ಕೃಷಿಕರನ್ನು ಮಂಗ ಮಾಡಿದೆ ಸರಕಾರ

ಮಲೆನಾಡಿನಲ್ಲೀಗ ಮಂಗಗಳದೆ ಕಾಟ. ಮಂಗಗಳು ತೋಟಗಳಿಂದ, ತೋಟಗಳಿಗೆ ದಾಳಿ ಇಡುವ ಮೂಲಕ ಕೃಷಿಕರ ಆರ್ಥಿಕ ನಷ್ಟಗಳಿಗೆ ಕಾರಣವಾಗುತ್ತಿವೆ. ಯಾವುದೆ ಕೃಷಿ ತೋಟಗಳಿಗೆ ಮಂಗಗಳು ದಾಳಿ ಮಾಡಿದರೆ ಅಲ್ಲಿ ಯಾವುದೇ ಸಲು ಉಳಿಯುವುದಿಲ್ಲ. ಯಾಕೆಂದರೆ ಮಂಗಗಳು ತೋಟಗಳಿಗೆ ಲಗ್ಗೆ ಇಟ್ಟರೆ ಅಲ್ಲಿನ ಎಳನೀರು, ಅಡಿಕೆಗಳನ್ನು ಸಂಪೂರ್ಣವಾಗಿ ನಾಶಪಡಿಸುವ ತನಕ ದಾಳಿ ನಿಲ್ಲಿಸುವುದಿಲ್ಲ. ಹಿಂದೆ ಮಂಗ ಬಂದರೆ ಪಟಾಕಿ ಹೊಡೆದು ಓಡಿಸಲಾಗುತಿತ್ತು. ಈಗ ಪಟಾಕಿಗಳಿಗೆ ಅವು ಹೆದರುವುದಿಲ್ಲ. ಮಂಗಗಳನ್ನು ಕೋವಿಯಿಂದ ಗುಂಡು ಹೊಡೆದು ಸಾಯಿಸುವ ಕೆಲಸಕ್ಕೆ ಕೃಷಿಕರ ಧಾರ್ಮಿಕ ನಂಬಿಕೆ ಅಡ್ಡಿಯಾಗುತ್ತದೆ. ಕಾರಣ, ಅದು ಆಂಜನೇಯ ಸ್ವರೂಪ ಎಂಬುದು. ಜೊತೆಗೆ, ಮಂಗಗಳನ್ನು ಹೊಡೆದರೆ ಶಿಕ್ಷೆ ಕೂಡ ಇದೆ. ಹಾಗಾಗಿ, ಮಂಗಗಳು ಸುರಕ್ಷಿತ. ಕೃಷಿಕರಿಗೆ ಸಂಕಟ.
ಮಂಗಗಳ ಹಾವಳಿಯಿಂದ ಕೃಷಿಕರಿಗೆ ಉಂಟಾಗುತ್ತಿರುವ ಬೆಳೆ ನಷ್ಟಗಳಿಗೆ ಪರಿಹಾರ ಪಾವತಿಸಲು ರಾಜ್ಯ ಸರಕಾರ ಒಂದೂವರೆ ವರ್ಷಗಳ ಹಿಂದೆ ನೀಡಿದ ಆದೇಶ ಅನುಷ್ಠಾನಕ್ಕೆ ಬಂದಿಲ್ಲ. ಪರಿಹಾರ ಸಿಗಬಹುದು ಎಂದು ಬೆಳೆ ನಷ್ಟವಾದ ಕೃಷಿಕರು ಸಲ್ಲಿಸಿದ ಅರ್ಜಿ ಅರಣ್ಯ ಇಲಾಖೆಯ ಕಚೇರಿಯ ಕಡತದಲ್ಲಿ ಬಂಧಿಯಾಗಿದೆ. ಸರಕಾರಿ ಆದೇಶ ಪತ್ರದಲ್ಲಿ ಪರಿಹಾರ ನೀಡಿ ಎಂದಿದೆ. ಆದರೆ, ವಿವಿಧ ಬೆಳೆ ಸಲಿನ ನಾಶಕ್ಕೆ ನಿರ್ದಿಷ್ಟ ಮೊತ್ತ ನಿಗದಿಪಡಿಸಿಲ್ಲ. ಹಾಗಾಗಿ ಸಲು ನಷ್ಟವಾದಾಗ ಯಾವ ಮಾನದಂಡದ ಆಧಾರದಲ್ಲಿ ಬೆಲೆ ನಿಗದಿ ಮಾಡಬೇಕು ಎಂಬ ಗೊಂದಲದಲ್ಲಿ ಅರಣ್ಯ ಇಲಾಖೆಯಿದೆ.