೀ ಯೋಗಾನಂದ ಸರಸ್ವತಿ ಸಾಮೀಜಿಗಳ ಕನಸುಗಳು ಸಾಕಾರಗೊಂಡಿದೆ. ಯೋಗ-ತ್ಯಾಗಗಳ ಈ ತವರಿನಲ್ಲಿ ಯಾಗಭೂಮಿಯಾಗಿಯೂ ಗಮನ ಸೆಳೆದಿದೆ. ಈ ಆಶ್ರಮ ಮೇಲೆ ಹೇಳಿದ ಪಂಚಮುಖಿ ಚಟುವಟಿಕೆಗಳಲ್ಲಿ ನಿರತವಾಗಿದೆ.ಶ್ರಮದಲ್ಲಿ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆ ಇದೆ. 400 ಮಕ್ಕಳಿರುವ ಎರಡು ಶಾಲೆಗಳಲ್ಲಿ ಗುರುಕುಲ ಮತ್ತು ಆಧುನಿಕ ಶಿಕ್ಷಣ ನೀಡಲಾಗುತ್ತಿದೆ. ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಆಯುರ್ವೇದ ಶಿಬಿರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಬಡವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಹಾಗೂ ಸಾಮಗ್ರಿ ನೀಡಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿಯಾಗಲು ಗುಡಿ ಕೈಗಾರಿಕೆ, ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಇದೆಲ್ಲದರ ಜತೆಗೆ ಸಾವಯುವ ಕೃಷಿಗೆ ಉತ್ತೇಜನ ನೀಡಲು ‘ಧಾನ್ಯಲಕ್ಷ್ಮೆ’ ಯೋಜನೆ ಹಮ್ಮಿಕೊಳ್ಳಲಾಗಿದೆ. ಮದ್ಯ ವ್ಯಸನಕ್ಕೊಳಗಾಗಿದ್ದ 300ಕ್ಕೂ ಹೆಚ್ಚು ಜನರು ಶ್ರೀ ಯೋಗಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸರಿದಾರಿಗೆ ಬಂದಿದ್ದಾರೆ.