ಕೇವಲ 50 ಮಿಲಿ ಗ್ರಾಂ ಚಿನ್ನದಲ್ಲಿ ಹೆಲ್ಮೆಟ್

ಬಂಗಾರ ಹಾಗೂ ಬೆಳ್ಳಿಯಲ್ಲಿ ಹಲವು ಸೂಕ್ಷ್ಮ ಕಲಾಕೃತಿಗಳನ್ನು ತಯಾರಿಸಿರುವ ಭದ್ರಾವತಿಯ ಅಕ್ಕಸಾಲಿಗ ರವಿಚಂದ್ರ ಈಗ ಕೇವಲ 50 ಮಿಲಿ ಗ್ರಾಂ ಬಂಗಾರದಲ್ಲಿ ಹೆಲ್ಮೆಟ್ ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ.ಲ್ಲಿಯ ಹಳೇನಗರದ ಎನ್ಎಸ್ಟಿ ರಸ್ತೆಯಲ್ಲಿರುವ ತೇಜಸ್ವಿನಿ ಜ್ಯೂಯಲರಿ ವರ್ಕ್ಸ್ನ ಅಕ್ಕಸಾಲಿಗ ಹಾಗೂ ಕಲಾವಿದ ರವಿಚಂದ್ರ ಈ ಸೂಕ್ಷ್ಮ ಹೆಲ್ಮೆಟ್ ತಯಾರಿಕೆಗೆ ಎರಡು ವಾರ ಶ್ರಮಪಟ್ಟಿದ್ದಾರೆ. ಇದರ ಎತ್ತರ 2.5 ಮಿಲಿ ಮೀಟರ್, ಅಗಲ 3 ಮಿಲಿ ಮೀಟರ್ ಇದೆ. ಇದು ಬೆಂಕಿ ಕಡ್ಡಿಯ ಮದ್ದುಇರುವ ಭಾಗಕ್ಕಿಂತಲೂ ಚಿಕ್ಕದಾಗಿದೆ. ಇದನ್ನು ಬರಿಗಣ್ಣಿನಲ್ಲಿ ನೋಡಿದರೆ ತುಂಬಾ ಚಿಕ್ಕದಾಗಿ ಕಂಡು ಬರುತ್ತದೆ. ಆದರೆ ಸೂಕ್ಷ್ಮದರ್ಶಕದ ಮೂಲಕ ನೋಡಿದರೆ ಈ ಅಕ್ಕಸಾಲಿಗನ ಸೂಕ್ಷ್ಮತೆ ಅರಿವಿಗೆ ಬರುತ್ತದೆ.
ರವಿಚಂದ್ರ ಈ ಹಿಂದೆ 5 ಗ್ರಾಂ ಬೆಳ್ಳಿಯಲ್ಲಿ ತಿರುಗುವ ಟೇಬಲ್ ್ಯಾನ್ ನಿರ್ಮಿಸಿ ಖ್ಯಾತಿ ಪಡೆದಿದ್ದರು. ನಂತರ 150 ಮಿಲಿ ಗ್ರಾಂ ಬಂಗಾರದಲ್ಲಿ ಕ್ರಿಕೆಟ್ ಕಪ್ ತಯಾರಿಸಿದ್ದರು. ಬಳಿಕ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದ್ದ ವೇಳೆ ಕೇವಲ 20 ಮಿಲಿ ಗ್ರಾಂ ಬಂಗಾರದಲ್ಲಿ ವರ್ಲ್ಡ್ ಕಪ್ ತಯಾರಿಸಿದ್ದರು. ತಮಿಳುನಾಡಿನ ತಿರುಚಿಯ ಇಂಡಿಯನ್ ಅಚೀವರ್ ಬುಕ್ ಆ್ ರೆಕಾರ್ಡ್ಸ್ ಸಂಸ್ಥೆ 20 ಮಿಲಿ ಗ್ರಾಂ ಬಂಗಾರದಲ್ಲಿ ಇವರು ತಯಾರಿಸಿದ ಕ್ರಿಕೆಟ್ ವರ್ಲ್ಡ್ ಕಪ್ಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಸ್ತುತ ತಯಾರಿಸಿರುವ ಹೆಲ್ಮೆಟ್ನ್ನು ಇಂಡಿಯನ್ ಅಚೀವರ್ ಬುಕ್ ಆ್ ರೆಕಾರ್ಡ್, ಮೈಕ್ರೋ ಆರ್ಟ್ ಸಂಸ್ಥೆ, ಲಿಮ್ಕಾ ಹಾಗೂ ಗಿನ್ನಿಸ್ ರೆಕಾರ್ಡ್ ಸಂಸ್ಥೆಗಳಿಗೆ ಕಳುಹಿಸುವ ಬಯಕೆಯನ್ನು ಅವರು ಹೊಂದಿದ್ದಾರೆ.