ಚಾತುರ್ಮಾಸ್ಯ ಮುಗಿದರೂ ಟವರ್ನ ವನವಾಸ ಮುಗಿದಿಲ್ಲ

ರಾಘವೇಶ್ವರ ಶ್ರೀಗಳ ಕೆಕ್ಕಾರ ಚಾತುರ್ಮಾಸ್ಯ ವ್ರತಾಚರಣೆ ಮುಗಿದು ಒಂದು ವರ್ಷ ಕಳೆಯಿತು. ಬೆಂಗಳೂರಿನಲ್ಲಿ ಇನ್ನೊಂದು ಚಾತುರ್ಮಾಸ್ಯ ವ್ರತ ಆರಂಭವಾಗಿದೆ. ಆದರೆ, ಭಕ್ತರ ಅನುಕೂಲಕ್ಕಾಗಿ ಕೆಕ್ಕಾರಿಗೆ ಬಿಎಸ್ಎನ್ಎಲ್ ತಂದಿರಿಸಿದ್ದ ಹಂಗಾಮಿ ಮೊಬೈಲ್ ಟವರ್ನ ವನವಾಸ ಇನ್ನೂ ಮುಗಿದಿಲ್ಲ.
ಸ್ಪೀಡ್ ಇಂಟರ್ನೆಟ್ ಮತ್ತು ಮೊಬೈಲ್ ಅನುಕೂಲಕ್ಕಾಗಿ ಲಾರಿಯಲ್ಲಿ ಹೇರಲಾದ ಹಂಗಾಮಿ ಟವರ್ನ್ನು ಕೆಕ್ಕಾರಿನಲ್ಲಿ ಸ್ಥಾಪಿಸಲಾಗಿತ್ತು. ಕೆಲಸ ಮುಗಿದ ಮೇಲೆ ಅದನ್ನು ಸುರಕ್ಷಿತವಾದ ಸ್ಥಳಕ್ಕೆ ಸಾಗಿಸಿ ಇನ್ನೆಲ್ಲಾದರೂ ಬೇಕಾದರೆ ಒದಗಿಸಬೇಕಾದ ಹತ್ತಾರು ಲಕ್ಷ ರೂ. ಮೊತ್ತದ ಉಪಕರಣಗಳ ಲಾರಿ ಬಿಸಿಲು, ಮಳೆ ಎನ್ನದೇ ರಸ್ತೆ ಬದಿಗೆ ನಿಂತಿದೆ. ಸರಕಾರದ ಸ್ವತ್ತು ಅನಾಥವಾಗಿದೆ.