ನೆಲಕ್ಕುರುಳಿದ ಅಡಿಕೆ ಮರಗಳ ಮಾರಾಟ ಜೋರು

ೂನ್ ತಿಂಗಳಲ್ಲಿ ಸುರಿದ ಗಾಳಿ ಮಳೆಗೆ ಶಿರಸಿ, ಸಿದ್ದಾಪುರ ತಾಲೂಕಿನಲ್ಲಿ ಅನೇಕ ಅಡಿಕೆ ಮರಗಳು ನೆಲಕ್ಕುರುಳಿದ್ದು, ಇದನ್ನು ಕಡಿದು ಬೇಡಿಕೆ ಇರುವ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಗೆ ಸಾಗಾಟ ಮಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ಹದಿನೈದು ಅಡಿಗೆ ಒಂದರಂತೆ ಅಡಿಕೆ ಮರಗಳನ್ನು ಕಡಿದು ಮಾರಾಟ ಮಾಡಲಾಗುತ್ತಿದ್ದು, ದಾವಣಗೆರೆ, ಶಿಕಾರಿಪುರ ಜಿಲ್ಲೆಗಳಿಗೆ ಸೆಂಟ್ರಿಂಗ್, ಮನೆ ನಿರ್ಮಾಣಕ್ಕೆ ಇದನ್ನು ಬಳಕೆ ಮಾಡಲಾಗುತ್ತಿದೆ. ಹದಿನೈದು ರೂಪಾಯಿಗೆ ಒಂದು ಮರದ ತುಂಡಿನಂತೆ ಕಡಿದು ಒಯ್ಯಲಾಗುತ್ತಿದೆ. ಕೊನೆ ಗೌಡನನ್ನು ಕರೆದುಕೊಂಡು ಬಂದು ಮರ ಕಡಿದು, ಟ್ರಕ್ ಮೂಲಕ ಸಾಗಾಟ ಮಾಡಲಾಗುತ್ತಿದೆ. ಅಲ್ಲಿ ಒಂದು ತುಂಡಿಗೆ 70ರಿಂದ 75 ರೂ.ಲಭಿಸುತ್ತಿದೆ. ಇದರಿಂದ ಪ್ರತಿ ತುಂಡಿಗೆ 2ರಿಂದ 3 ರೂ. ಸಿಗುತ್ತದೆ ಎನ್ನುತ್ತಾರೆ ವಹಿವಾಟು ಮಾಡುವ ನವೀನ ಕಾನಗೋಡ.ಳೆದ ಆರೆಂಟು ವರ್ಷಗಳ ಹಿಂದೆ ಆಶ್ರಯ ಮನೆಗಳಿಗೆ ಬಳಕೆ ಮಾಡಲು ಅಡಿಕೆ ದಬ್ಬೆ ಬಳಸುತ್ತಿದ್ದರು. ಆದರೆ ಅಲ್ಲಿನ ಜಿಲ್ಲಾಧಿಕಾರಿ ಕಬ್ಬಿಣವನ್ನೇ ಬಳಸುವಂತೆ ಆದೇಶಿಸಿದ್ದರಿಂದ ಅಡಿಕೆ ಮರಗಳ ಬಳಕೆ ಕಡಿಮೆ ಆಗಿದ್ದು, ಬೇಡಿಕೆ ಇಲ್ಲ. ಆದರೆ ಈ ಬಾರಿ ಅಡಿಕೆ ತೋಟದಲ್ಲಿ ನೆಲಕ್ಕುರುಳಿದ ಮರಗಳ ಸಂಖ್ಯೆ ಅತಿಯಾಗಿದ್ದರಿಂದ ಬೇರೆ ಗತಿಯಿಲ್ಲ. ಒಂದು ಮರ ನಷ್ಟವಾದರೆ ಸಾವಿರಾರು ರೂ. ನಷ್ಟದ ಜೊತೆಗೆ ಆರೆಂಟು ವರ್ಷಗಳ ಕಾಲ ಸಲೂ ಇಲ್ಲದಂತಾಗುತ್ತದೆ ಎಂಬುದು ರೈತರ ಅಳಲು.