ಕಾಡಿನಿಂದ ಮನೆಗೆ ಬಂದ ಜಿಂಕೆ

ಕಾಡಂಚಿನಲ್ಲಿ ವಿಹರಿಸುತ್ತಿರುವ ಗಂಡು ಜಿಂಕೆಯೊಂದು ಊರನಾಯಿಗಳ ಕೆಂಗಣ್ಣಿಗೆ ಗುರಿಯಾಗಿ ರಕ್ಷಣೆಗಾಗಿ ಮನೆಯಂಗಳಕ್ಕೆ ಧಾವಿಸಿ ಬಂತು. ಈ ಜಿಂಕೆ ಬಂದುದು ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಕುಂಬಾರವಾಡಾ ವನ್ಯಜೀವಿ ವಿಭಾಗದ ಕುಂಬಾರವಾಡಾದಲ್ಲಿ. ನಂತರ, ಸಾರ್ವಜನಿಕರು ಈ ಜಿಂಕೆಯನ್ನು ಮರಳಿ ಕಾಡಿಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.ಕುಂಬಾರವಾಡಾದ ಕಾಡಂಚಿನ ರಸ್ತೆ ಪಕ್ಕದಲ್ಲಿ ಆಹಾರ ಸೇವಿಸುತ್ತಿದ್ದ ಜಿಂಕೆಯನ್ನು ನಾಯಿಗಳು ಬೆನ್ನಟ್ಟಿದವು. ಜೀವ ರಕ್ಷಣೆಗಾಗಿ ಜಿಂಕೆ ಕುಂಬಾರವಾಡಾದ ಅಂಗಡಿ ಮಾಲೀಕ ಬಾಬುಸಾವಕಾರ ದುಬಳೆ ಮನೆ ಅಂಗಳದಲ್ಲಿ ಬಂದು ನಿಂತಿತ್ತು. ನಂತರ ನಾಯಿಗಳನ್ನು ಓಡಿಸಿದ ಜನರು ಜಿಂಕೆಯ ರಕ್ಷಣೆ ಮಾಡಿದರು. ಜಿಂಕೆಯ ಹಿಂಭಾಗದ ತೊಡೆ ಪರಚಿದಂತಾಗಿದ್ದು, ಜಿಂಕೆ ಪ್ರಾಣಾಪಾಯದಿಂದ ಪಾರಾಗಿದೆ.