ಹೊನ್ನಾವರ, ಕುಮಟಾಗಳಲ್ಲಿ ಅರ್ಘ್ಯ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ‘ಅರ್ಘ್ಯ’ ಹೆಸರಿನಲ್ಲಿ ಕರೆ ನೀಡಿದ್ದ ಶ್ರಮದಾನ, ಸ್ವಚ್ಛತಾ ಆಂದೋಲನವನ್ನು ಇತ್ತೀಚೆಗೆ ಕುಮಟಾ-ಹೊನ್ನಾವರ ಮಂಡಲ ವ್ಯಾಪ್ತಿಯಲ್ಲಿ ನಡೆಸಲಾಯಿತು. ಕೆಕ್ಕಾರಿನ ರಘೋತ್ತಮ ಮಠ, ಕಾಸರಕೋಡಿನ ಅಪ್ಸರಕೊಂಡ ಮಠ, ಮೂರೂರಿನ ಪ್ರಗತಿ ವಿದ್ಯಾಲಯ, ಹೊಸಾಡಿನ ಗೋಶಾಲೆ, ಗೋಕರ್ಣ ದೇವಸ್ಥಾನ, ಅಶೋಕೆಯಲ್ಲಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡರು.
ಮಹಾಮಂಡಲ ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಮೂಲಮಠ ನಿರ್ಮಾಣ ಸಮಿತಿಯ ಮಂಜುನಾಥ ಸುವರ್ಣಗದ್ದೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ಟ, ಕಾರ್ಯದರ್ಶಿ ರವೀಂದ್ರ ಭಟ್ಟಸೂರಿ, ಉಪಾಧ್ಯಕ್ಷ ನಾಗರಾಜ ಭಟ್ಟ, ಸೇವಾ ಪ್ರಧಾನ ಟಿ.ವಿ. ಹೆಗಡೆ, ಪ್ರಸಾರ ಪ್ರಧಾನ ಅರುಣ ಹೆಗಡೆ, ರಾಘವೇಂದ್ರ ಹೆಗಡೆ, ಹೊನ್ನಾವರ ಮಂಡಲಾಧ್ಯಕ್ಷ ಜಿ.ಜಿ. ಭಟ್ಟ, ಕಾರ್ಯದರ್ಶಿ ಸತೀಶ ಭಟ್ಟ, ಕುಮಟಾದ ಡಾ ಸುರೇಶ ಹೆಗಡೆ ಮಾರ್ಗದರ್ಶನ ನೀಡಿದರು.