ಅಂಜನಾದ್ರಿ ಬೆಟ್ಟದಲ್ಲಿ ಸಹಸ್ರ ಚಂಡಿಯಾಗ

ಗಂಗಾವತಿ ತಾಲೂಕಿನ ಪ್ರಸಿದ್ಧ ಹಾಗೂ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ಚಂಡಿಯಾಗ ಆರಂಭವಾಗಿದೆ. ಇದರ ಅಂಗವಾಗಿ ಪಂಪಾಸರೋವರದಿಂದ ಪವಿತ್ರ ಗಂಗಾಜಲವನ್ನು ಸುಮಂಗಲಿಯರು ಹಾಗೂ ವಟುಗಳು ಅಂಜನಾದ್ರಿಬೆಟ್ಟಕ್ಕೆ ತಂದರು. ಪಂಪಾಸರೋವರದ ಜಲದಿಂದ ಕಾಶಿ ಬನಾರಸ್ ಹಾಗೂ ಅಯೋಧ್ಯೆಯಿಂದ ಆಗಮಿಸಿದ್ದ 108 ಪಂಡಿತರು ಅಂಜನೇಯನ ಮೂರ್ತಿಯ ಅಭಿಷೇಕ ಮಾಡಿದರು. ನಂತರ ಸಹಸ್ರ ಚಂಡಿಯಾಗಕ್ಕೆ ಚಾಲನೆ ನೀಡಲಾಯಿತು. ಜು.25ರ ತನಕ ಯಾಗ ಜರುಗಲಿದೆ.