ತುಕ್ಕು ಹಿಡಿದ ಸೇತುವೆ-ಮಂತ್ರಿ ಆದೇಶಕ್ಕಿಲ್ಲ ಕಿಮ್ಮತ್ತು

ಎರಡು ಪಂಚಾಯ್ತಿಗಳನ್ನು ಜೋಡಿಸುವ ತೂಗು ಸೇತುವೆಯೊಂದು ಈಗ ತುಕ್ಕು ಹಿಡಿದು ಸಂಕಟ ಅನುಭವಿಸುತ್ತಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರು ರಕ್ಷಣೆಗೆ ಸೂಚನೆ ನೀಡಿದ್ದರೂ ಅವರ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡಲಾಗಿಲ್ಲ. ತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಶಾಲ್ಮಲಾ ನದಿ ತಟದ ಸಹಸ್ರಲಿಂಗ ಪ್ರವಾಸಿ ತಾಣ. ನದಿಯೊಳಗೇ ಸೋದೆ ಅರಸರ ಕಾಲದಲ್ಲಿ ಕೆತ್ತಲಾದ ಶಿವಲಿಂಗಗಳು, ಅವುಗಳ ಮಧ್ಯೆ ಜುಳು ಜುಳು ನಿನಾದದಿಂದ ಹರಿಯುವ ನದಿಯ ನೀರು, ಸುತ್ತಲಿನ ಪ್ರಾಕೃತಿಕ ಸೊಬಗು. ಶಿರಸಿ ನಗರದಿಂದ ಕೇವಲ 13 ಕಿಮೀ ದೂರದಲ್ಲಿನ ಸಹಸ್ರಲಿಂಗಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು ನಿತ್ಯ ಬರುತ್ತಾರೆ.ಳೆದ ಆರು ವರ್ಷಗಳ ಹಿಂದೆ ತೂಗು ಸೇತುವೆ ತಜ್ಞ ಗಿರೀಶ ಭಾರಧ್ವಾಜ ಅವರ ಮೂಲಕ ಪ್ರವಾಸೋದ್ಯಮ ಇಲಾಖೆ 22 ಲಕ್ಷ ವ್ಯಯಿಸಿ ಭೈರುಂಬೆ, ಹುಲೇಕಲ್ ಪಂಚಾಯ್ತಿ ಬೆಸೆಯುವ ಸೇತುವೆ ನಿರ್ಮಾಣ ಮಾಡಿತ್ತು. ಹುಳಗೋಳ, ಭೈರುಂಬೆ ಸಂಪರ್ಕಕ್ಕೆ ಅಥವಾ ಹುಲೇಕಲ್, ಹೊಸ್ತೋಟ ಇತರ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿತ್ತು. ವಾರ್ಷಿಕ ನಿರ್ವಹಣೆ ಮಾಡಿದರೆ ನೂರು ವರ್ಷಗಳ ಕಾಲ ಸೇತುವೆಗೆ ಏನೂ ಆಗೋಲ್ಲ ಎಂದೂ ಆಗ ಹೇಳಿದ್ದರು. ಆದರೆ, ವಾರ್ಷಿಕ ನಿರ್ವಹಣೆ ಬಿಡಿ, ಪಂಚವಾರ್ಷಿಕ ನಿರ್ವಹಣೆ ಕೂಡ ಮಾಡಲಾಗಿಲ್ಲ. ಇದರಿಂದ ಸೇತುವೆಯ ಕಬ್ಬಿಣದ ಸಲಾಕೆಗಳು, ನಟ್ಗಳು, ಜಾಯಿಂಟ್ಗಳು ತುಕ್ಕು ಹಿಡಿದಿವೆ. ಬಣ್ಣಗಳು ಕಳಚಿದೆ.
ನಾಲ್ಕು ತಿಂಗಳುಗಳ ಹಿಂದೆ ಕಾಮಗಾರಿಯೊಂದರ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ ಬಳಿ ಶಾಸಕ ವಿಶ್ವೇಶ್ವರ ಹೆಗಡೆ ತುಕ್ಕು ಹಿಡಿದ ಸೇತುವೆಯ ಕುರಿತು ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿವರು, ಲೋಕೋಪಯೋಗಿ ಇಲಾಖೆ ಅಭಿಯಂತರಲ್ಲಿ ತಕ್ಷಣ ಈ ಕುರಿತು ಗಮನ ಹರಿಸುವಂತೆ ಹಾಗೂ ಹಣಕಾಸಿಲ್ಲದಿದ್ದರೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ನೀಡಿ, ಮಳೆಗಾಲಕ್ಕೂ ಮೊದಲು ಬಣ್ಣ ಮಾಡುವಂತೆ ಆದೇಶಿಸಿದ್ದರು.ಆದರೆ, ಮಳೆಗಾಲ ಆರಂಭವಾಗಿ ಒಂದುವರೆ ತಿಂಗಳಾದರೂ ಸಚಿವರ ಆದೇಶದಿಂದ ಸೇತುವೆಗೆ ಬಣ್ಣದ ಭಾಗ್ಯವಿಲ್ಲ. ಹಣಕಾಸಿನ ಕೊರತೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷವೋ ಅಂತೂ ತುಕ್ಕಿನ ಭಾಗ್ಯ ಮುಂದುವರಿದಿದೆ. ಈ ಮಧ್ಯೆ, ಹುಲೇಕಲ್ ಪಂಚಾಯ್ತಿಯವರು ನಿರ್ವಹಣೆ ಮಾಡಬೇಕೋ ಅಥವಾ ಭೈರುಂಬೆ ಪಂಚಾಯ್ತಿಯವರು ನಿರ್ವಹಣೆ ಮಾಡಬೇಕೋ ಎಂಬ ಗೊಂದಲ ಕೂಡ ಇದೆ. ಪಾರ್ಕಿಂಗ್ಗೆ ಹಣ ತೆಗೆದುಕೊಳ್ಳುವ ಭೈರುಂಬೆ ಪಂಚಾಯ್ತಿ ಸ್ವಚ್ಛತೆ ನೋಡಿಕೊಳ್ಳುವಲ್ಲಿ ವಿಲವಾಗಿದೆ. ಈ ಮಧ್ಯೆ ಮಳೆ-ಬಿಸಿಲು-ನೀರಿನ ಸೆಳವಿಗೆ ಶಿವಲಿಂಗಗಳು ಮಗುಚಿ ಬಿದ್ದಿವೆ. ಕೆಲವು ಭಗ್ನವಾಗಿವೆ. ಇವುಗಳ ಸಂರಕ್ಷಣೆಗೂ ಪ್ರವಾಸೋದ್ಯಮ ಸಚಿವರು ಓ.ಕೆ. ಎಂದಿದ್ದರು. ಆದರೆ, ಕೆಲಸ ಆಗಿಲ್ಲ.