ಇಡಗುಂಜಿ ಬಾಗಿಲಿಗೆ ಹಿತ್ತಾಳೆ ಕವಚ ಸಮರ್ಪಣೆ

ಬೆಂಗಳೂರು ಬನಶಂಕರಿಯ ವಾಣಿ ಮತ್ತು ಬಿ.ಎನ್. ಗಿರೀಶ ರಾವ್ ದಂಪತಿ ತಮ್ಮ ಹಿರಿಯರಾದ ದಿ. ಜಯಮ್ಮ ಮತ್ತು ಎಚ್. ನಾಗರಾಜ ಅವರ ಸ್ಮರಣಾರ್ಥ ಹಿತ್ತಾಳೆಯ ಕವಚವನ್ನು ಹೊನ್ನಾವರ ತಾಲೂಕಿನ ಇಡಗುಂಜಿ ವಿನಾಯಕ ದೇವರ ವಿಶಾಲ ವಾಸ್ತು ಬಾಗಿಲಿಗೆ ಸಮರ್ಪಿಸಿದ್ದಾರೆ.ಣಪತಿ ಮೂಲಮಂತ್ರ ಮೋದಕ ಹವನ ಸಹಿತ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಿ, ಕನ್ಯಾ ಲಗ್ನದ ಸುಮುಹೂರ್ತದಲ್ಲಿ ಗೋಕರ್ಣದ ವೇಮೂ ಶಂಭು ಭಟ್ಟ ಷಡಕ್ಷರಿ ಅವರು ಕವಚ ಸಮರ್ಪಣೆಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ದಾನಿಗಳ ಉದಾರತೆಗೆ ವಿನಾಯಕ ದೇವ ಟ್ರಸ್ಟ್ನ ಮುಖ್ಯಸ್ಥರಾದ ಡಾ ಜಿ.ಜಿ.ಸಭಾಹಿತ, ಗಜಾನನ ಸಭಾಹಿತ, ಕಾಶಿನಾಥ ಹೆಗಡೆ ಅಭಿನಂದಿಸಿದರು. ರಥಶಿಲ್ಪಿ ಗಂಗಾಧರ ಆಚಾರ್ಯ ಮೂಲಬಾಗಿಲಿಗೆ ಜೋಡಣಾ ಕಾರ್ಯ ನೆರವೇರಿಸಿದರು. ಗಿರೀಶ ರಾವ್ ದಂಪತಿಯ ಪುತ್ರ ಪ್ರಜ್ವಲ್ ಮತ್ತು ಇಡಗುಂಜಿಯ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.