ಹಿಮಾಲಯ ಸೃಷ್ಟಿಯ ಗುಟ್ಟು ರಟ್ಟಾಗಿಸಲು ಹೊರಟ ತೀರ್ಥಹಳ್ಳಿ ವಿಜ್ಞಾನಿ

ಹಿಮಾಲಯ ಪರ್ವತ ಸೃಷ್ಟಿಯನ್ನು ಸಮುದ್ರದ ಆಳದ ಸಂಶೋಧನೆ ಮೂಲಕ ರಟ್ಟು ಮಾಡುವ ವಿಶ್ವದ 2 ದೇಶಗಳ 3 ವಿಜ್ಞಾನಿಗಳ ತಂಡದಲ್ಲಿ ಮಣಿಪಾಲದ ವಿಜ್ಞಾನಿ ಡಾ.ಗುರುಮೂರ್ತಿ ಜಿ.ಪಿ.ಅವಕಾಶ ಪಡೆದಿದ್ದಾರೆ. ಸುಮಾರು 2ತಿಂಗಳಿಂದ ಮುಂಬೈ ತೀರದಿಂದ ಸುಮಾರು 40 ಕಿ.ಮೀ.ದೂರ ಸಮುದ್ರದಲ್ಲಿದ್ದು ಅಧ್ಯಯನ ನಡೆಸುತ್ತಿರುವ 2 ದೇಶದ 3 ವಿಜ್ಞಾನಿಗಳಲ್ಲಿ ಇವರು ಒಬ್ಬರು. ಇವರು ಮಣಿಪಾಲ ವಿ.ವಿ.ಯ ನೈಸರ್ಗಿಕ ವಿಜ್ಞಾನ ಕೇಂದ್ರದ ಸ್ನಾತಕೋತ್ತರ ಸಂಶೋಧನ ಫೆಲೋ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವರು. ಹಿಮಾಲಯ ಸೃಷ್ಟಿಯಾಗಿ 1 ಲಕ್ಷವರ್ಷ ಸಂದಿವೆ ಎಂಬ ವಾದಕ್ಕೆ ಸಂಶೋಧನೆ ಮೂಲಕ ಉತ್ತರ ನೀಡಲು ಹೊರಟಿರುವ ಈ ತಂಡ ಸಮುದ್ರದ ತಳದಿಂದ ಸುಮಾರು 110 ಮೀ.ಆಳದಲ್ಲಿ ಕೊರೆದು ಮಣ್ಣು ಸಂಗ್ರಹಿಸಿದೆ. ಒಂದರಲ್ಲಿ 4 ದಿನ,ಇನ್ನೊಂದರಲ್ಲಿ 1 ದಿನ ಒಟ್ಟು ಎರಡು ಜಾಗಗಳಲ್ಲಿ ಸಂಶೋಧನೆ ನಡೆಸಲಾಗಿದೆ. ಸಂಶೋಧನೆ ಮುಂದುವರಿದಿದೆ.