ರ ಜನವರಿಯಲ್ಲಿ ಮಂಗಗಳ ಹಾವಳಿಯಿಂದ ಕೃಷಿಕರಿಗೆ ಉಂಟಾಗುತ್ತಿರುವ ನಷ್ಟಗಳಿಗೆ ಪರಿಹಾರ ಪಾವತಿಸಲು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮೂಲಕ ಪ್ರತಿ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಕಚೇರಿಗೆ ಆದೇಶ ಹೊರಡಿಸಲಾಗಿತ್ತು. ಹಲವು ವರ್ಷಗಳಿಂದ ಮಂಗ ಹಾಗೂ ಇತರ ಕಾಡು ಪ್ರಾಣಿಗಳಿಂದ ಬೆಳೆಯ ಸಲಿಗೆ ಹಾನಿ ಉಂಟಾದಾಗ ಪರಿಹಾರ ಸಿಗದೆ ಹತಾಶನಾಗಿದ್ದ ಕೃಷಿಕ, ಸರಕಾರದ ಆದೇಶದಿಂದ ಅರ್ಜಿ ಸಲ್ಲಿಸಿದ್ದ. ಆದರೆ, ಪರಿಹಾರ ಪಾವತಿಸಿ ಎಂದು ಸರಕಾರ ಆದೇಶದ ಸುತ್ತೋಲೆ ಕಳುಹಿಸಿತ್ತೇ ವಿನಃ ಯಾವ ಬೆಳೆ ಸಲಿಗೆ ಎಷ್ಟು ಮೊತ್ತ ಎಂದು ನಿಗದಿಪಡಿಸಿರಲಿಲ್ಲ. ಹಾಗಾಗಿ, ಅರ್ಜಿ ಸಲ್ಲಿಸಿದ ರಾಜ್ಯದ ಯಾವ ಕೃಷಿಕನಿಗೂ ಪರಿಹಾರ ಸಿಕ್ಕಿಲ್ಲ.ೃಷಿಕರ ಆಗ್ರಹದ ಹಿನ್ನೆಲೆಯಲ್ಲಿ ಸರಕಾರ ಪರಿಹಾರದ ಆದೇಶ ನೀಡಿತ್ತು ನಿಜ. ಆದರೆ, ಅದು ಉಲ್ಲೇಖ (2)ರ ಸರಕಾರಿ ಪತ್ರದಲ್ಲಿ ಅಡಿಕೆ, ತೆಂಗು ಇನ್ನಿತ್ತರ ಬೆಳೆನಾಶಕ್ಕಾಗಿ ನಿಗದಿಪಡಿಸಿದ ಮೊತ್ತವನ್ನು ಪರಿಹಾರ ರೂಪವಾಗಿ ಪಾವತಿಸಿ ಎಂದು ಆದೇಶಿಸಿದೆ. ಆದರೆ, ವಿವಿಧ ಬೆಳೆ ಸಲಿನ ನಾಶದ ಬಗ್ಗೆ ಯಾವುದೇ ಮೊತ್ತವನ್ನು ಈ ತನಕ ನಿಗದಿಪಡಿಸಿಲ್ಲ. ಅದಕ್ಕೆ ಸಂಬಂಧಪಟ್ಟಂತೆ ಸರಕಾರಿ ಆದೇಶದ ಪತ್ರ ಬಂದಿಲ್ಲ.
