ಉಂಬಳೇಕೊಪ್ಪಕ್ಕೆ ಬೇಕು ಕಾಲು ಸಂಕ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಉಂಬಳೆಕೊಪ್ಪದ ಕಾಲುಸಂಕವೊಂದರ ಮೇಲ್ಭಾಗದ ಸ್ಲಾಬ್ ಕೊಚ್ಚಿ ಹೋಗಿ ಮೂರು ವರ್ಷಗಳೇ ಗತಿಸಿದ್ದರೂ ಇನ್ನೂ ಸಂಬಂಧಪಟ್ಟ ಇಲಾಖೆ ಕಣ್ತೆರೆದು ನೋಡಿಲ್ಲ. ತಾಲೂಕಿನ ಉಂಚಳ್ಳಿ ಗ್ರಾಪಂ ಉಂಬಳೆಕೊಪ್ಪ-ಮೋರಿಗದ್ದೆ ಮಧ್ಯೆ ಕಳೆದ 2 ದಶಕಗಳ ಹಿಂದೆ ನಿರ್ಮಿಸಿದ್ದ ಕಾಲುಸಂಕ ಅತಂತ್ರವಾಗಿದ್ದು, ಗ್ರಾಮಸ್ಥರು ಅಡಕೆ ಮರದ ತುಂಡುಗಳನ್ನೇ ತಾತ್ಕಾಲಿಕ ಸಂಪರ್ಕಕ್ಕೆ ಬಳಸಿಕೊಂಡು ದಾಟಿ ಹೋಗಲು ಸರ್ಕಸ್ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ ಇದಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ನಿತ್ಯ ನೂರಾರು ಜನರು ಓಡಾಡುತ್ತಾರೆ. ಉಂಬಳೆಕೊಪ್ಪದಲ್ಲಿ 15, ಮೋರಿಗದ್ದೆ ಮಜರೆಯಲ್ಲಿ 30 ಮನೆಗಳಿವೆ. ಈ ಎರಡು ಊರುಗಳ ಸಂಪರ್ಕ ಬೆಸೆಯುವ ಹಳ್ಳಕ್ಕೆ ಸುಸ್ಥಿತಿಯ ಕಾಲು ಸಂಕದ ಅಗ್ಯತ್ಯವಿದೆ.