ಸಯಾಮಿಗಳು


ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಗೋಳಿಕಟ್ಟೆಯ ರಾಜೇಶ ಶರ್ಮಾ ಅವರ ತೋಟದಲ್ಲಿ ಸಯಾಮಿ ಹಲಸು ಮತ್ತು ಸಯಾಮಿ ಬದನೆ ಕಾಯಿಗಳು ಬೆಳೆದು ಅಚ್ಚರಿ ಮೂಡಿಸಿವೆ.

ಎಲೆ...ಭಲೆ ಭಲೆ...

ಪೂರಕ ವಾತಾವರಣವಿದ್ದರೆ ಮಾತ್ರ ಬೆಳೆಯುವ ದೇಶಿ ಕರೆವೀಳ್ಯದ ಎಲೆಯ ಬಳ್ಳಿಯೊಂದು ಮನೆಯೊಂದರ ಟೆರೆಸ್ ಮೇಲೆ ಸೊಗಸಾಗಿ ಬೆಳೆದು ನಿಂತಿದ್ದು, ಇದೀಗ ಬರೋಬ್ಬರಿ ಒಂದು ಪೂಟ್ ಉದ್ದ...ಮುಕ್ಕಾಲ ಪೂಟ್ ಅಗಲದ ವೀಳ್ಯದ ಎಲೆ ನೀಡಿದೆ...!
ಇಂತಹ ಎಲೆ ನೋಡಬೇಕಾದರೆ ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಅವರ ಮನೆಗೊಮ್ಮೆ ಭೇಟಿ ನೀಡಬಹುದು. ಅಂತಹ ವಾತಾವರಣ ಬೇಕು, ಇಂತಹದ್ದೇ ಗೊಬ್ಬರ ಬೇಕು, ತಂಪು ಬೇಕು, ನೆರಳು ಬೇಕು. ಹೀಗೆ ಎಲ್ಲ ಬೇಕು ಬೇಡಗಳನ್ನು ಬಿಟ್ಟು ಬಳ್ಳಿ ಬೆಳೆದು ನಿಂತಿದೆ. ಅದಕ್ಕೆ ಬಿಟ್ಟ ಎಲೆಗಳು ಊಟ ಬಡಿಸುವಷ್ಟು ದೊಡ್ಡವುಗಳು. ಈ ಎಲೆ ನೋಡಿದವರು ತಬ್ಬಿಬ್ಬಾಗ ಬೇಕು. ಅಂತಹ ಎರೆಡೆಲೆ ಇದ್ದರೆ ದಿನಪೂರ್ತಿ ಬಾಯಾಡಿಸುತ್ತಿರಬಹುದು ಪಾನ್ ಪ್ರಿಯರು. ಆ ಬಗ್ಗೆ ಉಲ್ಲಾಸ ಗುನಗಾ ಅವರನ್ನು ಕೇಳಿದರೆ ತಮ್ಮ ಮನೆ ಕೃಷಿ ಪ್ರಯೋಗ ಶಾಲೆ ಎನ್ನುತ್ತಾರೆ.