ನಂತರ, 2014ರಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ, ವಿವಿಧ ಬೆಳೆಗಳ ಫಸಲಿನ ನಾಶಕ್ಕೆ ದರ ಪಟ್ಟಿ ನೀಡುವಂತೆ ವಲಯ ಅರಣ್ಯ ಇಲಾಖಾ ಕಚೇರಿಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ, ಅಲ್ಲಿಂದ ಪ್ರಧಾನ ಇಲಾಖಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಿಯ ತನಕ ಕ್ರಮ ಕೈಗೊಂಡಿಲ್ಲ.ಅಲ್ಲಿ ಕೃಷಿಕ ಅರ್ಜಿ ಸಲ್ಲಿಸುವಾಗ ತೆಂಗಿನ ಗಿಡ ಅಥವಾ ಮರಕ್ಕೆ ಹಾನಿಯಾದುದಕ್ಕೆ ಪರಿಹಾರ ನೀಡಿ ಎಂಬುದಲ್ಲ. ಬದಲಾಗಿ ತೆಂಗು, ಅಡಿಕೆ ಅಥವಾ ಇನ್ನಿತ್ತರ ತೋಟಗಾರಿಕೆ ಬೆಳೆಯ ಸಲಿನ ನಾಶದ ಪರಿಹಾರಕ್ಕಾಗಿ. ಉದಾಹರಣೆಗೆ, ಅರ್ಜಿದಾರ ಇಷ್ಟು ಸಂಖ್ಯೆಯ ಎಳೆ ನೀರು ಅಥವಾ ಇಷ್ಟು ಕೆಜಿ ಕಾಯಿ ಅಡಿಕೆ ನಷ್ಟವಾಗಿದೆ ಎಂದು ನಮೂದು ಮಾಡಿರುತ್ತಾನೆ. ಹೀಗಾಗಿ ಸರಕಾರ ಪ್ರತಿ ಎಳೆ ನೀರು, ಎಳೆ ಅಡಿಕೆ ಅಥವಾ ಕೋಕೋ ಮುಂತಾದ ತೋಟಗಾರಿಕೆ ಬೆಳೆ ಸಲಿಗೆ ಇಂತಿಷ್ಟು ಮೊತ್ತದ ಪರಿಹಾರ ನೀಡಬೇಕು ಎಂದು ನಿಗದಿಪಡಿಸಬೇಕು. ಮಂಗಗಳಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ನೀಡಿ ಎಂದು ಸರಕಾರ ಆದೇಶ ನೀಡಿದುದರ ಜತೆಗೆ, ಸಲಿಗೆ ನೀಡುವ ದರಪಟ್ಟಿ ನೀಡಿದ್ದರೆ ಪರಿಹಾರ ವಿತರಿಸಲು ಸಾಧ್ಯವಿತ್ತು. ಇಲ್ಲಿ ಆದೇಶ ಬಂದಿದೆಯೇ ವಿನಃ ದರಪಟ್ಟಿ ಬಂದಿಲ್ಲ.
ವನ್ಯಪ್ರಾಣಿಗಳಿಂದ ಬೆಳೆ ನಾಶವಾದಾಗ ಬಾಳೆ, ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಮತ್ತು ತೆಂಗಿನ ಗಿಡಕ್ಕೆ ಇಂತಷ್ಟು ಎಂದು ಪರಿಹಾರ ನೀಡುತ್ತದೆ. ಉದಾಹರಣೆಗೆ 5 ವರ್ಷದ ಒಳಗಿನ ಅಡಿಕೆ ಅಥವಾ ತೆಂಗಿನ ಮರಕ್ಕೆ ಹಾನಿ ಉಂಟಾದರೆ 200 ರೂ., 7ರಿಂದ 9 ವರ್ಷದ ಮರವಾದರೆ 400 ರೂ., 10 ವರ್ಷಕ್ಕಿಂತ ಮೇಲ್ಪಟ್ಟಿನ ಮರವಾದಲ್ಲಿ 1,000 ರೂ. ಎಂದು ನಿಗದಿಪಡಿಸಿದೆ. ಇದೇ ದರಪಟ್ಟಿ ಮಂಗಗಳಿಂದ ಅಥವಾ ಇನ್ನಿತ್ತರ ಕಾಡು ಪ್ರಾಣಿಗಳಿಂದ ಹಾನಿ ಉಂಟಾಗುವ ಬೆಳೆಗೂ ನಿಗದಿಯಾಗಬೇಕು.